Aadhaar matching deferred: ಆಧಾರ್ ಜತೆ ಉದ್ಯೋಗಿ ಮಾಹಿತಿ ತಾಳೆ ಆಗಲು ಸೆ.​1ಕ್ಕೆ ಗಡುವು ಮುಂದೂಡಿದ ಇಪಿಎಫ್​ಒ

ಜೂನ್ 1, 2021ರಿಂದ ಅನ್ವಯ ಆಗುವಂತೆ ಆಧಾರ್​ ಜತೆಗೆ ಸಿಬ್ಬಂದಿಯ ಮಾಹಿತಿ ತಾಳೆ ಆಗಬೇಕು ಎಂಬ ನಿಯಮವನ್ನು ಕಡ್ಡಾಯಗೊಳಿಸಿದ್ದ ಇಪಿಎಫ್​ಒ ಅದನ್ನು ಸೆಪ್ಟೆಂಬರ್ 1ನೇ ತಾರೀಕಿಗೆ ಮುಂದೂಡಿದೆ.

Aadhaar matching deferred: ಆಧಾರ್ ಜತೆ ಉದ್ಯೋಗಿ ಮಾಹಿತಿ ತಾಳೆ ಆಗಲು ಸೆ.​1ಕ್ಕೆ ಗಡುವು ಮುಂದೂಡಿದ ಇಪಿಎಫ್​ಒ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on:Jun 15, 2021 | 11:12 PM

ಲಕ್ಷಾಂತರ ಮಂದಿ ಸಂಘಟಿತ ವಲಯದ ಕೆಲಸಗಾರರಿಗೆ ನಿರಾಳ ಆಗುವಂಥ ಸುದ್ದಿ ಹೊರಬಿದ್ದಿದೆ. ಕಾರ್ಮಿಕರ ಭವಿಷ್ಯ ನಿಧಿ ಒಕ್ಕೂಟವು (ಇಪಿಎಫ್​ಒ) ಮಂಗಳವಾರದಂದು ಮಹತ್ತರ ಘೋಷಣೆ ಮಾಡಿ, ಸಿಬ್ಬಂದಿಯ ದಾಖಲೆಯ ಜತೆಗೆ ಕಡ್ಡಾಯವಾಗಿ ಆಧಾರ್​ ತಾಳೆಯಾಗಬೇಕು ಎಂಬ ನಿಯಮವನ್ನು ಮುಂದೂಡಿದೆ. ಈ ಹೊಸ ನಿಯಮ ಜಾರಿ ಬಗ್ಗೆ ಮತ್ತೊಮ್ಮೆ ಅವಲೋಕಿಸುವಂತೆ ಕೋರಿ, ಆರೆಸ್ಸೆಸ್ ಜತೆಗೆ ಗುರುತಿಸಿಕೊಂಡಿರುವ ಸಂಸ್ಥೆಯು ಕಾರ್ಮಿಕ ಸಚಿವಾಲಯಕ್ಕೆ ಪತ್ರ ಬರೆದಿತ್ತು. ಈ ಹಿಂದೆ ನೀಡಿದ್ದ ನಿರ್ದೇಶನದ ಅನುಸಾರ, ಇಪಿಎಫ್​ಒದಿಂದ ಆಧಾರ್​ ವ್ಯಾಲಿಡೇಟ್ ಮಾಡಲು ತಿಳಿಸಲಾಗಿತ್ತು. ಇದರರ್ಥ ಏನೆಂದರೆ, ಹೆಸರು, ಜನ್ಮದಿನಾಂಕ, ಲಿಂಗ ಎಲ್ಲವೂ ಸರಿಯಾಗಿ ತಾಳೆ ಆಗಬೇಕು. ಆಗಷ್ಟೇ ಕಾರ್ಮಿಕ ಭವಿಷ್ಯ ನಿಧಿ ತಿಂಗಳ ಕೊಡುಗೆ ನೀಡಲು ಅವಕಾಶ ಮಾಡಿಕೊಡುತ್ತಿತ್ತು. ಈ ನಡೆಯಿಂದಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಇರುವ, ಕಡಿಮೆ ಆದಾಯದ ಸಂಘಟಿತ ವಲಯದ ಸಿಬ್ಬಂದಿಗೆ ದಾಖಲೆಗಳು ಹೊಂದಾಣಿಕೆ ಆಗದೆ ಪಿಎಫ್​ ಪಾವತಿ ಮಾಡಲು ಆಗಲಿಲ್ಲ.

ಇಪಿಎಫ್​ಒದಿಂದ ಸುತ್ತೋಲೆ ಮೂಲಕ ನಿರ್ದೇಶನ ನೀಡಿ, ಈ ಹಿಂದೆ ತಿಳಿಸಿದಂತೆ ಆಧಾರ್ ತಾಳೆ ಜೂನ್​ 1ರಿಂದ ಕಡ್ಡಾಯ ಅಲ್ಲ. ಇದು ಸೆಪ್ಟೆಂಬರ್ 1ರಿಂದ ಅನ್ವಯ ಆಗಲಿದೆ. ಸೆಪ್ಟೆಂಬರ್​ 1ರಿಂದ ಎಲ್ಲ ಉದ್ಯೋಗದಾತರು ಈ ತೀರ್ಮಾನ ಜಾರಿಗೆ ಸಿದ್ಧವಿದ್ದಾರೆ ಎಂಬುದನ್ನು ಖಾತ್ರಿ ಪಡಿಸಬೇಕು ಎಂದು ಎಲ್ಲ ಕ್ಷೇತ್ರೀಯ ಕಚೇರಿಗಳಿಗೆ ತಿಳಿಸಿದೆ. ಉದ್ಯೋಗಿಯ ಮಾಹಿತಿಯೊಂದಿಗೆ ಆಧಾರ್ ಕಡ್ಡಾಯವಾಗಿ ತಾಳೆಯಾಗಬೇಕು ಎನ್ನಲಾಗಿತ್ತು. ಇದರಿಂದಾಗಿ ಲಕ್ಷಾಂತರ ಮಂದಿ ಇಪಿಎಫ್​ಒ ಬಾಕಿ ಪಾವತಿಸಲು ಆಗಿರಲಿಲ್ಲ ಎಂದು ಬಿಎಂಎಸ್​ ಶನಿವಾರ ತಿಳಿಸಿತ್ತು. ಆ ನಂತರ ಸಂಘಟನೆಯಿಂದ ಕೇಂದ್ರ ಕಾರ್ಮಿಕ ಸಚಿವರಿಗೆ ಪತ್ರ ಬರೆಯಲಾಗಿತ್ತು. ಹೊಸದಾಗಿ ಹೊರಡಿಸಲಾದ ಆಧಾರ್ ವ್ಯಾಲಿಡೇಷನ್ ನಿಯಮ ಮತ್ತೊಮ್ಮೆ ಪರಿಶೀಲಿಸಿ, ಇಪಿಎಫ್​ಒ ಪಾವತಿಸಲು ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿತ್ತು.

ಆಧಾರ್ ಸಂಖ್ಯೆಯೊಂದಿಗೆ ಇಪಿಎಫ್ ಪಾವತಿಸಲು ಉದ್ಯೋಗದಾತರಿಗೆ ಅವಕಾಶ ನೀಡಬೇಕು. ಇತರ ಮಾಹಿತಿಗಳು ಆಧಾರ್ ಜತೆ ತಾಳೆ ಆಗಬೇಕು ಎಂದು ಕಡ್ಡಾಯ ಮಾಡಬಾರದು. ಜೂನ್ 1ರಿಂದ ಜಾರಿಗೆ ಬಂದಿರುವ ನಿಯಮದಿಂದಾಗಿ, ಉದ್ಯೋಗಿಗಳಿಂದ ಕಡಿತವಾದ ನಿಧಿಯ ದುರುಪಯೋಗ ಆಗುವ ಸಾಧ್ಯತೆ ಇದೆ ಮತ್ತು ಕೊಡುಗೆಯಲ್ಲಿ ಮಧ್ಯೆ ತಡೆ ಬಂದರೆ ಇದರಿಂದ ಪೆನ್ಷನ್ ಹಾಗೂ ಇನ್ಷೂರೆನ್ಸ್ ಅರ್ಹತೆಗೆ ಸಮಸ್ಯೆ ಆಗುತ್ತದೆ ಎನ್ನಲಾಗಿತ್ತು. ಇಪಿಎಫ್​ಒಗೆ ಹತ್ತಿರಹತ್ತಿರ 6 ಕೋಟಿ ಸಕ್ರಿಯ ಚಂದಾದಾರರಿದ್ದಾರೆ. ನಿವೃತ್ತಿ ಫಂಡ್​ ಮೊತ್ತ 14 ಲಕ್ಷ ಕೋಟಿ ರೂಪಾಯಿಯನ್ನು ಇದು ನಿರ್ವಹಿಸುತ್ತದೆ.

ಇದನ್ನೂ ಓದಿ: Personal finance: ವ್ಯಕ್ತಿಯು ಮೃತಪಟ್ಟ ನಂತರ ಆಧಾರ್, ಪ್ಯಾನ್ ಕಾರ್ಡ್, ಪಾಸ್​ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಏನು ಮಾಡಬೇಕು?

(EPFO deferred employees details mandatory matching with Aadhaar to September 1st, 2021. Here is the latest updates)

Published On - 11:09 pm, Tue, 15 June 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್