Sign In

By signing in or creating an account, you agree with Associated Broadcasting Company's Terms & Conditions and Privacy Policy.

GDP Growth: ಏಪ್ರಿಲ್-ಜೂನ್ ಅವಧಿಯಲ್ಲಿ ಜಿಡಿಪಿ ಶೇ 13.5ರಷ್ಟು ವೃದ್ಧಿ, ಕೃಷಿ ಕ್ಷೇತ್ರದಲ್ಲಿ ಶೇ 4.5ರ ಪ್ರಗತಿ

ಭಾರತದ ಆರ್ಥಿಕತೆಯ ಮೂಲಾಂಶಗಳು ಸದೃಢವಾಗಿರುವುದರಿಂದ ಈ ಬಾರಿಯ ಜಿಡಿಪಿ ಪ್ರಗತಿ ಎರಡಂಕಿ ದಾಖಲಾಗಬಹುದು ಎಂದು ಮೊದಲೇ ಹಲವು ಸಂಸ್ಥೆಗಳು ವಿಶ್ಲೇಷಿಸಿದ್ದವು.

GDP Growth: ಏಪ್ರಿಲ್-ಜೂನ್ ಅವಧಿಯಲ್ಲಿ ಜಿಡಿಪಿ ಶೇ 13.5ರಷ್ಟು ವೃದ್ಧಿ, ಕೃಷಿ ಕ್ಷೇತ್ರದಲ್ಲಿ ಶೇ 4.5ರ ಪ್ರಗತಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 31, 2022 | 6:51 PM

ದೆಹಲಿ: ಭಾರತದ ಆರ್ಥಿಕತೆಯು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (First Quarter) ಶೇ 13.5ರ ಪ್ರಗತಿ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಅಂದರೆ ಏಪ್ರಿಲ್-ಜೂನ್ 2021ರಲ್ಲಿ ಭಾರತದ ಜಿಡಿಪಿ ಶೇ 20.1ರಷ್ಟು ಪ್ರಗತಿ ಸಾಧಿಸಿತ್ತು ಎಂದು ರಾಷ್ಟ್ರೀಯ ಅಂಕಿಅಂಶಗಳ ಕಚೇರಿ (National Statistical Office – NSO) ಬುಧವಾರ ತಿಳಿಸಿದೆ. ಭಾರತದ ಆರ್ಥಿಕತೆಯ ಮೂಲಾಂಶಗಳು ಸದೃಢವಾಗಿರುವುದರಿಂದ ಈ ಬಾರಿಯ ಜಿಡಿಪಿ ಪ್ರಗತಿ ಎರಡಂಕಿ ದಾಖಲಾಗಬಹುದು ಎಂದು ಮೊದಲೇ ಹಲವು ಸಂಸ್ಥೆಗಳು ವಿಶ್ಲೇಷಿಸಿದ್ದವು.

2022ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತವು ಶೇ 13ರ ಪ್ರಗತಿ ದಾಖಲಿಸಬಹುದು ಎಂದು ಇಕ್ರಾ (ICRA) ವಿಶ್ಲೇಷಿಸಿತ್ತು. ಭಾರತೀಯ ಸ್ಟೇಟ್​ ಬ್ಯಾಂಕ್​ನ (State Bank of India – SBI) ಅರ್ಥಶಾಸ್ತ್ರಜ್ಞರು ಜಿಡಿಪಿ ಪ್ರಗತಿಯು ಶೇ 15.7 ಇರಬಹುದು ಎಂದು ಅಂದಾಜಿಸಿದ್ದರು. ಇದೇ ತಿಂಗಳ ಆರಂಭದಲ್ಲಿ ಹಣಕಾಸು ಮಾರ್ಗದರ್ಶಿ ಸಮಿತಿ ಸಭೆ (Monetary Policy Committee – MPC) ನಡೆಸಿದ್ದ ಭಾರತೀಯ ರಿಸರ್ವ್​ ಬ್ಯಾಂಕ್ (Reserve Bank of India – RBI) ಮೊದಲ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಪ್ರಗತಿಯು ಶೇ 16.2 ಇರಬಹುದು ಎಂದು ಅಂದಾಜಿಸಿತ್ತು. ಇದೇ ಅವಧಿಯಲ್ಲಿ ಚೀನಾದ ಶೇ 0.4ರ ಜಿಡಿಪಿ ಪ್ರಗತಿ ದಾಖಲಿಸಿದೆ.

Published On - 6:51 pm, Wed, 31 August 22