ವಿದ್ಯಾರ್ಥಿಗಳಿಂದ ವ್ಯಾಪಾರಿಗಳ ತನಕ, ಕರೆನ್ಸಿ ಟ್ರೇಡರ್ಗಳಿಂದ ಜನ ಸಾಮಾನ್ಯರ ತನಕ ಯಾವ ದೇಶದ ಕರೆನ್ಸಿ (Currency) ಮೌಲ್ಯ ಎಷ್ಟಿದೆ ಎಂದು ತಿಳಿದುಕೊಳ್ಳುವುದು ಮುಖ್ಯ. ಈಗಂತೂ ಬಿಡಿ, ಜಾಗತಿಕ ತಲ್ಲಣಗಳು ದಿನಕ್ಕೊಂದು ರೀತಿಯಲ್ಲಿ ಬದಲಾವಣೆಗಳನ್ನು ತೂರಿ ಎಸೆಯುತ್ತಿವೆ. ಭಾರತದ ನೆರೆಯ ದೇಶಗಳಲ್ಲಿ ಆರ್ಥಿಕ ಸ್ಥಿತಿ ಬಹಳ ಚಿಂತೆಯಿಂದ ಕೂಡಿದೆ. ಇಂಥ ಸನ್ನಿವೇಶದಲ್ಲಿ ಯಾವ ಪ್ರಮುಖ ಕರೆನ್ಸಿ ವಿರುದ್ಧ ಭಾರತದ ರೂಪಾಯಿ ಮೌಲ್ಯ ಎಷ್ಟಿದೆ ಎಂಬುದನ್ನು ತಿಳಿಸಲಾಗುತ್ತಿದೆ. ಏಪ್ರಿಲ್ 20ನೇ ತಾರೀಕಿನ ಬುಧವಾರದಂದು ಪ್ರಮುಖ ದೇಶಗಳ ಕರೆನ್ಸಿ ಭಾರತದ ರೂಪಾಯಿ ವಿರುದ್ಧ ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಅಮೆರಿಕ ಯುಎಸ್ಡಿ 1ಕ್ಕೆ= 76.23500 ಭಾರತದ ರೂಪಾಯಿ
ಬ್ರಿಟಿಷ್ ಪೌಂಡ್ ಸ್ಟರ್ಲಿಂಗ್ಗೆ= 99.45100 ಭಾರತದ ರೂಪಾಯಿ
ಯುರೋಗೆ= 82.79300 ಭಾರತದ ರೂಪಾಯಿ
ಚೀನಾದ ಯುವಾನ್= 11.88310 ಭಾರತದ ರೂಪಾಯಿ
ಜಪಾನ್ನ ಯೆನ್= 0.59708 (59 ಪೈಸೆ)
ಕುವೈತ್ ದಿನಾರ್= 249.68500 ಭಾರತದ ರೂಪಾಯಿ
ಇರಾನ್ನ ರಿಯಾಲ್= 0.00180 ಪೈಸೆ
ಬಾಂಗ್ಲಾದೇಶ್ ಟಾಕಾ= 0.88426 (88 ಪೈಸೆ)
ಶ್ರೀಲಂಕಾ ರೂಪಾಯಿ= 0.23117 (23 ಪೈಸೆ)
ಪಾಕಿಸ್ತಾನದ ರೂಪಾಯಿ= 0.41070 (41 ಪೈಸೆ)
ನೇಪಾಳದ ರೂಪಾಯಿ= 0.62331 (62 ಪೈಸೆ)
ರಷ್ಯಾದ ರೂಬೆಲ್= 0.95008 (95 ಪೈಸೆ)
ನಿಮಗೆ ಗೊತ್ತಿರಲಿ, ತೈಲ ಖರೀದಿ ಸೇರಿದಂತೆ ಅಂತರರಾಷ್ಟ್ರೀಯ ವಹಿವಾಟುಗಳು ಮೊದಲಾದವುಗಳಿಗೆ ಸಾಮಾನ್ಯವಾಗಿ ಅಮೆರಿಕನ್ ಡಾಲರ್ ಬಳಸಲಾಗುತ್ತದೆ. ಆದರೆ ಯುನೈಟೆಡ್ ಕಿಂಗ್ಡಮ್ನ ಪೌಂಡ್ ಸ್ಟರ್ಲಿಂಗ್, ಯುರೋಪ್ನಾದ್ಯಂತ ಮಾನ್ಯತೆ ಪಡೆದ ಯುರೋ, ಕುವೈತ್ ದಿನಾರ್ ಸೇರಿದಂತೆ ಇತರ ಕರೆನ್ಸಿಗಳಿಗೆ ಭಾರತದ ರೂಪಾಯಿ ಲೆಕ್ಕದಲ್ಲಿ ಹೆಚ್ಚು ಮೌಲ್ಯವಿದೆ. ಇಲ್ಲಿ ನೀಡಿರುವುದು ಕೆಲವೇ ಕರೆನ್ಸಿಗಳ ಮೌಲ್ಯ ಮಾತ್ರ.
(ಮಾಹಿತಿ ಮೂಲ: goodreturns.in)
ಇದನ್ನೂ ಓದಿ: ಭಾರತೀಯ ಕರೆನ್ಸಿ ನೋಟುಗಳಲ್ಲಿ ಯಾವೆಲ್ಲಾ ಭಾಷೆಗಳಲ್ಲಿ ಮಾಹಿತಿ ನೀಡಿರುತ್ತಾರೆ ಎನ್ನುವುದು ನಿಮಗೆ ತಿಳಿದಿದೆಯೇ? ಇಲ್ಲಿದೆ ನೋಡಿ