ಬಕ್ರೀದ್ ಹಬ್ಬವಿರುವ ಜೂನ್ 17, ಸೋಮವಾರದಂದು ಷೇರು ಮಾರುಕಟ್ಟೆಗೆ ರಜೆಯಾ? ಇಲ್ಲಿದೆ ಮಾರುಕಟ್ಟೆ ರಜಾದಿನಗಳ ಪಟ್ಟಿ

Stock Market holiday on Bakrid festival: ಬಕ್ರೀದ್ ಹಬ್ಬ ಇರುವ ಜೂನ್ 17, ಸೋಮವಾರದಂದು ಷೇರು ಮಾರುಕಟ್ಟೆಗೆ ರಜೆ ಇರುತ್ತದೆ. ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಮತ್ತು ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಎರಡರ ರಜಾದಿನಗಳ ಪಟ್ಟಿಯಲ್ಲಿ ಜೂನ್ 17 ಇದೆ. ಈ ತಿಂಗಳು ಶನಿವಾರ ಮತ್ತು ಭಾನುವಾರ ಬಿಟ್ಟರೆ ಬೇರೆ ದಿನ ರಜೆ ಇರುವುದು ಇದೊಂದೇ. ಜುಲೈ 17ರಂದು ಮೊಹರಂಗೆ ರಜೆ ಇರುತ್ತದೆ. ಸ್ವಾತಂತ್ರ್ಯ ದಿನೋತ್ಸವ, ಗಾಂಧಿ ಜಯಂತಿ, ದೀಪಾವಳಿ ಮೊದಲಾದ ಹಬ್ಬಗಳಿಗೂ ಮಾರುಕಟ್ಟೆ ಬಂದ್ ಆಗಿರುತ್ತದೆ.

ಬಕ್ರೀದ್ ಹಬ್ಬವಿರುವ ಜೂನ್ 17, ಸೋಮವಾರದಂದು ಷೇರು ಮಾರುಕಟ್ಟೆಗೆ ರಜೆಯಾ? ಇಲ್ಲಿದೆ ಮಾರುಕಟ್ಟೆ ರಜಾದಿನಗಳ ಪಟ್ಟಿ
ಷೇರು ಮಾರುಕಟ್ಟೆ
Follow us
|

Updated on: Jun 16, 2024 | 12:43 PM

ನವದೆಹಲಿ, ಜೂನ್ 16: ಭಾರತದಲ್ಲಿ ಷೇರು ಮಾರುಕಟ್ಟೆ (stock market) ದಿನೇದಿನೇ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ. ವರ್ಷದಿಂದ ವರ್ಷಕ್ಕೆ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಮತ್ತು ಹೂಡಿಕೆ ಪ್ರಮಾಣ ಹೆಚ್ಚುತ್ತಲೇ ಇದೆ. ವಿಶ್ವದ ಪ್ರಮುಖ ಷೇರು ಮಾರುಕಟ್ಟೆಗಳಲ್ಲಿ ಭಾರತದ್ದೂ ಒಂದಾಗಿದೆ. ಷೇರು ಮಾರುಕಟ್ಟೆ ವಾರದಲ್ಲಿ ಶನಿವಾರ ಮತ್ತು ಭಾನುವಾರ ಹೀಗೆ ಎರಡು ದಿನ ಬಂದ್ ಆಗಿರುತ್ತದೆ. ಇದರ ಜೊತೆಗೆ ಕೆಲ ಆಯ್ದ ಹಬ್ಬ ಹರಿದಿನಗಳಲ್ಲೂ ಮಾರುಕಟ್ಟೆ ಮುಚ್ಚಿರುತ್ತದೆ. ಆ ದಿನಗಳಲ್ಲಂದು ಮಾರುಕಟ್ಟೆಯಲ್ಲಿ ಟ್ರೇಡಿಂಗ್ ನಡೆಯುವುದಿಲ್ಲ. ಇದೇ ಸೋಮವಾರ ಜೂನ್ 17ರಂದು ಬಕ್ರೀದ್ ಹಬ್ಬ ಇದೆ. ಅಂದು ಮಾರುಕಟ್ಟೆಗೆ ರಜೆ ಇರುತ್ತದೆ. ಎನ್​ಎಸ್​ಇ ಮತ್ತು ಬಿಎಸ್​ಇ ಎರಡೂ ಎಕ್ಸ್​ಚೇಂಜ್​ಗಳಲ್ಲಿ ಬಕ್ರೀದ್ ಹಬ್ಬಕ್ಕೆ (Bakri Id) ರಜೆ ಇದೆ.

ಜನವರಿಯಲ್ಲಿ ರಿಪಬ್ಲಿಕ್ ಡೆ, ಮಾರ್ಚ್​ನಲ್ಲಿ ಶಿವರಾತ್ರಿ, ಹೋಳಿ ಮತ್ತು ಗುಡ್ ಫ್ರೈಡೆ, ಏಪ್ರಿಲ್​ನಲ್ಲಿ ಈದ್ ಉಲ್ ಫಿತರ್, ರಾಮನವಮಿ, ಹಾಗೂ ಮೇ ತಿಂಗಳಲ್ಲಿ ಮಹಾರಾಷ್ಟ್ರ ದಿನಗಳಲ್ಲಂದು ಷೇರು ಮಾರುಕಟ್ಟೆಗೆ ರಜೆ ಇತ್ತು. ಎರಡೂ ಷೇರು ವಿನಿಮಯ ಕೇಂದ್ರಗಳು ಮುಂಬೈನಲ್ಲಿ ಇದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಮುಂಬೈನಲ್ಲಿ ಮತದಾನ ನಡೆಯುವ ದಿನವೂ ರಜೆ ಕೊಡಲಾಗಿತ್ತು. ಜೂನ್​ನಿಂದ ಡಿಸೆಂಬರ್​ವರೆಗೆ ಷೇರು ಮಾರುಕಟ್ಟೆಗೆ ಯಾವ್ಯಾವ ದಿನ ರಜೆ ಇದೆ, ಪಟ್ಟಿ ಈ ಕೆಳಕಂಡಂತಿದೆ:

ಜೂನ್​ನಿಂದ ಡಿಸೆಂಬರ್​ವರೆಗೆ ಷೇರುಪೇಟೆಗೆ ರಜಾದಿನಗಳು

  • ಜೂನ್ 17: ಬಕ್ರೀದ್
  • ಜುಲೈ 17: ಮೊಹರಂ
  • ಆಗಸ್ಟ್ 15: ಸ್ವಾತಂತ್ರ್ಯೋತ್ಸವ
  • ಅಕ್ಟೋಬರ್ 2: ಗಾಂಧಿ ಜಯಂತಿ
  • ನವೆಂಬರ್ 1: ದೀಪಾವಳಿ
  • ನವೆಂಬರ್ 15: ಗುರುನಾನಕ್ ಜಯಂತಿ
  • ಡಿಸೆಂಬರ್ 25: ಕ್ರಿಸ್ಮಸ್

ಇವಲ್ಲದೇ ಅಂಬೇಡ್ಕರ್ ಜಯಂತಿ, ಮಹಾವೀರ್ ಜಯಂತಿ, ಗಣೇಶ ಹಬ್ಬ, ದಸರಾ ಹಬ್ಬ, ಬಲಿಪಾಡ್ಯಮಿ ಹಬ್ಬಗಳಂದು ಷೇರು ಮಾರುಕಟ್ಟೆಗೆ ರಜೆ ಇರುತ್ತದೆ. ಆದರೆ, ಈ ಹಬ್ಬಗಳು ಶನಿವಾರ ಮತ್ತು ಭಾನುವಾರಗಳಂದೇ ಈ ವರ್ಷ ಇವೆ. ಹೀಗಾಗಿ, ಹೆಚ್ಚುವರಿ ರಜೆ ಆಗಿರುವುದಿಲ್ಲ.

ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣ ಬಂದಿಲ್ಲವಾ? ಜೂನ್ 18ಕ್ಕೆ ಬಿಡುಗಡೆ ಆಗಲಿದೆ ಹಣ

ದೀಪಾವಳಿಯ ಧನಲಕ್ಷ್ಮೀ ಹಬ್ಬ ಇರುವ ನವೆಂಬರ್ 1, ಶುಕ್ರವಾರದಂದು ಷೇರು ಮಾರುಕಟ್ಟೆಗೆ ರಜೆ ಇದೆಯಾದರೂ ಅಂದು ಒಂದು ಗಂಟೆ ಮುಹೂರ್ತ ವ್ಯಾಪಾರ ನಡೆಯುತ್ತದೆ. ಹಣದ ಚಟುವಟಿಕೆ ಆದ್ದರಿಂದ ಧನಲಕ್ಷ್ಮೀ ಹಬ್ಬದ ದಿನದಂದು ವ್ಯಾಪಾರ ವಹಿವಾಟು ನಡೆಯುವುದು ಬಹಳ ಅದೃಷ್ಟ ತರುತ್ತದೆ ಎನ್ನುವ ನಂಬಿಕ ಮೊದಲಿಂದಲೂ ವ್ಯಾಪಾರಸ್ಥರಿಗೆ ಇದೆ. ಈ ಕಾರಣಕ್ಕೆ ಅಂದು ಮುಹೂರ್ತ ಟ್ರೇಡಿಂಗ್ ಇಟ್ಟುಕೊಂಡಿರುತ್ತಾರೆ.

ನವೆಂಬರ್ 1ರಂದು ಒಂದು ಗಂಟೆಯ ಅವಧಿಯವರೆಗೆ ಸ್ಪೆಷಲ್ ಟ್ರೇಡಿಂಗ್ ಸೆಷನ್ ಇರುತ್ತದೆ. ಆ ಬಳಿಕ ವಿನಿಮಯ ಕೇಂದ್ರಗಳು ಬಂದ್ ಆಗುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ