Mutual Funds: ಉತ್ತಮ ರಿಟರ್ನ್ಸ್ ತಂದುಕೊಡುತ್ತಿರುವ ಮಿಡ್​ಕ್ಯಾಪ್ ಮ್ಯೂಚುವಲ್ ಫಂಡ್​ಗಳಿವು

ಭಾರತೀಯ ಮ್ಯೂಚುವಲ್ ಫಂಡ್ಸ್ ಅಸೋಸಿಯೇಷನ್ (AMFI) ವೆಬ್​ಸೈಟ್​ನಲ್ಲಿ ಲಭ್ಯವಿರುವ (2022ರ ನವೆಂಬರ್ 7ರಂದು) ದತ್ತಾಂಶಗಳ ಪ್ರಕಾರ ಆರಂಭದಿಂದಲೂ ಉತ್ತಮ ರಿಟರ್ನ್ಸ್ ಗಳಿಸುತ್ತಿರುವ ಕೆಲವು ಮಿಡ್​ಕ್ಯಾಪ್ ಮ್ಯೂಚುವಲ್ ಫಂಡ್​ ಕಂಪನಿಗಳ ಮಾಹಿತಿ ಇಲ್ಲಿ ನೀಡಲಾಗಿದೆ.

Mutual Funds: ಉತ್ತಮ ರಿಟರ್ನ್ಸ್ ತಂದುಕೊಡುತ್ತಿರುವ ಮಿಡ್​ಕ್ಯಾಪ್ ಮ್ಯೂಚುವಲ್ ಫಂಡ್​ಗಳಿವು
ಮ್ಯೂಚುವಲ್ ಫಂಡ್ ಹೂಡಿಕೆ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Ganapathi Sharma

Updated on: Nov 09, 2022 | 3:23 PM

ಹೆಚ್ಚು ರಿಟರ್ನ್ಸ್ ಬಯಸಿ ಮ್ಯೂಚುವಲ್ ಫಂಡ್​ಗಳಲ್ಲಿ (Mutual Funds) ಹೂಡಿಕೆ ಮಾಡುತ್ತಿರುವವರಿಗೆ ಮಿಡ್​ಕ್ಯಾಪ್ ಮ್ಯೂಚುವಲ್ ಫಂಡ್​ಗಳು (Mid Cap Mutual Funds) ಕಳೆದ ಕೆಲವು ವರ್ಷಗಳಿಂದ ಮಹತ್ವದ್ದಾಗಿ ಪರಿಗಣಿಸಿವೆ. ಕಳೆದ ಮೂರು ವರ್ಷಗಳಲ್ಲಿ ಈ ಮಾದರಿಯ ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆ ಮಾಡಿ ಶೇಕಡಾ 20ರ ವರೆಗೂ ಆದಾಯ ಗಳಿಸಿದವರಿದ್ದಾರೆ. ತಜ್ಞರ ಪ್ರಕಾರ, ಲಾರ್ಜ್ ಕ್ಯಾಪ್ ಕಂಪನಿಗಳಿಗಿಂತಲೂ ಮಿಡ್​ಕ್ಯಾಪ್​ಗಳಿಗೆ ಉತ್ತಮ ಸಾಮರ್ಥ್ಯವಿದೆ. ಉತ್ತಮ ರಿಟರ್ನ್ಸ್​ಗಾಇ ಮಿಡ್​ಕ್ಯಾಪ್ ಫಂಡ್​ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ಎಂಬುದು ತಜ್ಞರ ಅಭಿಪ್ರಾಯ. ಭಾರತೀಯ ಮ್ಯೂಚುವಲ್ ಫಂಡ್ಸ್ ಅಸೋಸಿಯೇಷನ್ (AMFI) ವೆಬ್​ಸೈಟ್​ನಲ್ಲಿ ಲಭ್ಯವಿರುವ (2022ರ ನವೆಂಬರ್ 7ರಂದು) ದತ್ತಾಂಶಗಳ ಪ್ರಕಾರ ಆರಂಭದಿಂದಲೂ ಉತ್ತಮ ರಿಟರ್ನ್ಸ್ ಗಳಿಸುತ್ತಿರುವ ಕೆಲವು ಮಿಡ್​ಕ್ಯಾಪ್ ಮ್ಯೂಚುವಲ್ ಫಂಡ್​ ಕಂಪನಿಗಳ ಮಾಹಿತಿ ಇಲ್ಲಿ ನೀಡಲಾಗಿದೆ.

ಯೂನಿಯನ್ ಮಿಡ್​ಕ್ಯಾಪ್ ಫಂಡ್

2020ರ ಮಾರ್ಚ್​ನಲ್ಲಿ ಆರಂಭಗೊಂಡ ಬಳಿಕ ಯೂನಿಯನ್ ಮಿಡ್​ಕ್ಯಾಪ್ ಫಂಡ್​ನಲ್ಲಿ ಡೈರೆಕ್ಟ್ ಪ್ಲಾನ್ ಆಯ್ಕೆ ಮಾಡಿದವರಿಗೆ ಶೇಕಡಾ 52.12ರ ರಿಟರ್ನ್ಸ್ ದೊರೆತಿದೆ. ರೆಗ್ಯುಲರ್ ಪ್ಲಾನ್ ಆಯ್ಕೆ ಮಾಡಿದವರಿಗೆ ಶೇಕಡಾ 50.18ರ ರಿಟರ್ನ್ಸ್ ದೊರೆತಿದೆ. ಈ ಮ್ಯೂಚುವಲ್ ಫಂಡ್ ಬಿಎಸ್​ಇ 150 ಮಿಡ್​ಕ್ಯಾಪ್ ಟೋಟಲ್ ರಿಟರ್ನ್ಸ್ ಇಂಡೆಕ್ಸ್ ಅಡಿ ಕಾರ್ಯನಿರ್ವಹಿಸುತ್ತಿದೆ.

ಇದನ್ನೂ ಓದಿ
Image
ಆರೋಗ್ಯ ವಿಮೆ ಪೋರ್ಟ್ ಮಾಡುವುದು ಹೇಗೆ, ಪ್ರಯೋಜನವೇನು? ಇಲ್ಲಿದೆ ವಿವರ
Image
ನಿಮ್ಮ ಪಿಎಫ್​ ಖಾತೆಗೂ ಬಂತೇ ಇಪಿಎಫ್​ ಬಡ್ಡಿ ಹಣ, ಪರಿಶೀಲಿಸುವುದು ಹೇಗೆ? ಇಲ್ಲಿದೆ ನೋಡಿ
Image
Stock Market: ಷೇರುಪೇಟೆ ವಹಿವಾಟಿಗೆ ಇಂದು ಬಿಡುವು; ಕಾರಣವೇನು?
Image
Petrol Price on November 8: ಬಳ್ಳಾರಿಯಲ್ಲಿ ಪೆಟ್ರೋಲ್ ಬೆಲೆ 1 ರೂ. ಕುಸಿತ; ಬೆಂಗಳೂರು ಸೇರಿ ಪ್ರಮುಖ ನಗರಗಳ ಇಂದಿನ ಡೀಸೆಲ್ ದರ ಹೀಗಿದೆ

ಮೀರಾ ಅಸೆಟ್ ಮಿಡ್‌ಕ್ಯಾಪ್ ಫಂಡ್

ಮೀರಾ ಅಸೆಟ್ ಮಿಡ್‌ಕ್ಯಾಪ್ ಫಂಡ್ ಆರಂಭವಾದಂದಿನಿದ ಡೈರೆಕ್ಟ್ ಪ್ಲಾನ್ ಅಡಿ ಹೂಡಿಕೆ ಮಾಡಿದವರಿಗೆ ಶೇಕಡಾ 28.96ರ ರಿಟರ್ನ್ಸ್ ಗಳಿಸಿಕೊಟ್ಟಿದೆ. ರೆಗ್ಯುಲರ್ ಪ್ಲಾನ್ ಅಡಿ ಶೇಕಡಾ 23.86ರ ರಿಟರ್ನ್ಸ್ ಗಳಿಸಿಕೊಟ್ಟಿದೆ. ಈ ಫಂಡ್ ನಿಫ್ಟಿ ಮಿಡ್​ಕ್ಯಾಪ್ ಟೋಟಲ್ 150 ರಿಟರ್ನ್ಸ್ ಇಂಡೆಕ್ಸ್ ಅಡಿ ಕಾರ್ಯನಿರ್ವಹಿಸುತ್ತಿದೆ.

ಸುಂದರಂ ಮಿಡ್​ಕ್ಯಾಪ್ ಫಂಡ್

ಸುಂದರಂ ಮಿಡ್​ಕ್ಯಾಪ್ ಫಂಡ್​ನ ಡೈರೆಕ್ಟ್ ಪ್ಲಾನ್ ಆರಂಭವಾದ ಬಳಿಕ ಈವರೆಗೆ ಶೇಕಡಾ 16.93ರ ರಿಟರ್ನ್ಸ್ ಗಳಿಸಿದೆ. ರೆಗ್ಯುಲರ್ ಪ್ಲಾನ್ ಈವರೆಗೆ ಶೇಕಡಾ 50.18 ರಿಟರ್ನ್ಸ್ ಗಳಿಸಿದೆ. ಈ ಫಂಡ್ ನಿಫ್ಟಿ ಮಿಡ್​ಕ್ಯಾಪ್ 150 ಟೋಟಲ್ ರಿಟರ್ನ್ಸ್ ಇಂಡೆಕ್ಸ್ ಅಡಿ ಕಾರ್ಯನಿರ್ವಹಿಸುತ್ತಿದೆ.

ಮೋತಿಲಾಲ್ ಒಸ್ವಾಲ್ ಮಿಡ್​ಕ್ಯಾಪ್ ಫಂಡ್

ಮೋತಿಲಾಲ್ ಒಸ್ವಾಲ್ ಮಿಡ್​ಕ್ಯಾಪ್ ಫಂಡ್​ನ ಡೈರೆಕ್ಟ್ ಪ್ಲಾನ್ ಈವರೆಗೆ ಶೇಕಡಾ 22.64ರ ಗಳಿಕೆ ದಾಖಲಿಸಿದೆ. ರೆಗ್ಯುಲರ್ ಪ್ಲಾನ್ ಕೂಡ ಶೇಕಡಾ 21.14ರ ರಿಟರ್ನ್ಸ್ ಗಳಿಸಿದೆ. ಈ ಫಂಡ್ ಸಹ ನಿಫ್ಟಿ ಮಿಡ್​ಕ್ಯಾಪ್ 150 ಟೋಟಲ್ ರಿಟರ್ನ್ಸ್ ಇಂಡೆಕ್ಸ್ ಅಡಿ ಕಾರ್ಯನಿರ್ವಹಿಸುತ್ತಿದೆ.

ಕೋಟಕ್ ಎಮರ್ಜಿಂಗ್ ಈಕ್ವಿಟಿ ಫಂಡ್

ಕೋಟಕ್ ಎಮರ್ಜಿಂಗ್ ಈಕ್ವಿಟಿ ಫಂಡ್​ನ ಡೈರೆಕ್ಟ್ ಪ್ಲಾನ್ ಈವರೆಗೆ ಶೇಕಡಾ 20.37ರ ಗಳಿಕೆ ದಾಖಲಿಸಿದೆ. ರೆಗ್ಯುಲರ್ ಪ್ಲಾನ್ ಶೇಕಡಾ 14.02ರ ಗಳಿಕೆ ದಾಖಲಿಸಿದೆ. ಇದೂ ಕೂಡ ನಿಫ್ಟಿ ಮಿಡ್​ಕ್ಯಾಪ್ 150 ಟೋಟಲ್ ರಿಟರ್ನ್ಸ್ ಇಂಡೆಕ್ಸ್ ಅಡಿ ಕಾರ್ಯನಿರ್ವಹಿಸುತ್ತಿದೆ.

ಎಚ್​​ಡಿಎಫ್​ಸಿ ಮಿಡ್​-ಕ್ಯಾಪ್ ಅಪಾರ್ಚುನಿಟೀಸ್ ಫಂಡ್

ಎಚ್​​ಡಿಎಫ್​ಸಿ ಮಿಡ್​-ಕ್ಯಾಪ್ ಅಪಾರ್ಚುನಿಟೀಸ್ ಫಂಡ್ ಡೈರೆಕ್ಟ್ ಪ್ಲಾನ್ ಈವರೆಗೆ ಶೇಕಡಾ 19.83ರ ರಿಟರ್ನ್ಸ್ ಗಳಿಸಿದೆ. ರೆಗ್ಯುಲರ್ ಪ್ಲಾನ್ ಅಡಿ ಶೇಕಡಾ 16.40 ರಿಟರ್ನ್ಸ್ ಗಳಿಸಿದೆ. ನಿಫ್ಟಿ ಮಿಡ್​ಕ್ಯಾಪ್ 150 ಟೋಟಲ್ ರಿಟರ್ನ್ಸ್ ಇಂಡೆಕ್ಸ್ ಅಡಿ ಇದು ಕಾರ್ಯನಿರ್ವಹಿಸುತ್ತಿದೆ.

ಆಕ್ಸಿಸ್ ಮಿಡ್​ಕ್ಯಾಪ್

ಆಕ್ಸಿಸ್ ಮಿಡ್​ಕ್ಯಾಪ್ ಫಂಡ್ ಡೈರೆಕ್ಟ್ ಪ್ಲಾನ್ ಈವರೆಗೆ ಶೇಕಡಾ 19.25ರ ರಿಟರ್ನ್ಸ್ ದಾಖಲಿಸಿದ್ದರೆ, ರೆಗ್ಯುಲರ್ ಪ್ಲಾನ್ ಶೇಕಡಾ 17.92ರ ರಿಟರ್ನ್ಸ್ ದಾಖಲಿಸಿದೆ. ಈ ಫಂಡ್ ಎಸ್​&ಪಿ ಬಿಎಸ್​ಇ 150 ಮಿಡ್​ಕ್ಯಾಪ್ ಟೋಟಲ್ ರಿಟರ್ನ್ಸ್ ಇಂಡೆಕ್ಸ್ ಅಡಿ ಕಾರ್ಯನಿರ್ವಹಿಸುತ್ತಿದೆ.

ಟಾಟಾ ಮಿಡ್​ಕ್ಯಾಪ್ ಗ್ರೋಥ್ ಫಂಡ್

ಟಾಟಾ ಮಿಡ್​ಕ್ಯಾಪ್ ಗ್ರೋಥ್ ಫಂಡ್​ನ ಡೈರೆಕ್ಟ್ ಪ್ಲಾನ್ ಈವರೆಗೆ ಶೇಕಡಾ 19.13 ಗಳಿಕೆ ದಾಖಲಿಸಿದ್ದು, ರೆಗ್ಯುಲರ್ ಪ್ಲಾನ್ ಶೇಕಡಾ 12.53ರ ಗಳಿಗೆ ದಾಖಲಿಸಿದೆ. ನಿಫ್ಟಿ ಮಿಡ್​ಕ್ಯಾಪ್ 150 ಟೋಟಲ್ ರಿಟರ್ನ್ಸ್ ಇಂಡೆಕ್ಸ್ ಅಡಿ ಇದು ಕಾರ್ಯನಿರ್ವಹಿಸುತ್ತಿದೆ.

****

(ಭಾರತೀಯ ಮ್ಯೂಚುವಲ್ ಫಂಡ್ಸ್ ಅಸೋಸಿಯೇಷನ್ ಅಥವಾ ಎಎಂಎಫ್​ಐ ವೆಬ್​ಸೈಟ್​ನಲ್ಲಿ 2022ರ ನವೆಂಬರ್​ 7 ಪ್ರಕಟವಾದ ದತ್ತಾಂಶಗಳ ಆಧಾರದಲ್ಲಿ ಈ ಮಾಹಿತಿ ನೀಡಲಾಗಿದೆ. ಮ್ಯೂಚುವಲ್ ಫಂಡ್ ಹೂಡಿಕೆ ಮಾರುಕಟ್ಟೆ ರಿಸ್ಕ್​​ಗಳಿಗೆ ಕಾರಣವಾಗುವುದರಿಂದ ಹೂಡಿಕೆ ಮಾಡುವ ಮೊದಲು ನಿಮ್ಮ ಹಣಕಾಸು ಸಲಹೆಗಾರರ ಅಭಿಪ್ರಾಯ ಕೇಳಿಕೊಳ್ಳುವುದು ಉತ್ತಮ)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್