AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಫಾರೆಕ್ಸ್ ಮೀಸಲು ನಿಧಿ 638 ಬಿಲಿಯನ್ ಡಾಲರ್; ಸತತ ಮೂರನೇ ವಾರ ಏರಿಕೆ

Forex reserves of India: ಭಾರತದ ಫಾರೀನ್ಸ್ ಎಕ್ಸ್​ಚೇಂಜ್ ರಿಸರ್ವ್ಸ್ ಸತತ ಮೂರನೇ ವಾರ ಹೆಚ್ಚಳವಾಗಿದೆ. ಫೆ. 7ರವರೆಗೆ ಭಾರತದ ಫಾರೆಕ್ಸ್ ಸಂಪತ್ತು 638 ಬಿಲಿಯನ್ ಡಾಲರ್ ಮಟ್ಟ ತಲುಪಿದೆ. ಫಾರೀನ್ ಕರೆನ್ಸಿ ಆಸ್ತಿ ಮತ್ತು ಚಿನ್ನ ಸಂಗ್ರಹದಲ್ಲಿ ಗಣನೀಯ ಹೆಚ್ಚಳವಾಗಿದ್ದು ಫಾರೆಕ್ಸ್ ನಿಧಿ ಏರಿಕೆಗೆ ಕಾರಣವಾಗಿದೆ. 2024ರ ಸೆಪ್ಟೆಂಬರ್​ನಲ್ಲಿ ಫಾರೆಕ್ಸ್ 704 ಬಿಲಿಯನ್ ಡಾಲರ್​ನ ಗರಿಷ್ಠ ಮಟ್ಟ ಮುಟ್ಟಿತ್ತು.

ಭಾರತದ ಫಾರೆಕ್ಸ್ ಮೀಸಲು ನಿಧಿ 638 ಬಿಲಿಯನ್ ಡಾಲರ್; ಸತತ ಮೂರನೇ ವಾರ ಏರಿಕೆ
ಫಾರೆಕ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 16, 2025 | 12:40 PM

Share

ನವದೆಹಲಿ, ಫೆಬ್ರುವರಿ 16: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ ಸತತ ಮೂರನೇ ವಾರ ಏರಿಕೆ ಆಗಿದೆ. ಫೆಬ್ರುವರಿ 7ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ 7.6 ಬಿಲಿಯನ್ ಡಾಲರ್​ನಷ್ಟು ಏರಿಕೆ ಆಗಿದೆ. ಆರ್​ಬಿಐ ಶುಕ್ರವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಭಾರತದ ಫಾರೆಕ್ಸ್ ರಿಸರ್ವ್ಸ್ ಮೊತ್ತ 638.2 ಬಿಲಿಯನ್ ಡಾಲರ್​ನಷ್ಟಿದೆ.

ಫೆ. 2ರಿಂದ 7ರವರೆಗಿನ ವಾರದಲ್ಲಿ ಏರಿಕೆಯಾದ 7.6 ಬಿಲಿಯನ್​ನ ಫಾರೆಕ್ಸ್ ರಿಸರ್ವ್ಸ್​​ನಲ್ಲಿ ಗೋಲ್ಡ್ ರಿಸರ್ವ್ಸ್ 1.2 ಬಿಲಿಯನ್ ಡಾಲರ್​ನಷ್ಟು ಹೆಚ್ಚಳವಾಗಿದೆ. ವಿದೇಶೀ ಕರೆನ್ಸಿ ಆಸ್ತಿಯಲ್ಲಿ 6.4 ಬಿಲಿಯನ್ ಡಾಲರ್ ಹೆಚ್ಚಳವಾಗಿದೆ. ಆದರೆ, ಫಾರೆಕ್ಸ್​ನ ಇತರ ಸಣ್ಣ ಭಾಗಗಳಾದ ಎಸ್​ಡಿಆರ್ ಅಥವಾ ಸ್ಪೆಷಲ್ ಡ್ರಾಯಿಂಗ್ ರೈಟ್ಸ್ ಮತ್ತು ಐಎಂಎಫ್​ನಲ್ಲಿನ ಆಸ್ತಿಗಳಲ್ಲಿ ಇಳಿಕೆ ಆಗಿದೆ. ಎಸ್​ಡಿಆರ್ 11 ಮಿಲಿಯನ್ ಮತ್ತು ಐಎಂಎಫ್​ನೊಂದಿಗಿನ ನಿಧಿ 71 ಮಿಲಿಯನ್ ಡಾಲರ್​ನಷ್ಟು ಕಡಿಮೆ ಆಗಿದೆ. ಆದರೆ, ವಿದೇಶೀ ಕರೆನ್ಸಿ ಆಸ್ತಿ ಗಣನೀಯವಾಗಿ ಏರಿಕೆ ಆಗಿದ್ದು ಒಟ್ಟಾರೆ ಫಾರೆಕ್ಸ್ ನಿಧಿ ಏರಿಕೆಗೆ ಸಹಾಯಕವಾಗಿದೆ.

ಇದನ್ನೂ ಓದಿ: HSBC Mutual Fund: ಎಚ್​ಎಸ್​ಬಿಸಿ ಫೈನಾನ್ಷಿಯಲ್ ಸರ್ವಿಸಸ್ ಫಂಡ್ ಎನ್​​ಎಫ್​ಒ ಆಫರ್ ಫೆಬ್ರುವರಿ 20ಕ್ಕೆ ಮುಕ್ತಾಯ

ಭಾರತದ ಫಾರೆಕ್ಸ್ ಮೀಸಲು ನಿಧಿ, ಫೆ. 7ಕ್ಕೆ

ಒಟ್ಟು ಫಾರೆಕ್ಸ್ ರಿಸರ್ವ್ಸ್: 638 ಬಿಲಿಯನ್ ಡಾಲರ್

  • ಫಾರೀನ್ ಕರೆನ್ಸಿ ಅಸೆಟ್: 544.11 ಬಿಲಿಯನ್ ಡಾಲರ್
  • ಗೋಲ್ಡ್ ರಿಸರ್ವ್ಸ್: 1.3 ಬಿಲಿಯನ್ ಡಾಲರ್
  • ಎಸ್​ಡಿಆರ್: 17.87 ಬಿಲಿಯನ್ ಡಾಲರ್
  • ಐಎಂಎಫ್ ನಿಧಿ: 71 ಮಿಲಿಯನ್ ಡಾಲರ್.

ಸೆಪ್ಟೆಂಬರ್ ತಿಂಗಳಲ್ಲಿ ಭಾರತದ ಫಾರೆಕ್ಸ್ 704 ಬಿಲಿಯನ್ ಡಾಲರ್ ಮಟ್ಟ ಮುಟ್ಟಿತ್ತು. ಅದು ಸಾರ್ವಕಾಲಿಕ ಗರಿಷ್ಠ ಮಟ್ಟ ಎನಿಸಿದೆ. ಅದಾದ ಬಳಿಕ ನಿಧಿಯಲ್ಲಿ ಸತತ ಇಳಿಕೆ ಆಗುತ್ತಾ ಬಂದಿದೆ. ಆದರೆ, ಕಳೆದ ಮೂರು ವಾರಗಳಿಂದ ಸತತ ಏರಿಕೆ ಆಗಿದೆ. ಹಿಂದಿನ ವಾರ, ಅಂದರೆ ಜನವರಿ 31ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ಮೀಸಲು ನಿಧಿ 1.05 ಬಿಲಿಯನ್ ಡಾಲರ್​ನಷ್ಟು ಹೆಚ್ಚಳವಾಗಿತ್ತು.

ಇದನ್ನೂ ಓದಿ: BSNL: 17 ವರ್ಷಗಳ ಬಳಿಕ ನಷ್ಟದಿಂದ ಮೇಲೆದ್ದ ಬಿಎಸ್​ಎನ್​ಎಲ್; ಈ ಬಾರಿ 262 ಕೋಟಿ ರೂ. ಲಾಭ

ಫಾರೆಕ್ಸ್ ಸಂಪತ್ತಿನಲ್ಲಿ ಭಾರತ ನಾಲ್ಕನೇ ಸ್ಥಾನ

ವಿದೇಶ ವಿನಿಮಯ ಮೀಸಲು ನಿಧಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಐದನೇ ಸ್ಥಾನದಲ್ಲಿರುವ ರಷ್ಯಾ ಮತ್ತು ಭಾರತದ ಮಧ್ಯೆ ನಿಧಿಯಲ್ಲಿ ಹೆಚ್ಚಿನ ಅಂತರ ಇಲ್ಲ. ಚೀನಾ 3.5 ಟ್ರಿಲಿಯನ್ ಡಾಲರ್​ನೊಂದಿಗೆ ಅಗ್ರಸ್ಥಾನದಲ್ಲಿದೆ. ಜಪಾನ್ ಬಳಿ 1.2 ಟ್ರಿಲಿಯನ್ ಡಾಲರ್ ಫಾರೆಕ್ಸ್ ಸಂಪತ್ತಿದೆ. ಮೂರನೇ ಸ್ಥಾನದಲ್ಲಿ ಸ್ವಿಟ್ಜರ್​ಲ್ಯಾಂಡ್ ದೇಶ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ