ಷೇರುಗಳಲ್ಲಿ ಹೂಡಿಕೆ; 10 ವರ್ಷದಲ್ಲಿ ಭಾರತೀಯ ವ್ಯಕ್ತಿಗಳು ಗಳಿಸಿದ ಲಾಭ 84 ಲಕ್ಷ ಕೋಟಿ ರೂ

Stock market investments: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಈಗ ಬಹಳ ಆಕರ್ಷಕ ಎನಿಸಿದೆ. ಅದಕ್ಕೆ ಕಾರಣ, ಇತ್ತೀಚಿನ ವರ್ಷಗಳಲ್ಲಿ ಅದರ ಭರ್ಜರಿ ಬೆಳವಣಿಗೆ. ಮಾರ್ಗನ್ ಸ್ಟಾನ್ಲೀ ವರದಿಯೊಂದರ ಪ್ರಕಾರ, ಕಳೆದ 10 ವರ್ಷದಲ್ಲಿ ಷೇರು ಹೂಡಿಕೆಗಳಿಂದ ಭಾರತೀಯ ವ್ಯಕ್ತಿಗಳು ಗಳಿಸಿದ ಲಾಭ ಒಂದು ಟ್ರಿಲಿಯನ್ ಡಾಲರ್ ಎನ್ನಲಾಗಿದೆ.

ಷೇರುಗಳಲ್ಲಿ ಹೂಡಿಕೆ; 10 ವರ್ಷದಲ್ಲಿ ಭಾರತೀಯ ವ್ಯಕ್ತಿಗಳು ಗಳಿಸಿದ ಲಾಭ 84 ಲಕ್ಷ ಕೋಟಿ ರೂ
ಹೂಡಿಕೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 12, 2024 | 12:16 PM

ನವದೆಹಲಿ, ನವೆಂಬರ್ 12: ಭಾರತದ ಷೇರು ಮಾರುಕಟ್ಟೆ ಇತ್ತೀಚಿನ ವರ್ಷಗಳಲ್ಲಿ ಅದ್ವಿತೀಯವಾಗಿ ಬೆಳೆಯುತ್ತಿದೆ. ಹೂಡಿಕೆದಾರರಿಗೆ ಭರ್ಜರಿ ರಿಟರ್ನ್ಸ್ ತಂದಿದೆ. ಲಕ್ಷಾಂತರ ಜನರು ಸಿಕ್ಕಾಪಟ್ಟೆ ಲಾಭ ಮಾಡಿಕೊಂಡಿರುವುದು ಹೌದು. ಮಾರ್ಗನ್ ಸ್ಟಾನ್ಲೀ ಸಂಸ್ಥೆ ನಡೆಸಿರುವ ಅಧ್ಯಯನವೊಂದರ ಪ್ರಕಾರ ಕಳೆದ 10 ವರ್ಷದಲ್ಲಿ ಷೇರು ಮಾರುಕಟ್ಟೆಯಿಂದ ಭಾರತೀಯ ಗೃಹವಾಸಿಗಳು (Indian households) ಮಾಡಿರುವ ಲಾಭ ಬರೋಬ್ಬರಿ ಒಂದು ಟ್ರಿಲಿಯನ್ ಡಾಲರ್ ಎನ್ನಲಾಗಿದೆ. ರುಪಾಯಿ ಲೆಕ್ಕದಲ್ಲಿ ಅದು ಬರೋಬ್ಬರಿ 84 ಲಕ್ಷ ಕೋಟಿ ರೂ ಅಂತೆ.

ಕಳೆದ ದಶಕದಲ್ಲಿ ಭಾರತೀಯ ವ್ಯಕ್ತಿಗಳ ಸಂಪತ್ತು 8.5 ಟ್ರಿಲಿಯನ್ ಡಾಲರ್​ನಷ್ಟು ಏರಿತ್ತು. ಇದರಲ್ಲಿ ಈಕ್ವಿಟಿಯ ಪಾಲು ಶೇ. 11ರಷ್ಟಿದೆ. ಸ್ಟಾಕ್​ಗಳಿಂದ ಲಾಭ ಮಾಡಿದವರ ಪಟ್ಟಿಯಲ್ಲಿ ಸಾಮಾನ್ಯ ಜನರ ಜೊತೆಗೆ ಸಂಸ್ಥಾಪಕರನ್ನೂ ಒಳಗೊಂಡರೆ, ಲಾಭ ಗಳಿಸಿದ ಮೊತ್ತ 9.7 ಟ್ರಿಲಿಯನ್ ಡಾಲರ್​ಗೆ ಏರುತ್ತದೆ ಎಂದು ಹೇಳುತ್ತಿದೆ ಮಾರ್ಗನ್ ಸ್ಟಾನ್ಲೀ ವರದಿ.

‘ಈಕ್ವಿಟಿಗಳಲ್ಲಿ ಹೂಡಿಕೆ ಮಾಡಿರುವ ಭಾರತೀಯ ಕುಟುಂಬಗಳ ಸಂಖ್ಯೆ ಈಗಲೂ ಕಡಿಮೆಯೇ ಇದೆ. ಕಂಪನಿಯ ಸಂಸ್ಥಾಪಕರು ಹೊಂದಿರುವ ಈಕ್ವಿಟಿಗಳನ್ನು ಬದಿಗಿಟ್ಟು ನೋಡಿದರೆ, ಉಳಿದ ಭಾರತೀಯರ ಶೇ. 3ರಷ್ಟು ಹಣ ಮಾತ್ರವೇ ಈಕ್ವಿಟಿಗಳಲ್ಲಿ ಹೂಡಿಕೆ ಆಗಿದೆ ಎನ್ನುವ ಸಂಗತಿ ತಿಳಿದುಬರುತ್ತದೆ. ಮುಂಬರುವ ವರ್ಷಗಳಲ್ಲಿ ಈ ಸಂಖ್ಯೆ ಎರಡಂಕಿ ತಲುಪಬಹುದು ಎಂದನಿಸುತ್ತದೆ,’ ಎಂದು ಮಾರ್ಗನ್ ಸ್ಟಾನ್ಲೀ ಸಂಸ್ಥೆಯ ರಿಧಂ ದೇಸಾಯಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಹೂಡಿಕೆ 3,007 ರೂ, ಗಳಿಕೆ 7,788 ರೂ; ಇದು ಎಸ್​ಜಿಬಿ 2016-17 ಸೀರೀಸ್-3 ತಂದ ಲಾಭ; ನವೆಂಬರ್ 16ರಂದು ರಿಡೆಂಪ್ಷನ್

ಕಳೆದ 10 ವರ್ಷದಲ್ಲಿ ಭಾರತೀಯ ಷೇರು ವಿನಿಮಯ ಕೇಂದ್ರಗಳಲ್ಲಿ ಲಿಸ್ಟ್ ಆಗಿರುವ ಎಲ್ಲಾ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳವು 5.4 ಟ್ರಿಲಿಯನ್ ಡಾಲರ್ ತಲುಪಿದೆ. 2014ರಲ್ಲಿ ಇದು1.2 ಟ್ರಿಲಿಯನ್ ಡಾಲರ್ ಇತ್ತು. ಹತ್ತು ವರ್ಷದಲ್ಲಿ ಮಾರ್ಕೆಟ್ ಕ್ಯಾಪ್ ಸಖತ್ ಏರಿದೆ. ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಭಾರತದ್ದು ಐದನೇ ಅತಿದೊಡ್ಡದು. ಜಾಗತಿಕ ಮಾರುಕಟ್ಟೆ ಬಂಡವಾಳದಲ್ಲಿ ಭಾರತದ ಪಾಲು ಹತ್ತು ವರ್ಷದಲ್ಲಿ ಶೇ. 1.6ರಿಂದ ಶೇ. 4.3ಕ್ಕೆ ಜಿಗಿದಿದೆ ಎಂದು ಮಾರ್ಗನ್ ಸ್ಟಾನ್ಲೀ ಸಂಸ್ಥೆಯ ವರದಿಯ್ಲಿ ಹೇಳಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ