Sign In

By signing in or creating an account, you agree with Associated Broadcasting Company's Terms & Conditions and Privacy Policy.

ATM Withdrawal Charges: ಈ ಮೂರು ಬ್ಯಾಂಕ್​ಗಳ ಗ್ರಾಹಕರಿಗೆ ಎಟಿಎಂ ವಹಿವಾಟುಗಳು ಅನಿಯಮಿತವಾಗಿ ಫ್ರೀ

ಎಟಿಎಂ ನಗದು ವಿಥ್​ಡ್ರಾ ವಹಿವಾಟಿನ ಮೇಲೆ ಯಾವುದೇ ಮಿತಿ ವಿಧಿಸದ ಬ್ಯಾಂಕ್​ಗಳು ಇವು. ಈ ಬ್ಯಾಂಕ್​ಗಳ ಗ್ರಾಹಕರಿಗೆ ಎಟಿಎಂಗಳಿಂದ ಎಷ್ಟು ಸಲ ಬೇಕಾದರೂ ನಗದು ವಿಥ್​ಡ್ರಾ ಮಾಡುವ ಅವಕಾಶ ಒದಗಿಸುತ್ತದೆ.

ATM Withdrawal Charges: ಈ ಮೂರು ಬ್ಯಾಂಕ್​ಗಳ ಗ್ರಾಹಕರಿಗೆ ಎಟಿಎಂ ವಹಿವಾಟುಗಳು ಅನಿಯಮಿತವಾಗಿ ಫ್ರೀ
ಇಂಡಸ್ಇಂಡ್ ಬ್ಯಾಂಕ್ ಮಗುವಿನ ವಯಸ್ಸು 12 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ಆ ಮಗುವಿನ ಹೆಸರಿನಲ್ಲಿ ಅಪ್ರಾಪ್ತರ ಖಾತೆಯನ್ನು ತೆರೆಯಬಹುದು. ಹೀಗಲ್ಲದಿದ್ದರೆ ಖಾತೆಯನ್ನು "ಅಂಡರ್ ಗಾರ್ಡಿಯನ್" ಖಾತೆಯಾಗಿ ತೆರೆಯಬೇಕು. ಆಗ ಪೋಷಕರು ಖಾತೆಯನ್ನು ನಿರ್ವಹಿಸುತ್ತಾರೆ ಮತ್ತು ಮಗುವಿನ ವಯಸ್ಸು 12 ದಾಟಿದ ನಂತರ ಬದಲಾಯಿಸಲಾಗುತ್ತದೆ. ನಿರ್ವಹಣೆ ಮಾಡಬೇಕಾದ ಸರಾಸರಿ ಮಾಸಿಕ ಬ್ಯಾಲೆನ್ಸ್ 5,000 ರೂಪಾಯಿ. ಅನನ್ಯ ಗೋಲ್ಡ್ ಡೆಬಿಟ್ ಕಾರ್ಡ್ ಎಂಬ ಹೆಸರಿನ ಡೆಬಿಟ್ ಕಾರ್ಡ್ ಅನ್ನು 12 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಅವರ ಹೆಸರಿನಲ್ಲಿ ನೀಡಲಾಗುತ್ತದೆ. ಅನಿಯಮಿತ ಉಚಿತ ಎಟಿಎಂ ವಹಿವಾಟುಗಳು ಮತ್ತು ಆನ್‌ಲೈನ್ ವಹಿವಾಟಿನಲ್ಲಿ ವಿಶೇಷ ಕೊಡುಗೆಗಳು ಲಭ್ಯವಿವೆ.
Follow us
TV9 Web
| Updated By: Srinivas Mata

Updated on:Jun 15, 2021 | 8:28 PM

ಜನವರಿ 1, 2022ರಿಂದ ಅನ್ವಯ ಆಗುವಂತೆ ಎಟಿಎಂ ವಹಿವಾಟುಗಳ ಶುಲ್ಕವನ್ನು ಏರಿಕೆ ಮಾಡುವುದಕ್ಕೆ ಬ್ಯಾಂಕ್​ಗಳಿಂದ ಸಿದ್ಧತೆ ಮುಗಿದಿದೆ. ಈ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಧಿಸೂಚನೆ ಹೊರಡಿಸಿದೆ. ಸದ್ಯಕ್ಕೆ ಬ್ಯಾಂಕ್​ಗಳು ಉಚಿತ ಮಿತಿಯ ನಂತರ ಮಾಡುವ ವಹಿವಾಟುಗಳಿಗೆ ಒಂದು ವ್ಯವಹಾರಕ್ಕೆ ರೂ. 20 ಹಾಗೂ ಜಿಎಸ್​ಟಿ ವಿಧಿಸುತ್ತಿವೆ. ಅಂದ ಹಾಗೆ ಯಾವ ಬ್ಯಾಂಕ್​ನಲ್ಲಿ ಖಾತೆ ಇದೆಯೋ ಅದರದೇ ಎಟಿಎಂನಲ್ಲಿ ಮೂರು ವಹಿವಾಟು ಹಾಗೂ ಬೇರೆ ಬ್ಯಾಂಕ್​ಗಳದಾದರೆ ಎರಡು ವಹಿವಾಟು ಒಂದು ತಿಂಗಳಲ್ಲಿ ಉಚಿತವಾಗಿ ಮಾಡಬಹುದು. ಆದರೆ ಈಗಲೂ ಕೆಲವು ಬ್ಯಾಂಕ್​ಗಳು ಅನಿಯಮಿತವಾಗಿ ಉಚಿತವಾದ ಎಟಿಎಂ ವಹಿವಾಟು ನಡೆಸಲು ಅವಕಾಶ ನೀಡುತ್ತಿವೆ. ಉಚಿತ ವಹಿವಾಟಿನ ಮಿತಿಯ ನಂತರವೂ ಆ ಬ್ಯಾಂಕ್​ಗಳು ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಅವುಗಳ ಮಾಹಿತಿ ಹೀಗಿದೆ.

ಇಂಡಸ್​ಇಂಡ್ ಬ್ಯಾಂಕ್ ಬಹಳ ವೇಗವಾಗಿ ಬೆಳೆಯುತ್ತಿರುವ ಖಾಸಗಿ ಬ್ಯಾಂಕ್​ಗಳಲ್ಲಿ ಇಂಡಸ್​ಇಂಡ್​ ಬ್ಯಾಂಕ್​ ಕೂಡ ಒಂದು. ಭಾರತದಲ್ಲಿ ಯಾವುದೇ ಬ್ಯಾಂಕ್​ನ ಎಟಿಎಂನಲ್ಲಿ ಅನಿಯಮಿತವಾಗಿ ಉಚಿತ ಎಟಿಎಂ ವಹಿವಾಟುಗಳನ್ನು ನಡೆಸುವುದಕ್ಕೆ ಗ್ರಾಹಕರಿಗೆ ಅವಕಾಶ ನೀಡಿದೆ. ಬ್ಯಾಂಕ್ ವೆಬ್​ಸೈಟ್​ನಲ್ಲಿ ತಿಳಿಸಿರುವಂತೆ, ಇಂಡಸ್​ಇಂಡ್ ಬ್ಯಾಂಕ್ ಡೆಬಿಟ್​ ಕಾರ್ಡ್ ಮೂಲಕ ಭಾರತದ ಯಾವುದೇ ಎಟಿಎಂನಲ್ಲಿ ಅನಿಯಮಿತವಾಗಿ ಉಚಿತ ವಹಿವಾಟು ನಡೆಸಬಹುದು ಎನ್ನಲಾಗಿದೆ. ಯಾವುದೇ ಹೆಚ್ಚುವರಿ ಮೊತ್ತವನ್ನು ಪಾವತಿಸುವ ಅಗತ್ಯ ಇಲ್ಲ ಮತ್ತು ಯಾವುದೇ ಮೊತ್ತವನ್ನು ಗ್ರಾಹಕರಿಂದ ಖಾತೆಯಿಂದ ಕಡಿತ ಕೂಡ ಮಾಡಲ್ಲ ಎಂದು ಬ್ಯಾಂಕ್ ಹೇಳಿದೆ.

ಐಡಿಬಿಐ ಬ್ಯಾಂಕ್ ಒಂದು ವೇಳೆ ನೀವು ಐಡಿಬಿಐ ಬ್ಯಾಂಕ್ ಗ್ರಾಹಕರಾಗಿದ್ದಲ್ಲಿ ಅಥವಾ ಬ್ಯಾಂಕ್ ಖಾತೆ ತೆರೆಯಬೇಕು ಅಂತ ಯೋಜನೆ ಇದ್ದಲ್ಲಿ, ಐಡಿಬಿಐ ಬ್ಯಾಂಕ್​ನ ಎಟಿಎಂಗಳಲ್ಲಿ ಅನಿಯಮಿತವಾಗಿ ಉಚಿತ ವಹಿವಾಟು ನಡೆಸಬಹುದು. ಮೆಟ್ರೋ ಅಥವಾ ಮೆಟ್ರೋಯೇತರ ನಗರಗಳಲ್ಲಿ ಇತರ ಬ್ಯಾಂಕ್​ಗಳ ಎಟಿಎಂಗಳಲ್ಲಿ ಒಂದು ತಿಂಗಳಲ್ಲಿ 5 ಉಚಿತ ವಹಿವಾಟು ನಡೆಸಬಹುದು.

​ಸಿಟಿ ಬ್ಯಾಂಕ್ ಭಾರತದಲ್ಲಿ ಇನ್ನೇನು ಶೀಘ್ರದಲ್ಲಿ ರೀಟೇಲ್ ಬ್ಯಾಂಕಿಂಗ್ ವ್ಯವಹಾರವನ್ನು ಸಿಟಿ ಬ್ಯಾಂಕ್ ಕೊನೆಗೊಳಿಸುತ್ತಿದೆ. ಗ್ರಾಹಕರು ಈ ಬ್ಯಾಂಕ್​ ಹಾಗೂ ಇತರ ಬ್ಯಾಂಕ್​ಗಳ ಎಟಿಎಂಗಳಲ್ಲಿ ಉಚಿತ ವಹಿವಾಟು ನಡೆಸಬಹುದು.

ಸದ್ಯಕ್ಕೆ ನಗರ ಹಾಗೂ ಪಟ್ಟಣಗಳಲ್ಲಿ ಖಾಸಗಿ ಮತ್ತು ಸಾರ್ವಜನಿಕ ಬ್ಯಾಂಕ್​ಗಳಲ್ಲಿ ಮೂರರಿಂದ ಐದು ವಹಿವಾಟುಗಳನ್ನು ಎಟಿಎಂಗಳಲ್ಲಿ ಉಚಿತವಾಗಿ ಮಾಡಲು ಅವಕಾಶ ನೀಡಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಮತ್ತು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳಿಂದ ಎರಡೂ ಬಗೆಯ ಎಟಿಂಎಗಳಲ್ಲಿ (ಎಲ್ಲಿ ಖಾತೆ ಇರುತ್ತದೋ ಅಲ್ಲಿ ಹಾಗೂ ಹೊರಗಿನ ಎಟಿಎಂಗಳಲ್ಲಿ) ಐದು ವಹಿವಾಟಿನ ತನಕ ಉಚಿತವಾಗಿದೆ.

ಎಟಿಎಂ ಅಂಕಿ- ಅಂಶ ಸದ್ಯಕ್ಕೆ ಎಟಿಎಂ ವಿತ್​ ಡ್ರಾ ಮಿತಿಯ ನಂತರ ನಗದು ವಿಥ್​ಡ್ರಾಗೆ ಶುಲ್ಕ ರೂ. 20 ಹಾಗೂ ಜಿಎಸ್​ಟಿ ಇದೆ. ಅದನ್ನು ಜನವರಿ 1, 2022ರಿಂದ 21 ರೂಪಾಯಿ ಪ್ಲಸ್ ಜಿಎಸ್​ಟಿಗೆ ಏರಿಕೆ ಮಾಡಲಾಗುತ್ತದೆ. ಭಾರತದಲ್ಲಿ 2020ರ ಅಕ್ಟೋಬರ್​ನಲ್ಲಿ 2,34,244 ಎಟಿಎಂಗಳಿದ್ದವು. ಅದೇ 2020ರ ಮಾರ್ಚ್​ನಲ್ಲಿ 2,34,357 ಇದ್ದವು. 2020ರಲ್ಲಿ ಮೊದಲ ಬಾರಿಗೆ ಎಟಿಎಂ ಸಂಖ್ಯೆಯಲ್ಲಿ ಕಡಿಮೆಯಾಗಿತ್ತು. ಬಹುತೇಕ ಷೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್​ಗಳು ಮತ್ತು ಸ್ವತಂತ್ರ ಎಟಿಎಂ ಆಪರೇಟರ್​ಗಳನ್ನು ವೈಟ್​ ಲೇಬಲ್ ಎಟಿಎಂ ಆಪರೇಟರ್ಸ್ ಅಥವಾ WLAOಗಳು ಎನ್ನಲಾಗುತ್ತದೆ. ಕಳೆದ ಎರಡು ವರ್ಷಗಳಲ್ಲಿ ನಿಧಾನವಾಗಿ ಅವುಗಳ ಸಂಖ್ಯೆ ಕಡಿಮೆ ಆಗುತ್ತಲೇ ಬಂದಿವೆ.

(ಮೂಲ ಲೇಖನ: ಮನಿ9.ಕಾಮ್)

ಇದನ್ನೂ ಓದಿ: ATM charges: ಎಟಿಎಂ ನಗದು ವಿಥ್​ ಡ್ರಾ ದರ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಶುಲ್ಕವು ಸದ್ಯದಲ್ಲೇ ಏರಿಕೆ

(Unlimited free ATM transactions allowed by these 3 banks to customers. Here is the details)

Published On - 8:23 pm, Tue, 15 June 21