ಮುಂಬೈ: ಆಗಸ್ಟ್ 6, 2021ಕ್ಕೆ ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 889 ಮಿಲಿಯನ್ ಅಮೆರಿಕನ್ ಡಾಲರ್ನಷ್ಟು ಹೆಚ್ಚಳವಾಗಿ, ಸಾರ್ವಕಾಲಿಕ ಗರಿಷ್ಠ ಮಟ್ಟವಾದ 621.464 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ ಎಂದು ಆರ್‌ಬಿಐ ಅಂಕಿ-ಅಂಶಗಳಿಂದ ಶುಕ್ರವಾರ ತಿಳಿದುಬಂದಿದೆ. ಜುಲೈ 30, 2021ಕ್ಕೆ ಕೊನೆಗೊಂಡ ಈ ಹಿಂದಿನ ವಾರದಲ್ಲಿ, ಮೀಸಲು ಪ್ರಮಾಣ 9.427 ಬಿಲಿಯನ್ ಡಾಲರ್ಗಳಷ್ಟು ಏರಿಕೆಯಾಗಿ 620.576 ಬಿಲಿಯನ್ ಡಾಲರ್ ತಲುಪಿತ್ತು. ವರದಿ ಮಾಡುವ ವಾರದಲ್ಲಿ, ವಿದೇಶಿ ವಿನಿಮಯ ಹೆಚ್ಚಳಕ್ಕೆ ಕಾರಣವಾಗಿದ್ದು ಒಟ್ಟಾರೆ ಮೀಸಲುಗಳ ಪ್ರಮುಖ ಅಂಶವಾದ ವಿದೇಶಿ ಕರೆನ್ಸಿ ಸ್ವತ್ತುಗಳ ಏರಿಕೆ ಎಂದು ಆರ್ಬಿಐನ ಸಾಪ್ತಾಹಿಕ ದತ್ತಾಂಶಗಳು ತಿಳಿಸಿವೆ. ವಿದೇಶೀ ಕರೆನ್ಸಿ ಸ್ವತ್ತು (FCA) 1.508 ಬಿಲಿಯನ್ ಡಾಲರ್ ಹೆಚ್ಚಳವಾಗಿ, ವರದಿಯಾಗುವ ವಾರಕ್ಕೆ 577.732 ಬಿಲಿಯನ್ ಅಮೆರಿಕನ್ ಡಾಲರ್ ಮುಟ್ಟಿದೆ.
ಡಾಲರ್ ಮೌಲ್ಯದಲ್ಲಿ ಹೇಳುವುದಾದಾಗ, ವಿದೇಶೀ ಕರೆನ್ಸಿ ಆಸ್ತಿಗಳು ಅಂದರೆ ಅದರಲ್ಲಿ ಯುಎಸ್, ಅಂದರೆ ಅಮೆರಿಕಕ್ಕೆ ಹೊರತಾದ ಯುರೋ, ಪೌಂಡ್, ಯೆನ್ ಮತ್ತಿತರವುಗಳ ಏರಿ ಅಥವಾ ಇಳಿಕೆ ಕೂಡ ವಿದೇಶೀ ವಿನಿಮಯ ಮೀಸಲಿನಲ್ಲಿ ಒಳಗೊಂಡಿರುತ್ತದೆ. ಚಿನ್ನದ ಮೀಸಲು 588 ಮಿಲಿಯನ್ ಡಾಲರ್ನಷ್ಟು ಇಳಿಕೆಯಾಗಿ, 37.057 ಬಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು. ಇದು ವರದಿಯಾದ ವಾರದ ಅಂಕಿ- ಅಂಶ ಎಂದು ಆರ್‌ಬಿಐ ತಿಳಿಸಿದೆ. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಬಳಿಯ ಸ್ಪೆಷಲ್ ಡ್ರಾಯಿಂಗ್ ರೈಟ್ಸ್ (ಎಸ್ಡಿಆರ್) 1 ಮಿಲಿಯನ್ ಡಾಲರ್ ಇಳಿದು, 1.551 ಬಿಲಿಯನ್ ಡಾಲರ್ ತಲುಪಿದೆ.
ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯ ಬಳಿ ಇರುವ ಭಾರತದ ಮೀಸಲು ಪ್ರಮಾಣ ಕೂಡ 31 ಮಿಲಿಯನ್ ಅಮೆರಿಕನ್ ಡಾಲರ್ ಇಳಿದು, 5.125 ಬಿಲಿಯನ್ ಅಮೆರಿಕನ್ ಡಾಲರ್ ಮುಟ್ಟಿದೆ. ಎಂದು ಅಂಕಿ- ಅಂಶಗಳು ತಿಳಿಸುತ್ತಿವೆ. ಒಂದು ದೇಶದ ಬಳಿ ವಿದೇಶಿ ವಿನಿಮಯದ ಪ್ರಮಾಣ ಜಾಸ್ತಿ ಇದೆ ಅಂದರೆ ಇದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿನ ಹಣಕಾಸು ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಲು ಅನುಕೂಲ ಆಗುತ್ತದೆ. ಆಮದು ಮಾಡಿಕೊಳ್ಳುವುದಕ್ಕೆ ಸಾಲ ನೀಡಬಹುದು. ಬಾಹ್ಯ ಜವಾಬ್ದಾರಿಗಳನ್ನು ಪೂರೈಸುವ ನಿಟ್ಟಿನಲ್ಲಿ ಮಾರುಕಟ್ಟೆಯಲ್ಲಿ ವಿಶ್ವಾಸವನ್ನು ಹೆಚ್ಚು ಮಾಡುತ್ತದೆ. ದೇಶೀ ಕರೆನ್ಸಿಗೂ ಬಲ ನೀಡುವುದಕ್ಕೆ ಸಹಕಾರಿಯಾಗುತ್ತದೆ.
ಇದನ್ನೂ ಓದಿ: Repo Rate: ಆರ್‌ಬಿಐ ರೆಪೋ ದರ ಶೇ 4 ಹಾಗೂ ರಿವರ್ಸ್ ರೆಪೋ ದರ ಶೇ 3.35ರಲ್ಲಿ ಮುಂದುವರಿಕೆ