Income Tax: ಆದಾಯ ತೆರಿಗೆ ಇಲಾಖೆಯಿಂದ ತೆರಿಗೆದಾರರಿಗೆ 1.14 ಲಕ್ಷ ಕೋಟಿ ರೂ. ಮರುಪಾವತಿ

| Updated By: ಸುಷ್ಮಾ ಚಕ್ರೆ

Updated on: Sep 03, 2022 | 1:30 PM

ಕಳೆದ ವರ್ಷ 52,000 ಕೋಟಿ ರೂ.ಗೆ ಹೋಲಿಸಿದರೆ ಈ ವರ್ಷ 93,000 ಕೋಟಿ ರೂ. ತೆರಿಗೆ ಮರುಪಾವತಿಯನ್ನು ಬಿಡುಗಡೆ ಮಾಡಲಾಗಿದೆ.

Income Tax: ಆದಾಯ ತೆರಿಗೆ ಇಲಾಖೆಯಿಂದ ತೆರಿಗೆದಾರರಿಗೆ 1.14 ಲಕ್ಷ ಕೋಟಿ ರೂ. ಮರುಪಾವತಿ
ಪ್ರಾತಿನಿಧಿಕ ಚಿತ್ರ
Follow us on

ನವದೆಹಲಿ: ಆದಾಯ ತೆರಿಗೆ ಇಲಾಖೆಯಿಂದ (Income Tax Department) ಈ ವರ್ಷ ಏಪ್ರಿಲ್ 1 ಮತ್ತು ಆಗಸ್ಟ್ 31ರ ನಡುವೆ 1.97 ಕೋಟಿಗೂ ಹೆಚ್ಚು ತೆರಿಗೆದಾರರಿಗೆ 1.14 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಮರುಪಾವತಿಯನ್ನು ನೀಡಲಾಗಿದೆ. 1,96,00,998 ಪ್ರಕರಣಗಳಲ್ಲಿ 1,252 ಕೋಟಿ ರೂ. ಮರುಪಾವತಿ ಮಾಡಲಾಗಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ತಿಳಿಸಿದೆ. 1,46,871 ಪ್ರಕರಣಗಳಲ್ಲಿ 53,158 ಕೋಟಿ ರೂ. ಕಾರ್ಪೊರೇಟ್ ತೆರಿಗೆ ಮರುಪಾವತಿಯನ್ನು ನೀಡಲಾಗಿದೆ.

ಕಳೆದ ತಿಂಗಳು CBDT ಅಧ್ಯಕ್ಷ ನಿತಿನ್ ಗುಪ್ತಾ ಅವರು ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಒಟ್ಟು ತೆರಿಗೆ ಸಂಗ್ರಹವು ಶೇ. 38ರಷ್ಟು ಹೆಚ್ಚಾಗಿದೆ ಎಂದು ಹೇಳಿದ್ದರು. ಕಳೆದ ವರ್ಷ 52,000 ಕೋಟಿ ರೂ.ಗೆ ಹೋಲಿಸಿದರೆ ಈ ವರ್ಷ 93,000 ಕೋಟಿ ರೂ. ತೆರಿಗೆ ಮರುಪಾವತಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ: Income Tax Return: ಪರಿಷ್ಕೃತ ಆದಾಯ ತೆರಿಗೆ ರಿಟರ್ನ್; ಅರ್ಹತೆ, ಗಡುವು, ನೀವು ತಿಳಿದಿರಬೇಕಾದ ಇತರೆ ಅಂಶಗಳು ಇಲ್ಲಿವೆ

ತೆರಿಗೆ ವ್ಯವಸ್ಥೆಯನ್ನು ತೊಂದರೆ ಮುಕ್ತಗೊಳಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ನಾವು ‘ಫೇಸ್‌ಲೆಸ್ ಸ್ಕೀಮ್’ ಯಶಸ್ವಿಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ನಾವು ನಮ್ಮ ಅಧಿಕಾರಿಗಳಿಗೆ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಅನ್ನು ನೀಡಿದ್ದೇವೆ. ನಾವು ತೆರಿಗೆದಾರರಿಗೆ ವಿಡಿಯೋ ಕಾನ್ಫರೆನ್ಸ್ ಸೌಲಭ್ಯಗಳನ್ನು ಲಭ್ಯವಾಗುವಂತೆ ಮಾಡುತ್ತಿದ್ದೇವೆ. ಅದಕ್ಕಾಗಿ ನಾವು 20 ಸಮಿತಿಗಳನ್ನು ರಚಿಸಿದ್ದೇವೆ. ಈ ಸಮಿತಿಯ ಮೇಲ್ವಿಚಾರಣೆಯನ್ನು CBDT ಮಾಡಲಿದೆ ಎಂದು ಗುಪ್ತಾ ಹೇಳಿದ್ದಾರೆ.

ಇಲ್ಲಿಯವರೆಗೆ ನಾವು ಸುಮಾರು 4.80 ಲಕ್ಷ ಕೋಟಿ ರೂ. ನಿವ್ವಳ ಸಂಗ್ರಹವನ್ನು ಪಡೆದುಕೊಂಡಿದ್ದೇವೆ. ನಮ್ಮ ಒಟ್ಟು ಸಂಗ್ರಹವು ಕಳೆದ ವರ್ಷಕ್ಕಿಂತ ಶೇ. 38ರಷ್ಟು ಹೆಚ್ಚಾಗಿದೆ. ಜುಲೈ 31ರಂದು ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಕೊನೆಯ ದಿನಾಂಕವಾಗಿತ್ತು. ಈ ಬಾರಿ ನಾವು ದಿನಾಂಕವನ್ನು ವಿಸ್ತರಿಸಿಲ್ಲ. ಈ ಬಾರಿ ಸುಮಾರು 6 ಕೋಟಿ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲಾಗಿದೆ. ನಾವು ಕಳೆದ ವರ್ಷಕ್ಕಿಂತ ಶೇ. 68ರಷ್ಟು ಹೆಚ್ಚಿನ ಮರುಪಾವತಿ ಮೊತ್ತವನ್ನು ನೀಡಿದ್ದೇವೆ. ಸಾಧ್ಯವಾದಷ್ಟು ಬೇಗ ಮರುಪಾವತಿಯನ್ನು ನೀಡುವುದು ನಮ್ಮ ಪ್ರಯತ್ನವಾಗಿದೆ ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:29 pm, Sat, 3 September 22