India Forex: ಭಾರತದ ವಿದೇಶ ವಿನಿಮಯ ಮೀಸಲು ನಿಧಿಯಲ್ಲಿ ಭರ್ಜರಿ ಏರಿಕೆ; ಟಾಪ್4 ರಾಷ್ಟ್ರದಲ್ಲಿ ಭಾರತ

Big Increase In Forex In India: ಜುಲೈ 14ರಂದು ಅಂತ್ಯಗೊಂಡ ವಾರದಲ್ಲಿ ಭಾರತದ ವಿದೇಶ ವಿನಿಮಯ ಮೀಸಲು ನಿಧಿ 12.743 ಬಿಲಿಯನ್ ಡಾಲರ್​ನಷ್ಟು ಏರಿ 609.022 ಬಿಲಿಯನ್ ಡಾಲರ್ ತಲುಪಿದೆ. ವಿಶ್ವದಲ್ಲಿ ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಇರುವ ದೇಶಗಳ ಪೈಕಿ ಭಾರತ 4ನೇ ಸ್ಥಾನದಲ್ಲಿದೆ.

India Forex: ಭಾರತದ ವಿದೇಶ ವಿನಿಮಯ ಮೀಸಲು ನಿಧಿಯಲ್ಲಿ ಭರ್ಜರಿ ಏರಿಕೆ; ಟಾಪ್4 ರಾಷ್ಟ್ರದಲ್ಲಿ ಭಾರತ
ಫಾರೆಕ್ಸ್ ಮೀಸಲು ನಿಧಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 23, 2023 | 11:15 AM

ನವದೆಹಲಿ, ಜುಲೈ 23: ಭಾರತದ ವಿದೇಶ ವಿನಿಮಯ ಮೀಸಲು ನಿಧಿ (Forex Reserves) ಜುಲೈ 14ರಂದು ಅಂತ್ಯಗೊಂಡ ವಾರದಲ್ಲಿ 12.743 ಬಿಲಿಯನ್ ಡಾಲರ್​ನಷ್ಟು ಏರಿದೆ. ಇದರೊಂದಿಗೆ ಭಾರತದ ಫಾರೆಕ್ಸ್ ರಿಸರ್ವ್ಸ್ ನಿಧಿ ಮೊತ್ತ ಮತ್ತೊಮ್ಮೆ 600 ಬಿಲಿಯನ್ ಡಾಲರ್ ಗಡಿ ದಾಟಿದೆ. ಭಾರತದ ಆರ್ಥಿಕ ಚಟುವಟಿಕೆಗೆ ಅಗತ್ಯವಾಗಿರುವ ಫಾರೆಕ್ಸ್ ರಿಸರ್ವ್ಸ್ ಈಗ 609.022 ಬಿಲಿಯನ್ ಡಾಲರ್ ತಲುಪಿದೆ. ಅಂದರೆ ಸುಮಾರು 49.9 ಲಕ್ಷಕೋಟಿ ರೂಪಾಯಿಯಷ್ಟು ನಿಧಿ ಫಾರೆಕ್ಸ್ ಮೀಸಲಿನಲ್ಲಿದೆ.

ಕಳೆದ ಮೂರು ವಾರಗಳಿಂದ ಆರ್​ಬಿಐ ಬಹಳ ಸಮತೋಲಿತ ನಿರ್ಧಾರಗಳನ್ನು ಕೈಗೊಂಡಿದೆ. ಒಂದೆಡೆ ರಫ್ತು ಕುಂಠಿತವಾಗಬಾರದು, ರುಪಾಯಿ ಮೌಲ್ಯವೂ ಕುಸಿಯಬಾರದು, ಈ ದೃಷ್ಟಿಯಿಂದ ಆರ್​ಬಿಐ ತನ್ನ ಫಾರೆಕ್ಸ್ ನಿಧಿಗೆ ಡಾಲರ್​ಗಳನ್ನು ಖರೀದಿಸಿತ್ತು. ಏಷ್ಯಾದ ಇತರ ಕೆಲ ಕರೆನ್ಸಿಗಳು ಕುಸಿದರೂ ಭಾರತದ ಕರೆನ್ಸಿ ಮೌಲ್ಯ ಬಹುತೇಕ ಸ್ಥಿರವಾಗಿದೆ ಎಂಬ ಅಭಿಪ್ರಾಯ ಇದೆ.

ಇದನ್ನೂ ಓದಿAjay Banga: ಚೀನಾ ಪ್ಲಸ್ ಒನ್ ಅವಕಾಶ 10 ವರ್ಷ ಇರಲ್ಲ, ಬೇಗ ಉದ್ಯೋಗಸೃಷ್ಟಿಸಿ: ವಿಶ್ವಬ್ಯಾಂಕ್ ಅಧ್ಯಕ್ಷ ಅಜಯ್ ಬಾಂಗ ಭಾರತಕ್ಕೆ ಸಲಹೆ

ಫಾರೆಕ್ಸ್​ನಲ್ಲಿ ಎಸ್​ಡಿಆರ್​ಗಳು ಹೆಚ್ಚು ಏರಿಕೆ

ಜುಲೈ 14ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್​ನಲ್ಲಿ 12.743 ಬಿಲಿಯನ್ ಡಾಲರ್​ನಷ್ಟು ಮೀಸಲು ನಿಧಿ ಹೆಚ್ಚಳವಾಗಿದೆ. ಇತ್ತೀಚಿನ ಕೆಲ ವಾರಗಳಲ್ಲಿ ಒಂದು ವಾರದಲ್ಲಿ ಭಾರತದ ಫಾರೆಕ್ಸ್ ಮೀಸಲು ನಿಧಿ ಕಂಡ ಅತಿಹೆಚ್ಚಳಗಳಲ್ಲಿ ಇದು ಒಂದು. ಫಾರೆಕ್ಸ್ ಮೀಸಲು ನಿಧಿಯಲ್ಲಿ ಇರುವ ಪ್ರಮುಖ ಅಂಶವಾದ ವಿದೆಶೀ ಕರೆನ್ಸಿ ಆಸ್ತಿ ಬರೋಬ್ಬರಿ 11.198 ಬಿಲಿಯನ್ ಡಾಲರ್​ನಷ್ಟು ಏರಿದೆ. ಗೋಲ್ಡ್ ರಿಸರ್ವ್ಸ್ 1.137 ಬಿಲಿಯನ್ ಡಾಲರ್ ಹಾಗು ಎಸ್​ಡಿಆರ್ (ಸ್ಪೆಷಲ್ ಡ್ರಾಯಿಂಗ್ ರೈಟ್ಸ್) 250 ಮಿಲಿಯನ್ ಡಾಲರ್​ನಷ್ಟು ಏರಿವೆ ಎಂದು ಆರ್​ಬಿಐ ಮಾಹಿತಿ ನೀಡಿದೆ. ಇನ್ನು ಐಎಎಂಎಫ್​ನೊಂದಿಗಿನ ಭಾರತದ ಮೀಸಲು ಪ್ರಮಾಣ 158 ಮಿಲಿಯನ್ ಡಾಲರ್​ನಷ್ಟು ಹೆಚ್ಚಾಗಿದೆ.

ಇದನ್ನೂ ಓದಿCar Loan: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುತ್ತೀರಾ? ಕಾರ್ ಲೋನ್ ಪಡೆಯುವ ಮುನ್ನ ಈ ವಿಚಾರ ತಿಳಿದಿರಿ

ಫಾರೆಕ್ಸ್ ರಿಸರ್ವ್ಸ್​ನಲ್ಲಿ ಭಾರತ ನಂ. 4

ಅತಿಹೆಚ್ಚು ವಿದೇಶ ವಿನಿಮಯ ಮೀಸಲು ನಿಧಿ ಹೊಂದಿರುವ ದೇಶಗಳ ಪೈಕಿ ಭಾರತವೂ ಒಂದು. ಈ ಪಟ್ಟಿ ಭಾರತ 4ನೇ ಸ್ಥಾನದಲ್ಲಿದೆ. ಚೀನಾ, ಜಪಾನ್ ಮತ್ತು ಸ್ವಿಟ್ಜರ್​ಲೆಂಡ್ ದೇಶಗಳು ಮೊದಲ 3 ಸ್ಥಾನದಲ್ಲಿವೆ. ಚೀನಾ ಬಳಿ 3,371 ಬಿಲಿಯನ್ ಡಾಲರ್​ನಷ್ಟು ಫಾರೆಕ್ಸ್ ಮೀಸಲು ನಿಧಿ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ