Smartphone Export: ಭಾರತದ ಸ್ಮಾರ್ಟ್‌ಫೋನ್ ರಫ್ತು; ಸ್ಯಾಮ್ಸಂಗ್ ಹಿಂದಿಕ್ಕಲಿದೆ ಆ್ಯಪಲ್
ಏಪ್ರಿಲ್ - ಅಕ್ಟೋಬರ್ ಅವಧಿಯಲ್ಲಿ ಭಾರತವು ಒಟ್ಟು 5 ಶತಕೋಟಿ ಡಾಲರ್ ಮೌಲ್ಯದ ಸ್ಮಾರ್ಟ್ಫೋನ್ಗಳನ್ನು ರಫ್ತು ಮಾಡಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ಸ್ಮಾರ್ಟ್ಫೋನ್ಗಳ ರಫ್ತು ಪ್ರಮಾಣದಲ್ಲಿ ಶೇಕಡಾ 127ರಷ್ಟು ಹೆಚ್ಚಾಗಿದೆ.
ನವದೆಹಲಿ: ಭಾರತದಿಂದ ಅತಿಹೆಚ್ಚು ಸ್ಮಾರ್ಟ್ಫೋನ್ಗಳನ್ನು (Smartphone) ರಫ್ತು (Export) ಮಾಡುವ ಕಂಪನಿಗಳ ಪೈಕಿ ದಕ್ಷಿಣ ಕೊರಿಯಾ ಮೂಲದ ಸ್ಯಾಮ್ಸಂಗ್ (Samsung) ಅನ್ನು ಆ್ಯಪಲ್ (Apple) ಶೀಘ್ರದಲ್ಲೇ ಹಿಂದಿಕ್ಕುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ ಆ್ಯಪಲ್ ಸ್ಮಾರ್ಟ್ಫೋನ್ಗಳ ರಫ್ತು ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಏಪ್ರಿಲ್ – ಅಕ್ಟೋಬರ್ ಅವಧಿಯಲ್ಲಿ 2.2 ಶತಕೋಟಿ ಡಾಲರ್ ಮೌಲ್ಯದ ಸ್ಮಾರ್ಟ್ಫೋನ್ಗಳನ್ನು ಆ್ಯಪಲ್ ರಫ್ತು ಮಾಡಿದ್ದರೆ, ಸ್ಯಾಮ್ಸಂಗ್ 2.8 ಶತಕೋಟಿ ಡಾಲರ್ ಮೌಲ್ಯದ ಸ್ಮಾರ್ಟ್ಫೋನ್ಗಳನ್ನು ರಫ್ತು ಮಾಡಿದೆ ಎಂದು ‘ಫೈನಾನ್ಶಿಯಲ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಏಪ್ರಿಲ್ – ಅಕ್ಟೋಬರ್ ಅವಧಿಯಲ್ಲಿ ಭಾರತವು ಒಟ್ಟು 5 ಶತಕೋಟಿ ಡಾಲರ್ ಮೌಲ್ಯದ ಸ್ಮಾರ್ಟ್ಫೋನ್ಗಳನ್ನು ರಫ್ತು ಮಾಡಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷ ಸ್ಮಾರ್ಟ್ಫೋನ್ಗಳ ರಫ್ತು ಪ್ರಮಾಣದಲ್ಲಿ ಶೇಕಡಾ 127ರಷ್ಟು ಹೆಚ್ಚಾಗಿದೆ. ಉತ್ಪಾದನೆ ಸಂಯೋಜಿತ ಭತ್ಯೆ (PLI) ಯೋಜನೆಯಡಿ ಉಭಯ ಕಂಪನಿಗಳು ಭಾರತದಲ್ಲಿ ಸ್ಮಾರ್ಟ್‌ಫೋನ್ ತಯಾರಿಸುತ್ತಿವೆ.
ಫಾಕ್ಸ್ಕಾನ್, ಪೆಗಾಟ್ರಾನ್ ಹಾಗೂ ವಿಸ್ಟ್ರಾನ್ ಕಂಪನಿಗಳು ಭಾರತದಲ್ಲಿ ಆ್ಯಪಲ್ ಸ್ಮಾರ್ಟ್‌ಫೋನ್ ತಯಾರಿಸುತ್ತಿವೆ. 21ನೇ ಹಣಕಾಸು ವರ್ಷದ ಸ್ಮಾರ್ಟ್‌ಫೋನ್ ರಫ್ತಿನಲ್ಲಿ ಆ್ಯಪಲ್ ಪಾಲು ಶೇಕಡಾ 10ರಷ್ಟು ಇದ್ದುದು 22ನೇ ಹಣಕಾಸು ವರ್ಷದಲ್ಲಿ ಶೇಕಡಾ 50ಕ್ಕೆ ತಲುಪಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: Tata Group: ಭಾರತದಲ್ಲಿ ಐಫೋನ್ ತಯಾರಿಸುವ ವಿಸ್ಟ್ರಾನ್ ಬೆಂಗಳೂರು ಘಟಕ ಖರೀದಿಗೆ ಟಾಟಾ ಒಲವು
ದೇಶದ ಎಲೆಕ್ಟ್ರಾನಿಕ್ಸ್ ರಫ್ತು 21ನೇ ಹಣಕಾಸು ವರ್ಷದ ಏಪ್ರಿಲ್ – ಅಕ್ಟೋಬರ್ ಅವಧಿಯಲ್ಲಿ 7.87 ಶತಕೋಟಿ ಡಾಲರ್ ಇದ್ದುದು, 22ನೇ ಹಣಕಾಸು ವರ್ಷದಲ್ಲಿ 12.14 ಶತಕೋಟಿ ಡಾಲರ್ಗೆ ಹೆಚ್ಚಾಗಿದೆ. ಒಟ್ಟು ರಫ್ತಿನಲ್ಲಿ ಶೇಕಡಾ 30ರಷ್ಟು ಮೊಬೈಲ್ ಫೋನ್ ಪಾಲಿದೆ.
ಸ್ಮಾರ್ಟ್‌ಫೋನ್ ರಫ್ತು ದ್ವಿಗುಣಗೊಂಡಿರುವುದು ಎಲೆಕ್ಟ್ರಾನಿಕ್ಸ್ ರಫ್ತು ಹೆಚ್ಚಳಕ್ಕೆ ಕಾರಣವಾಗಿದೆ. ಚೀನಾ ಹಾಗೂ ವಿಯೆಟ್ನಾಂ ಜತೆ ಪೈಪೋಟಿಗೂ ಕಾರಣವಾಗಿದೆ. ಪೂರೈಕೆ ಸರಪಳಿ, ಹೂಡಿಕೆ ಭಾವನೆ ಉನ್ನತ ಮಟ್ಟದಲ್ಲಿರುವಂತೆ ನಾವು ನೋಡಿಕೊಳ್ಳಬೇಕಿದೆ ಎಂದು ‘ಇಂಡಿಯಾ ಸೆಲ್ಯುಲರ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ನ (ಐಸಿಇಎ)’ ಅಧ್ಯಕ್ಷ ಪಂಕಜ್ ಮೊಹಿಂದ್ರೂ ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ