ಚೀನಾ ಬೆಳವಣಿಗೆಗೆ ಸಹಾಯವಾಗಿದ್ದ ಮೂರಂಶಗಳು ಭಾರತಕ್ಕೆ ತೊಡಕಾಗಿವೆ: ಸಿಇಎ ಅನಂತನಾಗೇಶ್ವರನ್

|

Updated on: Jun 16, 2024 | 5:13 PM

India vs China growth story: ಚೀನಾ 1980ರಿಂದ 2015ರವರೆಗೆ ಸಾಧಿಸಿದ ಅದ್ವಿತೀಯ ಬೆಳವಣಿಗೆಗೆ ಜಾಗತಿಕವಾಗಿ ಮೂರು ಅಂಶಗಳು ಅನುಕೂಲ ಮಾಡಿಕೊಟ್ಟಿದ್ದವು. ಈ ಅನುಕೂಲ ಭಾರತಕ್ಕೆ ಈಗ ಒದಗಿ ಬಂದಿಲ್ಲ. ಇವುಗಳ ಹಿನ್ನಡೆಯೊಂದಿಗೆ ಭಾರತ ಬೆಳವಣಿಗೆ ಕಾಣಬೇಕಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತನಾಗೇಶ್ವರನ್ ಹೇಳಿದ್ದಾರೆ. ಇದೇ ವೇಳೆ ಪೆಟ್ರೋಲ್ ಕಾರಿನ ಬದಲು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುವುದ ಔಚಿತ್ಯವನ್ನೂ ಅವರು ಪ್ರಶ್ನೆ ಮಾಡಿದ್ದಾರೆ.

ಚೀನಾ ಬೆಳವಣಿಗೆಗೆ ಸಹಾಯವಾಗಿದ್ದ ಮೂರಂಶಗಳು ಭಾರತಕ್ಕೆ ತೊಡಕಾಗಿವೆ: ಸಿಇಎ ಅನಂತನಾಗೇಶ್ವರನ್
ವಿ ಅನಂತನಾಗೇಶ್ವರನ್
Follow us on

ನವದೆಹಲಿ, ಜೂನ್ 16: ಚೀನಾ 1980ರಿಂದ ಆರಂಭವಾಗಿ ಮೂರೂವರೆ ದಶಕಗಳ ಕಾಲ ಬಹಳ ಮೇಲಿನ ಮಟ್ಟದಲ್ಲಿ ಸ್ಥಿರವಾಗಿ ಆರ್ಥಿಕ ಬೆಳವಣಿಗೆ ಸಾಧಿಸಿ ಇವತ್ತು ಅಮೆರಿಕಕ್ಕೆ ಸೆಡ್ಡು ಹೊಡೆಯುವ ಸ್ಥಿತಿಯಲ್ಲಿದೆ. ಚೀನಾ ಆಗ ಸಾಧಿಸಿದ ಈ ಸುದೀರ್ಘ ಪ್ರಗತಿ ಪ್ರಯಣವನ್ನು ಭಾರತ ಈಗ ಆರಂಭಿಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತನಾಗೇಶ್ವರನ್ (CEA V Anantha Nageswaran) ಅವರು ಮಾತನಾಡಿದ್ದು, ಚೀನಾದ ಬೆಳವಣಿಗೆ ಹಾದಿಯಲ್ಲಿ ಆಗ ಅದಕ್ಕಿದ್ದ ಮೂರು ಪ್ರಮುಖ ಅನುಕೂಲ ಸ್ಥಿತಿಗಳು ಭಾರತಕ್ಕೆ ಈಗ ಇಲ್ಲ ಎಂದಿದ್ದಾರೆ. ಈ ಅನನುಕೂಲ ಅಂಶಗಳ ನಡುವೆ ಭಾರತ ಬೆಳೆಯಬೇಕಾಗಿದೆ ಎಂದು ಅವರು ಮೊನ್ನೆ (ಜೂನ್ 14) ಹೇಳಿದ್ದಾರೆ.

ಚೀನಾಗೆ ವರವಾಗಿದ್ದ, ಭಾರತಕ್ಕೆ ಮುಳುವಾಗಿರುವ ಮೂರಂಶಗಳು ಯಾವುವು?

ಸಿಇಎ ಆಗಿರುವ ಅನಂತನಾಗೇಶ್ವರನ್ ಪ್ರಕಾರ 1980ರಿಂದ 2015ರವರೆಗೆ ಜಾಗತೀಕರಣ ವ್ಯವಸ್ಥೆ ಪ್ರಬಲವಾಗಿತ್ತು. ಎರಡನೆಯದು ಜಾಗತಿಕ ರಾಜಕೀಯ ಸ್ಥಿರತೆ ಇತ್ತು. ವಿಭಜನಾತ್ಮಕ ಮತ್ತು ಧ್ರುವೀಕರಣ ಘಟನೆಗಳು ಹೆಚ್ಚಿರಲಿಲ್ಲ. ಮೂರನೆಯದಾಗಿ ಬಿಕ್ಕಟ್ಟು, ಘರ್ಷಣೆಯುಕ್ತ ವಾತಾವರಣ ಕೂಡ ಹೆಚ್ಚು ದಟ್ಟವಾಗಿರಲಿಲ್ಲ. ಈ ಅನುಕೂಲ ವಾತಾವರಣದಲ್ಲಿ ಚೀನಾ ಹುಲುಸಾಗಿ ಬೆಳೆಯಲು ಸಾಧ್ಯವಾಯಿತು ಎನ್ನುತ್ತಾರೆ.

ಇದನ್ನೂ ಓದಿ: ಅಮೆರಿಕ-ಸೌದಿ ಮಧ್ಯೆ ಇನ್ಮುಂದೆ ಇರಲ್ಲ ಪೆಟ್ರೋಡಾಲರ್; ಚೀನಾ ಕಡೆ ವಾಲುತ್ತಿದೆಯಾ ಗ್ಲೋಬಲ್ ಪವರ್?

ಆದರೆ, ಭಾರತ ಬೆಳವಣಿಗೆ ಹೊಂದುತ್ತಿರುವ ಈ ಕಾಲಘಟ್ಟದಲ್ಲಿ ಈಗ ಜಾಗತೀಕರಣ ಕುಂಠಿತಗೊಂಡಿದೆ. ಗ್ಲೋಬಲ್ ಪೊಲಿಟಿಕ್ಸ್ ಹೆಚ್ಚೆಚ್ಚು ವಿಭಜನಾತ್ಮಕ ಎನಿಸಿದೆ. ಹವಾಮಾನ ಬದಲಾವಣೆ ಸಮಸ್ಯೆ ಕಾಡುತ್ತಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರರು ಅಭಿಪ್ರಾಯಪಟ್ಟಿದ್ದಾರೆ.

ಶತ್ರು ದೇಶದ ಮೇಲೆ ಅವಲಂಬನೆ ಬೇಡ ಎಂದ ಸಿಇಎ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಉದ್ಯಮ ಬೆಳೆಯುತ್ತಿದೆ. ಆದರೆ, ಇ ವಾಹನಗಳ ತಯಾರಿಕೆಗೆ ಬೇಕಾದ ಪರಿಕರಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ಈ ವಿಚಾರದ ಬಗ್ಗೆ ವಿ ಅನಂತ ನಾಗೇಶ್ವರನ್ ತಗಾದೆ ತೆಗೆದಿದ್ದಾರೆ.

ಕಚ್ಛಾ ತೈಲಕ್ಕೆ ಅರಬ್ ದೇಶಗಳ ಮೇಲೆ ಅವಲಂಬನೆಗೆ ಪ್ರತಿಯಾಗಿ ಶತ್ರು ದೇಶದ ಮೇಲೆ ಅವಲಂಬನೆ ಆಗುವುದು ತಪ್ಪು. ಭಾರತದ ವಾಹನ ತಯಾರಿಕಾ ಕಂಪನಿಗಳು ಯೋಚಿಸಬೇಕು ಎಂದು ಚೀಫ್ ಎಕನಾಮಿಕ್ ಅಡ್ವೈಸರ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಫಾರೆಕ್ಸ್ ರಿಸರ್ವ್ಸ್ ಮೊತ್ತ ಈಗ 655 ಬಿಲಿಯನ್ ಡಾಲರ್; ಮತ್ತೆ ಹೊಸ ದಾಖಲೆ

ಅವರ ಪ್ರಕಾರ ಎಲೆಕ್ಟ್ರಿಕ್ ವಾಹನಗಳಿಗೆ ಬ್ಯಾಟರಿ, ಚಾರ್ಜಿಂಗ್ ಸ್ಟೇಶನ್, ಲಿಥಿಯಂ, ಗ್ರಾಫೈಟ್​ನಂತಹ ಲೋಹ, ಖನಿಜಗಳುಬೇಕಾಗುತ್ತದೆ. ಕಲ್ಲಿದ್ದಲಿನಂತಹ ಕೊಳಕು ಸಂಪನ್ಮೂಲದಿಂದ ವಿದ್ಯುತ್ ಉತ್ಪಾದನೆ ಮಾಡಬೇಕಾಗುತ್ತದೆ. ಈ ವಿಚಾರಗಳನ್ನು ಕಾರ್ ಡೀಲರ್​ಗಳು ಗ್ರಾಹಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:12 pm, Sun, 16 June 24