IT Refund: 98 ಲಕ್ಷಕ್ಕೂ ಹೆಚ್ಚು ತೆರಿಗೆದಾರರಿಗೆ 1.15 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಐಟಿ ರೀಫಂಡ್
ಪ್ರಸಕ್ತ ಹಣಕಾಸು ವರ್ಷದಲ್ಲಿ ನವೆಂಬರ್ 8ನೇ ತಾರೀಕಿನವರೆಗೆ 98 ಲಕ್ಷಕ್ಕೂ ಹೆಚ್ಚು ತೆರಿಗೆ ಪಾವತಿದಾರರಿಗೆ 1.15 ಲಕ್ಷ ಕೋಟಿ ರೂಪಾಯಿ ಹೆಚ್ಚು ಐಟಿ ರೀಫಂಡ್ ಆಗಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ 98 ಲಕ್ಷಕ್ಕೂ ಹೆಚ್ಚು ತೆರಿಗೆದಾರರಿಗೆ 1.15 ಲಕ್ಷ ಕೋಟಿ ರೂಪಾಯಿಗೂ ಅಧಿಕ ಆದಾಯ ತೆರಿಗೆ ಮರುಪಾವತಿಯನ್ನು ನೀಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಬುಧವಾರ ತಿಳಿಸಿದೆ. ಇವುಗಳು 2020-21 ಹಣಕಾಸು ವರ್ಷಕ್ಕೆ (ಅಸೆಸ್ಮೆಂಟ್ ವರ್ಷ 2021-22) 65.31 ಲಕ್ಷ ತೆರಿಗೆದಾರರಿಗೆ 12,616.79 ಕೋಟಿ ರೂಪಾಯಿ ಮರುಪಾವತಿಗಳನ್ನು ಒಳಗೊಂಡಿವೆ.
“CBDT 1ನೇ ಏಪ್ರಿಲ್, 2021ರಿಂದ ನವೆಂಬರ್ 8, 2021ರ ವರೆಗೆ 98.90 ಲಕ್ಷಕ್ಕೂ ಹೆಚ್ಚು ತೆರಿಗೆದಾರರಿಗೆ 1,15,917 ಕೋಟಿ ರೂಪಾಯಿಗಳ ಮರುಪಾವತಿಯನ್ನು ನೀಡಿದೆ,” ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.
ಇದರಲ್ಲಿ 97.12 ಲಕ್ಷಕ್ಕೂ ಹೆಚ್ಚು ತೆರಿಗೆದಾರರಿಗೆ 36,000 ಕೋಟಿ ರೂಪಾಯಿಗಳ ವಯಕ್ತಿಕ ಆದಾಯ ತೆರಿಗೆ ಮರುಪಾವತಿಗಳು ಮತ್ತು 1.77 ಲಕ್ಷ ಪ್ರಕರಣಗಳಲ್ಲಿ 79,917 ಕೋಟಿ ರೂಪಾಯಿಗಳ ಕಾರ್ಪೊರೇಟ್ ತೆರಿಗೆ ಮರುಪಾವತಿಗಳು ಸೇರಿವೆ.
ನವೆಂಬರ್ 8, 2016ರಂದು ನೋಟು ನಿಷೇಧ ಘೋಷಣೆ ಮಾಡಿದ ನಂತರ ತೆರಿಗೆ ಸಂಗ್ರಹದಲ್ಲಿ ಗಣನೀಯವಾದ ಪ್ರಗತಿ ಆಗಿದೆ ಎಂದು ಕೇಂದ್ರ ಸರ್ಕಾರದ ಅಂಕಿ- ಅಂಶಗಳು ತಿಳಿಸುತ್ತಿವೆ.
ಇದನ್ನೂ ಓದಿ: IT Refund Status: ಆದಾಯ ತೆರಿಗೆ ರೀಫಂಡ್ ಸ್ಥಿತಿ ಪರಿಶೀಲನೆ ಮಾಡುವುದು ಹೇಗೆ? ಇಲ್ಲಿದೆ ಹಂತಹಂತವಾದ ಮಾಹಿತಿ
Published On - 12:12 am, Thu, 11 November 21