ಭಾರತದ ಫಾರೆಕ್ಸ್ ಮೀಸಲು ನಿಧಿಯಲ್ಲಿ 4 ಬಿಲಿಯನ್ ಡಾಲರ್ ಹೆಚ್ಚಳ; 4ನೇ ಸ್ಥಾನದಲ್ಲಿ ಭಾರತ

India's Forex Reserves: ಭಾರತದ ಫಾರೆಕ್ಸ್ ರಿಸರ್ವ್ಸ್ ನಿಧಿ ಸೆಪ್ಟೆಂಬರ್ 1ರಂದು ಅಂತ್ಯಗೊಂಡ ವಾರದಲ್ಲಿ ಸುಮಾರು 4 ಬಿಲಿಯನ್ ಡಾಲರ್​ನಷ್ಟು ಏರಿದೆ. ಇದರೊಂದಿಗೆ ಭಾರತದ ವಿದೇಶ ವಿನಿಮಯ ಮೀಸಲು ನಿಧಿ 598.897 ಬಿಲಿಯನ್ ಡಾಲರ್ ತಲುಪಿದೆ. ವಿಶ್ವದಲ್ಲಿ ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಇರುವ ದೇಶಗಳ ಪೈಕಿ ಭಾರತ 4ನೇ ಸ್ಥಾನದಲ್ಲಿ ಮುಂದುವರಿದಿದೆ. ಚೀನಾ 44 ಬಿಲಿಯನ್ ಡಾಲರ್​ನಷ್ಟು ಮೊತ್ತವನ್ನು ಕಳೆದುಕೊಂಡರೂ 3,160 ಬಿಲಿಯನ್ ಡಾಲರ್​ನೊಂದಿಗೆ ಅಗ್ರಸ್ಥಾನ ಉಳಿಸಿಕೊಂಡಿದೆ.

ಭಾರತದ ಫಾರೆಕ್ಸ್ ಮೀಸಲು ನಿಧಿಯಲ್ಲಿ 4 ಬಿಲಿಯನ್ ಡಾಲರ್ ಹೆಚ್ಚಳ; 4ನೇ ಸ್ಥಾನದಲ್ಲಿ ಭಾರತ
ಫಾರೆಕ್ಸ್ ರಿಸರ್ವ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 10, 2023 | 2:45 PM

ನವದೆಹಲಿ, ಸೆಪ್ಟೆಂಬರ್ 10: ಭಾರತದ ವಿದೇಶ ವಿನಿಮಯ ಮೀಸಲು ನಿಧಿ (forex reserves) ಗಮನಾರ್ಹ ಹೆಚ್ಚಳಗೊಂಡಿದೆ. ಸೆಪ್ಟೆಂಬರ್ 1ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ ಮೊತ್ತ 4.039 ಬಿಲಿಯನ್ ಡಾಲರ್​ನಷ್ಟು ಹೆಚ್ಚಾಗಿದೆ. ಫಾರೆಕ್ಸ್ ಮೀಸಲು ನಿಧಿಯಲ್ಲಿ ಒಟ್ಟು 598.897 ಬಿಲಿಯನ್ ಡಾಲರ್ ಮೊತ್ತ ಇದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಇದರ ಹಿಂದಿನ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ 30 ಮಿಲಿಯನ್ ಡಾಲರ್​ನಷ್ಟು ಕಡಿಮೆಗೊಂಡು 594.858 ಬಿಲಿಯನ್ ಡಾಲರ್ ಮೊತ್ತಕ್ಕೆ ಇಳಿದಿತ್ತು.

ಫಾರೆಕ್ಸ್ ರಿಸರ್ವ್ಸ್​ನಲ್ಲಿ ನಾಲ್ಕು ವಿವಿಧ ಆಸ್ತಿಗಳ ಸಂಗ್ರಹ ಇರುತ್ತದೆ. ವಿದೇಶೀ ಕರೆನ್ಸಿ, ಚಿನ್ನ, ಸ್ಪೆಷಲ್ ಡ್ರಾಯಿಂಗ್ ರೈಟ್ಸ್ (ಎಸ್​ಡಿಆರ್) ಹಾಗು ಐಎಂಎಫ್​ನೊಂದಿಗಿನ ಮೀಸಲು ಸ್ಥಾನ ಇವುಗಳಿರುತ್ತದೆ. ಈ ಪೈಕಿ ವಿದೇಶಿ ಕರೆನ್ಸಿ ಆಸ್ತಿ ಬಹಳ ಮುಖ್ಯ. ಅದು ಬಿಟ್ಟರೆ ಚಿನ್ನದ ಮೀಸಲು ನಿಧಿಯೂ ಮುಖ್ಯ.

ಸೆಪ್ಟೆಂಬರ್ 1ರಂದು ಅಂತ್ಯಗೊಂಡ ವಾರದಲ್ಲಿ ವಿದೇಶೀ ಕರೆನ್ಸಿ ಆಸ್ತಿಯಲ್ಲಿ 3.442 ಬಿಲಿಯನ್ ಡಾಲರ್​ನಷ್ಟು ಏರಿಕೆ ಆಗಿದೆ. ಸದ್ಯ ಭಾರತದ ಫಾರೆಕ್ಸ್ ನಿಧಿಯಲ್ಲಿ ಫಾರೀನ್ ಕರೆನ್ಸಿ ಆಸ್ತಿ 530.691 ಬಿಲಿಯನ್ ಡಾಲರ್​ನಷ್ಟಿದೆ.

ಇದನ್ನೂ ಓದಿ: 5ಜಿ ಅಲ್ಲ 6ಜಿ; ಭಾರತ ಮತ್ತು ಅಮೆರಿಕದಿಂದ ಜಂಟಿಯಾಗಿ 6ಜಿ ವೈರ್ಲೆಸ್ ತಂತ್ರಜ್ಞಾನ ಅಭಿವೃದ್ಧಿ; ಮಹತ್ವದ ಬೆಳವಣಿಗೆ

ಇನ್ನು, ಗೋಲ್ಡ್ ರಿಸರ್ವ್ಸ್ ಮೊತ್ತ 584 ಮಿಲಿಯನ್ ಡಾಲರ್​ನಷ್ಟು ಏರಿ 44.939 ಬಿಲಿಯನ್ ಡಾಲರ್ ತಲುಪಿದೆ. ಹಾಗೆಯೇ, ಎಸ್​ಡಿಆರ್​ಗಳು 18.195 ಬಿಲಿಯನ್ ಡಾಲರ್​ನಷ್ಟು ಇದ್ದು 1 ಮಿಲಿಯನ್ ಡಾಲರ್ ಏರಿಕೆ ಆಗಿದೆ. ಐಎಂಎಫ್ ಜೊತೆಗಿನ ಮೀಸಲು ಸ್ಥಾನ 12 ಮಿಲಿಯನ್ ಡಾಲರ್​ನಷ್ಟು ಹೆಚ್ಚಾಗಿದೆ.

ಫಾರೆಕ್ಸ್ ರಿಸರ್ವ್ಸ್ ಬೇರೆ ದೇಶಗಳಲ್ಲಿ ಎಷ್ಟಿದೆ?

ಭಾರತದ ಫಾರೆಕ್ಸ್ ರಿಸರ್ವ್ಸ್ 2021ರ ಅಕ್ಟೋಬರ್​ನಲ್ಲಿ 645 ಬಿಲಿಯನ್ ಡಾಲರ್​ನಷ್ಟಾಗಿತ್ತು. ಅದು ಭಾರತದ ಸಾರ್ವಕಾಲಿಕ ಗರಿಷ್ಠ ಮಟ್ಟ ಎನಿಸಿದೆ. ಈಗ ಅಷ್ಟರಮಟ್ಟಿಗೆ ಇಲ್ಲದಿದ್ದರೂ ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಹೊಂದಿರುವ ದೇಶಗಳ ಪೈಕಿ ಭಾರತ 4ನೇ ಸ್ಥಾನದಲ್ಲಿದೆ.

ಚೀನಾ, ಜಪಾನ್, ಸ್ವಿಟ್ಜರ್​ಲ್ಯಾಂಡ್ ನಂತರದ ಸ್ಥಾನ ಭಾರತದ್ದು. ಇನ್ನು, ರಷ್ಯಾ, ತೈವಾನ್, ಸೌದಿ ಅರೇಬಿಯಾ, ಸೌತ್ ಕೊರಿಯಾ ಮೊದಲಾದ ದೇಶಗಳ ಫಾರೆಕ್ಸ್ ನಿಧಿಗಿಂತಲೂ ಭಾರತದ್ದು ಹೆಚ್ಚಿದೆ.

ಇದನ್ನೂ ಓದಿ: ಚೀನಾದ ಮಹತ್ವಾಕಾಂಕ್ಷಿ ಸಿಲ್ಕ್ ರೋಡ್ ಯೋಜನೆಗೆ ಎದುರಾಗಿ ಭಾರತದಿಂದ ಪರ್ಯಾಯ ಎಕನಾಮಿಕ್ ಕಾರಿಡಾರ್ ಪ್ರಾಜೆಕ್ಟ್

ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಹೊಂದಿರುವ ದೇಶಗಳ ಪಟ್ಟಿ

  1. ಚೀನಾ: 3,160 ಬಿಲಿಯನ್ ಡಾಲರ್
  2. ಜಪಾನ್: 1,253 ಬಿಲಿಯನ್ ಡಾಲರ್
  3. ಸ್ವಿಟ್ಜರ್​ಲ್ಯಾಂಡ್: 898 ಬಿಲಿಯನ್ ಡಾಲರ್
  4. ಭಾರತ: 598 ಬಿಲಿಯನ್ ಡಾಲರ್
  5. ರಷ್ಯಾ: 583 ಬಿಲಿಯನ್ ಡಾಲರ್

ಚೀನಾ ದೇಶ ಆಗಸ್ಟ್ 30ರಂದು ಅಂತ್ಯಗೊಂಡ ವಾರದಲ್ಲಿ ಬರೋಬ್ಬರಿ 44 ಬಿಲಿಯನ್ ಡಾಲರ್​ನಷ್ಟು ಹಣವನ್ನು ಫಾರೆಕ್ಸ್ ನಿಧಿಯಿಂದ ಕಳೆದುಕೊಂಡಿತ್ತು. ಆದರೂ ಕೂಡ ಅಗ್ರಸ್ಥಾನ ಕಾಪಾಡಿಕೊಂಡಿದೆ. ಎರಡನೇ ಸ್ಥಾನದಲ್ಲಿರುವ ಜಪಾನ್​ಗಿಂತ ಚೀನಾದ ಫಾರೆಕ್ಸ್ ರಿಸರ್ವ್ಸ್ ಬಹುತೇಕ 3 ಪಟ್ಟು ಹೆಚ್ಚಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:44 pm, Sun, 10 September 23

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ