WATER CRISIS in India: ಗಂಭೀರ ಎಚ್ಚರಿಕೆ! ಉದ್ಭವಿಸಲಿದೆ ನೀರನ್ನು ಸ್ಟಾಕ್​​ ಮಾರ್ಕೆಟ್​​​ನಲ್ಲಿ ಸರಕಾಗಿಸಿ ಟ್ರೇಡಿಂಗ್​​ ಮಾಡುವ ಪರಿಸ್ಥಿತಿ

ಒಂದು ಕಾಲದಲ್ಲಿ ನಾಗರಿಕತೆ ಪ್ರಾರಂಭವಾಗಿದ್ದೇ ನದಿ ದಡದಲ್ಲಿ. ಈಗಲೂ ವಿಶ್ವ ಜನಸಂಖ್ಯೆಯ ಶೇ 80 ರಷ್ಟು ಜನರು 10,000 ಕ್ಕೂ ಹೆಚ್ಚು ನದಿ ಜಲಾನಯನ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂಬುದು ಗಮನಾರ್ಹ. ನೀರಿನ ಅಗತ್ಯ ಮತ್ತು ಅದರ ಮೌಲ್ಯವನ್ನು ಅರಿತು ನದಿಯ ಬಳಿಯೇ ವಾಸಿಸುವುದನ್ನು ಮನುಷ್ಯ ರೂಢಿ ಮಾಡಿಕೊಂಡ. ಉದಾಹರಣೆಗೆ ಹೇಳುವುದಾದರೆ ಹೈದರಾಬಾದ್​ ಮಹಾನಗರವೂ ಮೌಸಿ ನದಿ ದಡದಲ್ಲಿಯೇ ನಿರ್ಮಾಣವಾಗಿರುವುದು. ಅದೊಮ್ಮೆ ಇಡೀ ನಗರಕ್ಕೆ ಶುದ್ಧ ಕುಡಿಯುವ ನೀರನ್ನು ಒದಗಿಸುತ್ತಿದ್ದ ಮೌಸಿ ನದಿಯನ್ನು ಈಗ ಮೂಸಿ ನೋಡಲೂ ಆಗದು.

WATER CRISIS in India: ಗಂಭೀರ ಎಚ್ಚರಿಕೆ! ಉದ್ಭವಿಸಲಿದೆ ನೀರನ್ನು ಸ್ಟಾಕ್​​ ಮಾರ್ಕೆಟ್​​​ನಲ್ಲಿ ಸರಕಾಗಿಸಿ ಟ್ರೇಡಿಂಗ್​​ ಮಾಡುವ ಪರಿಸ್ಥಿತಿ
ನೀರಿನ ಕೊರತೆ ಎಂಬುದು ಕೊರೋನಾ ಮೀರಿದ ಅಪಾಯದ ಗಂಟೆ!
Follow us
|

Updated on:Jun 21, 2024 | 9:44 AM

ಸ್ವಲ್ಪ ಮುಖ ತೊಳೆದುಕೊಂಡು ಬಾ ಅಂದರೆ ಸಾಕು ಅದಕ್ಕಾಗಿ ಒಂದೆರಡು ಚೊಂಬು ನೀರು ಬಳಸುವವರು ಇದ್ದಾರೆ. ಇನ್ನು ಸ್ವಚ್ಛವಾಗಿ ಕೈ ಕಾಲು ತೊಳೆಯಲು ಇಡೀ ಬಕೆಟ್ ನೀರು ವ್ಯರ್ಥ ಮತ್ತು ಸ್ನಾನ ಮಾಡಿ ಬಾ ಎಂದು ಹೇಳಿದರೆ ಸಾಕು.. ಎರಡ್ಮೂರು ಬಕೆಟ್ ಬಳಸಿದರೂ ಅವರಿಗೆ ಏನೂ ಅನ್ನಿಸುವುದಿಲ್ಲ. ಹಾಗೆ ನೀರನ್ನು ಪೋಲು ಮಾಡುತ್ತಿದ್ದಾರೆ. ಆದರೆ ಹೀಗೆ ನೀರು ಪೋಲು ಮಾಡುವುದನ್ನು ಸಹಿಸಲಾಗದವರು. ನೀರನ್ನು ಹಿತ ಮಿತವಾಗಿ ಬಳಸುವವರಂತೂ ನೀರು ಪೋಲು ಮಾಡುವವರನ್ನು ಮರುಭೂಮಿಗೆ ಎಸೆದು ಬರಬೇಕು ಎಂದು ಯೋಚಿಸುತ್ತಾರೆ. ಆದರೆ ಅವರು ಹಾಗೆ ಯೋಚಿಸುತ್ತಿರಲಿ ಅಥವಾ ಇಲ್ಲದಿರಲಿ ನೀರಿನ ಲಭ್ಯತೆಯ ಬಗ್ಗೆ ಹಲವಾರು ಕಠಿಣ ವಾಸ್ತವ ಸಂಗತಿಗಳನ್ನು ನಿಮಗಾಗಿ ಇಲ್ಲಿ ನೀಡಲಾಗಿದೆ.

ವೈಜ್ಞಾನಿಕವಾಗಿ ನೀರನ್ನು H2O ಎಂದು ಕರೆಯಲಾಗುತ್ತದೆ. ಅದೇ ನೀರನ್ನು ಜೀವಜಲ, ಅಮೃತ ಎಂದು ಕರೆಯವುದೂ ಉಂಟು. ಎರಡು ಹೈಡ್ರೋಜನ್ ಪರಮಾಣುಗಳು ಮತ್ತು ಒಂದು ಆಮ್ಲಜನಕ ಪರಮಾಣು ಸೇರಿ ನೀರನ್ನು ರೂಪಿಸುತ್ತದೆ. ಹಾಗಾದರೆ ಅಂತಹ ವಿಧಾನದಲ್ಲಿ ಭಾರೀ ಪ್ರಮಾಣದಲ್ಲಿ ನಮಗೇಕೆ ನೀರನ್ನು ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ವಾತಾವರಣದಲ್ಲಿ ಸಾಕಷ್ಟು ಹೈಡ್ರೋಜನ್ ಮತ್ತು ಸಾಕಷ್ಟು ಆಮ್ಲಜನಕವಿದೆ. ಇದಲ್ಲದೆ, ನಾವು ಅತ್ಯಾಧುನಿಕ ತಂತ್ರಜ್ಞಾನದ ಯುಗದಲ್ಲಿದ್ದೇವೆ. ಆದರೂ ನೀರನ್ನು ಸೃಷ್ಟಿಸಲು ಸಾಧ್ಯವಿಲ್ಲವೇ? ಯಸ್ ನೀರನ್ನು ಹಾಗೆಲ್ಲಾ ಸಾಧ್ಯವಿಲ್ಲ ದೊಡ್ಡ ಪ್ರಯೋಗಾಲಯಗಳಲ್ಲಿ ಹೈಡ್ರೋಜನ್ ಮತ್ತು ಆಮ್ಲಜನಕದ ಅಣುಗಳನ್ನು ಒಟ್ಟಿಗೆ ಸೇರಿಸಿದರೂ, ಸಾಕಷ್ಟು ನೀರನ್ನು ತಯಾರಿಸಲು ಸಾಧ್ಯವಿಲ್ಲ. ಏಕೆಂದರೆ ಪ್ರಯೋಗಾಲಯದಲ್ಲಿ ಒಂದು ಹನಿ ನೀರು ಮಾಡಲು ಕನಿಷ್ಠ 10 ಗಂಟೆಗಳು ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಅದು ಸಾಕಷ್ಟು ಶಾಖವನ್ನು ಉಂಟುಮಾಡುತ್ತದೆಯೋ ಹೊರತು ನೀರು ಸಿಗುವುದಿಲ್ಲ. ಅನಿಲ ರೂಪಕ್ಕೆ ಪರಿವರ್ತನೆಯಾಗುತ್ತದೆ ಅಷ್ಟೆ. ಅದು ಕೊನೆಗೆ ಒಂದೇ ಒಂದು ಹನಿ ನೀರು ದ್ರವ ರೂಪಕ್ಕೆ ಪರಿವರ್ತನೆಯಾಗುತ್ತದೆ. ಆದ್ದರಿಂದ, ಪ್ರಕೃತಿ ಸಹಜವಾಗಿ ಲಭ್ಯಾವದರೆ ಮಾತ್ರ ನೀರು; ಇಲ್ಲವಾದರೆ ಮನುಷ್ಯ ಸೃಷ್ಟಿಯಿಂದ ನೀರನ್ನು ಉತ್ಪಾದಿಸಲು ಸಾಧ್ಯವಿಲ್ಲ. ಇನ್ನು ಮನುಷ್ಯ ಶರವೇಗದಲ್ಲಿ ಪ್ರಕೃತಿಯನ್ನು ನಾಶಪಡಿಸುತ್ತಿರುವಾಗ ನೀರು ಎಲ್ಲಿಂದ ಬರುತ್ತದೆ?

ಇಂದಿನ ಚಿನ್ನದ ಬೆಲೆ ನಾಳೆಗೆ ಇರುವುದಿಲ್ಲ. ಪ್ರತಿ 15 ದಿನಗಳಿಗೊಮ್ಮೆ ಪೆಟ್ರೋಲ್ ದರ ಪರಿಷ್ಕರಣೆಯಾಗುತ್ತದೆ. ಸದ್ಯೋಭವಿಷ್ಯತ್ತಿನಲ್ಲಿ ಒಂದು ಲೀಟರ್ ನೀರನ್ನು ಇದೇ ರೀತಿ ಮಾಪನ ಮಾಡಿದರೆ..? ಷೇರುಪೇಟೆಯಲ್ಲಿ ನೀರು ಸರಕಾಗಿ ವ್ಯಾಪಾರವಾಗುವ ಪರಿಸ್ಥಿತಿ ಎದುರಾದರೆ? ಪರಿಸ್ಥಿತಿ ಅಷ್ಟು ಕೆಟ್ಟದಾಗುವುದಿಲ್ಲ ಬಿಡಿ ಎಂದು ಹೇಳಬೇಡಿ. ಕೆಲವು ವರ್ಷಗಳ ಹಿಂದೆ ಬಾಟಲಿ ನೀರು ಲೀಟರ್‌ಗೆ ಇಷ್ಟು ಬೆಲೆ ತೆರಬೇಕಾಗುತ್ತದೆ ಎಂದು ನಾವು ಭಾವಿಸಿದ್ದೆವಾ? ಪರಿಸ್ಥಿತಿ ಹೀಗಿರುವಾಗ ಷೇರು ಮಾರುಕಟ್ಟೆಯಲ್ಲಿ ನೀರನ್ನು ಮಾರಾಟ ಮಾಡುವುದಿಲ್ಲ ಎಂದು ನಾವು ಸುರಕ್ಷಿತವಾಗಿ ಹೇಳಬಹುದೇ?

ಬಾಯಾರಿಕೆ.. ಎಂಬುದು ಸಾಮಾನ್ಯನಿಗೂ ಆಗುತ್ತದೆ ರಾಜನಿಗೂ ಬರುತ್ತದೆ; ಬಡವ ಧನಿಕ ಎಂಬ ಭೇದ ಕಾಣುವುದಿಲ್ಲ. ಬಾಲ್ಯದಿಂದಲೂ ನಾವು ಅದೇ ವಿಷಯವನ್ನು ಅಧ್ಯಯನ ಮಾಡುತ್ತಿದ್ದೇವೆ. ನಮ್ಮ ಭೂಮಿಯ 70 ಪ್ರತಿಶತ ನೀರನ್ನು ಹೊಂದಿದೆ. ಅದರಲ್ಲಿ ಆ ಶೇ. 70ರಲ್ಲಿ ಶೇ. 97.2 ಸಮುದ್ರದ ನೀರಿನಿಂದ ಕೂಡಿದೆ, ಅದು ಕುಡಿಯಲು ಅಯೋಗ್ಯವಾಗಿದೆ. ಇನ್ನು ಸೇ. 2.15 ರಷ್ಟು ನೀರು ಮಂಜುಗಡ್ಡೆ, ಹೆಪ್ಪುಗಟ್ಟಿದ ಹಿಮನದಿಗಳ ರೂಪದಲ್ಲಿ ಉಳಿದಿದೆ. ಆದ್ದರಿಂದ, ಅವುಗಳನ್ನು ಕರಗಿಸಲು ಬಯಸುವುದಿಲ್ಲ. ಮತ್ತು ಮನುಷ್ಯನಿಗೆ ಕುಡಿಯಲು ಉಳಿದಿರುವುದು ಅಂತರ್ಜಲ ಭೂಗತ ನೀರು. ನದಿಗಳು ಮತ್ತು ಉತ್ತಮ ನೀರಿನ ಮೂಲಗಳು ಕುಡಿಯುವ ನೀರನ್ನು ಒದಗಿಸುತ್ತದೆ. ಅಂದಹಾಗೆ ಶೇ. 0.61 ರಷ್ಟು ನೀರು ಮಾತ್ರ ಅಂತರ್ಜಲ ಮತ್ತು ನದಿಗಳಲ್ಲಿ ಕಂಡುಬರುತ್ತದೆ. ಇನ್ನುಶೇ. 0.009 ರಷ್ಟು ನೀರು ಸಿಹಿ ನೀರಿನ ಸರೋವರಗಳ ಮೂಲಕ ಲಭ್ಯವಿದೆ. ಪರಿಸ್ಥಿತಿ ಇಷ್ಟು ಭೀಕರವಾಗಿದ್ದರೂ ಸರಿ ಮನುಷ್ಯ ಜಾಗೃತನಾಗಿಲ್ಲ. ಹಣವನ್ನು ದುಂದುವೆಚ್ಚ ಮಾಡಿದಂತೆ ನೀರನ್ನು ಖರ್ಚು ಮಾಡಬಾರದು ಎನ್ನುತ್ತಾರೆ ಅನುಭವಸ್ಥರು. ನೀರನ್ನು ನಾವು ಅಗ್ಗವಾಗಿ ಕಾಣುತ್ತಿದ್ದೇವೆ. ಈಗ ಆ ನೀರು ತುಂಬಾ ದುಬಾರಿಯಾಗಿದೆ. ಬೇಕಿದ್ದರೆ ಮಹಾನಗರಗಳಿಗೆ ಹೋಗಿ ನೋಡಿ.

ಒಂದು ಕಾಲದಲ್ಲಿ ನಾಗರೀಕತೆ ಪ್ರಾರಂಭವಾಗಿದ್ದೇ ನದಿ ದಡದಲ್ಲಿ. ಈಗಲೂ ವಿಶ್ವ ಜನಸಂಖ್ಯೆಯ ಶೇ 80 ರಷ್ಟು ಜನರು 10,000 ಕ್ಕೂ ಹೆಚ್ಚು ನದಿ ಜಲಾನಯನ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂಬುದು ಗಮನಾರ್ಹ. ನೀರಿನ ಅಗತ್ಯ ಮತ್ತು ಅದರ ಮೌಲ್ಯವನ್ನು ಅರಿತು ನದಿಯ ಬಳಿಯೇ ವಾಸಿಸುವುದನ್ನು ಮನುಷ್ಯ ರೂಢಿ ಮಾಡಿಕೊಂಡ. ಉದಾಹರಣೆಗೆ ಹೇಳುವುದಾದರೆ ಹೈದರಾಬಾದ್​ ಮಹಾನಗರವೂ ಮೌಸಿ ನದಿ ದಡದಲ್ಲಿಯೇ ನಿರ್ಮಾಣವಾಗಿರುವುದು. ಅದೊಮ್ಮೆ ಇಡೀ ನಗರಕ್ಕೆ ಶುದ್ಧ ಕುಡಿಯುವ ನೀರನ್ನು ಒದಗಿಸುತ್ತಿದ್ದ ಮೌಸಿ ನದಿಯನ್ನು ಈಗ ಮೂಸಿ ನೋಡಲೂ ಆಗದು. ಯಾರಾದರೂ ಅಲ್ದಲಿಂ ಒಂದು ಬಾಟಲಿಯಲ್ಲಿ ನೀರು ತೆಗೆದುಕೊಂಡು ಕುಡಿಯಬಹುದಾದ ಸ್ಥಿತಿ ಇದೆಯೇ? ಹುಸೇನ್ ಸಾಗರ್ ಕೂಡ ಹಾಗೆಯೇ ಆಗಿದೆ. ಇದೂ ಸಹ ಅದೊಮ್ಮೆ ಈ ಮಹಾನಗರಕ್ಕೆ ನೀರನ್ನು ಪೂರೈಸುತ್ತಿತ್ತು. ಈಗ ಯಾರೂ ಹುಸೇನ್ ಸಾಗರದ ನೀರನ್ನು ಕುಡಿಯುವ ಸಾಹಸ ಮಾಡಲಾರರು. ಹೋಗಲಿ ಇಷ್ಟಾದರೂ ಜನ ಬದಲಾದರಾ, ನೀರಿನ ಕುರಿತು ಅವರ ಮನಸ್ಥಿತಿ ಬದಲಾಯಿತಾ ಅಂದರೆ ಮನುಷ್ಯ ಇನ್ನೂ ಬದಲಾಗಿಲ್ಲ.

ಕುಡಿಯುವ ನೀರಿಗೆ ಮನುಷ್ಯ ಮುಂದೆ ಭಾರೀ ಮೌಲ್ಯ ತೆರಬೇಕಾಗುತ್ತದೆ. 2050 ರ ವೇಳೆಗೆ, 10,000 ಕ್ಕಿಂತ ಹೆಚ್ಚು ನದಿ ಜಲಾನಯನ ಪ್ರದೇಶಗಳಲ್ಲಿ, ಕೇವಲ 3,061 ನದಿ ಜಲಾನಯನ ಪ್ರದೇಶಗಳು ಮಾತ್ರ ಕುಡಿಯಲು ಅರ್ಹವಾಗುತ್ತವೆ ಎಂದು ನೆದರ್​ಲ್ಯಾಂಡ್​​ ವ್ಯಾಗೆನಿಂಗನ್ ವಿಶ್ವವಿದ್ಯಾಲಯದ ಸಂಶೋಧನೆ ತಿಳಿಸಿದೆ. ನೀರು ಸೀಮಿತ ಸಂಪನ್ಮೂಲ ಎಂಬುದನ್ನು ಮನುಷ್ಯ ಮರೆಯುತ್ತಿದ್ದಾನೆ. ಇನ್ನು ಭಾರತದಲ್ಲಿ ನೀರು ಮತ್ತು ನದಿಗಳನ್ನು ಪವಿತ್ರವೆಂದು ಪರಿಗಣಿಸುವ ಪ್ರವೃತ್ತಿಯಿದೆ. ಹಬ್ಬ ಹರಿದಿನಗಳು, ವಿಶೇಷ ಸಂದರ್ಭಗಳು ಬಂದಾಗ ನದಿಗಳತ್ತ ಓಡಿ ಸ್ನಾನ ಮಾಡುತ್ತೇವೆ. ಸಾಬೂನು ಮತ್ತು ಶಾಂಪೂಗಳ ಸಮೇತ ಹೋಗಿ ಪವಿತ್ರ ನದಿಯನ್ನು ಅಶುದ್ಧಗೊಳಿಸುತ್ತೇವೆ. ಮನೆಯಲ್ಲಿ ಸ್ನಾನ ಮಾಡಿ ನದಿಯಲ್ಲಿ ಮೂರು ಬಾರಿ ಸ್ನಾನ ಮಾಡಿ ಎಂದು ಹಿರಿಯರು ಹೇಳಿದರೆ, ನದಿಗಳಲ್ಲಿ ಮಲಮೂತ್ರಗಳನ್ನೂ ಮಾಡಿ ಅಪವಿತ್ರಗೊಳಿಸುತ್ತಿದ್ದೇವೆ. ಮನುಷ್ಯ ತಾನು ಮಾಡಿರುವ ಪಾಪಗಳನ್ನು ತೊಳೆದುಕೊಳ್ಳಲು ನದಿಯತ್ತ ಹೋಗಿ, ಅದನ್ನು ಮಲಿನ ಮಾಡುವ ಮಹಾಪಾಪ ಮಾಡಿ ಬರುತ್ತಿದ್ದಾನೆ ಅಷ್ಟೇ. ಜೀವಜಲದ ನದಿಗಳು ಮತ್ತು ಜಲಮೂಲಗಳಲ್ಲಿ ತುಂಬುತ್ತಿರುವ ತ್ಯಾಜ್ಯದ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸವನ್ನು ಸರ್ಕಾರಗಳೂ ಮಾಡುತ್ತಿಲ್ಲ. ಇನ್ನು ನಗರಗಳ ಆಸುಪಾಸಿನಲ್ಲಿ ಕೆರೆಗಳನ್ನು ಸಂರಕ್ಷಿಸುವ ಹೊಣೆಗಾರಿಕೆಯೂ ನಿಭಾಯಿಸುತ್ತಿಲ್ಲ. ಹಾಗಾಗಿಯೇ ದೆಹಲಿ, ಬೆಂಗಳೂರು, ಚೆನ್ನೈ ನಗರಗಳು ಇಂತಹ ದುಸ್ಥಿತಿಯಲ್ಲಿವೆ. ನೀರಿನ ಕೊರತೆಗೆ ನದಿ ಪಾತ್ರಗಳ ಮಾಲಿನ್ಯವೇ ದೊಡ್ಡ ಕಾರಣ. ಜಾಗತಿಕ ತಾಪಮಾನ ಮತ್ತು ವಾಯು ಮಾಲಿನ್ಯದಿಂದ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿದು ಪರಿಸರ ನಾಶ ಮಾಡಲಾಗುತ್ತಿದೆ. ವಾಯು ಮಾಲಿನ್ಯ ಈಗಾಗಲೇ 300 ಕೋಟಿ ಜನರ ಮೇಲೆ ಪರಿಣಾಮ ಬೀರುತ್ತಿದೆ. ಈ ಮಾಲಿನ್ಯದಿಂದ ನೀರಿನ ಕೊರತೆಯೂ ಉಂಟಾಗುತ್ತಿದೆ.

Also Read: ಭರ್ಜರಿಯಾಗಿ ಬೆಳೆಯುತ್ತಿದೆ ಹೆಬ್ಬಾವು ಮಾಂಸ ಮಾರುಕಟ್ಟೆ! ಬನ್ನೀ ಒಂದು ರೌಂಡ್ ಹಾಕಿಬರೋಣ

ಆಫ್ರಿಕಾದಂತಹ ದೇಶಗಳಿಗೆ ಒಮ್ಮೆ ಹೋದರೆ ನೀರಿನ ಮೌಲ್ಯ ತಿಳಿಯುತ್ತದೆ. ಬರಗಾಲದಲ್ಲಿ, ಬಾಯಾರಿಕೆಯಿಂದ ಗಂಟಲು ಒಣಗಿದಾಗ, ಗಂಟಲಿಗೆ ಕೊಳಚೆಯ ನೀರನ್ನು ಸುರಿಯುವ ಪರಿಸ್ಥಿತಿಯಿದೆ. ಇನ್ನು ಕೆಲವು ದೇಶಗಳಲ್ಲಿ ಉಪ್ಪು ನೀರನ್ನೇ ಕುಡಿಯುತ್ತಾರೆ. ಸಾಮಾನ್ಯವಾಗಿ ಜನರು ಶುದ್ಧೀಕರಿಸಿದ ನೀರನ್ನು ಕುಡಿದರೂ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಇನ್ನು ಕೊಳಕು ನೀರು ಕುಡಿದರೆ ಅಂತಹವರು ಬದುಕಬಹುದೇ? ಅಶುದ್ಧ ನೀರನ್ನು ಕುಡಿದು ಇಲ್ಲದ ರೋಗಗಳು ಅಮರಿಕೊಂಡು ಸಾಯುವಂತಹ ಪರಿಸ್ಥಿತಿಯಿದೆ. ನಮ್ಮ ದೇಶದಲ್ಲಿಯೇ ತೆಗೆದುಕೊಳ್ಳಿ… ಪ್ರತಿ ವರ್ಷ ಸುಮಾರು 2 ಲಕ್ಷ ಜನರು ಕಲುಷಿತ, ಅಶುದ್ಧ ನೀರಿನಿಂದಾಗಿ ಸಾಯುತ್ತಾರೆ. ಇದು ಕಣ್ಣಿಗೆ ಕಾಣದ ಕೊರೋನಾ ಮಹಾಮಾರಿಯಂತೆ. 2023ರ ವೇಳೆಗೆ ಜಗತ್ತಿನ ಎಲ್ಲ ಜನರಿಗೆ ಕುಡಿಯುವ ನೀರು ಒದಗಿಸುವ ಮಹತ್ತರ ಗುರಿಯನ್ನು ವಿಶ್ವಸಂಸ್ಥೆ ಹಾಕಿಕೊಂಡಿದೆ. ಆದರೆ 2023 ಕಳೆದಿದೆ, ಆದರೂ ಗುರಿ ತಲುಪಿಲ್ಲ. ಏಕೆಂದರೆ ಇದಕ್ಕೆ ಸಾಕಷ್ಟು ಹಣ ಬೇಕಾಗುತ್ತದೆ. ವರ್ಷಕ್ಕೆ 600 ಬಿಲಿಯನ್ ಡಾಲರ್ ನಿಂದ ಟ್ರಿಲಿಯನ್ ಡಾಲರ್ ವರೆಗೆ ಖರ್ಚು ಮಾಡಬೇಕಾಗುತ್ತದೆ. ಯುದ್ಧಗಳನ್ನು ಬಹಳ ಸುಲಭವಾಗಿ ನಡೆಸಬಲ್ಲ ದೇಶಗಳಿಗೆ ನೀರಿಗಾಗಿ ಖರ್ಚು ಮಾಡಲು ಹಣವಿಲ್ಲ. ಇದು ಜಲದ ಬಾಧೆ, ಜಲದ ಕಥೆ ವ್ಯಥೆ.

ಮುಂದಿನ ಆರು ವರ್ಷಗಳಲ್ಲಿ ಭಾರತದ ನೀರಿನ ಅಗತ್ಯವು ದ್ವಿಗುಣಗೊಳ್ಳಲಿದೆ. ಇದು NITI ಆಯೋಗ್ ನೀಡಿರುವ ವರದಿ. ಮತ್ತೊಂದೆಡೆ, ದೇಶದಲ್ಲಿ ನೀರಿನ ಲಭ್ಯತೆ ಕಡಿಮೆಯಾಗುತ್ತಿದೆ. ದೇಶದ ಆರ್ಥಿಕತೆಯ ಮೇಲೂ ನೀರು ಪರಿಣಾಮ ಬೀರುತ್ತದೆ. ನೀರಿನ ಕೊರತೆಯು ದೇಶದ ಜಿಡಿಪಿಯಲ್ಲಿ 6 ಪ್ರತಿಶತದಷ್ಟು ಕುಸಿತವನ್ನು ಉಂಟುಮಾಡುತ್ತದೆ ಎಂದು ವರದಿಗಳು ಹೇಳುತ್ತವೆ. ವಿಶ್ವಸಂಸ್ಥೆ ಈಗಾಗಲೇ ಗಂಭೀರ ಎಚ್ಚರಿಕೆ ನೀಡಿದೆ. 2050 ರ ಹೊತ್ತಿಗೆ, ಅಂದರೆ, ಮುಂದಿನ ಕೆಲವು ವರ್ಷಗಳಲ್ಲಿ, ಭಾರತದಲ್ಲಿ ನೀರಿನ ಕೊರತೆಯು ತುಂಬಾ ತೀವ್ರವಾಗಿರುತ್ತದೆ. ಅದು ಇನ್ನೂ ದೂರ ದೂರದಲ್ಲಿದೆ ಎಂದು ಭಾವಿಸಬೇಡಿ. 2025 ರ ವೇಳೆಗೆ ಅಂದರೆ ಮುಂದಿನ ವರ್ಷ 180 ಕೋಟಿ ಜನರು ತೀವ್ರ ನೀರಿನ ಕೊರತೆಯವನ್ನು ಎದುರಿಸಲಿದ್ದಾರೆ ಎಂದು ಅಧ್ಯಯನಗಳು ತೋರಿಸುತ್ತವೆ. ವಿಶ್ವಾದ್ಯಂತ 100 ಕೋಟಿಗೂ ಹೆಚ್ಚು ಜನರಿಗೆ ನೀರಿನ ಸೌಲಭ್ಯವಿಲ್ಲ. ಇನ್ನು 270 ಕೋಟಿ ಜನರಿಗೆ ವರ್ಷದಲ್ಲಿ 11 ತಿಂಗಳು ಮಾತ್ರ ನೀರು ಸಿಗುತ್ತದೆ. ವಿಶ್ವದ ದೊಡ್ಡ ನಗರಗಳಲ್ಲಿಯೂ ಸಹ ನೀರು ಗಂಭೀರ ಸಮಸ್ಯೆಯಾಗಿದೆ. ಶೇ. 25 ರಷ್ಟು ನಗರಗಳು ತೀವ್ರ ನೀರಿನ ಒತ್ತಡವನ್ನು ಎದುರಿಸುತ್ತಿವೆ. ಏಷ್ಯಾದಲ್ಲಿಯೇ ಶೇ 80ರಷ್ಟು ಜನರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

ಇದು ಭಾರತಕ್ಕಷ್ಟೇ ಮಾತ್ರವಲ್ಲ.. ಜಗತ್ತಿನಾದ್ಯಂತ ಕನಿಷ್ಠ 80ಕ್ಕೂ ಹೆಚ್ಚು ರಾಷ್ಟ್ರಗಳು ನೀರಿನ ಸಮಸ್ಯೆ ಎದುರಿಸುತ್ತಿವೆ. ದೇಶದ ನೀರಿನ ಸಮಸ್ಯೆಗೆ ಮುಂಗಾರು ವಿಳಂಬವೊಂದೇ ಪ್ರಮುಖ ಕಾರಣವಲ್ಲ. ಮಳೆ ಬಂದಾಗ ಪ್ರತಿ ಹನಿಯನ್ನೂ ಸಂಗ್ರಹಿಸುವ ದೂರದೃಷ್ಟಿ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಮಳೆ ಬಂದರೆ ಎಷ್ಟು ಲಕ್ಷ ಕ್ಯೂಸೆಕ್ ನೀರು ವ್ಯರ್ಥವಾಗುತ್ತದೆ ಎಂಬುದನ್ನು ನೋಡುತ್ತಲೇ ಇರುತ್ತೇವೆ. ಆದರೆ, ಅವುಗಳನ್ನು ಸಂಗ್ರಹಿಸಲು ಜಲಾಶಯಗಳನ್ನು ನಿರ್ಮಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಹೀಗೆ ಮಾಡುವುದರಿಂದ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಒಂದು ಹಂಗಾಮಿನಲ್ಲಿ ಮಳೆ ಬಾರದಿದ್ದರೂ ಬರ ನೀಗಿಸುವಷ್ಟು ನೀರು ದೊರೆಯುತ್ತದೆ. ಕನಿಷ್ಠ ಅಂತರ್ಜಲ ಮಟ್ಟ ಹೆಚ್ಚಿಸುವ ಪ್ರಯತ್ನವನ್ನೂ ಮಾಡುತ್ತಿಲ್ಲ. ಭೂಮಿಯ ಮೇಲೆ ಬೀಳುವ ಕೆಲವು ಹನಿಗಳು ಭೂ ತಾಯಿಯ ಗರ್ಭಕ್ಕೆ ಹೋಗಬೇಕು. ತಾಯಿ ತಣ್ಣಗಿರುತ್ತಾಳೆ. ಅಂತರ್ಜಲ ನೀರಿಗೆ ಅವಕಾಶ ನೀಡದೆ ಕಾಂಕ್ರೀಟ್ ಕಾಡುಗಳನ್ನು ಸೃಷ್ಟಿಸುತ್ತಿರುವ ಮನುಷ್ಯ ತನ್ನ ಅಗತ್ಯಗಳಿಗಾಗಿ ಅಂತರ್ಜಲ ನೀರನ್ನು ಬರಿದಾಗಿಸುತ್ತಿದ್ದಾನೆ. ಇದರಿಂದಾಗಿ ಕಳೆದ ಎರಡು ದಶಕಗಳಲ್ಲಿ ದೇಶದ 300ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅಂತರ್ಜಲ ಸಂಗ್ರಹ ನಾಲ್ಕು ಮೀಟರ್‌ಗಳಷ್ಟು ಕಡಿಮೆಯಾಗಿದೆ ಎಂದು ವರದಿಗಳು ಹೇಳುತ್ತವೆ.

Also Read: ಭಾರತದಲ್ಲಿದೆ ಬೆಟ್ಟದಷ್ಟು ಬಂಗಾರ! ಸೌದಿಗಿಂತ ನಮ್ಮಲ್ಲಿ ಚಿನ್ನದ ಮೀಸಲು ಅಧಿಕ! ಇದು ದೇಶದ ಆರ್ಥಿಕ ಸ್ಥಿರತೆಯ ದ್ಯೋತಕ, ಹೇಗೆ?

ಭವಿಷ್ಯದಲ್ಲಿ ಮೂರನೇ ಮಹಾಯುದ್ಧ ನಡೆಯುತ್ತದೋ ಇಲ್ಲವೋ, ಜಲಯುದ್ಧಗಳು ಖಂಡಿತಾ ನಡೆಯುತ್ತವೆ. ರಾಜ್ಯಗಳ ನಡುವಿನ ಹೋರಾಟಕ್ಕೆ ಸಂಬಂಧಿಸಿದಂತೆ. ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ಜಲ ವಿವಾದ ಮತ್ತು ತೆಲಂಗಾಣ ಮತ್ತು ಮಹಾರಾಷ್ಟ್ರ ನಡುವಿನ ಗೋದಾವರಿ ಜಲ ವಿವಾದ ಇನ್ನೂ ಮುಂದುವರೆದಿದೆ. ನಾಗಾರ್ಜುನ ಸಾಗರ ಮತ್ತು ಶ್ರೀಶೈಲದ ಬಳಿ ಆಂಧ್ರಪ್ರದೇಶ ಮತ್ತು ತೆಲಂಗಾಣ ಪಡೆಗಳ ನಿಯೋಜನೆಯನ್ನು ನೋಡಿದರೆ ಯುದ್ಧದ ವಾತಾವರಣವನ್ನು ಕಾಣಬಹುದು. ಭಾರತವೂ ನೇರವಾಗಿ ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ಹೋಗುತ್ತಿಲ್ಲ. ಪಾಕಿಸ್ತಾನಕ್ಕೆ ನೀರು ಪೂರೈಸುತ್ತಿದ್ದ ಸಿಂಧೂ ನದಿಯನ್ನು ಹರಿವನ್ನು ತಡೆದಿದೆ. ಅಂದರೆ ದಾಯಾದಿ ಕಲಹಕ್ಕೆ ಕೇಡು ಮಾಡಲು ಯುದ್ಧವೇ ಮಾಡಬೇಕು ಎಂದೇನಿಲ್ಲ.. ನೀರು ನಿಲ್ಲಿಸಿದರೆ ಸಾಕು! ಆದ್ದರಿಂದ, ಯುದ್ಧಕ್ಕಿಂತ ನೀರು ಹೆಚ್ಚು ಭೀಕರ, ಶಕ್ತಿಶಾಲಿಯಾಗಿದೆ.

ಮತ್ತಷ್ಟು  ಪ್ರೀಮಿಯಂ ಸುದ್ದಿಗಳಿಗಾಗಿ    ಇಲ್ಲಿ ಕ್ಲಿಕ್ ಮಾಡಿ

Published On - 7:27 pm, Sat, 15 June 24

ತಾಜಾ ಸುದ್ದಿ
ಸಭೆಗೆ ಬಂದ ಕುಮಾರಸ್ವಾಮಿಯನ್ನು ಸ್ವಾಗತಿಸಿದ ಸಿದ್ದರಾಮಯ್ಯ: ವಿಡಿಯೋ ನೋಡಿ
ಸಭೆಗೆ ಬಂದ ಕುಮಾರಸ್ವಾಮಿಯನ್ನು ಸ್ವಾಗತಿಸಿದ ಸಿದ್ದರಾಮಯ್ಯ: ವಿಡಿಯೋ ನೋಡಿ
‘ದರ್ಶನ್​ ಜೈಲಿಗೆ ಹೋದಮೇಲೆ ನನ್ನ ಮಗಳು ಸರಿಯಾಗಿ ಊಟ ಮಾಡುತ್ತಿಲ್ಲ’
‘ದರ್ಶನ್​ ಜೈಲಿಗೆ ಹೋದಮೇಲೆ ನನ್ನ ಮಗಳು ಸರಿಯಾಗಿ ಊಟ ಮಾಡುತ್ತಿಲ್ಲ’
ಶ್ರೀಗಳು ಸ್ಥಾನ ಬಿಟ್ಟುಕೊಡಿ ಅಂದಿದ್ದು ಸಿದ್ದರಾಮಯ್ಯರನ್ನು ವಿಚಲಿತರಾಗಿಸಿದೆ
ಶ್ರೀಗಳು ಸ್ಥಾನ ಬಿಟ್ಟುಕೊಡಿ ಅಂದಿದ್ದು ಸಿದ್ದರಾಮಯ್ಯರನ್ನು ವಿಚಲಿತರಾಗಿಸಿದೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಶಾಲೆಗ, ಕಾಲೇಜುಗಳಿಗೆ ರಜೆ ಘೋಷಣೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆಯೂ ಶಾಲೆಗ, ಕಾಲೇಜುಗಳಿಗೆ ರಜೆ ಘೋಷಣೆ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರೆ?
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ರಾಜಣ್ಣ ಮಂತ್ರಿ ಸ್ಥಾನ ತ್ಯಜಿಸುತ್ತಾರೆ?
ಆ ಶ್ರೀ ಸ್ಥಾನ ಬಿಟ್ಟುಕೊಡ್ತಾರಾ? ಕೇಳಿ ನಾನೇ ಸ್ವಾಮೀಜಿ ಆಗ್ತೇನೆ: ರಾಜಣ್ಣ
ಆ ಶ್ರೀ ಸ್ಥಾನ ಬಿಟ್ಟುಕೊಡ್ತಾರಾ? ಕೇಳಿ ನಾನೇ ಸ್ವಾಮೀಜಿ ಆಗ್ತೇನೆ: ರಾಜಣ್ಣ
ಕೆಂಪೇಗೌಡರ ಜಯಂತಿಯಲ್ಲಿ ಹಾಸನ ಡಿಸಿ ಕಣ್ಣೀರು, ಕಾರಣವೇನು ಗೊತ್ತಾ?
ಕೆಂಪೇಗೌಡರ ಜಯಂತಿಯಲ್ಲಿ ಹಾಸನ ಡಿಸಿ ಕಣ್ಣೀರು, ಕಾರಣವೇನು ಗೊತ್ತಾ?
ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆಗೆ ಆರ್ ಅಶೋಕ ತಮ್ಮ ವ್ಯಾಖ್ಯಾನ ನೀಡಿದರು!
ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆಗೆ ಆರ್ ಅಶೋಕ ತಮ್ಮ ವ್ಯಾಖ್ಯಾನ ನೀಡಿದರು!
ದರ್ಶನ್ ಕಾಣಲು ಬಂದ ವಿಶೇಷ ಚೇತನ ಅಭಿಮಾನಿಯ ಮಾತು
ದರ್ಶನ್ ಕಾಣಲು ಬಂದ ವಿಶೇಷ ಚೇತನ ಅಭಿಮಾನಿಯ ಮಾತು
ಮಳೆಯಿಂದಾಗಿ ಯೂನಿಯನ್ ಬ್ಯಾಂಕ್ ಎಸಿಯೊಳಗೆ ಬಂದು ಅವಿತು ಕುಳಿತ ಮರಿ ಹೆಬ್ಬಾವು
ಮಳೆಯಿಂದಾಗಿ ಯೂನಿಯನ್ ಬ್ಯಾಂಕ್ ಎಸಿಯೊಳಗೆ ಬಂದು ಅವಿತು ಕುಳಿತ ಮರಿ ಹೆಬ್ಬಾವು