AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಾರೆಕ್ಸ್ ರಿಸರ್ವ್ಸ್ ಮೊತ್ತ ಈಗ 655 ಬಿಲಿಯನ್ ಡಾಲರ್; ಮತ್ತೆ ಹೊಸ ದಾಖಲೆ

India Forex Reserves on June 7th: ಭಾರತದ ಫಾರೀನ್ ಎಕ್ಸ್​ಚೇಂಜ್ ರಿಸರ್ವ್ಸ್ ಸಂಗ್ರಹ ಜೂನ್ 7ರಂದು 655.817 ಬಿಲಿಯನ್ ಡಾಲರ್ ಆಗಿದೆ. ಹಿಂದಿನ ವಾರದಲ್ಲಿ 651 ಬಿಲಿಯನ್ ಡಾಲರ್​ನೊಂದಿಗೆ ಇದ್ದ ದಾಖಲೆಯನ್ನು ಮುರಿದಿದೆ. ಜೂನ್ 7ರ ವಾರದಲ್ಲಿ ಏರಿಕೆಯಾದ 4.307 ಬಿಲಿಯನ್ ಡಾಲರ್ ಫಾರೆಕ್ಸ್ ನಿಧಿ ಪೈಕಿ ಫಾರೀನ್ ಕರೆನ್ಸಿ ಆಸ್ತಿಯೊಂದರಲ್ಲೇ 3.777 ಬಿಲಿಯನ್ ಡಾಲರ್ ಹೆಚ್ಚಳವಾಗಿದೆ.

ಫಾರೆಕ್ಸ್ ರಿಸರ್ವ್ಸ್ ಮೊತ್ತ ಈಗ 655 ಬಿಲಿಯನ್ ಡಾಲರ್; ಮತ್ತೆ ಹೊಸ ದಾಖಲೆ
ಆರ್​ಬಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 16, 2024 | 10:23 AM

Share

ನವದೆಹಲಿ, ಜೂನ್ 16: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ ಈಗ 655.817 ಬಿಲಿಯನ್ ಡಾಲರ್​ನಷ್ಟಾಗಿದೆ. ಇದು ಜೂನ್ 7ರಂದು ದಾಖಲಾದ ಸಂಗ್ರಹವಾಗಿದೆ. ಆರ್​ಬಿಐ ಮೊನ್ನೆ ಬಿಡುಗಡೆ ಮಾಡಿದ ದತ್ತಾಂಶದಲ್ಲಿ, ಜೂನ್ 7ರಂದು ಅಂತ್ಯಗೊಂಡ ವಾರದಲ್ಲಿ 4.307 ಬಿಲಿಯನ್ ಡಾಲರ್​ನಷ್ಟು ಏರಿಕೆ ಆಗಿದೆ. ಮೇ 31ರಂದು 651.51 ಬಿಲಿಯನ್ ಡಾಲರ್ ಇದ್ದ ಫಾರೆಕ್ಸ್ ರಿಸರ್ವ್ಸ್ ಸಂಗ್ರಹ (Forex reserves) 655.817 ಬಿಲಿಯನ್ ಡಾಲರ್​ಗೆ ಏರಿದೆ. ಇದು ಭಾರತದ ಫಾರೆಕ್ಸ್ ಇತಿಹಾಸದಲ್ಲೇ ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ. ಹಿಂದಿನ ವಾರದ ದಾಖಲೆಯನ್ನು ಮುರಿದಿದೆ.

ಜೂನ್ ಏಳರ ವಾರದಲ್ಲಿ ಹೆಚ್ಚಳವಾಗಿರುವ 4.307 ಬಿಲಿಯನ್ ಡಾಲರ್ ಫಾರೆಕ್ಸ್ ಸಂಪತ್ತಿನಲ್ಲಿ ಎಲ್ಲಾ ನಾಲ್ಕು ಆಸ್ತಿಗಳೂ ಹೆಚ್ಚಾಗಿವೆ. ವಿದೇಶೀ ಕರೆನ್ಸಿ, ಚಿನ್ನ, ಎಸ್​​ಡಿಆರ್, ಐಎಂಎಫ್ ರಿಸರ್ವ್ ಇವೆಲ್ಲವೂ ಹೆಚ್ಚಿವೆ. ವಿದೇಶೀ ಕರೆನ್ಸಿ ಆಸ್ತಿಯಲ್ಲಿ 3.777 ಬಿಲಿಯನ್ ಡಾಲರ್​ನಷ್ಟು ಏರಿಕೆ ಆಗಿದೆ. ಗೋಲ್ಡ್ ರಿಸರ್ವ್ಸ್ 481 ಮಿಲಿಯನ್ ಡಾಲರ್ ಹೆಚ್ಚಳವಾಗಿದೆ. ಸ್ಪೆಷಲ್ ಡ್ರಾಯಿಂಗ್ ರೈಟ್ಸ್ ಅಥವಾ ಎಸ್​ಡಿಆರ್​ಗಳು 43 ಮಿಲಿಯನ್ ಡಾಲರ್​ನಷ್ಟು ಅಧಿಕಗೊಂಡಿವೆ. ಇನ್ನು, ಐಎಂಎಫ್​ನೊಂದಿಗಿನ ಮೀಸಲು ನಿಧಿಯಲ್ಲಿ 10 ಮಿಲಿಯನ್ ಡಾಲರ್ ಹೆಚ್ಚಾಗಿದೆ.

ಇದನ್ನೂ ಓದಿ: ಗಂಭೀರ ಎಚ್ಚರಿಕೆ! ಉದ್ಭವಿಸಲಿದೆ ನೀರನ್ನು ಸ್ಟಾಕ್​​ ಮಾರ್ಕೆಟ್​​​ನಲ್ಲಿ ಸರಕಾಗಿಸಿ ಟ್ರೇಡಿಂಗ್​​ ಮಾಡುವ ಪರಿಸ್ಥಿತಿ

ಜೂನ್ 7ರಂದು ಭಾರತದ ಫಾರೆಕ್ಸ್ ನಿಧಿ

ಒಟ್ಟು ಫಾರೆಕ್ಸ್ ನಿಧಿ: 655.817 ಬಿಲಿಯನ್ ಡಾಲರ್

  1. ಫಾರೀನ್ ಕರೆನ್ಸಿ ಅಸೆಟ್ಸ್: 576.337 ಬಿಲಿಯನ್ ಡಾಲರ್
  2. ಗೋಲ್ಡ್ ರಿಸರ್ವ್ಸ್: 56.982 ಬಿಲಿಯನ್ ಡಾಲರ್
  3. ಎಸ್​ಡಿಆರ್: 18.161 ಬಿಲಿಯನ್ ಡಾಲರ್
  4. ಐಎಂಎಫ್​ನಲ್ಲಿರುವ ನಿಧಿ: 4.336 ಬಿಲಿಯನ್ ಡಾಲರ್.

ಫಾರೆಕ್ಸ್ ನಿಧಿ ಯಾಕೆ ಮುಖ್ಯ?

ಇದು ವಿದೇಶಗಳ ಜೊತೆ ನಡೆಯುವ ವ್ಯಾಪಾರ ವಹಿವಾಟುಗಳಿಗೆ ಸಹಾಯವಾಗುತ್ತದೆ. ದೇಶದ ಹೊರಗಿನ ಬಿಕ್ಕಟ್ಟು ಅಥವಾ ಸಮಸ್ಯೆಗಳಿಂದ ವ್ಯಾಪಾರ ವಹಿವಾಟಿಗೆ ತೊಂದರೆ ಆಗದಂತೆ ಇದು ಶಾಕ್ ಅಬ್ಸಾರ್ಬರ್ ರೀತಿ ಕೆಲಸ ಮಾಡುತ್ತದೆ. ಹೆಚ್ಚು ವಿದೇಶೀ ಕರೆನ್ಸಿ ಸಂಪತ್ತು ಇದ್ದಷ್ಟೂ ಆರ್ಥಿಕತೆಗೆ ರಕ್ಷಣೆ ಗಟ್ಟಿಯಾಗಿರುತ್ತದೆ.

ಇದನ್ನೂ ಓದಿ: ಓಪನ್ ಮಾರ್ಕೆಟ್​ನಲ್ಲಿ ಅದಾನಿ ಎಂಟರ್ಪ್ರೈಸಸ್​ನ ಷೇರುಗಳನ್ನು ಖರೀದಿಸಿದ ಗೌತಮ್ ಅದಾನಿ

ಬೇರೆ ದೇಶಗಳಲ್ಲಿ ಎಷ್ಟಿದೆ ಫಾರೆಕ್ಸ್ ನಿಧಿ?

ಚೀನಾ ಅತಿಹೆಚ್ಚು ಫಾರೆಕ್ಸ್ ನಿಧಿ ಹೊಂದಿದೆ. ಜಪಾನ್, ಸ್ವಿಟ್ಜರ್​ಲ್ಯಾಂಡ್ ದೇಶಗಳು ಭಾರತದಕ್ಕಿಂತ ಹೆಚ್ಚು ಫಾರೆಕ್ಸ್ ರಿಸರ್ವ್ಸ್ ಸಂಪತ್ತು ಹೊಂದಿವೆ. ಆದರೆ, ವಿಶ್ವದಲ್ಲೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಅಮೆರಿಕದಲ್ಲಿರುವ ಫಾರೆಕ್ಸ್ ರಿಸರ್ವ್ಸ್ 250 ಬಿಲಿಯನ್ ಡಾಲರ್​ಗಿಂತಲೂ ಕಡಿಮೆ. ಅದಕ್ಕಿಂತ ಭಾರತದ ಬಳಿ ಎರಡು ಪಟ್ಟಿಗೂ ಹೆಚ್ಚು ವಿದೇಶೀ ಕರೆನ್ಸಿ ಸಂಗ್ರಹ ಇದೆ. ಹೆಚ್ಚಿನ ವಿದೇಶೀ ವಹಿವಾಟುಗಳು ಡಾಲರ್ ಕರೆನ್ಸಿಯಲ್ಲೇ ನಡೆಯುವುದರಿಂದ ಅಮೆರಿಕಕ್ಕೆ ವಿದೇಶೀ ಕರೆನ್ಸಿ ಆಸ್ತಿಗಳ ಅವಶ್ಯಕತೆ ತೀರಾ ಇರುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್