ಹೂಡಿಕೆ 3,007 ರೂ, ಗಳಿಕೆ 7,788 ರೂ; ಇದು ಎಸ್​ಜಿಬಿ 2016-17 ಸೀರೀಸ್-3 ತಂದ ಲಾಭ; ನವೆಂಬರ್ 16ರಂದು ರಿಡೆಂಪ್ಷನ್

SGB gold bond scheme latest news: ಎಸ್​ಜಿಬಿ 2016-17ರ ಸಾಲಿನ ಮೂರನೇ ಸರಣಿ ಬಾಂಡ್​ಗಳು ಈಗ ನವೆಂಬರ್ 16ರಂದು ರಿಡಂಪ್ಷನ್​ಗೆ ಲಭ್ಯ ಇವೆ. ಬಾಂಡ್ ವಿತರಣೆ ವೇಳೆ ಗ್ರಾಮ್​ಗೆ 3,007 ರೂ ಇತ್ತು. ಈಗ ರಿಡಂಪ್ಷನ್ ದರವಾಗಿ 7,788 ರೂ ನಿಗದಿ ಮಾಡಲಾಗಿದೆ. ಎಂಟು ವರ್ಷದಲ್ಲಿ ಹೂಡಿಕೆ ಹಣ ಎರಡೂವರೆ ಪಟ್ಟು ಬೆಳೆದಿದೆ.

ಹೂಡಿಕೆ 3,007 ರೂ, ಗಳಿಕೆ 7,788 ರೂ; ಇದು ಎಸ್​ಜಿಬಿ 2016-17 ಸೀರೀಸ್-3 ತಂದ ಲಾಭ; ನವೆಂಬರ್ 16ರಂದು ರಿಡೆಂಪ್ಷನ್
ಎಸ್​ಜಿಬಿ
Follow us
|

Updated on: Nov 11, 2024 | 5:35 PM

ನವದೆಹಲಿ, ನವೆಂಬರ್ 11: ಸಾವರೀನ್ ಗೋಲ್ಡ್ ಬಾಂಡ್ 2016-17ರ ಮೂರನೇ ಸರಣಿ ಈಗ ಮೆಚ್ಯೂರಿಟಿಗೆ ಬಂದಿದೆ. 2016ರ ನವೆಂಬರ್ 17ರಂದು ಈ ಸರಣಿಯ ಬಾಂಡ್​ಗಳನ್ನು ವಿತರಿಸಲಾಗಿತ್ತು. ಗ್ರಾಮ್​ಗೆ 3,007 ರೂನಂತೆ ಚಿನ್ನದ ಮೇಲೆ ಹೂಡಿಕೆಗೆ ಅವಕಾಶ ನೀಡಲಾಗಿತ್ತು. ಎಂಟು ವರ್ಷದ ಹೂಡಿಕೆ ಅವಧಿಯ ಈ ಬಾಂಡ್ ಇದೇ ನವೆಂಬರ್ 16ಕ್ಕೆ ಮೆಚ್ಯೂರ್ ಆಗಿದೆ. ಗ್ರಾಮ್​ಗೆ 7,788 ರೂ ಎಂದು ರಿಡೆಂಪ್ಷನ್ ಪ್ರೈಸ್ ನಿಗದಿ ಮಾಡಲಾಗಿದೆ. ಎಂಟು ವರ್ಷದಲ್ಲಿ ಹೂಡಿಕೆದಾರರಿಗೆ ಶೇ. 258ರಷ್ಟು ಲಾಭ ಬಂದಂತಾಗಿದೆ. ಅಂದರೆ ಎರಡೂವರೆ ಪಟ್ಟು ಹೆಚ್ಚು ಗಳಿಕೆ ತಂದಿದೆ ಎಸ್​ಜಿಬಿ.

ಹೂಡಿಕೆದಾರರಿಗೆ ಸಿಕ್ಕ ಲಾಭದ ಲೆಕ್ಕಾಚಾರ ಇಲ್ಲಿದೆ…

ಸಾವರೀನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಒಬ್ಬ ವ್ಯಕ್ತಿ ನಾಲ್ಕು ಕಿಲೋ ಚಿನ್ನದ ಮೌಲ್ಯದವರೆಗೆ ಹಣ ಹೂಡಿಕೆ ಮಾಡಬಹುದು. ಒಂದು ವೇಳೆ 2016-17ರ ಮೂರನೇ ಸೀರೀಸ್ ಬಾಂಡ್​ ಬಿಡುಗಡೆ ಆದಾಗ ಯಾರಾದರೂ ವ್ಯಕ್ತಿ 100 ಗ್ರಾಂ ಚಿನ್ನದ ಮೌಲ್ಯದ ಮೇಲೆ ಹೂಡಿಕೆ ಮಾಡಿದ್ದರು ಎಂದಿಟ್ಟುಕೊಳ್ಳಿ. ಅಂದರೆ, 3,00,700 ರೂ ಹೂಡಿಕೆ ಆಗುತ್ತದೆ.

ಇದನ್ನೂ ಓದಿ: ಬೇಡದ ಡೀಮ್ಯಾಟ್ ಖಾತೆ ಮುಕ್ತಾಯಗೊಳಿಸುವುದು ರಗಳೆಯಲ್ಲ, ಸುಲಭ; ಇಲ್ಲಿದೆ ಮಾಹಿತಿ

ಈಗ ರಿಡೆಂಪ್ಷನ್ ದರ 7,788 ರೂ ಇದೆ. ಆ ವ್ಯಕ್ತಿಯ 3,00,700 ರೂ ಹೂಡಿಕೆಯು ಎಂಟು ವರ್ಷದ ಬಳಿಕ 7,78,800 ರೂ ಆದಂತಾಗಿದೆ.

ಎಸ್​ಜಿಬಿಯಿಂದ ಲಾಭ ಇಷ್ಟು ಮಾತ್ರ ಅಲ್ಲ, ಹೂಡಿಕೆಯ ಮೊತ್ತಕ್ಕೆ ಸರ್ಕಾರವು ಶೇ. 2.50ರ ವಾರ್ಷಿಕ ದರದಲ್ಲಿ ಬಡ್ಡಿಯನ್ನೂ ಒದಗಿಸುತ್ತದೆ. ಮೂರು ಲಕ್ಷ ರೂ ಹೂಡಿಕೆ ಇದ್ದರೆ ವರ್ಷದಲ್ಲಿ 7,500 ರೂ ಬಡ್ಡಿಯೂ ಪ್ರಾಪ್ತವಾಗುತ್ತದೆ. ಎಂಟು ವರ್ಷದಲ್ಲಿ ಅದು 60,000 ರೂ ಆಗುತ್ತದೆ. ನಿಮ್ಮ ಗಳಿಕೆಯ ಮೊತ್ತವು 8.38 ಲಕ್ಷ ರೂ ಆಗುತ್ತದೆ. ಹೆಚ್ಚೂಕಡಿಮೆ ನಿಮ್ಮ ಹೂಡಿಕೆ ಎಂಟು ವರ್ಷದಲ್ಲಿ ಮೂರು ಪಟ್ಟು ಬೆಳೆದಂತಾಗಿದೆ.

ಇದನ್ನೂ ಓದಿ: ಡಿಜಿಟಲ್ ಗೋಲ್ಡ್ ಸೇರಿ ವಿವಿಧ ರೀತಿಯ ಚಿನ್ನದ ಮೇಲೆ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಎಷ್ಟಿದೆ, ವಿವರ ಇಲ್ಲಿದೆ

ಎಸ್​ಜಿಬಿಯಲ್ಲಿ ಹೂಡಿಕೆ ಮಾಡುವುದರಿಂದ ಇನ್ನೂ ಒಂದು ಲಾಭ ಇದೆ. ಅದು ತೆರಿಗೆ ವಿನಾಯಿತಿಯದ್ದು. ಇದರಲ್ಲಿ ಸಿಗುವ ಆದಾಯಕ್ಕೆ ಯಾವ ತೆರಿಗೆ ಅನ್ವಯ ಆಗದು. ಲಾಭ ಹೆಚ್ಚಳ ತೆರಿಗೆ ಇರುವುದಿಲ್ಲ. ಪೂರ್ಣ ಮೆಚ್ಯೂರಿಟಿ ಹಣ ನಿಮ್ಮ ಖಾತೆಗೆ ಬಂದು ತಲುಪುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ