Aero India: ಭಾರತದಲ್ಲಿ ಅತಿದೊಡ್ಡ ವಿಮಾನ ದುರಸ್ತಿ ಕೇಂದ್ರ ಸ್ಥಾಪಿಸಲಿದೆ ಲಾಖ್ಹೀಡ್ ಮಾರ್ಟಿನ್

|

Updated on: Feb 13, 2023 | 3:32 PM

ಇದು ಏಷ್ಯಾದಲ್ಲೇ ಅತಿದೊಡ್ಡ ಕೇಂದ್ರವಾಗಿರಲಿದ್ದು, ವಿಶ್ವದಲ್ಲೇ ಮೂರನೇ ಅತಿದೊಡ್ಡ ಕೇಂದ್ರವಾಗಿರಲಿದೆ. ಸಿ-130ಜೆ ಸೂಪರ್ ಹರ್ಕ್ಯುಲಸ್ ವಿಮಾನಗಳ ದುರಸ್ತಿ ಮತ್ತು ನಿರ್ವಹಣೆಗೆಂದೇ ವಿಶೇಷವಾಗಿ ನಿರ್ಮಿಸಲಾಗುತ್ತಿರುವ ಕೇಂದ್ರ ಇದಾಗಿರಲಿದೆ.

Aero India: ಭಾರತದಲ್ಲಿ ಅತಿದೊಡ್ಡ ವಿಮಾನ ದುರಸ್ತಿ ಕೇಂದ್ರ ಸ್ಥಾಪಿಸಲಿದೆ ಲಾಖ್ಹೀಡ್ ಮಾರ್ಟಿನ್
ಸಿ-130ಜೆ ಸೂಪರ್ ಹರ್ಕ್ಯುಲಸ್ ವಿಮಾನ
Image Credit source: Reuters
Follow us on

ಬೆಂಗಳೂರು: ಅಮೆರಿಕದ ರಕ್ಷಣಾ ಕ್ಷೇತ್ರದ ದಿಗ್ಗಜ ಸಂಸ್ಥೆ ಲಾಖ್ಹೀಡ್ ಮಾರ್ಟಿನ್ (Lockheed Martin) ಭಾರತದಲ್ಲಿ (India) ಅತಿದೊಡ್ಡ ವಿಮಾನ ದುರಸ್ತಿ ಕೇಂದ್ರ (ಹೆವಿ ಮೇಂಟೇನೆನ್ಸ್ ರಿಪೇರ್ ಸೆಂಟರ್) ಸ್ಥಾಪಿಸುವ ಬಗ್ಗೆ ಘೋಷಣೆ ಮಾಡಿದೆ. ಇದು ಏಷ್ಯಾದಲ್ಲೇ ಅತಿದೊಡ್ಡ ಕೇಂದ್ರವಾಗಿರಲಿದೆ. ವಿಶ್ವದಲ್ಲೇ ಮೂರನೇ ಅತಿದೊಡ್ಡ ಕೇಂದ್ರವಾಗಿರಲಿದೆ. ಸಿ-130ಜೆ ಸೂಪರ್ ಹರ್ಕ್ಯುಲಸ್ ವಿಮಾನಗಳ ದುರಸ್ತಿ ಮತ್ತು ನಿರ್ವಹಣೆಗೆಂದೇ ವಿಶೇಷವಾಗಿ ನಿರ್ಮಿಸಲಾಗುತ್ತಿರುವ ಕೇಂದ್ರ ಇದಾಗಿರಲಿದೆ. ಈಕುರಿತು ಲಾಖ್ಹೀಡ್ ಮಾರ್ಟಿನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಉಪಾಧ್ಯಕ್ಷ, ಸಿಇಒ ವಿಲಿಯಮ್ ಬ್ಲೇರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಉಪಗ್ರಹಗಳು, ಸೆನ್ಸರ್​ಗಳು, ಗ್ರೌಂಡ್ ಸ್ಟೇಷನ್​ಗಳು ಹಾಗೂ ಮಷಿನ್ ಸೊಲ್ಯೂಷನ್ಸ್​ಗಳಿಗೆ ಸಂಬಂಧಿಸಿ ಭಾರತದಲ್ಲಿ ಕಾರ್ಯಾಚರಣೆ ವಿಸ್ತರಿಸುವ ಸಲುವಾಗಿ ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಇಸ್ರೋ ಮತ್ತು ಇತರ ಸ್ಟಾರ್ಟಪ್​ಗಳ ಜತೆ ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಪ್ರದರ್ಶನ ಮಳಿಗೆಯಲ್ಲಿ ಲಾಖ್ಹೀಡ್ ಮಾರ್ಟಿನ್ ಕಂಪನಿಯು ಎಫ್​​-21 ಯುದ್ಧವಿಮಾನ, ಸಿ-130ಜೆ ಟ್ರಾಸ್​​ಪೋರ್ಟ್​​ ಏರ್​​ಕ್ರಾಫ್ಟ್, ಎಂಎಚ್​​-60ಆರ್ ರೋಮೊ ಮಲ್ಟಿ-ಮಿಷನ್ ಹೆಲಿಕಾಪ್ಟರ್, ಜಾವೆಲಿನ್ ವೆಪನ್ ಸಿಸ್ಟಂ ಹಾಗೂ ಎಸ್​​​-92 ಮಲ್ಟಿ ರೋಲ್ ಹೆಲಿಕಾಪ್ಟರ್​​​ಗಳನ್ನು ಪ್ರದರ್ಶನಕ್ಕಿರಿಸಿದೆ. ಈ ಪೈಕಿ ಎಫ್​​-21 ಯುದ್ಧವಿಮಾನದ ಕಾಕ್​​ಪಿಟ್ ಡೆಮೊನ್​​ಸ್ಟ್ರೇಟರ್​ ಗಮನ ಸಳೆಯುತ್ತಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ಇದನ್ನೂ ಓದಿ: Aero India 2023: ಈ ಬಾರಿಯ ಏರ್​ ಶೋನಲ್ಲಿ ಏನು ವಿಶೇಷತೆಗಳು? ಇಲ್ಲಿವೆ ನೋಡಿ

ಭಾರತೀಯ ವಾಯುಪಡೆಗೆ ಎಫ್​​-21 ಯುದ್ಧವಿಮಾನ ಅತ್ಯುತ್ತಮ ಆಯ್ಕೆಯಾಗಿದೆ ಎಂದು ಲಾಖ್ಹೀಡ್ ಮಾರ್ಟಿನ್ ಅಭಿಪ್ರಾಯಪಟ್ಟಿದೆ.

ಏಷ್ಯಾದ ಅತಿದೊಡ್ಡ ರಕ್ಷಣಾ ಮತ್ತು ವೈಮಾನಿಕ ಪ್ರದರ್ಶನವೆನಿಸಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ 14ನೇ ಆವೃತ್ತಿಗೆ ಇಂದು (ಫೆಬ್ರವರಿ 13) ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಫೆಬ್ರವರಿ 17ರವರೆಗೆ 5 ದಿನಗಳ ಕಾಲ ವೈಮಾನಿಕ ಪ್ರದರ್ಶನ ನಡೆಯಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ