ಸೆಮಿಕಂಡಕ್ಟರ್ ಸೆಕ್ಟರ್​ನಲ್ಲಿ ಒಂದೆರಡು ವರ್ಷದಲ್ಲಿ ಸೃಷ್ಟಿಯಾಗಲಿವೆ 10 ಲಕ್ಷ ಉದ್ಯೋಗ

|

Updated on: Nov 12, 2024 | 12:57 PM

Indian semiconductor industry job generation: ಭಾರತದ ಸೆಮಿಕಂಡಕ್ಟರ್ ಚಿಪ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ 2026ರೊಳಗೆ ಹತ್ತು ಲಕ್ಷ ಉದ್ಯೋಗ ಸೃಷ್ಟಿಯಾಗಬಹುದು ಎನ್ನಲಾಗಿದೆ. ಚಿಪ್ ಮ್ಯಾನುಫ್ಯಾಕ್ಚರಿಂಗ್, ಎಟಿಎಂಪಿ, ಚಿಪ್ ಡಿಸೈನ್ ಇತ್ಯಾದಿ ವಿಭಾಗಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶ ನಿರ್ಮಾಣ ಆಗಬಹುದು. ಈ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಲು ಸಾಮಾನ್ಯ ಡಿಗ್ರಿ ಮೂಲಭೂತವಾಗಿ ಬೇಕು. ಎಂಜಿನಿಯರುಗಳಿಗೆ ಪ್ರಾಶಸ್ತ್ಯ ಇರುತ್ತದೆ.

ಸೆಮಿಕಂಡಕ್ಟರ್ ಸೆಕ್ಟರ್​ನಲ್ಲಿ ಒಂದೆರಡು ವರ್ಷದಲ್ಲಿ ಸೃಷ್ಟಿಯಾಗಲಿವೆ 10 ಲಕ್ಷ ಉದ್ಯೋಗ
ಸೆಮಿಕಂಡಕ್ಟರ್
Follow us on

ನವದೆಹಲಿ, ನವೆಂಬರ್ 12: ಭಾರತದಲ್ಲಿ ಪ್ರಬಲವಾಗಿ ಬೆಳವಣಿಗೆ ಹೊಂದುತ್ತಿರುವ ಸೆಮಿಕಂಡಕ್ಟರ್ ಕ್ಷೇತ್ರ ಉದ್ಯೋಗಸೃಷ್ಟಿಗೆ ವಿಫುಲ ಅವಕಾಶ ನೀಡಿದೆ. ಒಂದು ಅಧ್ಯಯನದ ಪ್ರಕಾರ 2026ರೊಳಗೆ ಈ ಉದ್ಯಮದಲ್ಲಿ 10 ಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ. ಚಿಪ್ ತಯಾರಿಕೆ, ಚಿಪ್ ಡಿಸೈನ್, ಅಸೆಂಬ್ಲಿಂಗ್, ಟೆಸ್ಟಿಂಗ್, ಮಾರ್ಕಿಂಗ್, ಪ್ಯಾಕೇಜಿಂಗ್, ಪೂರಕ ಸಾಫ್ಟ್​ವೇರ್ ಅಭಿವೃದ್ಧಿ, ಸಪ್ಲೈ ಚೈನ್ ಇತ್ಯಾದಿ ವಿಭಾಗಗಳಲ್ಲಿ ಸಾಕಷ್ಟು ಉದ್ಯೋಗಾವಕಾಶ ನಿರ್ಮಾಣವಾಗಲಿದೆ ಎಂದು ಎನ್​ಎಲ್​ಬಿ ಸರ್ವಿಸಸ್ ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ. ಚಿಪ್ ಫ್ಯಾಬ್ರಿಕೇಶನ್ ಘಟಕಗಳಲ್ಲೇ ಇನ್ನೊಂದೆರಡು ವರ್ಷದಲ್ಲಿ ಮೂರು ಲಕ್ಷ ಉದ್ಯೋಗಾವಕಾಶ ಇರಲಿದೆ. ಎಟಿಎಂಪಿ ಸೆಕ್ಟರ್​ನಲ್ಲಿ (ಅಸೆಂಬ್ಲಿಂಗ್, ಟೆಸ್ಟಿಂಗ್, ಮಾರ್ಕಿಂಗ್, ಪ್ಯಾಕೇಜಿಂಗ್) ಎರಡು ಲಕ್ಷ ಉದ್ಯೋಗಗಳು ಸೃಷ್ಟಿಯಾಗಬಹುದು ಎಂದು ಇದು ಅಂದಾಜು ಮಾಡಿದೆ.

ಎಂಜಿನಿಯರ್, ಆಪರೇಟರ್, ಟೆಕ್ನಿಶಿಯನ್ ಇತ್ಯಾದಿ ಕೌಶಲ್ಯವಂತ ಕೆಲಸಗಾರರಿಗೆ ಬೇಡಿಕೆ ಹೆಚ್ಚಲಿದೆ. ಕ್ವಾಲಿಟಿ ಕಂಟ್ರೋಲ್, ಪ್ರೊಕ್ಯೂರ್ಮೆಂಟ್, ಮೆಟೀರಿಯನ್ಸ್ ಎಂಜಿನಿಯರಿಂಗ್​ನ ತಜ್ಞರಿಗೆ ಸೆಮಿಕಂಡಕ್ಟರ್ ಉದ್ಯಮ ಮಣೆಹಾಕಲಿದೆ ಎಂದು ಎನ್​ಎಲ್​ಬಿ ಸರ್ವಿಸಸ್​ನ ಅಧ್ಯಯನ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಇದನ್ನೂ ಓದಿ: ಷೇರುಗಳಲ್ಲಿ ಹೂಡಿಕೆ; 10 ವರ್ಷದಲ್ಲಿ ಭಾರತೀಯ ವ್ಯಕ್ತಿಗಳು ಗಳಿಸಿದ ಲಾಭ 84 ಲಕ್ಷ ಕೋಟಿ ರೂ

ಜಾಗತಿಕವಾಗಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಿಗೆ ಸೆಮಿಕಂಡಕ್ಟರ್ ಚಿಪ್​ಗಳು ಬಹಳ ಅವಶ್ಯ. ಹೀಗಾಗಿ, ಚಿಪ್ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಲು ಭಾರತವು ಸೆಮಿಕಂಡಕ್ಟರ್ ಉದ್ಯಮಕ್ಕೆ ಪುಷ್ಟಿ ಕೊಡುತ್ತಿದೆ. ಈ ಉದ್ಯಮದಲ್ಲಿ ಸರ್ಕಾರ ಪಿಎಲ್​ಐ ಸ್ಕೀಮ್ ತಂದು ಉತ್ತೇಜನ ನೀಡುತ್ತಿದೆ. ಭಾರತದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ರಿಕೇಶನ್ ಘಟಕ, ಅಸೆಂಬ್ಲಿಂಗ್ ಮತ್ತು ಟೆಸ್ಟಿಂಗ್ ಘಟಕಗಳನ್ನು ನಿರ್ಮಿಸಲು ಹಲವು ಖಾಸಗಿ ಕಂಪನಿಗಳು ಮುಂದೆ ಬಂದಿವೆ. ಒಂದೆರಡು ವರ್ಷದೊಳಗೆ ಹಲವು ಘಟಕಗಳು ಸ್ಥಾಪನೆಯಾಗಬಹುದು. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಉದ್ಯಮದಲ್ಲಿ ಉದ್ಯೋಗಾವಕಾಶ ಎಷ್ಟಿರಬಹುದು ಎನ್ನುವುದನ್ನು ಈ ವರದಿಯು ಅಂದಾಜು ಮಾಡುವ ಪ್ರಯತ್ನ ಮಾಡಿದೆ.

ಪ್ರೋಸಸ್ ಇಂಟಿಗ್ರೇಶನ್ ಎಂಜಿನಿಯರ್, ಸೆಮಿಕಂಡಕ್ಟರ್ ವೇಫರ್ ಇನ್ಸ್​ಪೆಕ್ಟರ್, ಟೆಕ್ನಿಕಲ್ ಸ್ಪೆಷಲಿಸ್ಟ್, ಪ್ರಿವೆಂಟಿವ್ ಮೈಂಟೆನೆನ್ಸ್ ಟೆಕ್ನಿಶಿಯನ್, ಡಿಸೈನ್ ಎಂಜಿನಿಯರ್, ಪ್ರೋಸಸ್ ಎಂಜಿನಿಯರ್, ಕ್ವಾಲಿಟಿ ಕಂಟ್ರೋಲ್ ಸ್ಪೆಷಲಿಸ್ಟ್ ಮೊದಲಾದವು ಸೆಮಿಕಂಡಕ್ಟರ್ ಉದ್ಯಮದಲ್ಲಿ ಇರುವ ಪ್ರಮುಖ ಹುದ್ದೆಗಳಾಗಿವೆ.

ಇದನ್ನೂ ಓದಿ: DTI ratio: ಪರ್ಸನಲ್ ಲೋನ್: ನಿಮ್ಮ ಡಿಟಿಐ ರೇಶಿಯೋ ಪರಿಶೀಲಿಸಿ ನಿರ್ಧರಿಸುತ್ತದೆ ಬ್ಯಾಂಕು

ಜಾಗತಿಕವಾಗಿ ಇರುವ ಹಲವು ಸೆಮಿಕಂಡಕ್ಟರ್ ಕಂಪನಿಗಳಲ್ಲಿ ಭಾರತೀಯ ಎಂಜಿನಿಯರುಗಳ ಸಂಖ್ಯೆ ಗಣನೀಯವಾಗಿದೆ. ಭಾರತದಲ್ಲಿ ಸ್ಥಾಪನೆಯಾಗುವ ಸೆಮಿಕಂಡಕ್ಟರ್ ಚಿಪ್ ಕಂಪನಿಗಳಿಗೆ ನುರಿತ ಉದ್ಯೋಗಿಗಳ ಲಭ್ಯತೆ ಸಾಕಷ್ಟು ಸಿಗುವ ನಿರೀಕ್ಷೆಇದೆ. ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಎಂಜನಿಯರಿಂಗ್, ಕೆಮಿಕಲ್ ಎಂಜಿನಿಯರಿಂಗ್, ಮೆಟೀರಿಯಲ್ ಸೈನ್ಸ್ ಕೋರ್ಸ್ ಇತ್ಯಾದಿ ಓದಿದವರಿಗೆ ಅವಕಾಶ ಹೆಚ್ಚಿರಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ