Narendra Modi: ಬೆಂಗಳೂರಿನಲ್ಲಿ ಸ್ಯಾಂಡಲ್​ವುಡ್ ಸ್ಟಾರ್ಸ್​, ಕರ್ನಾಟಕದ ಉದ್ಯಮಿಗಳು, ಕ್ರಿಕೆಟರ್ಸ್​ ಜೊತೆ ಮೋದಿ ಡಿನ್ನರ್

ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದು, ರಾತ್ರಿಯ ಔತಣಕೂಟಕ್ಕೆ ಸ್ಯಾಂಡಲ್​ವುಡ್​, ಕ್ರಿಕೆಟ್ ಕ್ಷೇತ್ರ​ ಮತ್ತು ಉದ್ಯಮಿಗಳನ್ನು ಆಹ್ವಾನಿಸಿದ್ದಾರೆ.

Follow us
TV9 Web
| Updated By: ವಿವೇಕ ಬಿರಾದಾರ

Updated on:Feb 12, 2023 | 10:59 PM

ಬೆಂಗಳೂರು: ನಾಳೆ (ಫ.13) ನಗರದ ಯಲಹಂಕ ಏರ್​ ಬೇಸ್​ನಲ್ಲಿ ನಡೆಯುವ ಏರೋ ಇಂಡಿಯಾ ಏರ್​​ ಶೋ ಉದ್ಘಾಟನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ (PM Narendra Modi) ಬೆಂಗಳೂರಿಗೆ ಬಂದಿಳಿದಿದ್ದಾರೆ. ಸದ್ಯ ರಾಜಭವನದಲ್ಲಿ ವಾಸ್ತವ್ಯ ಹೂಡಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸ್ಯಾಂಡಲ್​ವುಡ್​, ಕ್ರಿಕೆಟ್ ಕ್ಷೇತ್ರ​ ಮತ್ತು ಉದ್ಯಮಿಗಳನ್ನು ತಮ್ಮ ಔತಣಕೂಟಕ್ಕೆ ಆಹ್ವಾನಿಸಿದ್ದಾರೆ. ಚಿತ್ರರಂಗದಿಂದ ನಟ ಯಶ್‌ (Yash), ಪುನೀತ್‌ ರಾಜ್‌ಕುಮಾರ್ (Puneeth Rajkumar) ಪತ್ನಿ ಅಶ್ವಿನಿ ರಾಜಕುಮಾರ್ (Ashwini Rajkumar)​, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) , ನಿರ್ಮಾಪಕ ವಿಜಯ್ ಕಿರಗಂದೂರು (Vijay Kirgandur), ಶ್ರದ್ಧಾ ಜೈನ್, ನಿರ್ದೇಶಕ ಪ್ರಶಾಂತ್ ನೀಲ್‌ಗೆ ಆಹ್ವಾನ ನೀಡಿದ್ದಾರೆ. ಹಾಗೇ ಕ್ರಿಕೆಟ್ ಕ್ಷೇತ್ರದಿಂದ ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಅನಿಲ್​ ಕುಂಬ್ಳೆ ದಂಪತಿ, ಮಯಾಂಕ್ ಅಗರ್‌ವಾಲ್, ಮನೀಶ್ ಪಾಂಡೆ ಅವರಿಗೆ ಆಹ್ವಾವಿದೆ. ಅಲ್ಲದೇ ಉದ್ಯಮ ವಲಯದಿಂದ ನಿತಿನ್ ಕಾಮತ್, ತರುಣ್ ಮೆಹ್ತಾ ಅವರಿಗು ಆಹ್ವಾನ ನೀಡಿದ್ದಾರೆ.

ಔತಣಕೂಟದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್​ ಪ್ರಧಾನಮಂತ್ರಿ ಮೋದಿ ಜೊತೆ ಕೆಲ ಬಿಜೆಪಿ ನಾಯಕರು ಪಾಲ್ಗೊಂಡಿದ್ದರು.  ಈ ವೇಳೆ ಪ್ರಧಾನಿಗೆ ಸಿಎಂ ಬೊಮ್ಮಾಯಿ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಲಿದ್ದು, ಹಾಗೇ ರಾಜ್ಯ ಬಜೆಟ್​ ಬಗ್ಗೆಯೂ ಮಾತನಾಡುವ ಸಾಧ್ಯತೆ ಇದೆ.

2023 ವರ್ಷ ಆರಂಭವಾದಾಗಿನಿಂದ ಪ್ರಧಾನಿ ಮೋದಿ ಇದು 4ನೇ ಬಾರಿ ರಾಜ್ಯಕ್ಕೆ ಆಗಮಿಸಿದ್ದಾರೆ. ಚುನಾವಣಾ ಹೊಸ್ತಿಲಿನಲ್ಲಿ, ಪ್ರಧಾನಿಯವರ ರಾಜ್ಯ ಪ್ರವಾಸ ರಾಜ್ಯ ಬಿಜೆಪಿ ಪಾಲಿಗೆ ವರದಾನವಾಗಿದೆ. ಈಗಾಗಲೆ ಮೋದಿ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ, ಬೆಂಗಳೂರು ಮತ್ತು ಹಳೇ ಮೈಸೂರು ಭಾಗದಲ್ಲಿ ಸಂಚರಿಸಿ ಸಂಚಲನ ಮೂಡಿಸಿದ್ದಾರೆ. ಮೋದಿ ಸುತ್ತಾಡಿದ ಈ ಪ್ರದೇಶಗಳಲ್ಲಿ ಬಿಜೆಪಿ ಅಲೆ ಎದ್ದಿದ್ದು ಇವು ಮತಗಳಾಗಿ ಬದಲಾಗಬೇಕಿವೆ ಅಷ್ಟೇ.

ಇಷ್ಟಕ್ಕೆ ಸುಮ್ಮನಾಗದ ಮೋದಿ ಸ್ಯಾಂಡಲ್​ವುಡ್​, ಕ್ರಿಕೆಟ್ ಕ್ಷೇತ್ರ​ ಮತ್ತು ಉದ್ಯಮಿಗಳ ಕ್ಷೇತ್ರದತ್ತ ಕೂಡ ಮುಖಮಾಡಿದ್ದಾರೆ. ಆದರೆ ಈ ನಡೆ ದೇಶದ ಪಾಲಿಗೆ ಹೊಸತಲ್ಲವಾದರೂ, ರಾಜ್ಯದ ಪಾಲಿಗೆ ಹೊಸದೆನಿಸಿದ್ದು, ತೀರ್ವ ಕುತೂಹಲ ಮೂಡಿಸಿದೆ. ಈ ಹಿಂದೆ ಪ್ರಧಾನಿ ಮೋದಿ ಬಾಲಿವುಡ್​, ಕ್ರೀಡೆ, ಶೈಕ್ಷಣಿಕ ಮತ್ತು ಉದ್ಯಮ ಕ್ಷೇತ್ರದವರೊಂದಿಗೆ ಕಾಣಿಸಿಕೊಂಡಿದ್ದರು. ಬಾಲಿವುಡ್​ ಸ್ಟಾರ್​ ನಟರೊಂದಿಗೆ ಕಾಣಿಸಿಕೊಂಡಿದ್ದ ಫೋಟೋ ಸಾಕಷ್ಟು ವೈರಲ್​ ಆಗಿತ್ತು. ಹಾಗೇ ಓಲಂಪಿಕ್​ ನಂತರ ಕ್ರೀಡಾಪಟುಗಳೊಂದಿಗಿನ ಔತಣಕೂಟದ ಭಾವಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇನ್ನು ಉದ್ಯಮಿಗಳೊಂದಿಗೆ ಮೋದಿ ಉತ್ತಮ ಬಾಂಧ್ಯವ ಹೊಂದಿದ್ದಾರೆ.

ಇನ್ನು ರಾಜ್ಯದ ವಿಷಯಕ್ಕೆ ಬರುವುದಾರೇ ಮೋದಿ ಇಂದು (ಫೆ.12) ಸ್ಯಾಂಡಲ್​​​ವುಡ್​, ಕ್ರಿಕೆಟ್ ಕ್ಷೇತ್ರ​ ಮತ್ತು ಉದ್ಯಮಿಗಳನ್ನು ತಮ್ಮ ಔತಣಕೂಟಕ್ಕೆ ಆಹ್ವಾನಿಸಿದ್ದು, ಚಕಿತ ಮೂಡಿಸಿದರೂ, ಮತಗಳ ಕ್ರೋಢಿಕರಣಕ್ಕೆ ಇದು ಒಂದು ದಾಳವಾಗಿದೆ ಎನ್ನಲಾಗುತ್ತಿದೆ.

ಸಿಎಂ ಬೊಮ್ಮಾಯಿಯಿಂದ ರಾಜನಾಥ್ ಸಿಂಗ್​ಗೆ ಔತಣಕೂಟ

ನಾಳೆ ಏರೋ ಇಂಡಿಯಾ ಏರ್​ ಶೋ ಉದ್ಘಾಟನೆ ನಂತರ ಸಂಜೆ 7ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಕ್ಷಣಾ ಸಚಿವ ರಾಜನಾಥ್​​ ಸಿಂಗ್​ ಅವರಿಗೆ ರಾತ್ರಿ ಔತಣಕೂಟಕ್ಕೆ ಆಹ್ವಾನಿಸಿದ್ದಾರೆ. ರೇಸ್ ಕೋರ್ಸ್ ರಸ್ತೆ ಬಳಿ ಇರುವ ತಾಜ್ ವೆಸ್ಟ್ ಎಂಡ್ ಹೋಟೆಲ್​ನಲ್ಲಿ ಡಿನ್ನರ್ ಏರ್ಪಡಿಸಲಾಗಿದೆ. ಈ ಔತಣಕೂಟದಲ್ಲಿ ರಕ್ಷಣಾ ಇಲಾಖೆಯ ಕೆಲ ಹಿರಿಯ ಅಧಿಕಾರಿಗಳು ಹಾಗೂ 98 ದೇಶಗಳ ರಕ್ಷಣಾ ಸಚಿವರು, ಏರ್ ಚೀಫ್​ಗಳು ಭಾಗಿಯಾಗಲಿದ್ದಾರೆ.

ಹಾಗೇ ಸಿಎಂ ಬೊಮ್ಮಾಯಿ ಜೊತೆ ಕಂದಾಯ ಸಚಿವರಾದ ಆರ್.ಅಶೋಕ್, ಸಚಿವ ಡಾ.ಕೆ ಸುಧಾಕರ್, ಬೈರತಿ ಬಸವರಾಜ್, ಡಾ.ಸಿ ಎನ್ ಅಶ್ವಥ್ ನಾರಯಣ್ ಭಾಗಿಯಾಗುವ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:36 pm, Sun, 12 February 23