AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Techmeme: ಗೂಗಲ್ ಸಿಇಒ ಸುಂದರ್ ಪಿಚೈ ಬೆಳಗ್ಗೆ ಎದ್ದು ಮಾಡೋ ಮೊದಲ ಕೆಲಸ ಇದು…

Google CEO Sundar Pichai daily routine: ಗೂಗಲ್ ಸಿಇಒ ಸುಂದರ್ ಪಿಚೈ ಬೆಳಗ್ಗೆ ಎದ್ದು ಓದುವ ಅಥವಾ ನೋಡುವ ಸಂಗತಿಗಳಲ್ಲಿ ಟೆಕ್ ಸುದ್ದಿಗಳ ಅಗ್ರಿಗೇಟರ್ ಟೆಕ್​ಮೀಮ್ ಅನ್ನು ಓದುವುದು ಒಂದು. ಪಿಚೈ ಅವರು ಬೆಳಗ್ಗೆ 6:30 ಅಥವಾ 7ಕ್ಕೆ ಎದ್ದು ವಾಲ್ ಸ್ಟ್ರೀಟ್ ಜರ್ನಲ್, ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗಳನ್ನೂ ಓದುತ್ತಾರೆ. ಟೆಕ್​ಮೀಮ್ ಎಂಬುದು ವಿವಿಧ ಟೆಕ್ ಸುದ್ದಿತಾಣಗಳಲ್ಲಿನ ಸುದ್ದಿಗಳನ್ನು ಹೆಕ್ಕಿ ಕೊಡುವ ಒಂದು ಅಗ್ರಿಗೇಟರ್ ವೆಬ್​ಸೈಟ್ ಆಗಿದೆ.

Techmeme: ಗೂಗಲ್ ಸಿಇಒ ಸುಂದರ್ ಪಿಚೈ ಬೆಳಗ್ಗೆ ಎದ್ದು ಮಾಡೋ ಮೊದಲ ಕೆಲಸ ಇದು...
ಗೂಗಲ್ ಸಿಇಒ ಸುಂದರ್ ಪಿಚೈ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 13, 2024 | 10:50 AM

Share

ನವದೆಹಲಿ, ಫೆಬ್ರುವರಿ 13: ಸಾಮಾನ್ಯವಾಗಿ ನಾವು ನೀವು ಹಾಗು ಹೆಚ್ಚಿನ ಮಂದಿ ಬೆಳಗ್ಗೆ ಎದ್ದ ಬಳಿಕ ಪೇಪರ್ ಓದುವುದೋ, ಮೊಬೈಲ್ ನೋಡುವುದೋ, ವಾಕಿಂಗ್ ಹೋಗುವುದೋ ಇನ್ನೇನಾದರೂ ಮಾಡುತ್ತೇವೆ. ದೊಡ್ಡ ಮಂದಿ ಏನು ಮಾಡ್ತಾರೆ? ದಿನವಿಡೀ ಬ್ಯುಸಿ ಇರುವ ಗೂಗಲ್ ಇತ್ಯಾದಿ ಟೆಕ್ ಕಂಪನಿಗಳ ಹಿರಿಯರು ಏನು ಮಾಡಬಹುದು? ಗೂಗಲ್ ಸಿಇಒ ಸುಂದರ್ ಪಿಚೈ (Sundar Pichai) ಅವರು ಬೆಳಗ್ಗೆ ಎದ್ದು ಮಾಡುವ ಮೊದಲ ಕೆಲಸಗಳಲ್ಲಿ ಟೆಕ್​ಮೀಮ್ (Techmeme) ಎಂಬ ಟೆಕ್ ಸುದ್ದಿಗಳ ವೆಬ್​ಸೈಟ್ ಅನ್ನು ನೋಡುವುದೂ ಒಂದು. 51 ವರ್ಷದ ಸುಂದರ್ ಪಿಚೈ ಅವರ ದಿನಚರಿಯಲ್ಲಿ ಪೇಪರ್ ಕೂಡ ಪ್ರಮುಖವಾದುದು.

ಪಿಚೈ ದಿನಚರಿ ಹೀಗಿರುತ್ತೆ…

ಸುಂದರ್ ಪಿಚೈ ಏಳೆಂಟು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ತಮ್ಮ ಬೆಳಗಿನ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ್ದರು. ಆಗ ಗೂಗಲ್ ಸಿಇಒ ಅವರು ಬೆಳಗ್ಗೆ 6:30 ಅಥವಾ 7 ಗಂಟೆಗೆ ಏಳುತ್ತಿದ್ದರು. ಮನೆಗೆ ವಾಲ್ ಸ್ಟ್ರೀಟ್ ಜರ್ನಲ್ ದಿನಪತ್ರಿಕೆ ಬರುತ್ತಿತ್ತು. ಚಹಾ ಕುಡಿಯುತ್ತಾ ಅದನ್ನು ಓದುತ್ತಿದ್ದರು. ಬಳಿಕ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಆನ್​ಲೈನ್ ಆವೃತ್ತಿಯನ್ನು ಓದುತ್ತಿದ್ದರು. ಬೆಳಗಿನ ತಿಂಡಿಗೆ ಅವರು ಬ್ರೆಡ್ ಟೋಸ್ಟ್ ಮತ್ತು ಆಮ್ಲೆಟ್ ಸೇವಿಸುತ್ತಿದ್ದರು.

ಇದನ್ನೂ ಓದಿ: ವಾಟ್ಸ್​ಆ್ಯಪ್​ನಿಂದ ಬಳಕೆದಾರರಿಗೆ ಉಪಯುಕ್ತವಾದ ಫೀಚರ್: ಇನ್ನುಂದೆ ಕಿರಿಕಿರಿ ಇರುವುದಿಲ್ಲ

ಇತ್ತೀಚೆಗೆ ಅವರು ತಮ್ಮ ಬೆಳಗಿನ ಓದಿಗೆ ಟೆಕ್​ಮೀಮ್ ಅನ್ನು ಸೇರಿಸಿಕೊಂಡಂತಿದೆ. ಟೆಕ್​ಮೀಮ್ ಅನ್ನು ಗೂಗಲ್ ಸಿಇಒ ಸುಂದರ್ ಪಿಚೈ ಮಾತ್ರವಲ್ಲ, ಹಲವು ದೊಡ್ಡದೊಡ್ಡ ಮಂದಿಗೂ ಇದು ಓದಿನ ಸರಕಾಗಿದೆ. ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ, ಟ್ವಿಟ್ಟರ್​ನ ಮಾಜಿ ಸಿಇಒ ಡಿಕ್ ಕಾಸ್ಟೊಲೊ ಮೊದಲಾದ ಕೆಲ ಪ್ರಮುಖ ಎಕ್ಸಿಕ್ಯೂಟಿವ್​ಗಳು ತಾವು ಟೆಕ್ ಮೀಮ್ ವೆಬ್​ಸೈಟ್ ನೋಡುವುದಾಗಿ ಸ್ವತಃ ಹೇಳಿಕೊಂಡಿದ್ದಾರೆ.

ಟೆಕ್ ಮೀಮ್ ವೆಬ್​ಸೈಟ್ ಸಿಇಒಗಳಿಗೆ ಯಾಕೆ ಇಷ್ಟ?

ಟೆಕ್​ಮೀಮ್ ಎಂಬುದು ಟೆಕ್ ಸುದ್ದಿಗಳ ಅಗ್ರಿಗೇಟರ್ ವೆಬ್​ಸೈಟ್. ಗೂಗಲ್ ನ್ಯೂಸ್​ನಲ್ಲಿ ವಿವಿಧ ವೆಬ್​ಸೈಟ್​ಗಳ ಸುದ್ದಿಗಳು ಬರುವಂತೆ ಟೆಕ್​ಮೀಮ್​ನಲ್ಲಿ ಪ್ರಮುಖ ಟೆಕ್ ವೆಬ್​ಸೈಟ್​ಗಳಿಂದ ಸುದ್ದಿಗಳನ್ನು ಹೆಕ್ಕಿ ನೀಡಲಾಗಿರುತ್ತದೆ. ಆಳವಾದ ವಿವರಣೆ, ಸ್ಪಷ್ಟ ನಿರೂಪಣೆ ಇರುವ ಸುದ್ದಿಗಳ ಸಂಗ್ರಹ ಇದರಲ್ಲಿರುತ್ತದೆ.

ಇದನ್ನೂ ಓದಿ: ಚೀನಾ ಕಂಪನಿಗಳನ್ನು ಹೀಗೆ ಗುರಿ ಮಾಡಿದರೆ ಸರಬರಾಜುದಾರರು ಭಾರತಕ್ಕೆ ಬರಲು ಭಯಬೀಳಬಹುದು: ಶಿಯೋಮಿ ಕಳವಳ

ಇಂಟೆಲ್​ನ ಮಾಜಿ ಎಂಜಿನಿಯರ್ ಗೇಬ್ ರಿವೆರಾ ಎಂಬುವವರು ಈ ವೆಬ್​ಸೈಟ್​ನ ಸಂಸ್ಥಾಪಕ. ಟ್ರೆಂಡಿಂಗ್ ಟೆಕ್ ಸುದ್ದಿಗಳನ್ನು ಪ್ರಸ್ತುತಪಡಿಸುವುದು ಟೆಕ್​ಮೀಮ್​ನ ವೈಶಿಷ್ಟ್ಯ. ಇದರ ಸಂಪಾದಕೀಯ ಬಳಗದಲ್ಲಿ ಭಾರತೀಯರು ಇದ್ದಾರೆ. ಬೆಂಗಳೂರಿನ ಶ್ರೀಕರ್ ದನಕೋಟಿ, ಆದರ್ಶ್ ಮಾಥಮ್, ಮಹೆಂದ್ರ ಪಾಲ್ಸುಲೆ ಅವರಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?
ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?