ತಮಿಳುನಾಡಿನಲ್ಲಿ 10 ಲಕ್ಷ ಕೋಟಿ ರೂ ಸಾಲದ ಫಜೀತಿ; ಇಲ್ಲಿದೆ ಅತಿಹೆಚ್ಚು ಸಾಲ ಇರುವ ರಾಜ್ಯಗಳ ಪಟ್ಟಿ

Indian states with highest debt: ತಮಿಳುನಾಡು ಸಿಎಂ ಆದ ಬಳಿಕ ಜೋಸೆಫ್ ವಿಜಯ್ ಅವರು ತಮ್ಮ ರಾಜ್ಯಕ್ಕೆ ಹತ್ತು ಲಕ್ಷ ಕೋಟಿ ರೂ ಸಾಲದ ಹೊರೆ ಇದೆ ಎಂದು ಹೇಳಿದ್ದಾರೆ. ಇದಕ್ಕೆ ಮಾಜಿ ಸಿಎಂ ಸ್ಟಾಲಿನ್ ತಿರುಗೇಟು ನೀಡಿದ್ದಾರೆ. ತಮಿಳುನಾಡು ಅತಿಹೆಚ್ಚು ಸಾಲ ಮಾಡಿರುವ ರಾಜ್ಯವಾಗಿದೆ. ಆದರೆ, ಅದರ ಸಾಲ ಮತ್ತು ಜಿಡಿಪಿ ಅನುಪಾತ ಆರೋಗ್ಯಯುತವಾಗಿಯೇ ಇದೆ.

ತಮಿಳುನಾಡಿನಲ್ಲಿ 10 ಲಕ್ಷ ಕೋಟಿ ರೂ ಸಾಲದ ಫಜೀತಿ; ಇಲ್ಲಿದೆ ಅತಿಹೆಚ್ಚು ಸಾಲ ಇರುವ ರಾಜ್ಯಗಳ ಪಟ್ಟಿ
ಸಾಲ
Image Credit source: Shutterstock

Updated on: May 10, 2026 | 7:24 PM

ಚೆನ್ನೈ, ಮೇ 10: ನಟ ಕಮ್ ರಾಜಕಾರಣಿ ಕಮ್ ತಮಿಳುನಾಡು ನೂತನ ಸಿಎಂ ಜೋಸೆಫ್ ವಿಜಯ್ (Tamil Nadu CM Joseph Vijay) ಅವರು ತಮ್ಮ ಸರ್ಕಾರಕ್ಕೆ 10 ಲಕ್ಷ ಕೋಟಿ ರೂ ಸಾಲದ ಹೊರೆ ಇದೆ ಎಂದು ಹಿಂದಿನ ಸರ್ಕಾರಗಳನ್ನು ದೂಷಿಸುತ್ತಾ, ಅಳಲು ಮತ್ತು ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೂ ಮುಂಚೆ ಸಿಎಂ ಆಗಿದ್ದ ಎಂ.ಕೆ. ಸ್ಟಾಲಿನ್ ಅವರು ವಿಜಯ್ ಹೇಳಿಕೆಗೆ ಆಕ್ಷೇಪಿಸಿ, ತಿರುಗೇಟು ಕೊಟ್ಟಿದ್ದಾರೆ. ತಮಿಳುನಾಡು ಮಾಡಿರುವ ಸಾಲವು ಅದರ ಆರ್ಥಿಕ ಶಕ್ತಿಯ ಇತಿಮಿತಿಯಲ್ಲೇ ಇದೆ ಎಂದು ಹೇಳಿದ್ದಾರೆ.

ಭಾರತೀಯ ರಾಜ್ಯಗಳ ಪೈಕಿ ತಮಿಳುನಾಡು ಅತಿಹೆಚ್ಚು ಸಾಲ ಮಾಡಿರುವ ರಾಜ್ಯವಾಗಿದೆ. ಆದರೆ, ಶಕ್ತಿಮೀರಿ ಸಾಲ ಮಾಡಿದ ರಾಜ್ಯಗಳ ಸಾಲಿನಲ್ಲಿ ತಮಿಳುನಾಡು ಇಲ್ಲ ಎನ್ನುವುದು ಗಮನಾರ್ಹ. ರಾಜ್ಯದ ಜಿಡಿಪಿಗೆ ಹೋಲಿಸಿದರೆ ಅದರ ಸಾಲ ಎಷ್ಟಿದೆ, ಅದರ ಅನುಪಾತ ಎಷ್ಟು ಎಂಬುದರ ಮೇಲೆ ಸಾಲದ ತೀವ್ರತೆ ಅಥವಾ ಅಪಾಯವನ್ನು ಗಣಿಸಬಹುದು.

ಇದನ್ನೂ ಓದಿ: ವಿಜಯ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮೊದಲು ವಂದೇ ಮಾತರಂ, ನಂತರ ಜನಗಣಮನ, ತಮಿಳು ಗೀತೆ; ಇದು ಹೊಸ ಮೆಸೇಜಾ?

ಅತಿಹೆಚ್ಚು ಸಾಲ ಹೊಂದಿರುವ ಟಾಪ್-10 ರಾಜ್ಯಗಳು

  1. ತಮಿಳುನಾಡು: 9.6 ಲಕ್ಷ ಕೋಟಿ ರೂ
  2. ಉತ್ತರಪ್ರದೇಶ: 8.6 ಲಕ್ಷ ಕೋಟಿ ರೂ
  3. ಮಹಾರಾಷ್ಟ್ರ: 8.1 ಲಕ್ಷ ಕೋಟಿ ರೂ
  4. ಕರ್ನಾಟಕ: 7.3 ಲಕ್ಷ ಕೋಟಿ ರೂ
  5. ಪಶ್ಚಿಮ ಬಂಗಾಳ: 7.1 ಲಕ್ಷ ಕೋಟಿ ರೂ
  6. ರಾಜಸ್ಥಾನ್: 6.4 ಲಕ್ಷ ಕೋಟಿ ರೂ
  7. ಆಂಧ್ರಪ್ರದೇಶ: 5.6 ಲಕ್ಷ ಕೋಟಿ ರೂ
  8. ಮಧ್ಯಪ್ರದೇಶ: 5.3 ಲಕ್ಷ ಕೋಟಿ ರೂ
  9. ಗುಜರಾತ್: 4.9 ಲಕ್ಷ ಕೋಟಿ ರೂ
  10. ಕೇರಳ: 4.7 ಲಕ್ಷ ಕೋಟಿ ರೂ

ಈ ಮೇಲಿನ 10 ಅತ್ಯಧಿಕ ಸಾಲವಂತ ರಾಜ್ಯಗಳಲ್ಲಿ ಶಕ್ತಿಮೀರಿ ಸಾಲ ಮಾಡಿರುವ ರಾಜ್ಯಗಳೆಂದರೆ ಪಶ್ಚಿಮ ಬಂಗಾಳ ಮತ್ತು ಕೇರಳ. ಇವೆರಡೂ ಕೂಡ ಶೇ. 30ಕ್ಕಿಂತಲೂ ಹೆಚ್ಚು ಸಾಲ ಜಿಎಸ್​ಡಿಪಿ ಅನುಪಾತ ಹೊಂದಿವೆ. ಈ ರೀತಿ ಶಕ್ತಿಮೀರಿ ಬಹ ಅಧಿಕ ಸಾಲ ಮಾಡಿರುವ ರಾಜ್ಯಗಳೆಂದರೆ ಅರುಣಾಚಲ ಪ್ರದೇಶ, ಪಂಜಾಬ್, ಹಿಮಾಚಲ, ಪಶ್ಚಿಮ ಬಂಗಾಳ, ಬಿಹಾರ, ನಾಗಾಲ್ಯಾಂಡ್, ಕೇರಳ ಮೊದಲಾದವು ಇವೆ.

ಇದನ್ನೂ ಓದಿ: ವಿಜಯ್ ಮಂತ್ರಿಮಂಡಲ; ಎಂಜಿಆರ್ ಒಡನಾಡಿ, ವೈದ್ಯ, ಸಂಘಟನಾ ಚತುರ, ಯುವತಿ, ಚಿತ್ರ ನಟ ಮೊದಲಾದವರು…

ಕರ್ನಾಟಕದ ಸಾಲ ಅನುಪಾತ ತಹಬದಿಯಲ್ಲಿದೆ. ಮಹಾರಾಷ್ಟ್ರ, ಉತ್ತರಪ್ರದೇಶ, ಒಡಿಶಾ ಮೊದಲಾದ ರಾಜ್ಯಗಳು ಉತ್ತಮ ಸಾಲ ಮತ್ತು ಜಿಡಿಪಿ ಅನುಪಾತ ಹೊಂದಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us