ಮೂರೂವರೆ ಲಕ್ಷ ಕೋಟಿ ರೂ ಗಾತ್ರ ಮುಟ್ಟಲಿರುವ ಭಾರತದ ಮನರಂಜನೆ-ಮಾಧ್ಯಮ ಉದ್ಯಮ

|

Updated on: Dec 11, 2024 | 11:13 AM

Indian Entertainment and Media industry: ಭಾರತದ ಎಂಟರ್ಟೈನ್ಮೆಂಟ್ ಮತ್ತು ಮೀಡಿಯಾ ಕ್ಷೇತ್ರ ಶೇ. 8.3ರ ವಾರ್ಷಿಕ ದರದಲ್ಲಿ ಬೆಳೆಯುತ್ತಿದ್ದು 2028ರಲ್ಲಿ 3.65 ಲಕ್ಷ ಕೋಟಿ ರೂ ಗಾತ್ರದ್ದಾಗಲಿದೆಯಂತೆ. ಪಿಡಬ್ಲ್ಯುಸಿ ಇಂಡಿಯಾದ ಗ್ಲೋಬಲ್ ಎಂಟರ್ಟೈನ್ಮೆಟ್ ಅಂಡ್ ಮೀಡಿಯಾ ಔಟ್​ಲುಕ್ ವರದಿಯ ಪ್ರಕಾರ ಜಾಗತಿಕವಾಗಿ ಈ ಉದ್ಯಮದ ಬೆಳವಣಿಗೆಯನ್ನು ಭಾರತ ಮೀರಿಸಲಿದೆ. ಭಾರತದಲ್ಲಿ ಡಿಜಿಟಲ್ ಅಡ್ವರ್ಟೈಸಿಂಗ್, ಒಟಿಟಿ ಮಾರುಕಟ್ಟೆಗಳು ಬಹಳ ಹೆಚ್ಚಿನ ಮಟ್ಟದಲ್ಲಿ ಬೆಳವಣಿಗೆ ಹೊಂದಬಹುದು.

ಮೂರೂವರೆ ಲಕ್ಷ ಕೋಟಿ ರೂ ಗಾತ್ರ ಮುಟ್ಟಲಿರುವ ಭಾರತದ ಮನರಂಜನೆ-ಮಾಧ್ಯಮ ಉದ್ಯಮ
ಎಂಟರ್ಟೈನ್ಮೆಂಟ್ ಮತ್ತು ಮೀಡಿಯಾ ಇಂಡಸ್ಟ್ರಿ
Follow us on

ನವದೆಹಲಿ, ಡಿಸೆಂಬರ್ 11: ಭಾರತದ ಮನರಂಜನೆ ಮತ್ತು ಮಾಧ್ಯಮ ಉದ್ಯಮ ಅದ್ವಿತೀಯವಾಗಿ ಬೆಳವಣಿಗೆ ಹೊಂದುತ್ತಿದೆ. ಶೇ. 8.3ರ ಸಿಎಜಿಆರ್ ದರದಲ್ಲಿ ಬೆಳೆಯುತ್ತಿರುವ ಈ ಉದ್ಯಮವು 2028ರೊಳಗೆ 3,65,000 ಕೋಟಿ ರೂ ಗಾತ್ರದ್ದಾಗಲಿದೆ ಎಂದು ಪಿಡಬ್ಲ್ಯುಸಿ ಇಂಡಿಯಾ ಸಂಸ್ಥೆಯ ವರದಿಯೊಂದರಲ್ಲಿ ಅಂದಾಜಿಸಲಾಗಿದೆ. 2024-28ರ ಗ್ಲೋಬಲ್ ಎಂಟರ್ಟೈನ್ಮೆಂಟ್ ಅಂಡ್ ಮೀಡಿಯಾ ಔಟ್​ಲುಕ್ ವರದಿಯ ಪ್ರಕಾರ ಜಾಗತಿಕ ಮನರಂಜನೆ ಮತ್ತು ಮೀಡಿಯಾ ಉದ್ಯಮವು ಶೇ. 4.6ರ ವಾರ್ಷಿಕ ದರದಲ್ಲಿ ಬೆಳೆಯಲಿದೆ. ಇದಕ್ಕೆ ಹೋಲಿಸಿದರೆ ಭಾರತದ ಉದ್ಯಮವು ಹೆಚ್ಚೂಕಡಿಮೆ ಎರಡು ಪಟ್ಟು ವೇಗದಲ್ಲಿ ಬೆಳೆವಣಿಗೆ ಹೊಂದಲಿರುವ ಸೂಚನೆ ಇದೆ.

ಭಾರತದ ಎಂಟರ್ಟೈನ್ಮೆಂಟ್ ಇಂಡಸ್ಟ್ರಿ ಬೆಳವಣಿಗೆಗೆ ಕಾರಣಗಳಿವು…

ಭಾರತದ ಎಂಟರ್ಟೈನ್ಮೆಂಟ್ ಮತ್ತು ಮೀಡಿಯಾ ಇಂಡಸ್ಟ್ರಿ ಹುಲುಸಾಗಿ ಬೆಳೆಯಲು ವಿವಿಧ ಕಾರಣಗಳನ್ನು ಗುರುತಿಸಲಾಗಿದೆ. ಜನಸಂಖ್ಯೆ ಮತ್ತು ಆರ್ಥಿಕ ಶಕ್ತಿ ಹೆಚ್ಚುತ್ತಿರುವುದು ಪ್ರಮುಖ ಕಾರಣಗಳಲ್ಲಿ ಸೇರಿವೆ. ಹಾಗೆಯೇ, ಇಂಟರ್ನೆಟ್ ಕನೆಕ್ಟಿವಿಟಿ ಹೆಚ್ಚುತ್ತಿರುವುದು, ಕೈಗೆಟುಕುವ ದರದಲ್ಲಿ ಡಾಟಾ ಲಭಿಸುತ್ತಿರುವುದು ಮತ್ತಷ್ಟು ಕಾರಣಗಳಾಗಿವೆ. ಇವುಗಳಿಗೆಲ್ಲಾ ಇಂಬು ನೀಡುವಂತೆ ಸರ್ಕಾರದ ನೀತಿಗಳೂ ಕೂಡ ಈ ಉದ್ಯಮದ ಬೆಳವಣಿಗೆಗೆ ಕಾರಣವಾಗಿವೆ ಎನ್ನಲಾಗಿದೆ.

ಇದನ್ನೂ ಓದಿ: ಸಿಬಿಎಸ್​ಇ ಶಾಲೆಗಳಲ್ಲಿ ಎಐ ಕೋರ್ಸ್; 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಕಲಿಕೆ

ಭಾರತದಲ್ಲಿ ಯುವಜನರ ಸಂಖ್ಯೆ 91 ಕೋಟಿಯಷ್ಟಿದೆ. ಇವರ ಪೈಕಿ 78 ಕೋಟಿ ಮಂದಿ ಇಂಟರ್ನೆಟ್ ಬಳಸುತ್ತಾರೆ. 80 ಕೋಟಿ ಬ್ರಾಡ್​ಬ್ಯಾಂಡ್ ಸಬ್​ಸ್ಕ್ರಿಪ್ಷನ್ಸ್ ಆಗಿವೆ. ಎಂಟರ್ಟೈನ್ಮೆಂಟ್ ಮತ್ತು ಮೀಡಿಯಾ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಭಾರತ ಉತ್ತಮ ಸ್ಥಿತಿಯಲ್ಲಿದೆ ಎಂಬುದನ್ನು ಈ ವರದಿಯಲ್ಲಿ ಹೇಳಲಾಗಿದೆ.

ಪಿಡಬ್ಲ್ಯುಸಿ ಇಂಡಿಯಾದ ಈ ವರದಿ ಪ್ರಕಾರ, ಒಟ್ಟಾರೆ ಮನರಂಜನೆ ಮತ್ತು ಮಾಧ್ಯಮ ಉದ್ಯಮದ ಗಾತ್ರ 2028ರಲ್ಲಿ 3,65,000 ಕೋಟಿ ರೂನಷ್ಟಾಗಬಹುದು. ಇದರಲ್ಲಿ ಜಾಹೀರಾತು ಮಾರುಕಟ್ಟೆಯೇ ಶೇ. 9.4ರ ಸಿಎಜಿಆರ್​ನಲ್ಲಿ ಬೆಳೆದು 2028ರೊಳಗೆ 1,58,000 ಕೋಟಿ ರೂ ಗಾತ್ರದ್ದಾಗಬಹುದು. ಡಿಜಿಟಲ್ ಅಡ್ವರ್ಟೈಸಿಂಗ್ ಮಾರುಕಟ್ಟೆಂತೂ ಬರೋಬ್ಬರಿ ಶೇ. 15.6ರ ಸಿಎಜಿಆರ್​ನಲ್ಲಿ ಬೆಳೆಯಲಿದೆ. ಇದು 2028ರಲ್ಲಿ 85,000 ಕೋಟಿ ರೂ ಗಾತ್ರದ ಉದ್ಯಮವಾಗಬಲ್ಲುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಮುಂಬರುವ ಬಜೆಟ್​ನಲ್ಲಿ ಮಧ್ಯಮ ವರ್ಗದವರಿಗೆ ಭರ್ಜರಿ ರಿಲೀಫ್ ಕಾದಿದೆಯಾ? ಇಲ್ಲಿದೆ ಖುಷಿ ಸುದ್ದಿ

ಒಟಿಟಿ ಮಾರುಕಟ್ಟೆ ಭಾರತದಲ್ಲಿ ಅದ್ವಿತೀಯ ವೇಗ

ಭಾರತದ ಒಟಿಟಿ ಮಾರುಕಟ್ಟೆ ಶೇ. 14.9ರ ಸಿಎಜಿಆರ್​ನಲ್ಲಿ ಬೆಳವಣಿಗೆ ಹೊಂದುವ ನಿರೀಕ್ಷೆ ಇದೆ. ವಿಶ್ವದಲ್ಲೇ ಅತಿವೇಗವಾಗಿ ಒಟಿಟಿ ಕ್ಷೇತ್ರ ಬೆಳೆಯುತ್ತಿರುವುದು ಭಾರತದಲ್ಲೇ. 2023ರಲ್ಲಿ ಒಟಿಟಿ ಮಾರುಕಟ್ಟೆ 17,496 ಕೋಟಿ ರೂ ಆದಾಯ ಹೊಂದಿತ್ತು. 2028ರಲ್ಲಿ ಈ ಆದಾಯ ದ್ವಿಗುಣಗೊಂಡು 35,100 ಕೋಟಿ ರೂ ಮಟ್ಟ ಮುಟ್ಟಬಹುದು ಎಂದು ಪಿಡಬ್ಲ್ಯುಸಿ ಇಂಡಿಯಾದ ವರದಿಯಲ್ಲಿ ಅವಲೋಕಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:10 am, Wed, 11 December 24