Azadi Ka Amrit Mahotsav: 75 ವರ್ಷಗಳಲ್ಲಿ ಡಾಲರ್ ಎದುರು ರೂಪಾಯಿ ಏಕೆ ಸೋಲನ್ನಪ್ಪುತ್ತಿದೆ? ನಿಜವಾದ ಕಾರಣಗಳು ಇಲ್ಲಿವೆ

Rupee v/s Dollar: ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ 2008 ರಲ್ಲಿ ರೂಪಾಯಿ ಮತ್ತಷ್ಟು ದುರ್ಬಲಗೊಂಡಿತು. 2009 ರಲ್ಲಿ 46.4 ರೂ. 2022ರಲ್ಲಿ ರೂ.79.5ಕ್ಕೆ ಇಳಿಯಿತು. ಆದರೆ ಈಗ ರೂಪಾಯಿ ಮೌಲ್ಯ ಕುಸಿಯುವ ಸಾಧ್ಯತೆ ತೀರಾ ಕಡಿಮೆ. ಏಕೆಂದರೆ ಆರ್‌ಬಿಐ ಬಳಿ ವಿದೇಶಿ ವಿನಿಮಯ ಸಂಗ್ರಹಕ್ಕೆ ಕೊರತೆ ಇಲ್ಲ.

Azadi Ka Amrit Mahotsav: 75 ವರ್ಷಗಳಲ್ಲಿ ಡಾಲರ್ ಎದುರು ರೂಪಾಯಿ ಏಕೆ ಸೋಲನ್ನಪ್ಪುತ್ತಿದೆ? ನಿಜವಾದ ಕಾರಣಗಳು ಇಲ್ಲಿವೆ
75 ವರ್ಷಗಳಲ್ಲಿ ಭಾರತೀಯ ಕರೆನ್ಸಿ 4 ರೂಪಾಯಿ ಯಿಂದ 80 ರೂಪಾಯಿ ವರೆಗೆ ಮುಗ್ಗರಿಸಿದೆ. ಇದು ಏಕೆ ಹೀಗಾಗುತ್ತಿದೆ?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Aug 15, 2022 | 10:38 PM

ಡಾಲರ್ ಗೆ ಹೋಲಿಸಿದರೆ ರೂಪಾಯಿ ಮೌಲ್ಯ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಆತಂಕಕಾರಿಯಾಗಿಯೇ ಇದೆ. ಭಾರತ ತನ್ನ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದೆ. ಈ 75 ವರ್ಷಗಳಲ್ಲಿ ಭಾರತ ಆರ್ಥಿಕವಾಗಿ ಸಾಕಷ್ಟು ಪ್ರಗತಿ ಸಾಧಿಸಿದೆ. ಈಗಂತೂ 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ಆರ್ಥಿಕತೆಯನ್ನು ಮಾಡುವ ಗುರಿ ಹೊಂದಲಾಗಿದೆ. ಆದರೆ ಈ 75 ವರ್ಷಗಳಲ್ಲಿ ಭಾರತೀಯ ರೂಪಾಯಿ ಮೌಲ್ಯವೂ ಬಹಳಷ್ಟು ಪ್ರಗತಿ ಹೊಂದಿ ದೂರ ಸಾಗಿ ಬಂದಿದೆ. ಯಾವುದೇ ದೇಶದ ಕರೆನ್ಸಿಯನ್ನು ಆ ದೇಶದ ಆರ್ಥಿಕತೆಯ ಬಲವನ್ನು ಅಳೆಯುವ ಮಾಪಕವನ್ನಾಗಿ ಪರಿಗಣಿಸಲಾಗುತ್ತದೆ. 75 ವರ್ಷಗಳಲ್ಲಿ, ಭಾರತೀಯ ಕರೆನ್ಸಿ 4 ರೂ ಇದ್ದಿದ್ದು, 80 ರೂಪಾಯಿಗಳಿಗೆ ಏರಿದೆ.

1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ, ಒಂದು ಡಾಲರ್ 4 ರೂಪಾಯಿಗೆ ಸಮಾನವಾಗಿತ್ತು. ಆ ನಂತರ ಭಾರತದ ಆರ್ಥಿಕತೆ ಹಲವು ಏರಿಳಿತಗಳ ಮೂಲಕ ಸಾಗಿತು. ಆರ್ಥಿಕ ಬಿಕ್ಕಟ್ಟಿನಿಂದ ಆಹಾರ ಧಾನ್ಯಗಳ ಕಡಿತದಿಂದ ಹಿಡಿದು, ಕೈಗಾರಿಕಾ ಉತ್ಪಾದನೆ ಕುಂಠಿತಗೊಳಿಸುವುದನ್ನು ಎದುರಿಸಬೇಕಾಯಿತು. ಭಾರತ-ಚೀನಾ ಯುದ್ಧ ಮತ್ತು ಭಾರತ-ಪಾಕಿಸ್ತಾನ ಯುದ್ಧವು ಪಾವತಿ ಬಿಕ್ಕಟ್ಟಿಗೆ ಕಾರಣವಾಯಿತು. ಹೆಚ್ಚಿನ ಆಮದು ಬಿಲ್‌ಗಳಿಂದಾಗಿ ಭಾರತದ ವಿದೇಶಿ ವಿನಿಮಯ ಸಂಗ್ರಹವು ಖಾಲಿಯಾಯಿತು. ಭಾರತ ಡೀಫಾಲ್ಟ್ ಅಂಚಿಗೆ ಬಂದು ನಿಂತಿತ್ತು. ಆಗ ಅಂದಿನ ಪ್ರಧಾನಿ ಇಂದಿರಾಗಾಂಧಿ ರೂಪಾಯಿ ಅಪಮೌಲ್ಯಗೊಳಿಸಲು ನಿರ್ಧರಿಸಿದ್ದರು. ಅದರ ನಂತರ ರೂಪಾಯಿ ಮೌಲ್ಯವು ಪ್ರತಿ ಡಾಲರ್‌ಗೆ 4.76 ರಿಂದ 7.5 ರೂಪಾಯಿಗಳಿಗೆ ಕುಸಿಯಿತು.

1991 ರಲ್ಲಿ ಮತ್ತೊಮ್ಮೆ ಭಾರತದ ಆರ್ಥಿಕತೆಯು ಬಿಕ್ಕಟ್ಟಿಗೆ ಸಿಲುಕಿತು. ಭಾರತವು ತನ್ನ ಆಮದು ಅವಶ್ಯಕತೆಗಳನ್ನು ಪೂರೈಸಲು ಯಾವುದೇ ವಿದೇಶಿ ವಿನಿಮಯವನ್ನು ಹೊಂದಿಲ್ಲ. ಸಾಲ ತೀರಿಸಲು ಹಣವಿಲ್ಲ. ಭಾರತ ಮತ್ತೆ ಡೀಫಾಲ್ಟ್ ಅಂಚಿಗೆ ತಳ್ಳಲ್ಪಟ್ಟಿತು. ಅದರ ನಂತರ ಐತಿಹಾಸಿಕ ಆರ್ಥಿಕ ಸುಧಾರಣಾ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

ಬಿಕ್ಕಟ್ಟನ್ನು ತಪ್ಪಿಸಲು, ಆರ್‌ಬಿಐ ಎರಡು ಹಂತಗಳಲ್ಲಿ ರೂಪಾಯಿಯನ್ನು ಅಪಮೌಲ್ಯಗೊಳಿಸಿತು. ಮೊದಲು ರೂಪಾಯಿ ಮೌಲ್ಯವನ್ನು 9 ಪ್ರತಿಶತ, ನಂತರ 11 ಪ್ರತಿಶತ ಕಡಿಮೆ ಮಾಡಿತು. ಈ ಅಪಮೌಲ್ಯದ ನಂತರ, ರೂಪಾಯಿ ಒಂದು ಡಾಲರ್‌ಗೆ 26 ರೂಪಾಯಿ ಆಯಿತು. ಅಂದರೆ ಸ್ವಾತಂತ್ರ್ಯ ಬಂದ 75 ವರ್ಷಗಳಲ್ಲಿ ರೂಪಾಯಿ ಮೌಲ್ಯ ರೂ. 4ರಿಂದ ರೂ. 79ರಿಂದ ಮತ್ತೆ ರೂ. 80ಕ್ಕೆ ಕುಸಿದಿದೆ. ಅಂದರೆ 75 ವರ್ಷಗಳಲ್ಲಿ ರೂಪಾಯಿ 75 ರೂಪಾಯಿಗಳಷ್ಟು ದುರ್ಬಲವಾಗಿದೆ. ರೂಪಾಯಿ ಕುಸಿತಕ್ಕೆ ಹಲವು ಕಾರಣಗಳಿವೆ. ಕಚ್ಚಾ ತೈಲ ಆಮದು ಹೆಚ್ಚಾದಂತೆ ವ್ಯಾಪಾರ ಕೊರತೆ ಹೆಚ್ಚಾಯಿತು. ಇದು ಸುಮಾರು 31 ಬಿಲಿಯನ್ ಡಾಲರ್ ತಲುಪಿದೆ. ಆದರೆ ಗಮನಿಸಿ, ಭಾರತ ಸ್ವಾತಂತ್ರ್ಯ ಗಳಿಸಿದಾಗ ಅದರ ಆರ್ಥಿಕತೆಗೆ ಯಾವುದೇ ನಷ್ಟವುಂಟಾಗಲಿಲ್ಲ.

ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ 2008 ರಲ್ಲಿ ರೂಪಾಯಿ ಮತ್ತಷ್ಟು ದುರ್ಬಲಗೊಂಡಿತು. 2009 ರಲ್ಲಿ 46.4 ರೂ. 2022ರಲ್ಲಿ ರೂ.79.5ಕ್ಕೆ ಇಳಿಯಿತು. ಆದರೆ ಈಗ ರೂಪಾಯಿ ಮೌಲ್ಯ ಕುಸಿಯುವ ಸಾಧ್ಯತೆ ತೀರಾ ಕಡಿಮೆ. ಏಕೆಂದರೆ ಆರ್‌ಬಿಐ ಬಳಿ ವಿದೇಶಿ ವಿನಿಮಯ ಸಂಗ್ರಹಕ್ಕೆ ಕೊರತೆ ಇಲ್ಲ.

to read more in telugu click here

Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ