ATM cash: ಸಮಯಕ್ಕೆ ಸರಿಯಾಗಿ ಹಣ ತುಂಬದೆ ಎಟಿಎಂ ಖಾಲಿಯಿದ್ದಲ್ಲಿ ಬ್ಯಾಂಕ್​ಗಳಿಗೆ 10 ಸಾವಿರ ರೂ. ದಂಡ

| Updated By: Srinivas Mata

Updated on: Aug 10, 2021 | 10:09 PM

ಒಂದು ವೇಳೆ ಎಟಿಎಂನಲ್ಲಿ ನಗದು ಲಭ್ಯ ಇಲ್ಲದಂತೆ ಆದಲ್ಲಿ ಅದಕ್ಕೆ ಬ್ಯಾಂಕ್​ಗಳಿಗೆ 10 ಸಾವಿರ ರೂಪಾಯಿ ದಂಡ ಹಾಕಲಾಗುತ್ತದೆ ಎಂದು ಆರ್​ಬಿಐ ತಿಳಿಸಿದೆ. ಇದು ಅಕ್ಟೋಬರ್​ 1ರಿಂದ ಅನ್ವಯ ಆಗುತ್ತದೆ.

ATM cash: ಸಮಯಕ್ಕೆ ಸರಿಯಾಗಿ ಹಣ ತುಂಬದೆ ಎಟಿಎಂ ಖಾಲಿಯಿದ್ದಲ್ಲಿ ಬ್ಯಾಂಕ್​ಗಳಿಗೆ 10 ಸಾವಿರ ರೂ. ದಂಡ
ಇಂಡಸ್ಇಂಡ್ ಬ್ಯಾಂಕ್ ಮಗುವಿನ ವಯಸ್ಸು 12 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ಆ ಮಗುವಿನ ಹೆಸರಿನಲ್ಲಿ ಅಪ್ರಾಪ್ತರ ಖಾತೆಯನ್ನು ತೆರೆಯಬಹುದು. ಹೀಗಲ್ಲದಿದ್ದರೆ ಖಾತೆಯನ್ನು "ಅಂಡರ್ ಗಾರ್ಡಿಯನ್" ಖಾತೆಯಾಗಿ ತೆರೆಯಬೇಕು. ಆಗ ಪೋಷಕರು ಖಾತೆಯನ್ನು ನಿರ್ವಹಿಸುತ್ತಾರೆ ಮತ್ತು ಮಗುವಿನ ವಯಸ್ಸು 12 ದಾಟಿದ ನಂತರ ಬದಲಾಯಿಸಲಾಗುತ್ತದೆ. ನಿರ್ವಹಣೆ ಮಾಡಬೇಕಾದ ಸರಾಸರಿ ಮಾಸಿಕ ಬ್ಯಾಲೆನ್ಸ್ 5,000 ರೂಪಾಯಿ. ಅನನ್ಯ ಗೋಲ್ಡ್ ಡೆಬಿಟ್ ಕಾರ್ಡ್ ಎಂಬ ಹೆಸರಿನ ಡೆಬಿಟ್ ಕಾರ್ಡ್ ಅನ್ನು 12 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಅವರ ಹೆಸರಿನಲ್ಲಿ ನೀಡಲಾಗುತ್ತದೆ. ಅನಿಯಮಿತ ಉಚಿತ ಎಟಿಎಂ ವಹಿವಾಟುಗಳು ಮತ್ತು ಆನ್‌ಲೈನ್ ವಹಿವಾಟಿನಲ್ಲಿ ವಿಶೇಷ ಕೊಡುಗೆಗಳು ಲಭ್ಯವಿವೆ.
Follow us on

ಬ್ಯಾಂಕ್​ಗಳ ಗ್ರಾಹಕರಿಗೆ ದೊಡ್ಡ ಮಟ್ಟದಲ್ಲಿ ನಿರಾಳ ಆಗುವಂಥ ಘೋಷಣೆಯೊಂದನ್ನು ಮಂಗಳವಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ (Reserve Bank Of India) ಮಾಡಲಾಗಿದೆ. ಅದರ ಪ್ರಕಾರವಾಗಿ, ಒಂದು ವೇಳೆ ಎಟಿಎಂನಲ್ಲಿ ನಗದು ಇಲ್ಲದಂತಾದಲ್ಲಿ ಹಣಕಾಸು ಶುಲ್ಕವನ್ನು ವಿಧಿಸಲಾಗುತ್ತದೆ. 2021ರ ಅಕ್ಟೋಬರ್ 1ನೇ ತಾರೀಕಿನಿಂದ ಇದು ಅನ್ವಯ ಆಗುತ್ತದೆ. “ಎಟಿಎಂಗಳಲ್ಲಿ ನಗದು ಇಲ್ಲದಿರುವ ಸಮಯದ ಪರಿಶೀಲನೆಯನ್ನು ಕೈಗೊಳ್ಳಲಾಯಿತು. ಎಟಿಎಂ ಕಾರ್ಯಾಚರಣೆಗಳು ನಗದು ಕೊರತೆಯಿಂದಾಗಿ ಹಣದ ಅಲಭ್ಯತೆಗೆ ಕಾರಣವಾಗುತ್ತಿದೆ. ಈಗಿನ ನಡೆಯಿಂದ ಸಾರ್ವಜನಿಕರಿಗೆ ತೊಂದರೆ ತಪ್ಪಿಸಬಹುದು,” ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ. ಇನ್ನೂ ಮುಂದುವರಿದು, ಆದ್ದರಿಂದ ಬ್ಯಾಂಕ್​ಗಳು/ವೈಟ್​ಲೇಬಲ್ ಎಟಿಎಂ ಆಪರೇಟರ್ಸ್ (WLAOs) ಅವುಗಳ ಕಾರ್ಯ ನಿರ್ವಹಣೆಯನ್ನು ಬಲಪಡಿಸಲು, ಎಟಿಎಂಗಳಲ್ಲಿ ನಗದು ಇರುವುದನ್ನು ನಿಗಾ ಮಾಡಲು ಬಯಸುತ್ತೇವೆ. nಗದು ಕೊರತೆ ಆಗದಂತೆ ಹಣ ತುಂಬುವುದನ್ನು ಖಾತ್ರಿಪಡಿಸಬೇಕು. ಈ ಸಂಬಂಧಹವಾಗಿ ನಿಯಮ ಉಲ್ಲಂಘನೆ ಮಾಡಿದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಹಾಗೂ ಹಣಕಾಸು ದಂಡ ವಿಧಿಸಲಾಗುವುದು ಎಂದು ಆರ್​ಬಿಐ ಹೇಳಿದೆ.

ನಗದು ಅಗತ್ಯ ಪ್ರಮಾಣದಲ್ಲಿ ಇಲ್ಲದಿದ್ದಾಗ ದಂಡ ವಿಧಿಸುವ ಯೋಜನೆ ಆರಂಭಿಸಲಾಗಿದೆ. ಆರ್​ಬಿಐ ಹೇಳಿರುವ ಪ್ರಕಾರ, ಒಂದು ತಿಂಗಳಲ್ಲಿ 10 ಗಂಟೆಗಳ ಹೆಚ್ಚು ಸಮಯ ನಗದು ಇಲ್ಲದಿದ್ದಲ್ಲಿ ಪ್ರತಿ ಎಟಿಎಂಗೆ 10 ಸಾವಿರ ರೂಪಾಯಿ ದಂಟ ವಿಧಿಸಲಾಗುತ್ತದೆ. ವೈಟ್ ಲೇಬಲ್ ಎಟಿಎಂಗಳ ವಿಚಾರಕ್ಕೆ ಬಂದಲ್ಲಿ ಆ ನಿರ್ದಿಷ್ಟ ವೈಟ್​ಲೇಬಲ್ ಎಟಿಎಂಗಳಿಗೆ ಸಂಬಂಧಿಸಿದಂತೆ ಬ್ಯಾಂಕ್​ಗೆ ದಂಡ ಹಾಕಲಾಗುತ್ತದೆ. ಆ ವೈಟ್​ ಲೇಬಲ್ ಎಟಿಎಂ ಆಪರೇಟರ್​ನಿಂದ ಹಣ ವಸೂಲಿ ಮಾಡಬೇಕೋ ಬೇಡವೋ ಎಂಬುದು ಆ ಬ್ಯಾಂಕ್​ನ ವಿವೇಚನೆಗೆ ಬಿಟ್ಟಿದ್ದು ಎಂದು ಆರ್​ಬಿಐ ಹೇಳಿದೆ.

ನಗದು ತುಂಬದೆ ಎಷ್ಟು ಸಮಯ ಎಟಿಎಂ ಖಾಲಿ ಇತ್ತು ಎಂಬ ಬಗ್ಗೆ ಬ್ಯಾಂಕ್​ಗಳೇ ಸಿಸ್ಟಮ್ ಚಾಲಿತ ಹೇಳಿಕೆಯನ್ನು ತಯಾರಿಸಿ, ಆರ್​ಬಿಐನ ವಿತರಣೆ ಇಲಾಖೆಗೆ, ಅದರಲ್ಲೂ ಯಾವ ವ್ಯಾಪ್ತಿಯಲ್ಲಿ ಇದೆಯೋ ಅಲ್ಲಿಗೆ ಸಲ್ಲಿಸಬಹುದು. ವೈಟ್​ ಲೇಬಲ್ ಎಟಿಎಂಗಳಿಗೆ ಸಂಬಂಧಿಸಿದಂತೆ WLAOs ಪರವಾಗಿ ಎಟಿಎಂಗಳಲ್ಲಿ ಎಷ್ಟು ಸಮಯ ನಗದು ಇರಲಿಲ್ಲ ಎಂಬ ಮಾಹಿತಿ ಒದಗಿಸಬಹುದು. ಇಂಥ ಸ್ಟೇಟ್​ಮೆಂಟ್​ ಅನ್ನು ಪ್ರತಿ ತಿಂಗಳು ನೀಡಬೇಕು. ಅದು ಮಾರನೇ ತಿಂಗಳ ಐದನೇ ತಾರೀಕಿನೊಳಗೆ ಸಲ್ಲಿಸಸಬೇಕು. ಅಂಥ ಮೊದಲ ಸ್ಟೇಟ್​ಮೆಂಟ್ 2021ರ ಅಕ್ಟೋಬರ್​ನದು ಮುಂದಿನ ತಿಂಗಳಾದ ನವೆಂಬರ್ 5ನೇ ತಾರೀಕೊಳಗೆ ಸಂಬಂಧಪಟ್ಟ ವಿತರಣೆ ಇಲಾಖೆಗೆ ಸಲ್ಲಿಕೆ ಮಾಡಬೇಕು.

ಸಕ್ಷಮ ಪ್ರಾಧಿಕಾರವು ವಿಧಿಸಿದ ದಂಡದ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು ಅಂದುಕೊಂಡಲ್ಲಿ ಬ್ಯಾಂಕ್​ಗಳು/WLAOsನಿಂದ ಪ್ರಾದೇಶಿಕ ನಿರ್ದೇಶಕರು/ಅಧಿಕಾರಿಗಳಿಗೆ ಲ್ಲಿಸಬಹುದು. ಅದೂ ದಂಡ ವಿಧಿಸಿದ ಒಂದು ತಿಂಗಳ ಒಳಗಾಗಿ ಮಾತ್ರ. ಈ ಯೋಜನೆಯ ಉದ್ದೇಶವೇ ಸರಿಯಾದ ಸಮಯಕ್ಕೆ ಎಟಿಎಂಗಳಿಗೆ ನಗದು ತುಂಬುವಂತೆ ಆಗಬೇಕು ಎಂಬುದು. ಒಂದು ಬ್ಯಾಂಕ್​ಗಳು/WLAOsಗಳ ಹತೋಟಿಗೂ ಮೀರಿದ ಕಾರಣಗಳಿದ್ದಲ್ಲಿ, ಉದಾಹರಣೆಗೆ ಲಾಕ್​ಡೌನ್, ಬಂದ್​ ಹೀಗೆ. ಅಂಥ ಸಂದರ್ಭದಲ್ಲಿ ಮನವಿಯನ್ನು ಪರಿಗಣಿಸಬಹುದು ಎಂದು ಆರ್​ಬಿಐ ಹೇಳಿದೆ.

ಇದನ್ನೂ ಓದಿ: ATM Withdrawal Charges: ಈ ಮೂರು ಬ್ಯಾಂಕ್​ಗಳ ಗ್ರಾಹಕರಿಗೆ ಎಟಿಎಂ ವಹಿವಾಟುಗಳು ಅನಿಯಮಿತವಾಗಿ ಫ್ರೀ

(If ATM Out Of Cash Penalty Of Rs 10000 Will Be Imposed On Banks From October 1st Announced By RBI )