
ಡಾಲರ್ ಎದುರು ರುಪಾಯಿ ಮೌಲ್ಯ (Dollar vs Rupee) ಇತ್ತೀಚೆಗೆ ದಾಖಲೆಯ 87.50 ಮಟ್ಟ ಮುಟ್ಟಿಹೋಗಿತ್ತು. ಈಗ ಅದು 85 ಮಟ್ಟಕ್ಕಿಂತ ಕೆಳಗೆಗೆ ಬಂದಿದೆ. ಅಮೆರಿಕದ ಒಂದು ಡಾಲರ್ನ ಬೆಲೆ ಬರೋಬ್ಬರಿ 85 ರೂ ಇದೆ. ಅದೇನೇ ಇರಲಿ, ಶತಮಾನದ ಹಿಂದೆ ಭಾರತದ ಕರೆನ್ಸಿ ಮೌಲ್ಯ ಇಷ್ಟು ಕಡಿಮೆ ಇರಲಿಲ್ಲ. ಕುತೂಹಲ ಎಂದರೆ ಅಮೆರಿಕದ ಡಾಲರ್ಗಿಂತಲೂ ಭಾರತದ ರುಪಾಯಿ ಮೌಲ್ಯ ಹೆಚ್ಚಿತ್ತು. ಸರಿಯಾಗಿ ನೂರು ವರ್ಷದ ಹಿಂದೆ, ಅಂದರೆ, 1925ರಲ್ಲಿ ಒಂದು ರುಪಾಯಿಗೆ ಡಾಲರ್ ಮೌಲ್ಯ 10 ಇತ್ತು. ಅಂದರೆ, ಒಂದು ರುಪಾಯಿಯು 10 ಡಾಲರ್ಗೆ ಸಮ ಇತ್ತು. ನಂತರ ಕ್ರಮೇಣವಾಗಿ ಡಾಲರ್ ಮೌಲ್ಯ ಹೆಚ್ಚುತ್ತಾ ಬಂದಿತು. ಅತ್ತ ಡಾಲರ್ ಬಲಗೊಳ್ಳುತ್ತಾ ಹೋದರೆ, ರುಪಾಯಿ ಮೌಲ್ಯ ಕ್ಷೀಣಗೊಳ್ಳುತ್ತಾ ಹೋಯಿತು. ಹೀಗಾಗಿ, ಡಾಲರ್ ಎದುರು ರುಪಾಯಿ ಮೌಲ್ಯ ಎರಡು ವೇಗದಲ್ಲಿ ಇಳಿಮುಖವಾಗಿದೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಆಲ್ಟೋ ಕಾರಿನ ಬೆಲೆಗೆ ಭಾರತದಲ್ಲಿ ದೊಡ್ಡ ಕಾರು ಲಭ್ಯ; ಎರಡು ದೇಶಗಳಲ್ಲಿ ಈ ಕಾರಿನಲ್ಲಿ ವ್ಯತ್ಯಾಸಗಳೇನು?
ಸ್ವಾತಂತ್ರ್ಯಪೂರ್ವದಲ್ಲಿ ಭಾರತವು ಬ್ರಿಟಿಷ್ ಆಳ್ವಿಕೆಯಲ್ಲಿತ್ತು. 19ನೇ ಶತಮಾನದವರೆಗೂ ಬ್ರಿಟನ್ ವಿಶ್ವದ ಶಕ್ತಿಶಾಲಿ ಆರ್ಥಿಕತೆ ಎನಿಸಿತ್ತು. ಭಾರತದ ರುಪಾಯಿಯು ಬ್ರಿಟಿಷ್ ಪೌಂಡ್ ಕರೆನ್ಸಿಗೆ ಜೋಡಿತವಾಗಿತ್ತು. ಈ ಕಾರಣದಿಂದ ಡಾಲರ್ ಎದುರು ರುಪಾಯಿ ಬಲವಾಗಿಯೇ ಇತ್ತು.
ಎರಡು ವಿಶ್ವ ಮಹಾಯುದ್ಧಗಳಾದ ಮೇಲೆ ಬ್ರಿಟನ್ ಸೇರಿದಂತೆ ಐರೋಪ್ಯ ದೇಶಗಳ ಆರ್ಥಿಕತೆ ಮಂದಗೊಂಡಿತು. ಇನ್ನೊಂದೆಡೆ ಅಮೆರಿಕ ದೊಡ್ಡ ಆರ್ಥಿಕತೆಯಾಗಿ ನಿಂತುಕೊಂಡಿತು. 20ನೇ ಶತಮಾನದಲ್ಲಿ ಅಮೆರಿಕ ಸರ್ವತೋಮುಖವಾಗಿ ಅಭಿವೃದ್ಧಿ ಹೊಂದಿತು. ರಷ್ಯಾ ಬಿಟ್ಟರೆ ಬೇರಾವ ದೇಶವೂ ಅಮೆರಿಕದ ಸಾಟಿಗೆ ಬರಲಾಗಲಿಲ್ಲ. ಅಮೆರಿಕದ ಡಾಲರ್ ವಿಶ್ವದ ರಿಸರ್ವ್ ಕರೆನ್ಸಿಯಾಯಿತು.
ಮತ್ತೊಂದು ಸಂಗತಿ ಎಂದರೆ, ಆಗ ಬ್ರಿಟನ್ ಪೌಂಡ್ ಬೆಳ್ಳಿ ಜೊತೆ ಜೋಡಿತವಾಗಿತ್ತು. ಅಮೆರಿಕದ ಡಾಲರ್ ಕರೆನ್ಸಿಯು ಚಿನ್ನದ ಜೊತೆಗೆ ಜೋಡಿತವಾಗಿತ್ತು. ಇದು ಡಾಲರ್ ಮೌಲ್ಯ ವರ್ಧನೆಗೆ ಮತ್ತೊಂದು ಕಾರಣ ಎನಿಸಿದೆ.
ಇದನ್ನೂ ಓದಿ: ಇಂಡಸ್ಇಂಡ್ ಬ್ಯಾಂಕ್: ಸಿಇಒ ದಿಢೀರ್ ರಾಜೀನಾಮೆ; ಹೊಸ ತಂಡ ರಚನೆಗೆ ಆರ್ಬಿಐ ಅನುಮತಿ
ಸ್ವಾತಂತ್ರ್ಯಾನಂತರ ಕೆಲ ವರ್ಷ ಕಾಲ ಭಾರತದ ರುಪಾಯಿ ಕರೆನ್ಸಿ ಬ್ರಿಟಿಷ್ ಪೌಂಡ್ ಜೊತೆ ಲಿಂಕ್ ಆಗಿತ್ತಾದರೂ ನಂತರ ಪೂರ್ಣವಾಗಿ ಬೇರ್ಪಟ್ಟಿತು. ಆದರೂ ಕೂಡ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ ನಿಲ್ಲಲಿಲ್ಲ. ಇದಕ್ಕೆ ಕಾರಣ ಭಾರತದ ವ್ಯಾಪಾರ ಕೊರತೆ. ಸತತವಾಗಿ ರಫ್ತಿಗಿಂತ ಆಮದು ಹೆಚ್ಚಾಗಿತ್ತು. ಹಣದುಬ್ಬರವೂ ಭಾರತದಲ್ಲಿ ಹೆಚ್ಚಿನ ಮಟ್ಟದಲ್ಲೇ ಇತ್ತು.
1991ರಲ್ಲಿ ಭಾರತದ ಆರ್ಥಿಕತೆಯನ್ನು ಜಾಗತೀಕರಣಕ್ಕೆ ತೆರೆಯಲಾಯಿತು. ಈ ವೇಳೆ ರುಪಾಯಿಯನ್ನು ಮತ್ತಷ್ಟು ಅಪಮೌಲ್ಯಗೊಳಿಸಬೇಕಾಯಿತು. ಇವೆಲ್ಲಾ ಕಾರಣದಿಂದ ಡಾಲರ್ ಎದುರು ರುಪಾಯಿ ಮೌಲ್ಯ ನಿರಂತರ ಇಳಿಕೆ ಕಾಣುತ್ತಾ ಬಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ