AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮೊದಲು ವಂದೇ ಮಾತರಂ, ನಂತರ ಜನಗಣಮನ, ತಮಿಳು ಗೀತೆ; ಇದು ಹೊಸ ಮೆಸೇಜಾ?

Vande Mataram, Jan Gana Mana, Tamil Thai Vazhthu Protocol Explained: ಜೋಸೆಫ್ ವಿಜಯ್ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಕಾರ್ಯಕ್ರಮದಲ್ಲಿ ಮೊದಲು ವಂದೇ ಮಾತರಂ ಅನ್ನು ಸಂಪೂರ್ಣವಾಗಿ ಹಾಡಲಾಯಿತು. ನಂತರ ರಾಷ್ಟ್ರಗೀತೆಯಾದ ಜನ ಗಣ ಮನ ಹಾಡಲಾಗಿದೆ. ಆ ಬಳಿಕ ಮೂರನೇ ಕ್ರಮಾಂಕದಲ್ಲಿ ತಮಿಳು ನಾಡಗೀತೆ ತಮಿಳ್ ತಾಯ್ ವಾಳ್ತು ಹಾಡಲಾಯಿತು.

ವಿಜಯ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಮೊದಲು ವಂದೇ ಮಾತರಂ, ನಂತರ ಜನಗಣಮನ, ತಮಿಳು ಗೀತೆ; ಇದು ಹೊಸ ಮೆಸೇಜಾ?
ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ...Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 10, 2026 | 6:33 PM

Share

ಚೆನ್ನೈ, ಮೇ 10: ತಮಿಳುನಾಡು ನೂತನ ಮುಖ್ಯಮಂತ್ರಿಯಾಗಿ ವಿಜಯ್ (Thalapathi Joseph Vijay) ಅವರು ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಚೆನ್ನೈನಲ್ಲಿರುವ ರಾಜಭವನ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರು ವಿಜಯ್​ಗೆ ಪ್ರಮಾಣವಚನ ಬೋಧಿಸಿದರು. ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹಾಡಾಗಿರುವ ವಂದೇ ಮಾತರಂ (National song Vande Mataram) ಅನ್ನು ಹಾಡಿಸಲಾಯಿತು. ನಂತರ ರಾಷ್ಟ್ರಗೀತೆ (National Anthem) ಹಾಗೂ ಆ ಬಳಿಕ ತಮಿಳುನಾಡಿನ ನಾಡಗೀತೆಯನ್ನು ಹಾಡಲಾಯಿತು.

ಬಂಗಾಳಿ ಕವಿ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಬರೆದ ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಹಾಡಲಾಯಿತು. ನಂತರ, ರವೀಂದ್ರನಾಥ್ ಠಾಗೋರ್ ವಿರಚಿತ ಜನ ಗಣ ಮನ ರಾಷ್ಟ್ರ ಗೀತೆಯನ್ನು ಹಾಡಲಾಯಿತು. ಮೂರನೇ ಕ್ರಮಾಂಕದಲ್ಲಿ ತಮಿಳ್ ತಾಯ್ ವಾಳ್ತು ಹಾಡನ್ನು ಹಾಡಿಸಲಾಯಿತು.

ತಮಿಳ್ ತಾಯ್ ವಾಳ್ತು ಹಾಡನ್ನು 19ನೇ ಶತಮಾನದ ತಮಿಳು ಕವಿ ಮನೋನ್ಮಣಿಯಮ್ ಸುಂದಂ ಪಿಳ್ಳೈ ಅವರು ಬರೆದಿದ್ದಾರೆ. ತಮಿಳು ದೈವಕ್ಕೆ ಪ್ರಾರ್ಥನೆ ಸಲ್ಲಿಸುವ ಹಾಡು ಇದು. 1970ರಲ್ಲಿ ಈ ಹಾಡನ್ನು ತಮಿಳುನಾಡು ಸರ್ಕಾರ ಅಧಿಕೃತ ಪ್ರಾರ್ಥನೆ ಎನ್ನುವ ಸ್ಥಾನ ಕೊಟ್ಟಿತು. 2021ರಲ್ಲಿ ಇದು ತಮಿಳುನಾಡಿನ ನಾಡಗೀತೆಯಾಯಿತು.

ಇದನ್ನೂ ಓದಿ: ವಿಜಯ್ ಮಂತ್ರಿಮಂಡಲ; ಎಂಜಿಆರ್ ಒಡನಾಡಿ, ವೈದ್ಯ, ಸಂಘಟನಾ ಚತುರ, ಯುವತಿ, ಚಿತ್ರ ನಟ ಮೊದಲಾದವರು…

1970ರಿಂದಲೂ ತಮಿಳುನಾಡಿನಲ್ಲಿ ಪ್ರಮಾಣ ವಚನ ಬೋಧನೆಯಂತಹ ಕಾರ್ಯಕ್ರಮಗಳಲ್ಲಿ ತಮಿಳ್ ತಾಯ್ ವಾಳ್ತುವನ್ನು ಮೊದಲು ಹಾಡಲಾಗುತ್ತದೆ. ನಂತರ ಜನ ಗಣ ಮನ ಹಾಡಿಸಲಾಗುತ್ತಾ ಬಂದಿದೆ. ಮಧ್ಯದಲ್ಲಿ ಒಮ್ಮೆ ಜಯಲಲಿತಾ ಅವರ ಕಾರ್ಯಕ್ರಮದಲ್ಲಿ ವಂದೇ ಮಾತರಂ ಹಾಡಲಾಗಿತ್ತು. ಉಳಿದಂತೆ, ತಮಿಳು ನಾಡಗೀತೆ ಮೊದಲು, ನಂತರ ರಾಷ್ಟ್ರ ಗೀತೆ. ಈ ಪರಿಪಾಟವೇ ಇದ್ದದ್ದು.

ಜೋಸೆಫ್ ವಿಜಯ್ ಕಾರ್ಯಕ್ರಮದಲ್ಲಿ ತಮಿಳು ನಾಡಗೀತೆಗೆ 3ನೇ ಸ್ಥಾನ ಯಾಕೆ?

ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಕ್ರಮವಾಗಿ ವಂದೇ ಮಾತರಂ, ಜನಗಣಮನ ಹಾಗೂ ತಮಿಳು ತಾಯ್ ವಾಳ್ತು ಹಾಡಲಾಯಿತು. ಮೊದಲು ಇರುತ್ತಿದ್ದ ತಮಿಳು ನಾಡಗೀತೆ ಮೂರನೇ ಕ್ರಮಾಂಕಕ್ಕೆ ಹೋಗಿರುವುದು ಕೆಲವರಿಗೆ ಅಚ್ಚರಿ ಎನಿಸಬಹುದು. ಅದಕ್ಕೆ ಕಾರಣಗಳಿವೆ.

2026ರ ಫೆಬ್ರುವರಿಯಲ್ಲಿ ಕೇಂದ್ರ ಸರ್ಕಾರವು ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಡುಗಳಿಗೆ ಒಂದು ನಿಯಮಾವಳಿ ಮತ್ತು ಕ್ರಮಗಳನ್ನು ನಿಗದಿ ಮಾಡಿದೆ. ಅದರ ಪ್ರಕಾರ ಮೊದಲು ವಂದೇ ಮಾತರಂ ಹಾಡಬೇಕು. ನಂತರ ಜನ ಗಣ ಮನ ಇರಬೇಕು.

ಇದನ್ನೂ ಓದಿ: ರಾಹುಲ್ ಗಾಂಧಿ ಮಾಡಿದ ಸಾಲು ಸಾಲು ತಪ್ಪುಗಳು… ಅಸ್ಸಾಂ, ಆಂಧ್ರದಂತೆ ತಮಿಳುನಾಡನ್ನೂ ಕಾಂಗ್ರೆಸ್ ಕಳೆದುಕೊಂಡಿತಾ?

ಈ ಪ್ರೋಟೋಕಾಲ್ ಅನ್ನು ವಿಜಯ್ ಕಾರ್ಯಕ್ರಮದಲ್ಲಿ ನೆರವೇರಿಸಲಾಗಿದೆ. ಇದು ವಿಜಯ್ ಅವರ ರಾಜಕೀಯ ನಿಲುವಿನಲ್ಲಾದ ಬದಲಾವಣೆ ಎಂದಾಗಲೀ, ದ್ರಾವಿಡ ಸಿದ್ಧಾಂತಗಳಿಂದ ದೂರ ಹೋಗಿದ್ದಾರೆಂದಾಲೀ ಅರ್ಥೈಸಲು ಆಗುವುದಿಲ್ಲ. ಪಶ್ಚಿಮ ಬಂಗಾಳ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲೂ ರಾಷ್ಟ್ರೀಯ ಹಾಡು, ರಾಷ್ಟ್ರ ಗೀತೆ ಹಾಗೂ ಬಂಗಾಳಿ ನಾಡಗೀತೆಯನ್ನು ಅನುಕ್ರಮವಾಗಿ ಹಾಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ
ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ