ನವದೆಹಲಿ, ಮಾರ್ಚ್ 21: ಯಾವುದೇ ಉದ್ಯಮದ ಬೆಳವಣಿಗೆಗೆ ಸಂಶೋಧನೆ ಮತ್ತು ಅಭಿವೃದ್ಧಿ ಬಹಳ ಮುಖ್ಯ. ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಂಶೋಧನೆಗೆ ಒತ್ತು ಕೊಡುವುದು ಹೆಚ್ಚಾಗುತ್ತಿದೆ. ಇದಕ್ಕೆ ಸಾಕ್ಷಿಯಾಗಿ, ಚಿಪ್ ಡಿಸೈನ್ ಮತ್ತು ಫ್ಯಾಬ್ರಿಕೇಶನ್ (Chip Design and Fabrication) ತಂತ್ರಜ್ಞಾನದಲ್ಲಿ ಅತಿ ಹೆಚ್ಚು ರಿಸರ್ಚ್ ಪೇಪರ್ ಸಲ್ಲಿಸಿದ ದೇಶಗಳ ಸಾಲಿನಲ್ಲಿ ಭಾರತ ಇದೆ. 2018ರಿಂದ 2023ರ ಅವಧಿಯಲ್ಲಿ ಚಿಪ್ ಡಿಸೈನ್ ಮತ್ತು ಫ್ಯಾಬ್ರಿಕೇಶನ್ ವಿಷಯದಲ್ಲಿ ಭಾರತೀಯ ಸಂಶೋಧಕರು ಬರೋಬ್ಬರಿ 39,709 ರಿಸರ್ಚ್ ಪೇಪರ್ಸ್ (Research papers) ಸಲ್ಲಿಸಿದ್ದಾರೆ. ಈ ವಿಷಯದಲ್ಲಿ ಜಾಗತಿಕವಾಗಿ ಸಲ್ಲಿಕೆಯಾದ ಪೇಪರ್ ಗಳಲ್ಲಿ ಭಾರತೀಯರ ಪಾಲು ಶೇ. 8.4ರಷ್ಟಿದೆ. ಚೀನಾ ಮತ್ತು ಅಮೆರಿಕನ್ನರನ್ನು ಬಿಟ್ಟರೆ ಅತಿಹೆಚ್ಚು ರಿಸರ್ಚ್ ಪೇಪರ್ಸ್ ಸಲ್ಲಿಸಿರುವುದು ಭಾರತೀಯರೇ. ಸಂಶೋಧನೆಗೆ ಹೆಸರುವಾಸಿಯಾದ ಜಪಾನ್, ಸೌತ್ ಕೊರಿಯಾ ಮತ್ತು ಜರ್ಮನಿ ಯಂತಹ ದೇಶಗಳ ರಿಸರ್ಚರ್ಸ್ಗಳಿಗಿಂತಲೂ ಹೆಚ್ಚು ಪ್ರಬಂಧಗಳನ್ನು ಭಾರತೀಯರು ಮಂಡಿಸಿರುವುದು ಗಮನಾರ್ಹ.
ಮೇಲೆ ತಿಳಿಸಿದ 2018ರಿಂದ 2023ರವರೆಗಿನ ಐದು ವರ್ಷದ ಅವಧಿಯಲ್ಲಿ ಚಿಪ್ ಡಿಸೈನ್ ಮತ್ತು ಫ್ಯಾಬ್ರಿಕೇಶನ್ ವಿಷಯದಲ್ಲಿ ಚೀನೀಯರು ಒಟ್ಟಾರೆ 1,60,852 ರಿಸರ್ಚ್ ಪೇಪರ್ಗಳನ್ನು ಸಲ್ಲಿಸಿದ್ದಾರೆ. ನಂತರದ ಸ್ಥಾನ ಅಮೆರಿಕನ್ನರದ್ದು. ಭಾರತೀಯರು ಮೂರನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಬೆಂಜ್ ಹಾದಿ ತುಳಿದ ಟೊಯೋಟಾ; ಬೆಂಗಳೂರಿನಲ್ಲಿ ಅದರ ಮೊದಲ ಆರ್ ಅಂಡ್ ಡಿ ಸೆಂಟರ್
ಸರ್ಕಾರ ಸೆಮಿಕಂಡಕ್ಟರ್ ರಿಸರ್ಚ್ ಮತ್ತು ಅಭಿವೃದ್ಧಿಗೆ 2,000 ಕೋಟಿ ರೂ ಹೂಡಿಕೆ ಸೇರಿದಂತೆ ಬಹಳಷ್ಟು ಬೆಂಬಲ ನೀಡುತ್ತಿದೆ. ಈ ಕಾರಣಕ್ಕೆ ರಿಸರ್ಚ್ ಪೇಪರ್ಸ್ ಸಲ್ಲಿಕೆ ಹೆಚ್ಚುತ್ತಿರಬಹುದು. ಇದು ಸಕಾರಾತ್ಮಕ ಬೆಳವಣಿಗೆಯಾದರೂ ಕೆಲ ಸಮಸ್ಯೆಗಳು, ಹಿನ್ನಡೆಗಳೂ ಇವೆ. ಈ ರಿಸರ್ಚ್ ಪೇಪರ್ಗಳನ್ನು ಉಲ್ಲೇಖಿಸುವ ಅಥವಾ ರೆಫರ್ ಮಾಡುವ ಪ್ರಮಾಣ ಕಡಿಮೆ ಇದೆ. ಹಾಗೆಯೇ, ಅಧಿಕ ಪರವಾನಿಗೆ ವೆಚ್ಚದ ಕಾರಣದಿಂದ ಅತ್ಯಾಧುನಿಕ ಡಿಸೈನ್ ಸಾಫ್ಟ್‌ವೇರ್ ಪಡೆಯುವುದು ಕಷ್ಟವಾಗಿದೆ.
ಭಾರತವು ಚಿಪ್ ಡಿಸೈನ್ನ ಬ್ಯಾಕೆಂಡ್ ಕಾರ್ಯ ಗಳಲ್ಲಿ ಪರಿಣಿತಿ ಹೊಂದಿದೆ. ಆದರೆ, ಪ್ರಾಡಕ್ಟ್ ಲೆವೆಲ್ನ ಡಿಸೈನ್ ಸಾಮರ್ಥ್ಯ ಮತ್ತು ಸ್ವತಂತ್ರವಾಗಿ ಸಾಫ್ಟ್‌ವೇರ್ ಸಲ್ಯೂಶನ್ಸ್ ನಿರ್ಮಿಸುವ ಸಾಮರ್ಥ್ಯ ಬೆಳೆಯಬೇಕಿದೆ. ಇದೂ ಒಂದು ಸವಾಲು.
ಇದನ್ನೂ ಓದಿ: ನೂರು ಕೋಟಿ ಟನ್ ಮೈಲಿಗಲ್ಲು ಮುಟ್ಟಿದ ಕಲ್ಲಿದ್ದಲು ಉತ್ಪಾದನೆ; ಚೀನಾ ನಂತರ ಭಾರತದಲ್ಲೇ ಹೆಚ್ಚು
ಜಾಗತಿಕವಾಗಿ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿರುವ ಉದ್ಯೋಗಿಗಳಲ್ಲಿ ಶೇ. 19ರಷ್ಟು ಮಂದಿ ಭಾರತೀಯರೇ ಇದ್ದಾರಂತೆ. ಆ ಮಟ್ಟಿಗೆ ಭಾರತದಲ್ಲಿ ಪ್ರತಿಭೆಗಳ ಸಮೂಹ ಇದೆ. ಆದರೆ, ಅವಶ್ಯಕ ಕೌಶಲ್ಯಗಳಿರುವ ಉದ್ಯೋಗಿಗಳ ಕೊರತೆ 2027-28ರ ವರ್ಷಕ್ಕೆ 80 ಲಕ್ಷದಷ್ಟಿರಬಹುದು ಎನ್ನುವ ಅಂದಾಜಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ