Aero India 2023: ಈ ಬಾರಿಯ ಏರ್​ ಶೋನಲ್ಲಿ ಏನು ವಿಶೇಷತೆಗಳು? ಇಲ್ಲಿವೆ ನೋಡಿ

Aero India Air Show: ನಾಳೆ (ಫೆ.13) ರಿಂದ 5 ದಿನಗಳ ಕಾಲ (ಫೆ.17)ರವರೆಗೆ ಬೆಂಗಳೂರಿನ ಯಲಹಂಕ ಏರ್​ಬೇಸ್​ನಲ್ಲಿ 2023ರ 14ನೇ ಆವೃತ್ತಿಯ ವೈಮಾನಿಕ ಪ್ರದರ್ಶನ ನಡೆಯಲಿದೆ. ಏರೋ ಇಂಡಿಯಾದ ವೈಮಾನಿಕ ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.

Aero India 2023: ಈ ಬಾರಿಯ ಏರ್​ ಶೋನಲ್ಲಿ ಏನು ವಿಶೇಷತೆಗಳು? ಇಲ್ಲಿವೆ ನೋಡಿ
ಏರ್​ ಶೋ ತಯಾರಿ
Follow us
TV9 Web
| Updated By: ವಿವೇಕ ಬಿರಾದಾರ

Updated on: Feb 12, 2023 | 8:15 PM

ಬೆಂಗಳೂರು: ನಾಳೆ (ಫೆ.13) ರಿಂದ 5 ದಿನಗಳ ಕಾಲ (ಫೆ.17)ರವರೆಗೆ ಬೆಂಗಳೂರಿನ ಯಲಹಂಕ ಏರ್​ಬೇಸ್​ನಲ್ಲಿ 2023ರ 14ನೇ ಆವೃತ್ತಿಯ ವೈಮಾನಿಕ ಪ್ರದರ್ಶನ (Air Show) ನಡೆಯಲಿದೆ. ಏರೋ ಇಂಡಿಯಾದ (Aero India) ವೈಮಾನಿಕ ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಉದ್ಘಾಟಿಸಲಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಇಂದು (ಫೆ.12) ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರಲ್ಲಿ 1996ರಿಂದ ಪ್ರಾರಂಭವಾದ ಈ ವೈಮಾನಿಕ ಪ್ರದರ್ಶನ 2 ವರ್ಷಕ್ಕೊಮ್ಮೆ ನಡೆಯುತ್ತದೆ. ಈ ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಲು ದೇಶ-ವಿದೇಶದ ನಾಯಕರು ಮತ್ತು ಜನರು ಆಗಮಿಸುತ್ತಾರೆ. ವೈಮಾನಿಕ ಪ್ರದರ್ಶನ ಬೆಂಗಳೂರಲ್ಲಿ 13 ಬಾರಿ ನಡೆದಿದ್ದು, ಈ ಬಾರಿಯ ವೈಮಾನಿಕ ಪ್ರದರ್ಶನ 14ನೇ ಆವೃತ್ತಿಯದ್ದಾಗಿದೆ. ಹಾಗಿದ್ದರೆ ಈ ಬಾರಿಯ ವೈಮಾನಿಕ ಪ್ರದರ್ಶನ ವೈಶಿಷ್ಟ್ಯ ಇಲ್ಲಿದೆ.

ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ವೈಶಿಷ್ಟ್ಯ

ಯಲಹಂಕ ಏರ್​ಬೇಸ್​ನಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಆಯೋಜಿಸಲಾಗಿದೆ. 35 ಸಾವಿರ ಚದರ ಅಡಿ ಪ್ರದೇಶದಲ್ಲಿ ಎಕ್ಸಿಬಿಷನ್​ ಆಯೋಜನೆ ಮಾಡಲಾಗಿದೆ. 67 ಫ್ಲೈಯಿಂಗ್ ಡಿಸ್ಪ್ಲೇ, 36 ಸ್ಟ್ಯಾಂಡಿಂಗ್ ಡಿಸ್ಪ್ಲೇ, 809 ಪ್ರದರ್ಶಕರು ಇಲ್ಲಿಯವರೆಗೆ ನೋಂದಾಯಿಸಿಕೊಂಡಿದ್ದಾರೆ. 809 ಪ್ರದರ್ಶಕರಲ್ಲಿ 699 ಭಾರತೀಯ ಪ್ರದರ್ಶಕರು, 110 ವಿದೇಶಿ ಪ್ರದರ್ಶಕರಿದ್ದಾರೆ. 2021 ರಲ್ಲಿ, 55 ದೇಶಗಳ ಪ್ರತಿನಿಧಿಗಳು ಮತ್ತು 540 ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಿದ್ದರು. ಈ ಬಾರಿ 251 ಎಂಒಯು, 98 ವಿದೇಶಿ ಕಂಪನಿಗಳು ಏರ್​ಶೋನಲ್ಲಿ ಭಾಗಿಯಾಗಲಿದ್ದಾರೆ. ಇಂಡಿಯನ್ ಪೆವಿಲಿಯನ್​ನಲ್ಲಿ 115 ಕಂಪನಿ, 227 ಪ್ರಾಡಕ್ಟ್ಸ್​ ಪ್ರದರ್ಶನ ಮಾಡಲಾಗುತ್ತದೆ. ಏರ್​ಶೋ-2023ನಲ್ಲಿ 3 ದಿನಗಳಲ್ಲಿ 9 ಸೆಮಿನಾರ್​ ಆಯೋಜನೆ ಮಾಡಲಾಗಿದೆ. ಏರ್​ಶೋ ಮೊದಲ ದಿನ ಸಿಇಒಗಳ ರೌಂಡ್ ಟೇಬಲ್​ ಮೀಟ್​ ಇರುತ್ತದೆ. ಈ ಸಮಿನಾರ್​ನಲ್ಲಿ ಮಾಜಿ ಸೈನಿಕರನ್ನು ಹೇಗೆ ಬಳಸಿಕೊಳ್ಳಬಹುದರ ಎಂಬ ಬಗ್ಗೆ ಚರ್ಚೆಯಾಗುತ್ತದೆ. 27 ಭಾರತೀಯ ಕಂಪನಿಗಳು ಸೇರಿದಂತೆ 73 ಕಂಪನಿಗಳು ಭಾಗಿಯಾಗುತ್ತವೆ. ಫೆ.14ರಂದು ಏರ್​ಶೋನಲ್ಲಿ 32 ದೇಶಗಳ ರಕ್ಷಣಾ ಸಚಿವರು ಭಾಗಿಯಾಗುತ್ತಾರೆ. 251ಕ್ಕೂ ಹೆಚ್ಚು ಬಂಧನ್​ಗಳ ನಿರೀಕ್ಷೆ ಇದೆ. ಬಂಧನ್​ನಿಂದ 75 ಸಾವಿರ ಕೋಟಿ ವ್ಯಾಪಾರ ವಹಿವಾಟುವಾಗುವ ನಿರೀಕ್ಷೆ ಇದೆ. ರಾಜ್ಯ ಸರ್ಕಾರ ಜತೆ 32 ಎಂಒಯು ಒಪ್ಪಂದವಾಗಲಿದೆ.

ಇದನ್ನೂ ಓದಿ: ದೇಶೀಯ ಉತ್ಪಾದನೆ, ಕೌಶಲ್ಯಗಳ ಪ್ರದರ್ಶನಕ್ಕೆ ಏರೋ ಇಂಡಿಯಾ ಉತ್ತಮ ವೇದಿಕೆ- ರಾಜನಾಥ್​ ಸಿಂಗ್​

ಯುದ್ಧ ವಿಮಾನ ಮತ್ತು ಹೆಲಿಕಾಪ್ಟ್​ರ್​​ಗಳು

ಭಾರತೀಯ ರಕ್ಷಣಾ ಪಡೆಯ ತೇಜಸ್​, ಸೂರ್ಯಕಿರಣ್​, ಸಾರಂಗ, ರಫೇಲ್​, ಎಲ್​ಸಿಎ, ಸುಕೋಯ್​-30, ಎಂಕೆ-1, ಲಘು ಯುದ್ಧ ವಿಮಾನ (LCA)-ತೇಜಸ್, HTT-40, ಡೋರ್ನಿಯರ್ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ (LUH), ಲಘು ಯುದ್ಧ ಹೆಲಿಕಾಪ್ಟರ್ (LCH) ಮತ್ತು ಸುಧಾರಿತ ಲಘು ಹೆಲಿಕಾಪ್ಟರ್ (ALH) ಸೇರಿದಂತೆ 40ಕ್ಕೂ ಅಧಿಕ ಯುದ್ಧ ವಿಮಾನಗಳು ಪ್ರದರ್ಶನವಾಗಲಿವೆ.

ಡಿಆರ್​ಡಿಒ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಗುತ್ತದೆ. ಇಂಡಿಯಾ ಪೆವಿಲಿಯನ್‌ನಲ್ಲಿ ಡಿಆರ್​ಡಿಒ ಪ್ರಮುಖ ಉತ್ಪನ್ನಗಳನ್ನು ಪ್ರದರ್ಶಿಸುವುದರ ಜೊತೆಗೆ ಏರೋನಾಟಿಕಲ್ ಸಿಸ್ಟಮ್ಸ್, ಕ್ಷಿಪಣಿಗಳು, ಶಸ್ತ್ರಾಸ್ತ್ರಗಳು, ಎಲೆಕ್ಟ್ರಾನಿಕ್ಸ್, ಮೈಕ್ರೋ ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಕಂಪ್ಯೂಟೇಶನಲ್ ಸಿಸ್ಟಮ್ಸ್, ಸೋಲ್ಜರ್ ಸಪೋರ್ಟ್ ಟೆಕ್ನಾಲಜೀಸ್, ಲೈಫ್-ಸೈನ್ಸ್, ನೌಕಾ ಮತ್ತು ಮೆಟೀರಿಯಲ್ ಸೈನ್ಸ್ ಇತರ ಉತ್ಪನ್ನಗಳ ಪ್ರದರ್ಶನವನ್ನು ಒಳಗೊಂಡಿರುತ್ತದೆ.

ವೈಮಾನಿಕ ಪ್ರದರ್ಶನಕ್ಕೆ ಆಗಮಿಸುವ ಸಾರ್ವಜನಿಕರಿಗಾಗಿ ಜಿಕೆವಿಕೆ, ಜಕ್ಕೂರಿನಲ್ಲಿ ಸಾರ್ವಜನಿಕರ ವಾಹನ ನಿಲುಗಡೆಗೆ ಅವಾಕಾಶ ನೀಡಲಾಗಿದೆ. ಅಲ್ಲಿಂದ ಯಲಹಂಕ ವಾಯುನೆಲೆಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ನಾಳೆ ಏರ್​ಶೋ ಉದ್ಘಾಟನೆ ಕಾರ್ಯಕ್ರಮದಲ್ಲಿ 4000 ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಫೆಬ್ರವರಿ 16 ರಂದು ಮಾತ್ರ ಸಾರ್ವಜನಿಕ ವೀಕ್ಷಣೆಗೆ ಅವಕಾಶವಿದೆ. ಅಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕರು ವೈಮಾನಿಕ ಪ್ರದರ್ಶನ ವೀಕ್ಷಿಸಬಹುದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ
Weekly horoscope: ಡಿಸೆಂಬರ್ 30 ರಿಂದ ಜನವರಿ 5ರವರೆಗಿನ ವಾರ ಭವಿಷ್ಯ
Weekly horoscope: ಡಿಸೆಂಬರ್ 30 ರಿಂದ ಜನವರಿ 5ರವರೆಗಿನ ವಾರ ಭವಿಷ್ಯ