DTI ratio: ಪರ್ಸನಲ್ ಲೋನ್: ನಿಮ್ಮ ಡಿಟಿಐ ರೇಶಿಯೋ ಪರಿಶೀಲಿಸಿ ನಿರ್ಧರಿಸುತ್ತದೆ ಬ್ಯಾಂಕು

ಪರ್ಸನಲ್ ಲೋನ್​​ಗೆ ನೀವು ಅರ್ಜಿ ಸಲ್ಲಿಸಿದಾಗ ಬ್ಯಾಂಕು ಅಥವಾ ಹಣಕಾಸು ಸಂಸ್ಥೆ ನಿಮ್ಮ ಡಿಟಿಐ ರೇಶಿಯೋವನ್ನು ಪರಿಶೀಲಿಸುತ್ತದೆ. ಡಿಟಿಐ ಎಂದರೆ ಡೆಟ್ ಟು ಇನ್ಕಮ್. ನಿಮ್ಮ ಆದಾಯದಲ್ಲಿ ಎಷ್ಟು ಪ್ರಮಾಣವನ್ನು ಸಾಲಕ್ಕೆ ಬಳಸುತ್ತೀರಿ ಎಂಬುದು ಡಿಟಿಐ. ಸಾಮಾನ್ಯವಾಗಿ ಶೇ. 35ಕ್ಕಿಂತ ಕಡಿಮೆ ಡಿಟಿಐ ಅನುಪಾತ ಇದ್ದರೆ ಸಾಲ ಸುಲಭವಾಗಿ ಸಿಗುತ್ತದೆ.

DTI ratio: ಪರ್ಸನಲ್ ಲೋನ್: ನಿಮ್ಮ ಡಿಟಿಐ ರೇಶಿಯೋ ಪರಿಶೀಲಿಸಿ ನಿರ್ಧರಿಸುತ್ತದೆ ಬ್ಯಾಂಕು
ಸಾಲ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 12, 2024 | 10:54 AM

ಪರ್ಸನಲ್ ಲೋನ್​ಗಳು ಬ್ಯಾಂಕುಗಳಿಗೆ ಒಂದು ರೀತಿಯಲ್ಲಿ ಅನ್​ಸೆಕ್ಯೂರ್ಡ್ ಲೋನ್ ಆಗಿರುತ್ತವೆ. ಗೃಹಸಾಲ, ಚಿನ್ನದ ಸಾಲವಾದರೆ ಅಡಮಾನ ಇಟ್ಟು ಸಾಲ ನೀಡಲಾಗಿರುತ್ತದೆ. ಪರ್ಸನಲ್ ಲೋನ್​ನಲ್ಲಿ ಯಾವುದೇ ಅಡಮಾನ ಪಡೆಯಲಾಗುವುದಿಲ್ಲ. ಬ್ಯಾಂಕ್ ಅಥವಾ ಬ್ಯಾಂಕ್ ಸಿಬ್ಬಂದಿಯ ವಿವೇಚನೆಯ ಆಧಾರದ ಮೇಲೆ ನೀಡುವ ಸಾಲವಾಗಿರುತ್ತದೆ. ಅಂತೆಯೇ ಪ್ರತಿಯೊಂದು ಬ್ಯಾಂಕ್ ಕೂಡ ಪರ್ಸನಲ್ ಲೋನ್ ನೀಡುವಾಗ ಕೆಲವಿಷ್ಟು ಮಾನದಂಡಗಳನ್ನು ಅನುಸರಿಸುತ್ತವೆ.

ಲೋನ್ ಪಡೆದುಕೊಳ್ಳಬಯಸುವ ವ್ಯಕ್ತಿಯ ವಯಸ್ಸು, ಮಾಸಿಕ ಆದಾಯ, ಕ್ರೆಡಿಟ್ ಸ್ಕೋರ್, ವೃತ್ತಿ, ಡಿಟಿಐ ಇತ್ಯಾದಿ ಅಂಶಗಳನ್ನು ಮೂಲಭೂತವಾಗಿ ಪರಿಗಣಿಸುತ್ತವೆ. ಇವೆಲ್ಲವೂ ಸಮರ್ಪಕವಾಗಿದ್ದರೆ ಆ ವ್ಯಕ್ತಿಗೆ ಸುಲಭವಾಗಿ ಸಾಲ ನೀಡುತ್ತದೆ. ಕೆಲ ಅಂಶಗಳು ಅಸಮರ್ಪಕ ಇದ್ದರೆ ಸಾಲ ನೀಡದೇ ಹೋಗಬಹುದು. ಸಾಲ ನೀಡಿದರೂ ಹೆಚ್ಚು ಬಡ್ಡಿ ವಿಧಿಸಬಹುದು.

ಇದನ್ನೂ ಓದಿ: ಹೂಡಿಕೆ 3,007 ರೂ, ಗಳಿಕೆ 7,788 ರೂ; ಇದು ಎಸ್​ಜಿಬಿ 2016-17 ಸೀರೀಸ್-3 ತಂದ ಲಾಭ; ನವೆಂಬರ್ 16ರಂದು ರಿಡೆಂಪ್ಷನ್

ಈ ಮೇಲಿನ ಅಂಶಗಳಲ್ಲಿ ಡಿಟಿಐ ಪ್ರಮುಖವಾಗಿದೆ. ಡಿಟಿಐ ಎಂದರೆ ಡೆಟ್ ಟು ಇನ್ಕಮ್ ರೇಶಿಯೋ. ಅಂದರೆ, ನಿಮ್ಮ ಆದಾಯಕ್ಕೆ ಹೋಲಿಸಿದರೆ ಸಾಲದ ಪ್ರಮಾಣ ಎಷ್ಟಿದೆ ಎನ್ನುವುದು ಡಿಟಿಐ. ಸಾಲಕ್ಕೆ ಅರ್ಜಿ ಸಲ್ಲಿಸಿರುವ ಹೊತ್ತಲ್ಲಿ ನಿಮ್ಮಲ್ಲಿ ಈಗಾಗಲೇ ಎಷ್ಟು ಸಾಲ ಇದೆ ಎನ್ನುವುದನ್ನು ಬ್ಯಾಂಕುಗಳು ಪರಿಗಣಿಸುತ್ತವೆ. ಇಲ್ಲಿ ಸಾಲ ಎಂದರೆ ಕ್ರೆಡಿಟ್ ಕಾರ್ಡ್ ಇಎಂಐ ಆಗಿರಬಹುದು, ಬೇರೆ ಸಾಲಗಳ ಇಎಂಐ ಕೂಡ ಆಗಿರಬಹುದು. ಉದಾಹರಣೆಗೆ, ನಿಮ್ಮ ಮಾಸಿಕ ಆದಾಯ 50,000 ರೂ ಇದ್ದಲ್ಲಿ ನೀವು ಸರಾಸರಿಯಾಗಿ ತಿಂಗಳಿಗೆ ಕಟ್ಟುವ ಸಾಲದ ಮೊತ್ತವ 20,000 ರೂ ಆಗಿದ್ದರೆ ಆಗ ನಿಮ್ಮ ಡಿಟಿಐ ಅನುಪಾತ ಶೇ. 40ರಷ್ಟಿರುತ್ತದೆ.

ಎಷ್ಟು ಡಿಟಿಐ ಅನುಪಾತ ಇದ್ದರೆ ಸರಿ?

ಡಿಟಿಐ ರೇಶಿಯೋ ಆದಷ್ಟೂ ಕಡಿಮೆ ಇದ್ದರೆ ಉತ್ತಮ. ತಜ್ಞರ ಪ್ರಕಾರ ಸಾಮಾನ್ಯವಾಗಿ ಶೇ. 35ಕ್ಕಿಂತಲೂ ಕಡಿಮೆ ಡಿಟಿಐ ಅನುಪಾತ ಇದ್ದರೆ ಅವರಿಗೆ ಆದ್ಯತೆ ಸಿಗುತ್ತದೆ. ಕೆಲ ಬ್ಯಾಂಕುಗಳು ಹೆಚ್ಚು ಸಾಲ ಒದಗಿಸುವ ಒತ್ತಡದಲ್ಲಿದ್ದಾಗ ಒಂದಷ್ಟು ರಿಸ್ಕ್ ತೆಗೆದುಕೊಂಡು ಶೇ. 40ಕ್ಕಿಂತಲೂ ಹೆಚ್ಚು ಡಿಟಿಐ ಅನುಪಾತ ಇರುವ ವ್ಯಕ್ತಿಗಳಿಗೂ ಸಾಲ ನೀಡಬಹುದು.

ಇದನ್ನೂ ಓದಿ: ನವೆಂಬರ್ 1ರಿಂದ ಎಸ್​ಬಿಐ ಕ್ರೆಡಿಟ್ ಕಾರ್ಡ್​ನ ವಿವಿಧ ಶುಲ್ಕಗಳಲ್ಲಿ ಬದಲಾವಣೆ, ಗಮನಿಸಿ

ಶೇ. 40ಕ್ಕಿಂತಲೂ ಹೆಚ್ಚು ಡಿಟಿಐ ಇದ್ದರೆ ಅದು ಬಹಳ ರಿಸ್ಕಿ ಎನಿಸುತ್ತದೆ. ಪರ್ಸನಲ್ ಲೋನ್ ತೆಗೆದುಕೊಳ್ಳುವ ಮುನ್ನವೇ ನೀವು ಶೇ. 40ರಷ್ಟು ಆದಾಯವನ್ನು ಸಾಲಗಳಿಗೆ ವಿನಿಯೋಗಿಸುತ್ತಿದ್ದೀರಿ, ಎಂದರೆ ನಿಮಗೆ ಹೊಸ ಸಾಲದ ಕಂತು ಕಟ್ಟಲು ಸಾಕಷ್ಟು ಹಣ ಮಿಗುವ ಸಾಧ್ಯತೆ ಕಡಿಮೆ ಇರುತ್ತದೆ. ಹೀಗಾಗಿ, ಬ್ಯಾಂಕುಗಳು ಈ ಅಧಿಕ ಡಿಟಿಐ ರೇಶಿಯೋವನ್ನು ರಿಸ್ಕಿ ಎಂದು ಪರಿಗಣಿಸುತ್ತವೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್