
ಭಾರತದ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರ (Research field) ಮೊದಲಿಂದಲೂ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ಅದರಲ್ಲೂ ಸಂಶೋಧನಾ ಕ್ಷೇತ್ರ ದೀರ್ಘಕಾಲ ದುಸ್ಥಿತಿಯಲ್ಲಿ ಮಿಂದೆದ್ದಿದೆ. ಅಸಂಬದ್ಧ ಎನಿಸುವ ಖರೀದಿ ನಿಯಮಗಳು ಈ ಕ್ಷೇತ್ರದ ಬೆಳವಣಿಗೆಗೆ ತಡೆಯೊಡ್ಡಿವೆ. 2017ರ ಜನರಲ್ ಫೈನಾನ್ಸ್ ರೂಲ್ಸ್ (GFR) ಪ್ರಕಾರ, ಸಂಶೋಧನೆಗೆ ವಸ್ತುಗಳನ್ನು ಖರೀದಿಸಬೇಕಾದರೆ ಅದು ಭಾರತದಲ್ಲೇ ತಯಾರಾಗಿರಬೇಕು ಎನ್ನುವ ನಿಯಮ, ಸಂಕುಚಿತ ಟೆಂಡರ್ ವಿಧಾನ, ಹಣಕಾಸು ಕೊರತೆ ಇತ್ಯಾದಿ ಸಮಸ್ಯೆಗಳು ಕ್ಷೇತ್ರವನ್ನು ಬಾಧಿಸಿವೆ. ಇತ್ತೀಚಿನ ದಿನಗಳಲ್ಲಿ ಬದಲಾವಣೆ ಕಾಣತೊಡಗಿದೆ. ಸರ್ಕಾರವು ಸಂಶೋಧನಾ ಕ್ಷೇತ್ರದಲ್ಲಿ ಸುಧಾರಣೆ ತರಲು ಗಂಭೀರ ಹೆಜ್ಜೆಗಳನ್ನು ಇರಿಸುತ್ತಿರುವುದು ಫಲ ಕೊಡತೊಡಗಿದೆ.
ಸರ್ಕಾರ ಜೂನ್ ತಿಂಗಳ ಮೊದಲ ವಾರದಲ್ಲಿ ಜನರಲ್ ಫೈನಾನ್ಸ್ ರೂಲ್ 2017ಗೆ ತಿದ್ದುಪಡಿ ತಂದಿದೆ. ಅದರಲ್ಲಿ ಏನೇನು ಪ್ರಸ್ತಾಪ ಅಥವಾ ಸುಧಾರಣೆ ತರಲಾಗಿದೆ ಎನ್ನುವ ವಿವರ ಮುಂದಿದೆ.
ಇದನ್ನೂ ಓದಿ: ವಿಶ್ವಸಂಸ್ಥೆ ಸುಸ್ಥಿರ ಅಭಿವೃದ್ಧಿ ಸೂಚ್ಯಂಕ: ಟಾಪ್-100 ಪಟ್ಟಿಗೆ ಸೇರಿದ ಭಾರತ
ಭಾರತದ ಈ ಸುಧಾರಣಾ ಕ್ರಮಗಳು ಇನ್ನೂ ಆರಂಭಿಕ ಹೆಜ್ಜೆ ಎನಿಸಿವೆ. ಜಾಗತಿಕ ಸಂಶೋಧನಾ ಸಂಸ್ಥೆಗಳ ಮಟ್ಟಕ್ಕೆ ಭಾರತ ತಲುಪಬೇಕಾದರೆ ಇನ್ನೂ ಹೆಚ್ಚಿನ ಸುಧಾರಣೆಗಳ ಅಗತ್ಯ ಇದೆ ಎನ್ನುತ್ತಾರೆ ಸಂಶೋಧಕರು. ಆದಾಗ್ಯೂ ಹಿಂದಿದ್ದ ದುಸ್ಥಿತಿಯನ್ನು ತೊಡೆದು ಹಾಕಲು ಸರ್ಕಾರದ ಈ ಕ್ರಮ ಸಹಾಯಕವಾಗಬಹುದು ಎನ್ನುವ ಆಶಾಭಾವನೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ