
ನವದೆಹಲಿ, ಆಗಸ್ಟ್ 10: ಐಸಿಐಸಿಐ ಬ್ಯಾಂಕ್ (ICICI bank) ತನ್ನಲ್ಲಿನ ಹೊಸ ಖಾತೆಗಳಿಗೆ ಮಿನಿಮಮ್ ಬ್ಯಾಲನ್ಸ್ ಅನ್ನು ಬರೋಬ್ಬರಿ 50,000 ರೂಗೆ ಏರಿಸಿದೆ. ಆಗಸ್ಟ್ 1ರಿಂದಲೇ ಇದು ಮೆಟ್ರೋ ಹಾಗೂ ನಗರ ಭಾಗದಲ್ಲಿರುವ ಅದರ ಗ್ರಾಹಕರಿಗೆ ಅನ್ವಯ ಆಗುತ್ತದೆ. ಆಗಸ್ಟ್ 1 ಹಾಗು ನಂತರ ನಗರ ಭಾಗದಲ್ಲಿ ಐಸಿಐಸಿಐ ಬ್ಯಾಂಕ್ನಲ್ಲಿ ಸೇವಿಂಗ್ಸ್ ಅಕೌಂಟ್ ತೆರೆದವರು ಮಾಸಿಕ ಸರಾಸರಿ ಬ್ಯಾಲನ್ಸ್ ಅನ್ನು ಕನಿಷ್ಠ 50,000 ರೂನಷ್ಟು ಇಡಬೇಕಾಗುತ್ತದೆ. ಬ್ಯಾಂಕ್ನ ವೆಬ್ಸೈಟ್ನಲ್ಲಿ ಈ ಸಂಬಂಧ ಪ್ರಕಟಣೆ ನೀಡಲಾಗಿದೆ.
ಗ್ರಾಮೀಣ ಭಾಗದ ಗ್ರಾಹಕರಿಗೆ ಮಿನಿಮಮ್ ಬ್ಯಾಲನ್ಸ್ ಅನ್ನು 10,000 ರೂಗೆ ಏರಿಸಲಾಗಿದೆ. ಸೆಮಿ ಅರ್ಬನ್ ಅಥವಾ ಅರೆ ನಗರ ಪ್ರದೇಶದಲ್ಲಿರುವ ಹೊಸ ಗ್ರಾಹಕರು 25,000 ರೂ ಮಿನಿಮಮ್ ಬ್ಯಾಲನ್ಸ್ ಹೊಂದಿರಬೇಕು ಎನ್ನಲಾಗಿದೆ.
ಐಸಿಐಸಿಐ ಬ್ಯಾಂಕ್ನಲ್ಲಿ ಈ ಮೊದಲು ಕನಿಷ್ಠ ಬ್ಯಾಲನ್ಸ್ 10,000 ರೂ ಇತ್ತು. ಹಳೆಯ ಗ್ರಾಹಕರಿಗೆ, ಅಂದರೆ, ಆಗಸ್ಟ್ 1ಕ್ಕಿಂತ ಮುನ್ನ ಯಾರು ಆ ಬ್ಯಾಂಕಲ್ಲಿ ಉಳಿತಾಯ ಖಾತೆ ತೆರೆದಿದ್ದರೋ ಅವರಿಗೆ ಮಿನಿಮಮ್ ಬ್ಯಾಲನ್ಸ್ 10,000 ರೂ ನಿಯಮ ಮುಂದುವರಿಯುತ್ತದೆ.
ಅರೆ ನಗರ ಪ್ರದೇಶ ಹಾಗೂ ಗ್ರಾಮೀಣ ಭಾಗದಲ್ಲಿರುವ ಐಸಿಐಸಿಐ ಬ್ಯಾಂಕ್ ಗ್ರಾಹಕರು ತಮ್ಮ ಸೇವಿಂಗ್ಸ್ ಅಕೌಂಟ್ಗಳಲ್ಲಿ ಕನಿಷ್ಠ ಬ್ಯಾಲನ್ಸ್ ಆಗಿ 5,000 ರೂ ಇಟ್ಟುಕೊಂಡಿರಬೇಕು. ಇದು ಆಗಸ್ಟ್ 1ಕ್ಕಿಂತ ಮುಂಚೆ ಅಕೌಂಟ್ ತೆರೆದವರಿಗೆ ಇರುವ ಸೌಲಭ್ಯ.
ಇದನ್ನೂ ಓದಿ: ಟ್ರಂಪ್ ಟ್ಯಾರಿಫ್ ಬರೆ, ಭಾರತಕ್ಕೆ ಸಿಕ್ಕಿರುವ ದೊಡ್ಡ ಅವಕಾಶ: ಅಮಿತಾಭ್ ಕಾಂತ್
ಸೇವಿಂಗ್ಸ್ ಅಕೌಂಟ್ನಲ್ಲಿ ಸರಾಸರಿ ಮಿನಿಮಮ್ ಬ್ಯಾಲನ್ಸ್ ಅನ್ನು ಇಟ್ಟುಕೊಳ್ಳದಿದ್ದರೆ 500 ರೂ ಅಥವಾ ಶೇ. 6ರಷ್ಟು ದಂಡ ಹಾಕಲಾಗುತ್ತದೆ. ಶೇ. 6 ಎಂದರೆ, ಮಿನಿಮಮ್ ಬ್ಯಾಲನ್ಸ್ ಮೊತ್ತಕ್ಕೆ ಎಷ್ಟು ಹಣ ಕೊರತೆ ಬೀಳುತ್ತದೋ ಆ ಹಣಕ್ಕೆ ವಿಧಿಸಲಾಗುವ ದಂಡ. ದಂಡದ ಮೊತ್ತ 500 ರೂ ದಾಟುವುದಿಲ್ಲ.
ಉದಾಹರಣೆಗೆ, ನಿಮ್ಮ ಅಕೌಂಟ್ಗೆ ಮಿನಿಮಮ್ ಬ್ಯಾಲನ್ಸ್ 50,000 ರೂ ಇದೆ ಎಂದಿಟ್ಟುಕೊಳ್ಳಿ. ಅಕೌಂಟ್ನಲ್ಲಿ ಮಿನಿಮಮ್ ಬ್ಯಾಲನ್ಸ್ 40,000 ರೂ ಮಾತ್ರವೇ ಇದ್ದಿರುತ್ತದೆ. ಕೊರತೆ ಇರುವ 10,000 ರೂ ಹಣಕ್ಕೆ ಶೇ 6 ಎಂದರೆ 600 ರೂ ಆಗುತ್ತದೆ. ಇಲ್ಲಿ 600 ರೂ ಬದಲು 500 ರೂ ದಂಡ ಹಾಕಲಾಗುತ್ತದೆ.
ಐಸಿಐಸಿಐ ಬ್ಯಾಂಕ್ನಲ್ಲಿ ಕ್ಯಾಷ್ ವಹಿವಾಟುಗಳಿಗೆ ವಿಧಿಸುವ ಸರ್ವಿಸ್ ಚಾರ್ಜ್ಗಳನ್ನು ಪರಿಷ್ಕರಿಸಲಾಗಿದೆ. ಬ್ಯಾಂಕ್ ಕಚೇರಿಯಲ್ಲಿ ಮತ್ತು ಕ್ಯಾಷ್ ರೀಸೈಕ್ಲರ್ ಮೆಷಿನ್ಗಳಲ್ಲಿ ಗ್ರಾಹಕರು ತಮ್ಮ ಅಕೌಂಟ್ಗೆ ಶುಲ್ಕರಹಿತವಾಗಿ ಮೂರು ಬಾರಿ ಕ್ಯಾಷ್ ಡೆಪಾಸಿಟ್ ಮಾಡಲು ಅವಕಾಶ ಇದೆ. ಹೆಚ್ಚುವರಿ ಕ್ಯಾಷ್ ಡೆಪಾಸಿಟ್ಗೆ 150 ರೂ ಶುಲ್ಕ ಇರುತ್ತದೆ.
ಇದನ್ನೂ ಓದಿ: ತಿಂಗಳಿಗೆ 2 ಲಕ್ಷ ರೂ ಸ್ಟೈಪೆಂಡ್; ಶಾಲಾ ಮಕ್ಕಳಾದರೂ ಪರವಾಗಿಲ್ಲ; ವರ್ಕ್ ಫ್ರಂ ಹೋಮ್; ರೆಫರ್ ಮಾಡಿದವರಿಗೆ ಐಫೋನ್ ಗಿಫ್ಟ್
ಹಾಗೆಯೇ, ಒಂದು ತಿಂಗಳಲ್ಲಿ ಒಂದು ಲಕ್ಷ ರೂವರೆಗೆ ಕ್ಯಾಷ್ ಡೆಪಾಸಿಟ್ ಮಾಡಬಹುದು. ಅದಕ್ಕಿಂತ ಮೇಲ್ಪಟ್ಟ ವಹಿವಾಟಾದರೆ, ಪ್ರತೀ ಹೆಚ್ಚುವರಿ 1,000 ರೂಗೆ 3.50 ರೂ ಅಥವಾ 150 ರೂ, ಯಾವುದು ಗರಿಷ್ಠವೋ ಅಷ್ಟು ಶುಲ್ಕ ಹಾಕಲಾಗುತ್ತದೆ. ಮೂರನೇ ವ್ಯಕ್ತಿ ಬಂದು ಕ್ಯಾಷ್ ಡೆಪಾಸಿಟ್ ಮಾಡುತ್ತಾರೆಂದರೆ ಗರಿಷ್ಠ 25,000 ರೂಗೆ ಮಾತ್ರ ಅವಕಾಶ ಇದೆ.
ಐಸಿಐಸಿಐ ಬ್ಯಾಂಕ್ನ ಕಚೇರಿಯಲ್ಲಿ ತಿಂಗಳಿಗೆ ಮೂರು ಬಾರಿ ಶುಲ್ಕರಹಿತವಾಗಿ ಕ್ಯಾಷ್ ವಿತ್ಡ್ರಾ ಮಾಡಲು ಅವಕಾಶ ಇದೆ. ಹೆಚ್ಚುವರಿ ವಿತ್ಡ್ರಾಯಲ್ಗೆ 150 ರೂ ಶುಲ್ಕ ಹಾಕಲಾಗುತ್ತದೆ.
ಒಂದು ತಿಂಗಳಲ್ಲಿ ಒಟ್ಟಾರೆಯಾಗಿ 1 ಲಕ್ಷ ರೂವರೆಗೆ ಕ್ಯಾಷ್ ವಿತ್ಡ್ರಾ ಮಾಡಬಹುದು. ಇದಕ್ಕಿಂತ ಮೇಲ್ಪಟ್ಟು ಹಣ ವಿತ್ಡ್ರಾ ಮಾಡುವುದಾದರೆ 1,000 ರೂಗೆ ಮೂರೂವರೆ ರೂ ಅಥವಾ 150 ರೂ, ಯಾವುದು ಗರಿಷ್ಠವೋ ಆ ಶುಲ್ಕ ಅನ್ವಯ ಆಗುತ್ತದೆ.
ಇದನ್ನೂ ಓದಿ: ವಿದ್ಯುತ್ ಅವಲಂಬನೆ ತಪ್ಪಿಸುವ ಪಿಎಂ ಕುಸುಮ್ ಯೋಜನೆಗೆ ಕರ್ನಾಟಕದ ರೈತರಿಂದ ನೀರಸ ಪ್ರತಿಕ್ರಿಯೆ; ಏನಿದು ಸ್ಕೀಮ್?
ಬ್ಯಾಂಕ್ ಕಾರ್ಯಾವಧಿ ಹೊರಗೆ, ಅಂದರೆ ಸಂಜೆ 4:30ರಿಂದ ಬೆಳಗ್ಗೆ 9ರವರೆಗೆ ಹಾಗು ಬ್ಯಾಂಕ್ ರಜಾದಿನಗಳಲ್ಲಿ ನೀವು ಕ್ಯಾಷ್ ಅಕ್ಸೆಪ್ಟರ್ ಅಥವಾ ಕ್ಯಾಷ್ ರೀಸೈಕ್ಲರ್ ಮೆಷಿನ್ಗಳ ಮೂಲಕ ಕ್ಯಾಷ್ ಡೆಪಾಸಿಟ್ ಮಾಡಿದರೆ, ಹಾಗೂ ಒಂದು ತಿಂಗಳಲ್ಲಿ ಈ ರೀತಿಯ ಡೆಪಾಸಿಟ್ಗಳ ಮೊತ್ತ 10,000 ರೂಗಿಂತ ಹೆಚ್ಚಾಗಿದ್ದಲ್ಲಿ ಆಗ ಪ್ರತೀ ಡೆಪಾಸಿಟ್ಗೂ 50 ರೂ ಶುಲ್ಕ ಇರುತ್ತದೆ. ಇದು ರೆಗ್ಯುಲರ್ ಆದ ಕ್ಯಾಷ್ ಟ್ರಾನ್ಸಾಕ್ಷನ್ ಶುಲ್ಕವಲ್ಲದೆ ಹೆಚ್ಚುವರಿಯಾಗಿ ವಿಧಿಸುವ ಶುಲ್ಕ.
ಬೆಂಗಳೂರು ಸೇರಿದಂತೆ ಆರು ಮೆಟ್ರೋ ನಗರಗಳಲ್ಲಿ ಐಸಿಐಸಿಐ ಬ್ಯಾಂಕ್ದಲ್ಲದ ಎಟಿಎಂಗಳಲ್ಲಿ ತಿಂಗಳಿಗೆ ಮೂರು ಬಾರಿ ಶುಲ್ಕರಹಿತವಾಗಿ ಟ್ರಾನ್ಸಾಕ್ಷನ್ ಮಾಡಬಹುದು. ಅದಕ್ಕಿಂತ ಮೇಲ್ಪಟ್ಟ ಸಂಖ್ಯೆಯಲ್ಲಿ ಕ್ಯಾಷ್ ವಿತ್ಡ್ರಾ ಮಾಡಿರೆ ಪ್ರತೀ ವಹಿವಾಟಿಗೆ 23 ರೂ ಶುಲ್ಕ ಇರುತ್ತದೆ. ಬ್ಯಾಲನ್ಸ್ ಪರಿಶೀಲನೆ ಇತ್ಯಾದಿ ನಾನ್-ಫೈನಾನ್ಷಿಯಲ್ ಟ್ರಾನ್ಸಾಕ್ಷನ್ ಆದರೆ ಪ್ರತೀ ವಹಿವಾಟಿಗೆ 8.5 ರೂ ಶುಲ್ಕ ಇರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:50 pm, Sun, 10 August 25