ಹೊಸ ಇನ್ಕಮ್ ಟ್ಯಾಕ್ಸ್ ಪೋರ್ಟಲ್; 5 ಹೊಸ ಫೀಚರ್ಸ್; ಇನ್ನಷ್ಟು ಸರಳ, ಸುಂದರ, ಬಳಕೆಸ್ನೇಹಿ

Income Tax Portal New Design: ಇನ್ಕಮ್ ಟ್ಯಾಕ್ಸ್ ಪೋರ್ಟಲ್ ಅಥವಾ ವೆಬ್​ಸೈಟ್ ಅನ್ನು ಪರಿಷ್ಕರಿಸಲಾಗಿದ್ದು, ಐದು ಹೊಸ ಫೀಚರ್​ಗಳು ಗಮನ ಸೆಳೆಯುತ್ತವೆ. ಇದರ ವಿನ್ಯಾಸ, ಇಂಟರ್​ಫೇಸ್ ಎಲ್ಲವೂ ಸರಳ ಮತ್ತು ಸುಲಭವಾಗಿವೆ. ತೆರಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸುಲಭವಾಗಿ ಹುಡುಕುವಂತಹ ಫೀಚರ್​ಗಳಿವೆ. ವಿವಿಧ ವರ್ಚುವಲ್ ಟೂರ್, ಟ್ಯಾಕ್ಸ್​ಪೇಯರ್ ಸರ್ವಿಸ್ ಇತ್ಯಾದಿ ವಿಶೇಷತೆಗಳು ಈ ಪೋರ್ಟಲ್​ನಲ್ಲಿವೆ.

ಹೊಸ ಇನ್ಕಮ್ ಟ್ಯಾಕ್ಸ್ ಪೋರ್ಟಲ್; 5 ಹೊಸ ಫೀಚರ್ಸ್; ಇನ್ನಷ್ಟು ಸರಳ, ಸುಂದರ, ಬಳಕೆಸ್ನೇಹಿ
ಆದಾಯ ತೆರಿಗೆ ಇಲಾಖೆ
Follow us
|

Updated on: Sep 01, 2023 | 1:17 PM

ಆದಾಯ ತೆರಿಗೆ ಇಲಾಖೆ ತನ್ನ ಪೋರ್ಟಲ್ ಅನ್ನು ಪರಿಷ್ಕರಿಸಿದ್ದು, ಹೊಸ ರೀತಿಯ ನೋಟ ನಿಮ್ಮ ಕಣ್ಸೆಳೆಯುತ್ತದೆ. ಹೊಸ ರೀತಿಯ ವಿನ್ಯಾಸದಿಂದ ಈ ಪೋರ್ಟಲ್ (www.incometax.gov.in) ಬಹಳ ಸರಳವಾಗಿ ಕಾಣುತ್ತದೆ. ಐದು ಹೊಸ ಫೀಚರ್​ಗಳನ್ನು ಪರಿಚಯಿಸಲಾಗಿದ್ದು, ನೋಡಲಷ್ಟೇ ಅಲ್ಲ, ಇದರ ಬಳಕೆಯೂ ಕೂಡ ಬಹಳ ಸರಳಗೊಂಡಿದೆ. ವೆಬ್​ಸೈಟ್​ನಲ್ಲಿರುವ ವಿವಿಧ ವಿಭಾಗಗಳು, ಲಿಂಕ್​ಗಳು ಎಲ್ಲವೂ ಕೂಡ ಬುದ್ಧಿವಂತಿಕೆಯಿಂದ ಸಂಯೋಜಿಸಲಾಗಿದೆ. ಹೀಗಾಗಿ, ಹೊಸ ಇನ್ಕಮ್ ಟ್ಯಾಕ್ಸ್ ಪೋರ್ಟ್ ಇನ್ನಷ್ಟು ಸರಳ, ಸುಂದರ, ಯೂಸರ್​ಫ್ರೆಂಡ್ಲಿ ಎನಿಸಿದೆ.

ಬಳಕೆದಾರ ಸ್ನೇಹಿ ವಿನ್ಯಾಸ

ಆಗಲೇ ಹೇಳಿದಂತೆ ಪರಿಷ್ಕೃತ ಇನ್ಕಮ್ ಟ್ಯಾಕ್ಸ್ ಪೋರ್ಟಲ್ ಸಂಕೀರ್ಣ ಎನಿಸುವುದಿಲ್ಲ. ಕಣ್ಣಿಗೆ ಕಷ್ಟ ಕೊಡುವುದಿಲ್ಲ. ಇದರ ಇಂಟರ್​ಫೇಸ್ ಉತ್ತಮವಾಗಿದ್ದು ಯೂಸರ್ ಫ್ರೆಂಡ್ಲಿ ಎನಿಸಿದೆ. ಮೊಬೈಲ್ ಆವೃತ್ತಿಯ ವಿನ್ಯಾಸ ಕೂಡ ಉತ್ತಮವಾಗಿದೆ.

ಗೈಡೆಡ್ ವರ್ಚುವಲ್ ಟೂಲ್ಸ್

ಪೋರ್ಟಲ್​ನಲ್ಲಿ ನ್ಯಾವಿಗೇಟ್ ಮಾಡುವುದು ಸುಲಭವನ್ನಾಗಿಸುವಂತೆ ಗೈಡೆಡ್ ವರ್ಚುವಲ್ ಟೂರ್ ಸೌಲಭ್ಯ ಇದೆ. ಯಾವುದೇ ವಿಷಯವನ್ನು ನೀವು ಹುಡುಕಲು ಸರ್ಚ್ ಬಾರ್ ಇದೆ. ಆಫ್​ಲೈನ್​ನಲ್ಲಿ ಐಟಿಆರ್ ಫೈಲ್ ಮಾಡುವುದು ಹೇಗೆ, ಆಧಾರ್ ಪ್ಯಾನ್ ಲಿಂಕಿಂಗ್​ನಲ್ಲಿ ತಪ್ಪುಗಳನ್ನು ತಪ್ಪಿಸುವುದು ಹೇಗೆ, ಟ್ಯಾಕ್ಸ್ ರಿಟರ್ನ್ಸ್ ಅಪ್​ಡೇಟ್ ಮಾಡುವುದು ಹೇಗೆ, ಹೀಗೆ ಯಾವುದೇ ಸಮಸ್ಯೆಗೂ ಇಲ್ಲಿ ಪರಿಹಾರಕ್ಕೆ ಸಲಹೆಗಳನ್ನು ಪಡೆಯಬಹುದು.

ಇದನ್ನೂ ಓದಿ: Rule Changes From September 2023: ಸೆಪ್ಟೆಂಬರ್​ನಲ್ಲಿ 10 ಪ್ರಮುಖ ಬದಲಾವಣೆಗಳನ್ನು ತಿಳಿದಿರಿ

ತೆರಿಗೆ ಸಂಬಂಧಿತ ಮಾಹಿತಿ ಪಡೆಯಿರಿ

ಇನ್ಕಮ್ ಟ್ಯಾಕ್ಸ್ ವೆಬ್​ಸೈಟ್​ನಲ್ಲಿ ಈ ಮುಂಚಿನಿಂದಲೂ ತೆರಿಗೆ ಸಂಬಂಧಿತ ಎಲ್ಲಾ ಮಾಹಿತಿಯೂ ಇತ್ತು. ಆದರೆ, ಅದನ್ನು ಹುಡುಕುವುದು ಕಷ್ಟಕರವಾಗಿತ್ತು. ಈಗ ಹೊಸ ವಿನ್ಯಾಸದ ವೆಬ್​ಸೈಟ್​ನಲ್ಲಿ ಈ ಮಾಹಿತಿ ಎಲ್ಲವನ್ನೂ ಸುಲಭವಾಗಿ ಹುಡುಕಿ ಓದಬಹುದು.

ಟ್ಯಾಕ್ಸ್​ಪೇಯರ್ ಸರ್ವಿಸಸ್

ಹೊಸ ಇನ್ಕಮ್ ಟ್ಯಾಕ್ಸ್ ಪೋರ್ಟಲ್​ನಲ್ಲಿ ಟ್ಯಾಕ್ಸ್​ಪೇಯರ್ ಸರ್ವಿಸಸ್ ಎಂಬ ಫೀಚರ್ ಜೋಡಿಸಲಾಗಿದೆ. ಇದರಲ್ಲಿ ಟ್ಯಾಕ್ಸ್ ಟೂಲ್ಸ್ ಇತ್ಯಾದಿ ಹಲವು ಸೆಕ್ಷನ್​ಗಳಿದ್ದು, ನಿಮಗೆ ಬೇಕಾದ ಮಾಹಿತಿಯನ್ನು ಸುಲಭವಾಗಿ ವೀಕ್ಷಿಸಬಹುದು.

ಇದನ್ನೂ ಓದಿ: ಕೇಂದ್ರದ ಪಿಎಲ್​ಐ ಸ್ಕೀಮ್​ನಲ್ಲಿ ತಮಿಳುನಾಡು, ಗುಜರಾತ್ ಮತ್ತು ಕರ್ನಾಟಕಕ್ಕೆ ಸಿಂಹಪಾಲು; ಕ್ರಿಸಿಲ್ ರಿಸರ್ಚ್ ವರದಿ

ಗಡುವು ಎಚ್ಚರಿಸುವ ಫೀಚರ್

ಯಾವುದಾದರೂ ತೆರಿಗೆ ಪಾವತಿಸಲು ಇರುವ ಗಡುವನ್ನು ನಿಮಗೆ ನೆನಪಿಸಲು ಡ್ಯು ಡೇಟ್ ರಿಮೈಂಡರ್ ಎಂಬ ಫೀಚರ್ ಇದೆ. ಇದೇ ಫೀಚರ್​ನಲ್ಲಿ ಟ್ಯಾಕ್ಸ್ ಕ್ಯಾಲೆಂಡರ್ ಇದ್ದು, ತೆರಿಗೆ ಸಂಬಂಧಿಸಿದ ಎಲ್ಲಾ ಪ್ರಮುಖ ದಿನಾಂಕಗಳನ್ನು ಹೈಲೈಟ್ ಮಾಡಲಾಗಿರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್