ಸಾಮಾಜಿಕ ಮಾಧ್ಯಮ ಕಂಪೆನಿಯಾದ ಟ್ವಿಟ್ಟರ್ ಇಂಕ್ನಲ್ಲಿ (Twitter) ನಿಯಂತ್ರಣ ಬದಲಾವಣೆ ಆದ 12 ತಿಂಗಳೊಳಗೆ ಸಿಇಒ ಪರಾಗ್ ಅಗರವಾಲ್ ಅವರನ್ನು ವಜಾಗೊಳಿಸಿದರೆ ಅಂದಾಜು 42 ಮಿಲಿಯನ್ ಡಾಲರ್, ಅಂದರೆ ಇವತ್ತಿನ (ಏಪ್ರಿಲ್ 26, 2022) ಭಾರತದ ರೂಪಾಯಿ ಲೆಕ್ಕದಲ್ಲಿ 321.19 ಕೋಟಿ ಪಡೆಯುತ್ತಾರೆ ಎಂದು ಸಂಶೋಧನಾ ಸಂಸ್ಥೆ ಈಕ್ವಿಲಾರ್ ತಿಳಿಸಿದೆ. ಸೋಮವಾರದಂದು ಬಿಲಿಯನೇರ್ ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಅನ್ನು 44 ಶತಕೋಟಿ ಯುಎಸ್ಡಿಗೆ ಖರೀದಿಸಲು ಒಪ್ಪಂದವನ್ನು ಮಾಡಿಕೊಂಡಿದ್ದು, 2013ರಿಂದ ಸಾರ್ವಜನಿಕ ಕಂಪೆನಿಯಾಗಿದ್ದ ಅದರ ಓಟವನ್ನು ಕೊನೆಗೊಳಿಸಿದರು. ಏಪ್ರಿಲ್ 14ರಂದು ಸೆಕ್ಯೂರಿಟೀಸ್ ಫೈಲಿಂಗ್‌ನಲ್ಲಿ ಮಸ್ಕ್ ಅವರು ಟ್ವಿಟ್ಟರ್‌ನ ನಿರ್ವಹಣೆಯಲ್ಲಿ ವಿಶ್ವಾಸ ಹೊಂದಿಲ್ಲ ಎಂದು ಹೇಳಿದ್ದರು.
ಈಕ್ವಿಲಾರ್‌ನ ಅಂದಾಜು ಒಂದು ವರ್ಷದ ಮೌಲ್ಯದ ಅಗರವಾಲ್‌ರ ಮೂಲ ವೇತನ ಮತ್ತು ಎಲ್ಲ ಈಕ್ವಿಟಿ ಅವಾರ್ಡ್ಗಳ ಹಸ್ತಾಂತರವನ್ನು ಒಳಗೊಂಡಿದೆ ಎಂದು ಈಕ್ವಿಲರ್ ವಕ್ತಾರರು ಹೇಳಿದ್ದಾರೆ. ಇದು ಮಸ್ಕ್‌ನ ಪ್ರತಿ ಷೇರಿಗೆ ಯುಎಸ್ಡಿ 54.20 ಆಫರ್ ಬೆಲೆ ಮತ್ತು ಕಂಪೆನಿಯ ಇತ್ತೀಚಿನ ಪ್ರಾಕ್ಸಿ ಹೇಳಿಕೆಯಲ್ಲಿನ ನಿಯಮಗಳ ಆಧಾರದ ಮೇಲೆ ಆಗಿದೆ. ಈಕ್ವಿಲರ್‌ನ ಅಂದಾಜಿನ ಕುರಿತು ಪ್ರತಿಕ್ರಿಯಿಸಲು ಟ್ವಿಟ್ಟರ್ ಪ್ರತಿನಿಧಿ ನಿರಾಕರಿಸಿದ್ದಾರೆ.
ಈ ಹಿಂದೆ ಟ್ವಿಟ್ಟರ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿದ್ದ ಅಗರವಾಲ್ ಅವರನ್ನು ನವೆಂಬರ್‌ನಲ್ಲಿ ಸಿಇಒ ಆಗಿ ನೇಮಿಸಲಾಯಿತು. ಟ್ವಿಟ್ಟರ್‌ನ ಪ್ರಾಕ್ಸಿ ಪ್ರಕಾರ, 2021ಕ್ಕೆ ಅವರ ಒಟ್ಟು ವೇತನ ಯುಎಸ್ಡಿ 30.4 ಮಿಲಿಯನ್ ಆಗಿದ್ದು, ಹೆಚ್ಚಾಗಿ ಸ್ಟಾಕ್ ರೂಪದಲ್ಲಿದೆ.
ಇದನ್ನೂ ಓದಿ: ಎಲಾನ್ ಮಸ್ಕ್ ಅಧೀನದಲ್ಲಿ ಟ್ವಿಟ್ಟರ್ ಭವಿಷ್ಯ ಅಸ್ಪಷ್ಟ: ಸಿಇಒ ಪರಾಗ್ ಅಗರ್ವಾಲ್ ಮಾತಿಗೆ ಹಲವು ಅರ್ಥ