
ನವದೆಹಲಿ, ಮಾರ್ಚ್ 3: 2047ನೇ ಇಸವಿ ಭಾರತಕ್ಕೆ ಒಂದು ಮೈಲಿಗಲ್ಲು. ಅಂದು ಭಾರತಕ್ಕೆ ಸ್ವಾತಂತ್ರ್ಯದ ಶತಮಾನೋತ್ಸವದ ಸಂಭ್ರಮ. ಅಷ್ಟರೊಳಗೆ ಭಾರತ ಮುಂದುವರಿದ ದೇಶವಾಗಬೇಕು (developed country) ಎನ್ನುವುದು ಸರ್ಕಾರದ ಮಹತ್ವಾಕಾಂಕ್ಷಿ ಗುರಿ. ಈ ವಿಚಾರದಲ್ಲಿ ವಿವಿಧ ಅಭಿಪ್ರಾಯಭೇದಗಳಿವೆ. ಕೆಲವರು ಭಾರತಕ್ಕೆ ಇಷ್ಟು ಬೇಗ ಮುಂದುವರಿದ ದೇಶವಾಗಲು ಸಾಧ್ಯವಿಲ್ಲ ಎನ್ನುತ್ತಾರೆ. ಇನ್ನೂ ಕೆಲವರು, ಉನ್ನತ ಆದಾಯದ ದೇಶವಾಗಬಹುದು (High income country) ಎನ್ನುತ್ತಾರೆ.
ಒಂದು ದೇಶವು ಉನ್ನತ ಆದಾಯದ ದೇಶ ಎನಿಸಿಕೊಳ್ಳಬೇಕಾದರೆ ಪ್ರಮುಖ ಮಾನದಂಡವೆಂದರೆ ಅದು ತಲಾದಾಯ ಮಟ್ಟದ್ದು. ವಿಶ್ವಬ್ಯಾಂಕ್ ಪ್ರಕಾರ ಜಿಎನ್ಐ ತಲಾದಾಯ (GNI per capita) ಕನಿಷ್ಠ 14,005 ಡಾಲರ್ ಇರಬೇಕು. ಅಂದರೆ, ದೇಶದ ಒಬ್ಬ ವ್ಯಕ್ತಿಯ ಸರಾಸರಿ ಆದಾಯ ಎಷ್ಟೆಂಬುದನ್ನು ಇದು ಸೂಚಿಸುತ್ತದೆ. ಭಾರತದ ಜಿಎನ್ಐ ತಲಾದಾಯ 2,500 ಡಾಲರ್ ಆಸುಪಾಸಿನ ಮಟ್ಟದಲ್ಲಿ ಇದೆ. ಇದು ಕನಿಷ್ಠ ಎಂಟು ಪಟ್ಟಾದರೂ ಹೆಚ್ಚಾಗಬೇಕು.
ಇದನ್ನೂ ಓದಿ: ಇನ್ನೂ ಬಾಕಿ ಇದೆ ಮಾರುಕಟ್ಟೆ ಕುಸಿತ; ವಾಹನ, ಎಫ್ಎಂಸಿಜಿ, ಬ್ಯಾಂಕ್ ಸೆಕ್ಟರ್ ಹುಷಾರ್: ಜೈ ಬಾಲಾ
ವಾಸ್ತವದಲ್ಲಿ ಇದು ಸಾಧ್ಯವೇ? ವಿಶ್ವಬ್ಯಾಂಕ್ ಪ್ರಕಾರ ಭಾರತ 2047ರೊಳಗೆ ಹೈ ಇನ್ಕಮ್ ದೇಶ ಎನಿಸಬೇಕಾದರೆ ವರ್ಷಕ್ಕೆ ಸರಾಸರಿ ಶೇ. 7.8ರ ದರದಲ್ಲಿ ಆರ್ಥಿಕತೆ ಬೆಳವಣಿಗೆ ಹೊಂದಬೇಕು. ಹಾಗಾದಲ್ಲಿ ಮಾತ್ರ ಉತ್ತಮ ಆದಾಯ ಮಟ್ಟದ ದೇಶ ಎನಿಸಬಹುದು.
2000 ವರ್ಷದಿಂದ 2024ರವರೆಗೂ ಭಾರತದ ಆರ್ಥಿಕ ಬೆಳವಣಿಗೆಯ ಸರಾಸರಿ ವೇಗ ಶೇ. 6.3ರಷ್ಟಿದೆ. ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಿನ ವೇಗದಲ್ಲಿ ಸ್ಥಿರವಾಗಿ ಬೆಳವಣಿಗೆ ಸಾಧ್ಯವಾದಲ್ಲಿ ಗುರಿ ಮುಟ್ಟಲು ಸಾಧ್ಯಿ ಎನ್ನುವುದು ತಜ್ಞರ ಅನಿಸಿಕೆ.
ಇದನ್ನೂ ಓದಿ: ಬೈಜುಸ್ನಿಂದ ವಂಚನೆ ಎಂದ ಅಮೆರಿಕದ ಕೋರ್ಟ್; ಎಲ್ಲಾ ಸೇರಿ ಸಂಚು ರೂಪಿಸಿದ್ರು, ತನಿಖೆ ಆಗಲಿ ಎಂದ ಸಿಇಒ ಬೈಜು ರವೀಂದನ್
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ