Tower Chips: ಇಸ್ರೇಲ್​ನ ಟವರ್ ಸೆಮಿಕಂಡಕ್ಟರ್​ನ ಅತಿದೊಡ್ಡ ಚಿಪ್ ಫ್ಯಾಕ್ಟರಿ ಭಾರತದಲ್ಲಿ ಸ್ಥಾಪನೆ ಸಾಧ್ಯತೆ

|

Updated on: Feb 13, 2024 | 11:38 AM

Israel's Tower Semiconductor To Make Huge Investment In India: ಸೆಮಿಕಂಡಕ್ಟರ್ ಚಿಪ್ ಉತ್ಪಾದನೆಯ ಕ್ಷೇತ್ರ ಬೆಳೆಸುವ ಭಾರತ ಸರ್ಕಾರದ ಪ್ರಯತ್ನಕ್ಕೆ ಮತ್ತೊಂದು ಯಶಸ್ಸು ಸಿಕ್ಕಿದೆ. ಇಸ್ರೇಲ್​ನ ಪ್ರಮುಖ ಚಿಪ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಎನಿಸಿದ ಟವರ್ ಸೆಮಿಕಂಡಕ್ಟರ್ ಭಾರತದಲ್ಲಿ 8 ಬಿಲಿಯನ್ ಡಾಲರ್ ಹೂಡಿಕೆಗೆ ಮುಂದಾಗಿದೆ. ಭಾರತದಲ್ಲಿ 65ಎನ್​ಎಂ ಮತ್ತು 40 ಎನ್​ಎಂ ಚಿಪ್​ಗಳನ್ನು ತಯಾರಿಸಲು ಹೊರಟಿರುವ ಟವರ್ ಸೆಮಿಕಂಡಕ್ಟರ್ ಈಗ ಇನ್ವೆಸ್ಟ್​ಮೆಂಟ್ ಪಾರ್ಟ್ನರ್​ಗಾಗಿ ಹುಡುಕುತ್ತಿದೆ.

Tower Chips: ಇಸ್ರೇಲ್​ನ ಟವರ್ ಸೆಮಿಕಂಡಕ್ಟರ್​ನ ಅತಿದೊಡ್ಡ ಚಿಪ್ ಫ್ಯಾಕ್ಟರಿ ಭಾರತದಲ್ಲಿ ಸ್ಥಾಪನೆ ಸಾಧ್ಯತೆ
ಸೆಮಿಕಂಡಕ್ಟರ್
Follow us on

ನವದೆಹಲಿ, ಫೆಬ್ರುವರಿ 13: ವಿಶ್ವದ ಸೆಮಿಕಂಡಕ್ಟರ್ ಚಿಪ್ ಅಡ್ಡೆಗಳಲ್ಲಿ ಒಂದಾಗಿರಬೇಕೆನ್ನುವ ಭಾರತದ ಕನಸು ಹೆಚ್ಚು ಗಟ್ಟಿಗೊಳ್ಳುತ್ತಿದೆ. ಭಾರತದಲ್ಲಿ ಚಿಪ್ ಫ್ಯಾಕ್ಟರಿ (chip manufacturing) ಸ್ಥಾಪಿಸಲು ಹಲವು ಜಾಗತಿಕ ದೈತ್ಯ ಕಂಪನಿಗಳು ಆಸಕ್ತಿ ತೋರಿವೆ. ಇಸ್ರೇಲ್​ನ ಟವರ್ ಸೆಮಿಕಂಡಕ್ಟರ್ (Tower Semiconductor) ಸಂಸ್ಥೆ ಭಾರತದಲ್ಲಿ ಚಿಪ್ ತಯಾರಿಕೆಯ ಘಟಕ ಸ್ಥಾಪಿಸಲು ಉತ್ಸುಕವಾಗಿದೆ. ಇಂಡಿಯನ್ ಎಕ್ಸ್​ಪ್ರೆಸ್ ವರದಿ ಪ್ರಕಾರ ಇಸ್ರೇಲೀ ಕಂಪನಿ ಭಾರತದಲ್ಲಿ ಎಂಟು ಬಿಲಿಯನ್ ಡಾಲರ್ ಹೂಡಿಕೆ ಮಾಡಬಹುದು ಎನ್ನಲಾಗಿದೆ. ಈ ಯೋಜನೆ ನನಸಾದಲ್ಲಿ ಟವರ್ ಸೆಮಿಕಂಡಕ್ಟರ್​ನ ಅತಿದೊಡ್ಡ ಚಿಪ್ ಫ್ಯಾಕ್ಟರಿ ಭಾರತದಲ್ಲಿ ತಲೆ ಎತ್ತಲಿದೆ. ಈ ಇಸ್ರೇಲೀ ಕಂಪನಿ ಇಷ್ಟೊಂದು ದೊಡ್ಡ ಮೊತ್ತದ ಹೂಡಿಕೆಯನ್ನು ಮಾಡಹೊರಟಿರುವುದು ಇದೇ ಮೊದಲು.

ಟವರ್ ಸೆಮಿಕಂಡಕ್ಟರ್ ಸಂಸ್ಥೆ ಭಾರತದಲ್ಲಿ 65 ನ್ಯಾನೋಮೀಟರ್ ಮತ್ತು 40 ನ್ಯಾನೋಮೀಟರ್ ಚಿಪ್​ಗಳನ್ನು ತಯಾರಿಸಲು ಯೋಜಿಸಿದೆ. ಸೆಮಿಕಂಡಕ್ಟರ್ ಉತ್ಪಾದನೆಗೆಂದು ಭಾರತ ಸರ್ಕಾರ ನಡೆಸುತ್ತಿರುವ 10 ಬಿಲಿಯನ್ ಡಾಲರ್ ಮೊತ್ತದ ಪಿಎಲ್​ಐ ಸ್ಕೀಮ್ ಮೂಲಕ ತಮಗೆ ನೆರವು ಸಿಗಬೇಕೆಂದು ಇಸ್ರೇಲೀ ಕಂಪನಿ ಮನವಿ ಮಾಡಿದೆ. ಒಂದು ವೇಳೆ ಈ ನಿಟ್ಟಿನಲ್ಲಿ ಭರವಸೆ ಸಿಕ್ಕಲ್ಲಿ ಟವರ್ ಸೆಮಿಕಂಡಕ್ಟರ್ ಭಾರತದಲ್ಲಿ ಹೂಡಿಕೆ ಮಾಡುವ ಸಾಧ್ಯತೆ ಇದೆ. ಇದೇ ವೇಳೆ ಈ ಯೋಜನೆಗಾಗಿ ಅದು ಇನ್ವೆಸ್ಟ್​ಮೆಂಟ್ ಪಾರ್ಟ್ನರ್ ಅನ್ನು ಹುಡುಕುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: ಗೂಗಲ್ ಸಿಇಒ ಸುಂದರ್ ಪಿಚೈ ಬೆಳಗ್ಗೆ ಎದ್ದು ಮಾಡೋ ಮೊದಲ ಕೆಲಸ ಇದು…

ಟವರ್ ಸೆಮಿಕಂಡಕ್ಟರ್ ಈ ಹಿಂದೆಯೂ ಭಾರತದಲ್ಲಿ ಹೆಜ್ಜೆ ಊರಲು ಆಸಕ್ತಿ ತೋರಿದ್ದಿದೆ. 2007ರಲ್ಲಿ ಇಂಟರ್ನ್ಯಾಷನಲ್ ಸೆಮಿಕಂಡ್ಟರ್ ಕನ್ಸಾರ್ಟಿಯಮ್​ನ ಭಾಗವಾಗಿ ಅದು ಭಾರತದಲ್ಲಿ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ಸ್ಥಾಪಿಸಲು ಯತ್ನಿಸಿತ್ತು. ಅದು ಸಾಧ್ಯವಾಗಿರಲಿಲ್ಲ. 2022ರಲ್ಲೂ ಇನ್ನೊಂದು ಯತ್ನವಾಗಿತ್ತು. ಆದರೆ, ಟವರ್ ಸೆಮಿಕಂಡಕ್ಟರ್ ಅನ್ನು ಇಂಟೆಲ್ ಖರೀದಿಸಲು ಮಾತುಕತೆ ನಡೆಯುತ್ತಿದ್ದರಿಂದ ಆ ಪ್ರಯತ್ನ ಕೈಗೂಡಲಿಲ್ಲ. ಈಗ ಇಂಟೆಲ್ ಹಿಂದಕ್ಕೆ ಸರಿದಿದೆ. ಭಾರತದಲ್ಲಿ ಚಿಪ್ ಫ್ಯಾಕ್ಟರಿ ಸ್ಥಾಪನೆಯಿಂದಲೂ ಇಂಟೆಲ್ ಹಿಂದಕ್ಕೆ ಸರಿದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವೇ ಟವರ್ ಸೆಮಿಕಂಡಕ್ಟರ್ ಕಂಪನಿಗೆ ಆಹ್ವಾನ ಕೊಟ್ಟಿದೆ.

ಟವರ್ ಸೆಮಿಕಂಡಕ್ಟರ್ ಸಂಸ್ಥೆ ಜಪಾನ್, ಇಟಲಿ ಮತ್ತು ಅಮೆರಿಕದಲ್ಲಿ ಕಳೆದ ಎಂಟು ವರ್ಷದಲ್ಲಿ ಚಿಪ್ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಿಸಿದೆ. ಆದರೆ, ಭಾರತದಲ್ಲಿ ಮಾಡಲಿರುವ ಅದರ ಹೂಡಿಕೆಯು ಎಲ್ಲಕ್ಕಿಂತ ಹೆಚ್ಚಿದೆ.

ಇದನ್ನೂ ಓದಿ: ಪೇಟಿಎಂ ಜೊತೆ ಕೆಲಸ ಮಾಡಲು ಸಿದ್ಧ ಎಂದ ಎಕ್ಸಿಸ್ ಬ್ಯಾಂಕ್; ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನಿರ್ದೇಶಕಿ ರಾಜೀನಾಮೆ

ಇನ್ನೊಂದು ಪ್ರಮುಖ ಸಂಗತಿ ಎಂದರೆ ಟವರ್ ಸೆಮಿಕಂಡಕ್ಟರ್ ಸ್ಥಾಪನೆ ಮಾಡಲಿರುವುದು 65 ಎನ್​ಎಂ ಚಿಪ್​ಗಳನ್ನು. ಇದು ಬಹಳ ಮಹತ್ವದ ವಿಚಾರ. ಮುಂದಿನ ತಲೆಮಾರುಗಳ ಟೆಕ್ನಾಲಜಿಗಳಿಗೆ ಸುಲಭವಾಗಿ ಅಪ್​ಗ್ರೇಡ್ ಆಗಲು ಇದು ಸಹಾಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ