ನವದೆಹಲಿ, ಜನವರಿ 3: ರೈಲ್ವೆಯ ವಿವಿಧ ಸೇವೆಗಳಿಗೆ ವಿವಿಧ ಆ್ಯಪ್ಗಳ ಸೇವೆ ಪಡೆಯಬೇಕು. ಅದರ ಬದಲು ಒಂದೇ ಆ್ಯಪ್ನಲ್ಲಿ ಎಲ್ಲಾ ಸೇವೆಯೂ ಸಿಕ್ಕುವಂತಿದ್ದರೆ ಹೇಗೆ? ಭಾರತೀಯ ರೈಲ್ವೆ ಇಲಾಖೆ (Indian Railways) ಇದಕ್ಕೆ ಪರಿಹಾರ ಕೊಡಲು ಹೊರಟಿದೆ. ಎಲ್ಲಾ ರೈಲ್ವೆ ಸೇವೆಗಳು ಒಂದೇ ಪ್ಲಾಟ್ಫಾರ್ಮ್ನಲ್ಲಿ ಲಭ್ಯವಾಗಿಸುವ ಒಂದು ಸೂಪರ್ ಆ್ಯಪ್ (super app) ಅನ್ನು ರೂಪಿಸಲಾಗುತ್ತಿದೆ. ಜನರಿಗೆ ಸುಲಭ ಬಳಕೆ ಆಗುವ ನಿಟ್ಟಿನಲ್ಲಿ ಈ ಆ್ಯಪ್ ಸಹಾಯವಾಗಲಿದೆ. ಈ ಸೂಪರ್ ಆ್ಯಪ್ನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡಬಹುದು, ಪಿಎನ್ಆರ್ ಸ್ಟೇಟಸ್ ಪರಿಶೀಲಿಸಬಹುದು, ಟ್ರೈನ್ ಟ್ರ್ಯಾಕ್ ಮಾಡಬಹುದು, ಇನ್ನೂ ಹಲವು ಕಾರ್ಯಗಳನ್ನು ಒಂದೇ ಆ್ಯಪ್ನಲ್ಲಿ ಮಾಡಬಹುದು.
ಸದ್ಯ ರೈಲ್ವೆ ಇಲಾಖೆಯಿಂದ ಹಲವು ಅ್ಯಪ್ಗಳಿವೆ. ಐಆರ್ಸಿಟಿಸಿ ರೈಲ್ ಕನೆಕ್ಟ್, ಯುಟಿಎಸ್ (ಅನ್ರಿಸರ್ವ್ಡ್ ಟಿಕೆಟಿಂಗ್ ಸಿಸ್ಟಂ), ರೈಲ್ ಮದದ್ (ರೈಲ್ ಹೆಲ್ಪ್), ನ್ಯಾಷನಲ್ ಟ್ರೈನ್ ಎನ್ಕ್ವೇರಿ ಸಿಸ್ಟಂ ಮೊದಲಾದ ಆ್ಯಪ್ಗಳ ಪ್ರಮುಖ ಫೀಚರ್ಗಳು ಸೂಪರ್ ಆ್ಯಪ್ನಲ್ಲಿ ಲಭ್ಯ ಇರುತ್ತವೆ. ರೈಲ್ವೆ ಗ್ರಾಹಕರು ಸೂಪರ್ ಆ್ಯಪ್ವೊಂದನ್ನೇ ಬಳಸಿ ಎಲ್ಲಾ ಸೇವೆ ಪಡೆದುಕೊಳ್ಳಬಹುದು. ಸುಖಾಸುಮ್ಮನೆ ಹೆಚ್ಚು ಆ್ಯಪ್ಗಳನ್ನು ಡೌನ್ಲೋಡ್ ಮಾಡಿ ಬಳಸುವುದು ತಪ್ಪುತ್ತದೆ.
ಭಾರತೀಯ ರೈಲ್ವೆಯ ಸ್ವಾಯತ್ತ ಸಂಸ್ಥೆಯಾದ ಸೆಂಟರ್ ಫಾರ್ ರೈಲ್ವೆ ಇನ್ಫಾರ್ಮೇಶನ್ ಸಿಸ್ಟಮ್ಸ್ (ಸಿಆರ್ಐಎಸ್) ಮಾರ್ಗದರ್ಶನದಲ್ಲಿ ಸೂಪರ್ ಆ್ಯಪ್ ಅಭಿವೃದ್ದಿಪಡಿಸಲಾಗುತ್ತಿದೆ. ರೈಲ್ವೆ ಇಲಾಖೆ ಈ ಯೋಜನೆಗೆ 90 ಕೋಟಿ ವಿನಿಯೋಗಿಸುತ್ತಿದೆ.
ರೈಲ್ವೆ ಇಲಾಖೆಯ ವಿವಿಧ ಆ್ಯಪ್ಗಳ ಪೈಕಿ ಹೆಚ್ಚು ಬಳಕೆಯಲ್ಲಿರುವುದು ಐಆರ್ಸಿಟಿಸಿ ರೈಲ್ ಕನೆಕ್ಟ್. ಇದು 10 ಕೋಟಿಗೂ ಹೆಚ್ಚು ಡೌನ್ಲೋಡ್ ಆಗಿದೆ. ರೈಲ್ ಮದದ್, ಯುಟಿಎಸ್, ಸತರ್ಕ್, ಟಿಎಂಎಸ್ ನಿರೀಕ್ಷಣ್, ಐಆರ್ಸಿಟಿಸಿ ಏರ್, ಪೋರ್ಟ್ರೀಡ್ ಮೊದಲಾದ ಆ್ಯಪ್ಗಳೂ ಜನಪ್ರಿಯವಾಗಿವೆ. ಸೂಪರ್ ಆ್ಯಪ್ ಬಂದ ಬಳಿಕ ಈ ಆ್ಯಪ್ಗಳ ಅವಶ್ಯಕತೆ ಬರುವುದಿಲ್ಲ. ಇದರಿಂದ ರೈಲ್ವೆ ಗ್ರಾಹಕರಿಗೆ ಏಕೀಕೃತವಾದ ಒಂದು ಆ್ಯಪ್ ಮಾತ್ರವೇ ಸಾಕಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ