Digital Transformation: ಮೋದಿ ಸರ್ಕಾರದ 11 ವರ್ಷಗಳ ಡಿಜಿಟಲ್ ಮಿಷನ್ ಕೈಂಕರ್ಯ; ಯಶಸ್ವಿಯಾಗಿದ್ದೆಷ್ಟು?
India's Digital Transformation: ಮೋದಿ ಸರ್ಕಾರದ 11 ವರ್ಷಗಳ ಅವಧಿಯಲ್ಲಿ ಭಾರತದ ಡಿಜಿಟಲ್ ಬೆಳವಣಿಗೆಯ ಅವಲೋಕನ ಇಲ್ಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂಟರ್ನೆಟ್ ಸಂಪರ್ಕದಲ್ಲಿನ ಭಾರಿ ಹೆಚ್ಚಳ, 5ಜಿ ಅಳವಡಿಕೆ ಮತ್ತು ಭಾರತ AI ಮಿಷನ್‌ನಂತಹ ಪ್ರಮುಖ ಯೋಜನೆಗಳು ಗಮನ ಸೆಳೆಯುತ್ತವೆ. ಇಂಟರ್ನೆಟ್ ವೆಚ್ಚದಲ್ಲಿನ ಇಳಿಕೆ ಮತ್ತು ಡಿಜಿಲಾಕರ್‌ನಂತಹ ಡಿಜಿಟಲ್ ಸೇವೆಗಳ ವಿಸ್ತರಣೆ ಆಗಿದೆ.

ಮೋದಿ ಸರ್ಕಾರ (Narendra Modi) ಅಧಿಕಾರಕ್ಕೆ ಬಂದ ನಂತರದ ಕಳೆದ 11 ವರ್ಷಗಳಲ್ಲಿ, ಭಾರತವು ಡಿಜಿಟಲ್ ಶಕ್ತ ಸಮಾಜವಾಗುವತ್ತ ವೇಗವಾಗಿ ಮುಂದಡಿ ಇಡುತ್ತಿದೆ. 2014 ರಿಂದ 2025 ರವರೆಗೆ ಸರ್ಕಾರವು ತಂತ್ರಜ್ಞಾನದ ವಿಷಯದಲ್ಲಿ ಹಲವಾರು ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿದೆ. ದೂರದ ಪ್ರದೇಶಗಳಲ್ಲಿ ಜನರಿಗೆ ಇಂಟರ್ನೆಟ್ ಲಭ್ಯವಾಗುವಂತೆ ಮಾಡುವುದು, ಕನೆಕ್ಟಿವಿಟಿ ಬಲಪಡಿಸುವುದು, 5G ಅಳವಡಿಸುವುದು ಮತ್ತು ಭಾರತದ AI ಮಿಷನ್ ಹೊರತಂದಿರುವುದು, ಹೀಗೆ, ದೇಶವು ಇಂದು ತಂತ್ರಜ್ಞಾನದ ವಿಷಯದಲ್ಲಿ ಬಹಳ ಬಲಿಷ್ಠವಾಗಿದೆ.
ಉತ್ತಮ ಕನೆಕ್ಟಿವಿಟಿ
ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ, ಕಳೆದ 11 ವರ್ಷಗಳಲ್ಲಿ, ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ವೇಗವಾಗಿ ವಿಸ್ತರಿಸಿದೆ. ಜನರಿಗೆ ಬಲಿಷ್ಠ ಮತ್ತು ಉತ್ತಮ ಇಂಟರ್ನೆಟ್ ಕನೆಕ್ಟಿವಿಟಿ ಸಿಕ್ಕಿದೆ.
- ನಗರದಲ್ಲಿ ಸಂಪರ್ಕ: ಮಾರ್ಚ್ 2014 ರಲ್ಲಿ ಒಟ್ಟು ನಗರ ದೂರವಾಣಿ ಸಂಪರ್ಕಗಳು 555.23 ಮಿಲಿಯನ್ ಆಗಿದ್ದು, ಅಕ್ಟೋಬರ್ 2024 ರ ವೇಳೆಗೆ 661.36 ಮಿಲಿಯನ್‌ಗೆ ಹೆಚ್ಚಾಗಿದೆ.
- ಗ್ರಾಮೀಣ ಸಂಪರ್ಕ: ಮಾರ್ಚ್ 2014 ರಲ್ಲಿ ಗ್ರಾಮೀಣ ದೂರವಾಣಿ ಸಂಪರ್ಕಗಳ ಸಂಖ್ಯೆ 377.78 ಮಿಲಿಯನ್ ಆಗಿದ್ದು, ಅಕ್ಟೋಬರ್ 2024 ರ ವೇಳೆಗೆ ಇದು 527.34 ಮಿಲಿಯನ್‌ಗೆ ಹೆಚ್ಚಾಗಿದೆ.
- ಒಟ್ಟು ಸಂಪರ್ಕ: ಮಾರ್ಚ್ 2014 ರಲ್ಲಿ, ಭಾರತದಲ್ಲಿ ಒಟ್ಟು 93.3 ಕೋಟಿ ದೂರವಾಣಿ ಸಂಪರ್ಕಗಳಿದ್ದು, ಏಪ್ರಿಲ್ 2025 ರ ವೇಳೆಗೆ 120 ಕೋಟಿಗೂ ಹೆಚ್ಚಾಗುವ ನಿರೀಕ್ಷೆಯಿದೆ.
ಇಂಟರ್ನೆಟ್ ವಿಸ್ತರಣೆ
- ಇಂಟರ್ನೆಟ್ ಕನೆಕ್ಷನ್: ಒಟ್ಟು ಇಂಟರ್ನೆಟ್ ಕನೆಕ್ಷನ್ ಸಂಖ್ಯೆ ಮಾರ್ಚ್ 2014 ರಲ್ಲಿ 251.5 ಮಿಲಿಯನ್ ಇತ್ತು. ಜೂನ್ 2024 ರಲ್ಲಿ 969.6 ಮಿಲಿಯನ್‌ಗೆ ಏರಿಕೆಯಾಗಿದೆ. 10 ವರ್ಷದಲ್ಲಿ ಇಂಟರ್ನೆಟ್ ಕನೆಕ್ಷನ್ ಶೇ. 285.53 ರಷ್ಟು ಹೆಚ್ಚಿದೆ.
- ಬ್ರಾಡ್‌ಬ್ಯಾಂಡ್ ಸಂಪರ್ಕ: ಮಾರ್ಚ್ 2014 ರಲ್ಲಿ ದೇಶದಲ್ಲಿ 6.1 ಕೋಟಿ ಬ್ರಾಡ್‌ಬ್ಯಾಂಡ್ ಸಂಪರ್ಕಗಳು ಇದ್ದವು. ಆಗಸ್ಟ್ 2024 ರಲ್ಲಿ ಇದು 94.92 ಕೋಟಿಗೆ ಏರಿದೆ. ಹತ್ತು ವರ್ಷದಲ್ಲಿ ಶೇ. 1452 ರಷ್ಟು ಹೆಚ್ಚಾಗಿದೆ.
- ಹಳ್ಳಿಗಳೂ ತಂತ್ರಜ್ಞಾನಕ್ಕೆ ಸಿದ್ಧ: 2016 ರಿಂದ ದೇಶದಲ್ಲಿ 4G ಸಂಪರ್ಕವು ವೇಗವಾಗಿ ವಿಸ್ತರಿಸಿದೆ. ಇದರಿಂದಾಗಿ ಇಂದು ದೇಶದ ಮೂಲೆ ಮೂಲೆಗಳಲ್ಲಿ ಹೆಚ್ಚಿನ ವೇಗದ ಸಂಪರ್ಕ ಲಭ್ಯವಿದೆ. ದೇಶದಲ್ಲಿರುವ 6,44,131 ಹಳ್ಳಿಗಳ ಪೈಕಿ 6,15,836 ಹಳ್ಳಿಗಳು ಡಿಸೆಂಬರ್ 2024 ರ ವೇಳೆಗೆ 4G ಮೊಬೈಲ್ ಸಂಪರ್ಕವನ್ನು ಹೊಂದಿವೆ.
5G ಯಿಂದ ಸಿಕ್ಕಿತು ಪುಷ್ಟಿ
ಅಕ್ಟೋಬರ್ 2022 ರಲ್ಲಿ 5G ಪ್ರಾರಂಭವಾದಾಗಿನಿಂದ ದೇಶದ ಡಿಜಿಟಲ್ ಪ್ರಯಾಣವು ಜೋರಾಗಿದೆ. 22 ತಿಂಗಳಲ್ಲಿ ಭಾರತವು 4.74 ಲಕ್ಷ ಬೇಸ್ ಟ್ರಾನ್ಸ್‌ಸಿವರ್ ಕೇಂದ್ರಗಳನ್ನು ನಿರ್ಮಿಸಿದೆ ಮತ್ತು 5G ಸೇವೆ ಶೇ. 99.6 ಜಿಲ್ಲೆಗಳಲ್ಲಿ ಲಭ್ಯವಿದೆ.
ಇದನ್ನೂ ಓದಿ: ಹೊಸ ಕೆವೈಸಿ ನಿಯಮಗಳು ಇಂದಿನಿಂದ; ಅನುಕೂಲಗಳೇನು, ನಿಮ್ಮ ಗಮನಕ್ಕಿರಲಿ
2014 ರಲ್ಲಿ ಜನರು 1GB ಇಂಟರ್ನೆಟ್‌ಗೆ 308 ರೂ.ಗಳವರೆಗೆ ಖರ್ಚು ಮಾಡಬೇಕಾಗಿದ್ದ ಒಂದು ಕಾಲವಿತ್ತು. ಆದರೆ ಮೋದಿ ಸರ್ಕಾರ ಬಂದ ನಂತರ ಇಂಟರ್ನೆಟ್ ಬೆಲೆಗಳನ್ನು ಸಾಕಷ್ಟು ನಿಯಂತ್ರಿಸಲಾಗಿದೆ. 2022 ರಲ್ಲಿ 1GB ಇಂಟರ್ನೆಟ್ ವೆಚ್ಚದಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಅದರ ಬೆಲೆ ಕೇವಲ 9.34 ರೂಗೆ ಇಳಿದಿದೆ ಎಂದು ತೋರಿಸುತ್ತದೆ.
BharatNet: ಪ್ರತಿಯೊಂದು ಹಳ್ಳಿಗೂ ಇಂಟರ್ನೆಟ್
ಮೋದಿ ಸರ್ಕಾರದ ಡಿಜಿಟಲ್ ಇಂಡಿಯಾ ಅಭಿಯಾನದ ಉದ್ದೇಶ ಗ್ರಾಮೀಣ ಪ್ರದೇಶಗಳನ್ನು ಇಂಟರ್ನೆಟ್‌ಗೆ ಸಂಪರ್ಕಿಸುವುದು. ಮೋದಿ ಸರ್ಕಾರದ ಆಗಮನದ ನಂತರ, ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಲಾಗಿದೆ. ಜನವರಿ 2025ರ ಹೊತ್ತಿಗೆ, ಭಾರತ್‌ನೆಟ್ ಯೋಜನೆಯಡಿಯಲ್ಲಿ, 2.18 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯತ್‌ಗಳಿಗೆ ಇಂಟರ್ನೆಟ್ ಸೌಲಭ್ಯವನ್ನು ಒದಗಿಸಲಾಗಿದೆ. ಈ ಉಪಕ್ರಮದಡಿಯಲ್ಲಿ ಸರ್ಕಾರವು 6.92 ಲಕ್ಷ ಕಿಲೋಮೀಟರ್ ಆಪ್ಟಿಕಲ್ ಫೈಬರ್ ಕೇಬಲ್ ಅನ್ನು ಹಾಕಿದೆ.
2030ರ ವೇಳೆಗೆ ದೇಶದ ಒಟ್ಟು ಆರ್ಥಿಕತೆಯಲ್ಲಿ ಡಿಜಿಟಲ್ ಆರ್ಥಿಕತೆಯ ಪಾಲು ಐದನೇ ಒಂದು ಭಾಗದಷ್ಟಿರುವ ನಿರೀಕ್ಷೆ ಇದೆ. ತಂತ್ರಜ್ಞಾನದಲ್ಲಿ ದೇಶ ಪ್ರಬಲಗೊಳ್ಳುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ.
ಡಿಜಿಲಾಕರ್
2015ರಲ್ಲಿ, ಜನರು ತಮ್ಮ ಪ್ರಮುಖ ನಾಗರಿಕ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಉಳಿಸಲು ಅನುವು ಮಾಡಿಕೊಡಲು ಡಿಜಿಲಾಕರ್ ಅನ್ನು ಪ್ರಾರಂಭಿಸಿತು. 2015 ರಲ್ಲಿ ವಾರ್ಷಿಕ ಯೂಸರ್ ಸೈನ್ ಅಪ್ 9.98 ಲಕ್ಷವಿತ್ತು. ಒಂಬತ್ತು ವರ್ಷದ ಬಳಿಕ (2024 ರಲ್ಲಿ) ಈ ಸಂಖ್ಯೆ 20.32 ಕೋಟಿಗೆ ಏರಿದೆ.
ಇದನ್ನೂ ಓದಿ: ಚಿನ್ನ ಸಾಕಪ್ಪ ಎನ್ನುತ್ತಿದೆ ಭಾರತ; ಚಿನ್ನ ಇನ್ನೂ ಬೇಕಪ್ಪ ಎನ್ನುತ್ತಿದೆ ಚೀನಾ; ಚೀನೀಯರು ಚಿನ್ನದ ಹಿಂದೆ ಬಿದ್ದಿರೋದ್ಯಾಕೆ?
ಭಾರತ AI ಮಿಷನ್
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸರ್ಕಾರವು ಮಾರ್ಚ್ 7, 2024 ರಂದು ಭಾರತ AI ಮಿಷನ್ ಅನ್ನು ಅನುಮೋದಿಸಿತು. 30 ಮೇ 2025 ರ ಹೊತ್ತಿಗೆ ದೇಶದ ಕಂಪ್ಯೂಟ್ ಸಾಮರ್ಥ್ಯವು 34 ಸಾವಿರ GPU ಗಳನ್ನು ದಾಟಿದೆ. ಇದು AI ಆಧಾರಿತ ಸಂಶೋಧನೆ ಮತ್ತು ಅಭಿವೃದ್ಧಿಗೆ ಬಲವಾದ ಅಡಿಪಾಯವನ್ನು ಪ್ರತಿಬಿಂಬಿಸುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




