Closing Bell: ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ಷೇರುಪೇಟೆಯಲ್ಲಿ ದಿನಾಂತ್ಯದ ವಹಿವಾಟು ಮುಗಿಸಿದ ಸೆನ್ಸೆಕ್ಸ್​, ನಿಫ್ಟಿ

| Updated By: Srinivas Mata

Updated on: Aug 03, 2021 | 4:57 PM

Closing Bell: ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಆಗಸ್ಟ್​ 3ನೇ ತಾರೀಕಿನ ಮಂಗಳವಾರ ಸಾರ್ವಕಾಲಿಕ ದಾಖಲೆ ಎತ್ತರದಲ್ಲಿ ದಿನಾಂತ್ಯ ಕಂಡಿದೆ.

Closing Bell: ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ಷೇರುಪೇಟೆಯಲ್ಲಿ ದಿನಾಂತ್ಯದ ವಹಿವಾಟು ಮುಗಿಸಿದ ಸೆನ್ಸೆಕ್ಸ್​, ನಿಫ್ಟಿ
ಸಾಂದರ್ಭಿಕ ಚಿತ್ರ
Follow us on

ಷೇರು ಮಾರುಕಟ್ಟೆ ಹೂಡಿಕೆದಾರರ ಪಾಲಿಗೆ ಆಗಸ್ಟ್ 3ನೇ ತಾರೀಕಿನ ಮಂಗಳವಾರ ಭರ್ಜರಿ ಗಳಿಕೆ ತಂದ ದಿನ. ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಎರಡೂ ಸಾರ್ವಕಾಲಿಕ ಎತ್ತರದ ದಾಖಲೆಯನ್ನು ಬರೆದವು. ಅದರಲ್ಲಿ ಸೆನ್ಸೆಕ್ಸ್ 53,887.98 ಪಾಯಿಂಟ್ಸ್ ಹಾಗೂ ನಿಫ್ಟಿ 16,146.90 ಪಾಯಿಂಟ್ಸ್ ಇಂಟ್ರಾಡೇ ವಹಿವಾಟಿನಲ್ಲಿ ಮುಟ್ಟಿ, ಹೊಸ ದಾಖಲೆಯನ್ನೇ ಬರೆದವು. ದಿನದ ಕೊನೆಗೆ ಸೆನ್ಸೆಕ್ಸ್ 873 ಪಾಯಿಂಟ್ಸ್ ಅಥವಾ ಶೇ 1.65ರಷ್ಟು ಮೇಲೇರಿ 53,823.36 ಪಾಯಿಂಟ್ಸ್​ನೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿಯು 246 ಪಾಯಿಂಟ್ಸ್ ಅಥವಾ ಶೇ 1.55ರಷ್ಟು ಹೆಚ್ಚಳವಾಗಿ ವ್ಯವಹಾರ ಚುಕ್ತಾಗೊಳಿಸಿತು. ಸೂಚ್ಯಂಕಗಳ ಓಟಕ್ಕೆ ಸಮವಾಗಿ ಮಿಡ್​ ಕ್ಯಾಪ್ ಮತ್ತು ಸ್ಮಾಲ್​ ಕ್ಯಾಪ್ ಸೂಚ್ಯಂಕಗಳು ಸಹ ಕ್ರಮವಾಗಿ 23,443 ಹಾಗೂ 27,232 ತಲುಪಿದವು.

ಜೈನ್​ ಇರಿಗೇಷನ್ ಸಿಸ್ಟಮ್ಸ್, ಟ್ರೈಡೆಂಟ್, ಸುಜ್ಲಾನ್ ಎನರ್ಜಿ, ನಹರ್ ಪಾಲಿಫಿಲ್ಮ್ಸ್, ನ್ಯುರೇಕ, ರಶಿಲ್ ಡೆಕೊರ್, ಪಿಜಿ ಎಲೆಕ್ಟ್ರೋಪ್ಲಾಸ್ಟ್, ಅನ್ಸಲ್ ಪ್ರಾಪರ್ಟೀಸ್, ಇಂಟೆನ್ಸ್ ಟೆಕ್ನಾಲಜೀಸ್, ಮೈಂಡ್​ಟೆಕ್​ ಸೇರಿದಂತೆ 500ಕ್ಕೂ ಹೆಚ್ಚು ಕಂಪೆನಿಯ ಷೇರುಗಳು ಇಂಟ್ರಾಡೇ ವಹಿವಾಟಿನಲ್ಲಿ ಬಿಎಸ್​ಇಯಲ್ಲಿ ಅಪ್ಪರ್ ಸರ್ಕ್ಯೂಟ್ (ಒಂದು ದಿನದ ಗರಿಷ್ಠ ಪ್ರಮಾಣದ ಗಳಿಕೆ ಮಿತಿ) ತಲುಪಿದವು. ಇನ್ಫೋಸಿಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸನ್​ ಫಾರ್ಮಾ, ಟೈಟನ್, ಅಲ್ಟ್ರಾಟೆಕ್ ಸಿಮೆಂಟ್, ಎಸಿಸಿ, ಅಂಬುಜಾ ಸಿಮೆಂಟ್, ಡಾಬರ್, ಬಾಟಾ ಇಂಡಿಯಾ, ಡಿವೀಸ್ ಲ್ಯಾಬ್ಸ್, ವಿಪ್ರೋ ಸೇರಿದಂತೆ 525ಕ್ಕೂ ಹೆಚ್ಚು ಕಂಪೆನಿಯ ಷೇರುಗಳು ಬಿಎಸ್​ಇಯಲ್ಲಿ ಇಂಟ್ರಾಡೇನಲ್ಲಿ ವಾರ್ಷಿಕ ಗರಿಷ್ಠ ಮಟ್ಟ ತಲುಪಿದವು.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಟೈಟನ್ ಕಂಪೆನಿ ಶೇ 3.88
ಎಚ್​ಡಿಎಫ್​ಸಿ ಶೇ 3.76
ಇಂಡಸ್​ಇಂಡ್ ಬ್ಯಾಂಕ್ ಶೇ 3.45
ನೆಸ್ಟ್ಲೆ ಶೇ 3.21
ಎಸ್​ಬಿಐ ಶೇ 2.67

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಜೆಎಸ್​ಡಬ್ಲ್ಯು ಸ್ಟೀಲ್ ಶೇ -0.86
ಬಜಾಜ್ ಆಟೋ ಶೇ -0.35
ಶ್ರೀ ಸಿಮೆಂಟ್ಸ್ ಶೇ -0.31
ಟಾಟಾ ಸ್ಟೀಲ್ ಶೇ -0.20
ಎನ್​ಟಿಪಿಸಿ ಶೇ -0.08

ಇದನ್ನೂ ಓದಿ: Stock Market LIVE: ನಿಫ್ಟಿ -50 ಸೂಚ್ಯಂಕ 16 ಸಾವಿರ ಪಾಯಿಂಟ್ಸ್ ದಾಟಿ ದಾಖಲೆ, ಸೆನ್ಸೆಕ್ಸ್​ ಕೂಡ ಹೊಸ ಎತ್ತರಕ್ಕೆ

(Indian Stock Market Index Sensex And Nifty Closed At Record High On August 3rd 2021)