ಆರು ವರ್ಷ ಬಳಿಕ ಲಿಪುಲೇಖ ಪಾಸ್ ಮೂಲಕ ಭಾರತ-ಚೀನಾ ಟ್ರೇಡಿಂಗ್ ಪುನಾರಂಭ; ಆದರೆ, ನೇಪಾಳದಿಂದ ಆಕ್ಷೇಪ ಯಾಕೆ?

India China trading resumes via Lipulekh Pass 6 years: ಚೀನಾ ಗಡಿ ಸಮೀಪ ಇರುವ ಉತ್ತರಾಖಂಡ್​ನ ಲಿಪುಲೇಖ ಪಾಸ್ 2020ರ ಬಳಿಕ ಪುನಾರಂಭಗೊಳ್ಳುತ್ತಿದೆ. ಲಿಪುಲೇಖ, ಶಿಪಕಿ ಲಾ ಮತ್ತು ನಾಥು ಲಾ ಪಾಸ್ ಅಥವಾ ಕಣಿವೆ ಮಾರ್ಗಗಳು ಮತ್ತೆ ಚಾಲನೆಗೊಳ್ಳುತ್ತಿವೆ. ಲಿಪುಲೇಖ ಪಾಸ್ ಭಾರತ, ಚೀನಾ ಮತ್ತು ನೇಪಾಳ ಗಡಿಗಳು ಸಂಧಿಸುವ ಜಾಗದಲ್ಲಿದೆ. ಲಿಪುಲೇಖ ಪಾಸ್ ತೆರೆದಿರುವುದಕ್ಕೆ ನೇಪಾಳ ಆಕ್ಷೇಪ ವ್ಯಕ್ತಪಡಿಸುತ್ತಿದೆ.

ಆರು ವರ್ಷ ಬಳಿಕ ಲಿಪುಲೇಖ ಪಾಸ್ ಮೂಲಕ ಭಾರತ-ಚೀನಾ ಟ್ರೇಡಿಂಗ್ ಪುನಾರಂಭ; ಆದರೆ, ನೇಪಾಳದಿಂದ ಆಕ್ಷೇಪ ಯಾಕೆ?
ಲಿಪುಲೇಖ ಪಾಸ್

Updated on: Mar 20, 2026 | 5:34 PM

ನವದೆಹಲಿ, ಮಾರ್ಚ್ 20: ಭಾರತ ಮತ್ತು ಚೀನಾ ನಡುವೆ ಹಿಮಾಲಯದ ತಪ್ಪಲಲ್ಲಿ ಇರುವ ಮೂರು ಕಣಿವೆ ಮಾರ್ಗಗಳು ಇದೇ ಜೂನ್ ತಿಂಗಳಲ್ಲಿ ಪುನಾರಂಭಗೊಳ್ಳಲಿವೆ. ಇದರಲ್ಲಿ ಉತ್ತರಾಖಂಡ್​ನ ಪಿತ್ತೋರಗಡ್​ನ ಲಿಪುಲೇಖ್ ಪಾಸ್ (Lipulekh Pass) ಅಥವಾ ಲಿಪುಲೇಖ ಕಣಿವೆಯೂ ಒಂದು. ಹಾಗೆಯೇ, ಹಿಮಾಚಲದಲ್ಲಿರುವ ಶಿಪಕಿ ಲಾ (Shipki La Pass) ಮತ್ತು ಸಿಕ್ಕಿಂನಲ್ಲಿರುವ ನಾಥು ಲಾ ಪಾಸ್​ಗಳೂ (Nathu La Pass) ಕೂಡ ಮುಕ್ತಗೊಳ್ಳಲಿವೆ. ಕಳೆದ ವರ್ಷ ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ನಡೆಸಿದ ಉನ್ನತ ಮಟ್ಟದ ಸಭೆಯ ಪ್ರತಿಫಲ ಎನ್ನಲಾಗಿದೆ.

ಆರು ವರ್ಷಗಳ ಬಳಿಕ ಈ ಕಣಿವೆ ಮಾರ್ಗಳು ತೆರೆಯಲ್ಪಡುತ್ತಿವೆ. 2020ರಲ್ಲಿ ಗಾಲ್ವನ್ ಬಳಿ ಭಾರತೀಯ ಸೈನಿಕರ ಮೇಲೆ ಚೀನೀ ಸೈನಿಕರು ಭೀಕರವಾಗಿ ಹಲ್ಲೆ ಎಸಗಿದ ಘಟನೆ ಬಳಿಕ ಭಾರತವು ಈ ಮಾರ್ಗಗಳನ್ನು ಬಂದ್ ಮಾಡಿತ್ತು. ಅದಕ್ಕೂ ಮುನ್ನ ಈ ಮಾರ್ಗಗಳಲ್ಲಿ ಎರಡೂ ದೇಶಗಳ ಗಡಿಭಾಗದ ಜನರ ನಡುವೆ ಕೊಡುಕೊಳ್ಳುವಿಕೆಯ ವ್ಯವಹಾರ ನಡೆಯುತ್ತಿತ್ತು. ಈಗ ಅದು ಪುನರಾರಂಭಗೊಳ್ಳುತ್ತದೆ.

ಎಲ್ಲಿದೆ ಲಿಪುಲೇಖ್ ಪಾಸ್?

ಉತ್ತರಾಖಂಡ್​ನ ಪಿತೋರಗಡ್ ಜಿಲ್ಲೆಯಲ್ಲಿನ ಕುಮಾವೋನ್ ಪ್ರದೇಶದಲ್ಲಿ 17,500 ಅಡಿ ಎತ್ತರದ ಹಿಮಾಲಯದಲ್ಲಿ ಲಿಪುಲೇಖ್ ಪಾಸ್ ಇದೆ. ಉತ್ತರಾಖಂಡ್, ಟಿಬೆಟ್ ಮತ್ತು ನೇಪಾಳ ಗಡಿಗಳು ಕೂಡಿಕೊಳ್ಳುವ ಸ್ಥಳ ಇದು. ಟಿಬೆಟ್​ನ ಪ್ರಮುಖ ವ್ಯಾಪಾರ ಪಟ್ಟಣಗಳಲ್ಲಿ ಒಂದಾಗಿರುವ ಟಕ್ಲಾಕೋಟ್ ಸಮೀಪದಲ್ಲಿ ಲಿಪುಲೇಖ್ ಪಾಸ್ ಬರುತ್ತದೆ.

ಇದನ್ನೂ ಓದಿ: ಸುಮ್ನೆ ಇರೋಕಾಗ್ದೆ ಭಾರತ-ಇರಾನ್ ನಡುವೆ ಬೆಂಕಿ ಹಚ್ಚಲು ಕುತಂತ್ರ ನಡೆಸಿದ ಪಾಕ್

ಭಾರತದ ಗಡಿಯೊಳಗೆ ಧರಚುಲಾದಿಂದ ಈ ಲಿಪುಲೇಖ್ ಪಾಸ್​ವರೆಗೆ 80 ಕಿಮೀ ರಸ್ತೆ ನಿರ್ಮಿಸಲಾಗಿದೆ. 2020ರಲ್ಲಿ ಇದು ಪೂರ್ಣಗೊಂಡಿತು. ರಸ್ತೆ ನಿರ್ಮಾಣಕ್ಕೆ ಮುನ್ನ ಈ ದುರ್ಗಮ ಕಣಿವೆಯಲ್ಲಿ ಗಡಿಭಾಗದ ಗ್ರಾಮಸ್ಥರು ಪಶುಗಳ ಮೂಲಕ ಸರಕುಗಳ ಸಾಗಣೆ ಮಾಡುತ್ತಿದ್ದರು.

ಟಿಬೆಟ್​ನ ಕೈಲಾಸ ಪರ್ವತ ಮತ್ತು ಮಾನಸರೋವರಕ್ಕೆ ಹೋಗಲು ಈ ಮಾರ್ಗದ ಬಳಕೆ ಮಾಡಲಾಗುತ್ತದೆ. ಮೋಟಾರು ರಸ್ತೆ ನಿರ್ಮಾಣ ಮಾಡಿರುವುದರಿಂದ ಪ್ರಯಾಣ ಅವಧಿ ಗಣನೀಯವಾಗಿ ಕಡಿಮೆ ಆಗುತ್ತದೆ.

ಲಿಪುಲೇಖ್ ಪಾಸ್​ನಲ್ಲಿ ಯಾವ್ಯಾವ ಸರಕುಗಳ ವ್ಯಾಪಾರ ನಡೆಯುತ್ತದೆ…?

ಭಾರತ, ಟಿಬೆಟ್, ನೇಪಾಳ ಗಡಿಭಾಗದಲ್ಲಿರುವ ಬುಡಕಟ್ಟು ಸಮುದಾಯದ ಜನರು ತಮ್ಮ ಸರಕುಗಳನ್ನು ಮಾರಲು ಮತ್ತು ಕೊಳ್ಳಲು ಈ ಮಾರ್ಗದ ಬಳಕೆ ಮಾಡುತ್ತಾರೆ. ಭಾರತದ ಭಾಗದ ಜನರು ಬೆಲ್ಲ, ಮಸಾಲೆ, ತಂಬಾಕು ಇತ್ಯಾದಿ ಉತ್ಪನ್ನಗಳನ್ನು ರಫ್ತು ಮಾಡುತ್ತಾರೆ. ಟಿಬೆಟ್​ನಿಂದ ಕುರಿಯ ಉಣ್ಣೆ, ಮೇಕೆ, ರೇಷ್ಮೆ ಇತ್ಯಾದಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ.

ಇದನ್ನೂ ಓದಿ: ಕಾಬೂಲ್ ಆಸ್ಪತ್ರೆ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ: 400 ಮಂದಿ ಸಾವು, 250ಕ್ಕೂ ಹೆಚ್ಚು ಜನರಿಗೆ ಗಾಯ!

ಈ ಪಾಸ್ ಬಳಿ ಭಾರತದ ಆಡಳಿತವು ಗುಂಜಿ ಎಂಬಲ್ಲಿ ಸುಂಕ ಕೇಂದ್ರವನ್ನು ಸ್ಥಾಪಿಸಿದೆ. ಪೊಲೀಸ್ ಚೆಕ್ ಪೋಸ್ಟ್, ಎಸ್​ಬಿಐ ಬ್ಯಾಂಕ್ ಕಚೇರಿ ಇತ್ಯಾದಿ ಸೌಲಭ್ಯಗಳನ್ನು ತೆರೆಯಲಾಗಿದೆ.

ನೇಪಾಳದ ಆಕ್ಷೇಪ ಏನು?

ಲಿಪುಲೇಖ್ ಪಾಸ್ ಮೂಲಕ ಭಾರತ ಮತ್ತು ಚೀನಾ ಮಧ್ಯೆ ವ್ಯಾಪಾರ ನಡೆಯುವುದಕ್ಕೆ ನೇಪಳ ಮೊದಲಿಂದಲೂ ತಗಾದೆ ಎತ್ತುತ್ತಿದೆ. ಲಿಪುಲೇಖ್ ಎಂಬುದು ತನಗೆ ಸೇರಿದ ಪ್ರದೇಶ ಎಂದು ನೇಪಾಳ ಹೇಳಿಕೊಳ್ಳುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us