
ನವದೆಹಲಿ, ಜುಲೈ 6: ಭಾರತದ ಫಾರೀನ್ ಎಕ್ಸ್ಚೇಂಜ್ ರಿಸರ್ವ್ಸ್ (Forex Reserves) ಜೂನ್ 27ರಂದು ಅಂತ್ಯಗೊಂಡ ವಾರದಲ್ಲಿ 4.84 ಬಿಲಿಯನ್ ಡಾಲರ್ನಷ್ಟು ಏರಿದೆ. ಇದರೊಂದಿಗೆ ಭಾರತದ ಫಾರೆಕ್ಸ್ ನಿಧಿ 702.78 ಬಿಲಿಯನ್ ಡಾಲರ್ ಮುಟ್ಟಿದೆ. ಎರಡನೇ ಬಾರಿ ಭಾರತದ ಈ ಸಂಪತ್ತು 700 ಬಿಲಿಯನ್ ಡಾಲರ್ ಗಡಿ ದಾಟಿರುವುದು. ಇದು ಭಾರತದ ಎರಡನೇ ಅತಿದೊಡ್ಡ ಫಾರೆಕ್ಸ್ ರಿಸರ್ವ್ಸ್ ಮಟ್ಟ ಎನಿಸಿದೆ. 2024ರ ಸೆಪ್ಟೆಂಬರ್ನಲ್ಲಿ 704.89 ಬಿಲಿಯನ್ ಡಾಲರ್ನಷ್ಟು ಮಟ್ಟಕ್ಕೆ ಫಾರೆಕ್ಸ್ ರಿಸರ್ವ್ಸ್ ಏರಿತ್ತು. ಅದು ಸಾರ್ವಕಾಲಿಕ ಗರಿಷ್ಠ ಮಟ್ಟ ಎನಿಸಿದೆ.
ಜೂನ್ 27ರಂದು ಅಂತ್ಯಗೊಂಡ ವಾರದಲ್ಲಿ ಏರಿಕೆಯಾದ 4.84 ಬಿಲಿಯನ್ ಡಾಲರ್ ಸಂಪತ್ತಿನಲ್ಲಿ ವಿದೇಶೀ ಕರೆನ್ಸಿಗಳ ಪ್ರಮಾಣ ಬಹಳ ಹೆಚ್ಚು. ಚಿನ್ನದ ಸಂಗ್ರಹ ಕಡಿಮೆಗೊಂಡರೂ ಫಾರೀನ್ ಕರೆನ್ಸಿಗಳನ್ನು ಹೆಚ್ಚು ಖರೀದಿಸಿದ್ದರಿಂದ ಒಟ್ಟಾರೆ ಫಾರೆಕ್ಸ್ ನಿಧಿ ಮೇಲ್ಮುಖ ಕಂಡಿದೆ.
ಇದನ್ನೂ ಓದಿ: ಏಟಿಗೆ ಏಟು; ಭಾರತದ ಉತ್ಪನ್ನಗಳ ಮೇಲೆ ಸುಂಕ ಹಾಕುತ್ತಿರುವ ಅಮೆರಿಕಕ್ಕೆ ಪ್ರತಿಸುಂಕ ವಿಧಿಸಲು ಭಾರತ ನಿರ್ಧಾರ
ಆರ್ಬಿಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಫಾರೀನ್ ಕರೆನ್ಸಿ ಆಸ್ತಿಗಳ ಮೌಲ್ಯ 5.75 ಬಿಲಿಯನ್ ಡಾಲರ್ನಷ್ಟು ಏರಿದೆ. ಎಸ್ಡಿಆರ್ ಮತ್ತು ಐಎಂಎಫ್ ರಿಸರ್ವ್ ಪೊಸಿಶನ್ ಕೂಡ ಏರಿಕೆ ಕಂಡಿವೆ. ಗೋಲ್ಡ್ ರಿಸರ್ವ್ಸ್ ಮಾತ್ರ 1.23 ಬಿಲಿಯನ್ ಡಾಲರ್ನಷ್ಟು ಕಡಿಮೆಗೊಂಡಿದೆ.
ಒಟ್ಟಾರೆ ಫಾರೆಕ್ಸ್ ರಿಸರ್ವ್ಸ್: 702.78 ಬಿಲಿಯನ್ ಡಾಲರ್
ಇದನ್ನೂ ಓದಿ: ಷೇರುಮಾರುಕಟ್ಟೆಗೆ ಚಳ್ಳೆಹಣ್ಣು ತಿನ್ನಿಸಿ 36,500 ಕೋಟಿ ರೂ ಪಂಗನಾಮ ಹಾಕಿತಾ ಜೇನ್ ಸ್ಟ್ರೀಟ್; ಅದರ ಕುತಂತ್ರದ ಕಥೆ ಕೇಳಿ…
ಭಾರತದ ರೂಪಾಯಿ ಕರೆನ್ಸಿಯ ಏರಿಳಿತ ತೀವ್ರವಾಗಿದ್ದು ಕಂಪನದ ಸ್ಥಿತಿಯಲ್ಲಿದೆ. ಡಾಲರ್ ಎದುರು ರುಪಾಯಿ ಮೌಲ್ಯ ಉತ್ತಮವಾಗಿದ್ದಾಗ ಆರ್ಬಿಐ ವಿದೇಶೀ ಕರೆನ್ಸಿಗಳನ್ನು ಹೆಚ್ಚೆಚ್ಚು ಖರೀದಿಸುತ್ತದೆ. ರುಪಾಯಿ ಮೌಲ್ಯ ಕಡಿಮೆಗೊಂಡರೆ ಡಾಲರ್ ಕರೆನ್ಸಿಗಳನ್ನು ಮಾರಿ, ರುಪಾಯಿ ಮೌಲ್ಯ ಕುಸಿತ ತಡೆಯಲು ಪ್ರಯತ್ನಿಸುತ್ತದೆ. ಈಗ ಆರ್ಬಿಐ ಡಾಲರ್ ಕರೆನ್ಸಿಗಳನ್ನು ಮಾರುವ ಸಾಧ್ಯತೆ ಇರುವುದರಿಂದ ಫಾರೆಕ್ಸ್ ಸಂಪತ್ತು ತುಸು ಕರಗುವ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ