ನವದೆಹಲಿ: 20207ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದ್ದು, ಜರ್ಮನಿ (Germany) ಮತ್ತು ಜಪಾನ್ (Japan) ಅನ್ನು ಹಿಂದಿಕ್ಕಲಿದೆ. 2030ರ ವೇಳೆಗೆ ವಿಶ್ವದ ಮೂರನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿ (stock market) ಗುರುತಿಸಿಕೊಳ್ಳಲಿದೆ. ತಂತ್ರಜ್ಞಾನ ಮತ್ತು ಇಂಧನ ಕ್ಷೇತ್ರಗಳಲ್ಲಿನ ಹೂಡಿಕೆ ಮತ್ತು ಜಾಗತಿಕ ಟ್ರೆಂಡ್ಗಳು ಈ ಮುನ್ಸೂಚನೆ ನೀಡಿವೆ ಎಂದು ಜಾಗತಿಕ ಹೂಡಿಕೆ ಬ್ಯಾಂಕ್ ‘ಮಾರ್ಗನ್ ಸ್ಟ್ಯಾನ್ಲಿ (Morgan Stanley)’ ವರದಿ ತಿಳಿಸಿದೆ.
ಭಾರತವು ಈಗಾಗಲೇ ವಿಶ್ವದಲ್ಲೇ ಅತಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆಯಾಗಿದೆ. ಕಳೆದ ದಶಕದಲ್ಲಿ ಸರಾಸರಿ ಶೇಕಡಾ 5.5ರ ಒಟ್ಟು ದೇಶೀಯ ಉತ್ಪನ್ನ ಬೆಳವಣಿಗೆ (ಜಿಡಿಪಿ) ಸಾಧಿಸಿದೆ. ಡಿಜಿಟಲೀಕರಣ, ಇಂಧನ ಪರಿವರ್ತನೆಗಳು ದೇಶದ ಆರ್ಥಿಕ ಬೆಳವಣಿಗೆಯ ವೇಗವನ್ನು ವೃದ್ಧಿಸಿವೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: Meta Layoffs: ಮೆಟಾದಿಂದ 11,000 ಉದ್ಯೋಗಿಗಳ ವಜಾ; ಮಾರ್ಕ್ ಝುಕರ್ಬರ್ಗ್ ಘೋಷಣೆ
2027ರ ವೇಳೆಗೆ ಭಾರತವು ಜಪಾನ್ ಮತ್ತು ಜರ್ಮನಿಯನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗುವ ಭರವಸೆ ಇದೆ. ಈ ದಶಕದ ಅಂತ್ಯದಲ್ಲಿ ವಿಶ್ವದ ಮೂರನೇ ಅತಿದೊಡ್ಡ ಷೇರುಮಾರುಕಟ್ಟೆಯಾಗಿ ಹೊರಹೊಮ್ಮುವ ವಿಶ್ವಾಸವಿದೆ. ಭಾರತವು ಜಾಗತಿಕ ಮಟ್ಟದಲ್ಲಿ ಸತತವಾಗಿ ಬೆಳವಣಿಗೆ ಹೊಂದುತ್ತಲೇ ಇದೆ ಎಂದು ‘ಮಾರ್ಗನ್ ಸ್ಟ್ಯಾನ್ಲಿ’ ಭಾರತ ವಿಭಾಗದ ಚೀಫ್ ಈಕ್ವಿಟಿ ಸ್ಟ್ರಾಟಜಿಸ್ಟ್ ರಿಧಂ ದೇಸಾಯಿ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಜಿಡಿಪಿ ಬೆಳವಣಿಗೆಯು ಸದ್ಯ 3.5 ಟ್ರಿಲಿಯನ್ ಡಾಲರ್ನಷ್ಟಿದ್ದು 2031ರ ವೇಳೆಗೆ ಇದು 7.5 ಟ್ರಿಲಿಯನ್ ಡಾಲರ್ ತಲುಪಲಿದೆ. ಈ ಅವಧಿಯಲ್ಲಿ ಜಾಗತಿಕ ರಫ್ತು ವಹಿವಾಟು ಕೂಡ ದ್ವಿಗುಣಗೊಳ್ಳಲಿದೆ. ಬಿಎಸ್ಇ ವಾರ್ಷಿಕ ಶೇಕಡಾ 11ರ ಬೆಳವಣಿಗೆ ಕಾಣುತ್ತಿದ್ದು, ಮುಂದಿನ ದಶಕದ ವೇಳೆಗೆ 10 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಬಂಡವಾಳ ಹೊಂದಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ