WhatsApp: ವಾಟ್ಸ್ಆ್ಯಪ್ನಿಂದ ಬಳಕೆದಾರರಿಗೆ ಉಪಯುಕ್ತವಾದ ಫೀಚರ್: ಇನ್ನುಂದೆ ಕಿರಿಕಿರಿ ಇರುವುದಿಲ್ಲ
WhatsApp Block Spam: ವಿಶ್ವದ ನಂಬರ್ ಒನ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಮೆಟಾ ಒಡೆತನದ ವಾಟ್ಸ್ಆ್ಯಪ್, ಬಳಕೆದಾರರು ತಮ್ಮ ಲಾಕ್ ಸ್ಕ್ರೀನ್‌ಗಳಿಂದ ನೇರವಾಗಿ ಸ್ಪ್ಯಾಮ್ ಕರೆ ಅಥವಾ ಮೆಸೇಜ್ ಅನ್ನು ಬ್ಲಾಕ್ ಮಾಡಲು ಅನುಮತಿಸುವ ಹೊಸ ವೈಶಿಷ್ಟ್ಯವನ್ನು ಹೊರತಂದಿದೆ. ಈ ಅಪ್‌ಡೇಟ್ ಸ್ಪ್ಯಾಮ್ ಸಂದೇಶಗಳ ಹೆಚ್ಚುತ್ತಿರುವ ಹರಡುವಿಕೆಯನ್ನು ಎದುರಿಸಲು ಸಹಾಯ ಮಾಡುತ್ತದೆ.
ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್ಆ್ಯಪ್ಗೆ (WhatsApp) ಉಪಯುಕ್ತವಾದ ಹೊಸ ವೈಶಿಷ್ಟ್ಯವನ್ನು ಸೇರಿಸಲಾಗಿದೆ. ಇದರಿಂದ ಬಳಕೆದಾರರು ಫುಲ್ ಖುಷ್ ಆಗಿದ್ದಾರೆ. ಇದೀಗ ಬಳಕೆದಾರರು ವಾಟ್ಸ್ಆ್ಯಪ್ನಲ್ಲಿ ಬರುವ ಸ್ಪ್ಯಾಮ್ ಕರೆಗಳನ್ನು ಫೋನ್‌ನ ಲಾಕ್ ಸ್ಕ್ರೀನ್‌ನಿಂದಲೇ ನಿರ್ಬಂಧಿಸಲು ಸಾಧ್ಯವಾಗುತ್ತದೆ. ಅಂದರೆ ಬಳಕೆದಾರರು ಇದಕ್ಕಾಗಿ ಅಪ್ಲಿಕೇಶನ್‌ಗೆ ಹೋಗುವ ಅಗತ್ಯವಿಲ್ಲ. ಸ್ಮಾರ್ಟ್ಫೋನ್ ಅನ್ನು ಅನ್‌ಲಾಕ್ ಮಾಡದೆಯೇ ಅಥವಾ ಸ್ಪ್ಯಾಮ್ ಅನ್ನು ನಿರ್ಬಂಧಿಸಲು ಅಪ್ಲಿಕೇಶನ್‌ಗೆ ಹೋಗದೆಯೇ ಸ್ಪ್ಯಾಮ್ ಮೆಸೇಜ್ ಅನ್ನು ಬ್ಲಾಕ್ ಮಾಡಬಹುದು.
ಇತ್ತೀಚಿನ ದಿನಗಳಲ್ಲಿ ವಾಟ್ಸ್ಆ್ಯಪ್ಲ್ಲಿ ಕೂಡ ಬಳಕೆದಾರರು ಸ್ಪ್ಯಾಮ್ ಸಂದೇಶಗಳು ಅಥವಾ ಕರೆಗಳಿಂದ ತೊಂದರೆಗೊಳಗಾಗುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ವಾಟ್ಸ್ಆ್ಯಪ್ನ ಈ ಹೊಸ ವೈಶಿಷ್ಟ್ಯವು ಬಳಕೆದಾರರಿಗೆ ಉತ್ತಮ ಪರಿಹಾರವನ್ನು ಒದಗಿಸಲಿದೆ. ನಿಮ್ಮ ವಾಟ್ಸ್ಆ್ಯಪ್ನಲ್ಲಿ ನೀವು ಇದನ್ನು ಹೇಗೆ ಸಕ್ರಿಯಗೊಳಿಸಬಹುದು?. ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
ನಿಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ಬೇರೆಯವರು ಬಳಸುತ್ತಿದ್ದಾರಾ?: ಈ ಟ್ರಿಕ್ ಮೂಲಕ ಕಂಡುಹಿಡಿಯಿರಿ
ವಾಟ್ಸ್ಆ್ಯಪ್ನ ಹೊಸ ವೈಶಿಷ್ಟ್ಯವು ಬಳಕೆದಾರರಿಗೆ ಫೋನನ್ನು ಅನ್‌ಲಾಕ್ ಮಾಡದೆಯೇ ಅಥವಾ ಸ್ಪ್ಯಾಮ್ ಅನ್ನು ನಿರ್ಬಂಧಿಸಲು ಅಪ್ಲಿಕೇಶನ್‌ಗೆ ಹೋಗದೆಯೇ ಮೆಸೇಜ್ ಅನ್ನು ಗುರುತಿಸಲು ಮತ್ತು ನಿರ್ಬಂಧಿಸಲು ಅನುಮತಿಸುತ್ತದೆ. ಲಾಕ್ ಸ್ಕ್ರೀನ್‌ನಲ್ಲಿ ಸ್ಪ್ಯಾಮ್ ಸಂದೇಶದ ನೋಟಿಫಿಕೇಷನ್ ಕಾಣಿಸಿಕೊಂಡಾಗ, ಬಳಕೆದಾರರು ಆ ಮೆಸೇಜ್ ಮೇಲೆ ದೀರ್ಘಕಾಲ ಒತ್ತಿ ಹಿಡಿಯಬೇಕು. ಆಗ ವಿವಿಧ ಆಯ್ಕೆಗಳನ್ನು ಕಾಣಿಸಿಕೊಳ್ಳುತ್ತದೆ. block the sender instantly ಆಯ್ಕೆ ಇವುಗಳಲ್ಲಿ ಒಂದಾಗಿದೆ. ಇದನ್ನು ಆಯ್ಕೆ ಮಾಡಿದ ನಂತರ, ರಿಪೋರ್ಟ್ ಮಾಡಬಹುದಾದ ಮತ್ತೊಂದು ಪ್ರಾಂಪ್ಟ್ ಅನ್ನು ತೋರಿಸುತ್ತದೆ.
ಆದಾಗ್ಯೂ, ವಾಟ್ಸ್ಆ್ಯಪ್ನಲ್ಲಿ ಅಪರಿಚಿತ ಸಂಖ್ಯೆಯಿಂದ ಕರೆ ಅಥವಾ ಸಂದೇಶ ಬಂದಾಗ, ಅದನ್ನು ಕಾಂಟೆಕ್ಟ್ ಲಿಸ್ಟ್ಗೆ ಸೇರಿಸುವ, ನಿರ್ಬಂಧಿಸುವ ಅಥವಾ ರಿಪೋರ್ಟ್ ಮಾಡುವ ಆಯ್ಕೆಯನ್ನು ಸಹ ತೋರಿಸಲಾಗುತ್ತದೆ. ನೀವು ಆ ಕಾಂಟೆಕ್ಟ್ ಅನ್ನು ಬ್ಲಾಕ್ ಮಾಡಲು ಬಯಸಿದರೆ ಈ ಹಂತಗಳನ್ನು ಅನುಸರಿಸಿ- ಸೆಟ್ಟಿಂಗ್‌ಗಳು > ಗೌಪ್ಯತೆ > ಬ್ಲಾಕ್ಡ್ ಕಾಂಟೆಕ್ಟ್> ಆ್ಯಡ್> ಗೆ ಹೋಗಿ. ಇಲ್ಲಿ, ನೀವು ಬ್ಲಾಕ್ ಮಾಡಲು ಬಯಸುವ ಕಾಂಟೆಕ್ಟ್ ಅನ್ನು ಹುಡುಕಿ ಆಯ್ಕೆಮಾಡಿ.
10,000 ರೂ. ಒಳಗಿನ ಸೂಪರ್ ಸ್ಮಾರ್ಟ್ಫೋನ್ಸ್: ಈ ಪ್ರೇಮಿಗಳ ದಿನಕ್ಕೆ ಇದೇ ಬೆಸ್ಟ್ ಗಿಫ್ಟ್
ಇನ್ನು ವಾಟ್ಸ್ಆ್ಯಪ್ನಲ್ಲಿ ಶೀಘ್ರದಲ್ಲೇ ಒಂದು ಮತ್ತೊಂದು ಹೊಸ ವೈಶಿಷ್ಟ್ಯವು ಬರಲಿದೆ. ಈ ಅಪ್ಡೇಟ್ ಬಂದರೆ ಇತರೆ ಪ್ಲಾಟ್‌ಫಾರ್ಮ್‌ಗಳಿಂದ ಕೂಡ ವಾಟ್ಸ್ಆ್ಯಪ್ ಮೂಲಕ ಸಂದೇಶಗಳನ್ನು ಕಳುಹಿಸಬಹುದು. ಉದಾಹರಣೆಗೆ, ಯಾರಾದರೂ ಇನ್ಸ್ಟಾಗ್ರಾಮ್ ಮೂಲಕ ನಿಮಗೆ ಸಂದೇಶ ಕಳುಹಿಸಲು ಬಯಸಿದರೆ, ಆ ಸಂದೇಶವನ್ನು ನೀವು ವಾಟ್ಸ್ಆ್ಯಪ್ನಲ್ಲಿಯೂ ಸ್ವೀಕರಿಸಬಹುದು. ಇದಕ್ಕಾಗಿ, ಥರ್ಡ್ ಪಾರ್ಟಿ ಚಾಟ್‌ಗಳ ವಿಭಾಗವು ಶೀಘ್ರದಲ್ಲೇ ಅಪ್ಲಿಕೇಶನ್‌ನಲ್ಲಿ ಲಭ್ಯವಾಗಲಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ