BSNL: 17 ವರ್ಷಗಳ ಬಳಿಕ ನಷ್ಟದಿಂದ ಮೇಲೆದ್ದ ಬಿಎಸ್ಎನ್ಎಲ್; ಈ ಬಾರಿ 262 ಕೋಟಿ ರೂ. ಲಾಭ
ಮುಳುಗೇ ಹೋಯಿತು ಎಂದು ಹೇಳಲಾಗಿದ್ದ ಸರ್ಕಾರಿ ಕಂಪನಿ ಬಿಎಸ್ಎನ್ಎಲ್ 17 ವರ್ಷಗಳ ನಂತರ ಲಾಭ ಗಳಿಸಿದೆ. ಈ ಹಿಂದೆ ದೇಶದ ಮನೆ-ಮನೆಗಳನ್ನೂ ತಲುಪಿದ್ದ ಬಿಎಸ್ಎನ್ಎಲ್ ಖಾಸಗಿ ಟೆಲಿಕಾಂ ಕಂಪನಿಗಳ ಆರ್ಭಟಕ್ಕೆ ಸಿಕ್ಕಿ ನಲುಗಿತ್ತು. ಬಿಎಸ್ಎನ್ಎಲ್ ಸಂಸ್ಥೆಯನ್ನೇ ಮುಚ್ಚುವ ಪರಿಸ್ಥಿತಿಯೂ ಬಂದಿತ್ತು. ಆದರೆ, 2007ರ ನಂತರ ಈ ಬಾರಿ ಮೊದಲ ತ್ರೈಮಾಸಿಕದಲ್ಲಿ ಬಿಎಸ್ಎನ್ಎಲ್ 262 ಕೋಟಿ ರೂ. ಲಾಭವನ್ನು ಗಳಿಸಿದೆ. ಈ ಮೂಲಕ ಸರ್ಕಾರಿ ಒಡೆತನದ ಟೆಲಿಕಾಂ ಸಂಸ್ಥೆ ಮತ್ತೆ ಫಾರ್ಮ್ಗೆ ಬಂದಿದೆ.

ನವದೆಹಲಿ: ಖಾಸಗಿ ಟೆಲಿಕಾಂ ಕಂಪನಿಗಳು ಅತ್ಯಂತ ಆಕರ್ಷಕ ಆಫರ್ಗಳು, ಅತ್ಯುತ್ತಮ ನೆಟ್‌ವರ್ಕ್ ನೀಡುತ್ತಿದ್ದಂತೆ ಭಾರತದ ಸರ್ಕಾರಿ ಟೆಲಿಕಾಂ ಕಂಪನಿಯಾಗಿದ್ದ ಬಿಎಸ್ಎನ್ಎಲ್ ಹಿನ್ನೆಲೆಗೆ ಸರಿದಿತ್ತು. ತೀವ್ರ ನಷ್ಟ ಅನುಭವಿಸಿದ್ದ ಬಿಎಸ್ಎನ್ಎಲ್ ಅನ್ನು ಮುಚ್ಚಲಾಗುವುದು ಎಂಬ ಸುದ್ದಿಗಳೂ ಹರಿದಾಡಿದ್ದವು. ಹಳ್ಳಿಗಳಲ್ಲಿ ತನ್ನ ಜಾಲವನ್ನು ವಿಸ್ತಾರವಾಗಿ ಹರಡಿಕೊಂಡಿದ್ದ ಬಿಎಸ್ಎನ್ಎಲ್ ಇತ್ತೀಚೆಗೆ ಟವರ್ ಕೆಳಗೆ ನಿಂತರೂ ನೆಟ್‌ವರ್ಕ್ ಸಿಗದಂತಹ ಪರಿಸ್ಥಿತಿಯನ್ನು ಸೃಷ್ಟಿಸಿತ್ತು. ಇದರಿಂದ ಗ್ರಾಹಕರು ಬೇರೆ ನೆಟ್‌ವರ್ಕ್ ಬಳಸತೊಡಗಿದ್ದರು. ಆದರೀಗ ಮತ್ತೆ ಪುಟಿದೆದ್ದಿರುವ ಬಿಎಸ್ಎನ್ಎಲ್ ಹೊಸ ರೂಪದಲ್ಲಿ ಗ್ರಾಹಕರನ್ನು ತಲುಪುವ ಮೂಲಕ, ಮತ್ತೆ ತನ್ನ ನೆಟ್‌ವರ್ಕ್ ವಿಸ್ತರಿಸುವ ಮೂಲಕ ಜನರಿಗೆ ಹತ್ತಿರವಾಗುತ್ತಿದೆ. ಅಲ್ಲದೆ, 17 ವರ್ಷಗಳ ಬಳಿಕ ಈ ತ್ರೈಮಾಸಿಕದಲ್ಲಿ 262 ಕೋಟಿ ರೂ. ಲಾಭವನ್ನು ಗಳಿಸಿದೆ.
ನಾವೀನ್ಯತೆ, ಆಕ್ರಮಣಕಾರಿ ನೆಟ್‌ವರ್ಕ್ ವಿಸ್ತರಣೆ, ವೆಚ್ಚ ಆಪ್ಟಿಮೈಸೇಶನ್ ಮತ್ತು ಗ್ರಾಹಕ-ಕೇಂದ್ರಿತ ಸೇವಾ ಸುಧಾರಣೆಗಳ ಮೇಲಿನ ಕೇಂದ್ರೀಕೃತ ಪ್ರಯತ್ನಗಳೇ ಈ ಯಶಸ್ಸಿಗೆ ಕಾರಣ ಎಂದು ಬಿಎಸ್ಎನ್ಎಲ್ ಹೇಳಿದೆ. 17 ವರ್ಷಗಳ ನಂತರ ಬಿಎಸ್ಎನ್ಎಲ್ 262 ಕೋಟಿ ರೂ. ಲಾಭವನ್ನು ದಾಖಲಿಸಿದೆ. ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಇದನ್ನು ಒಂದು ಮಹತ್ವದ ತಿರುವು ಎಂದು ಕರೆದಿದ್ದಾರೆ. ಬಿಎಸ್ಎನ್ಎಲ್ ಸೇವೆಗಳು 14-18% ಹೆಚ್ಚಾಗಿದೆ. ಇದೀಗ ಬಿಎಸ್ಎನ್ಎಲ್ 4ಜಿ ಸೇವೆಯನ್ನು ಕೂಡ ಆರಂಭಿಸಿದೆ.
#BSNL celebrates a milestone of positive growth! We’ve achieved an operational profit of ₹262 crore in Q3, marking our first positive quarter since 2007. Thank you for your continued trust and support as we move towards a brighter future! #BSNLIndia #Growth #Profit… pic.twitter.com/ONuDVtyiml
— BSNL India (@BSNLCorporate) February 14, 2025
ಇದನ್ನೂ ಓದಿ: Vodafone Idea: ವೊಡಾಫೋನ್ ಐಡಿಯಾದ ಬಿಎಸ್ಎನ್ಎಲ್ ಎಂಟಿಎನ್ಎಲ್ ವಿಲೀನಕ್ಕೆ ಸರ್ಕಾರದ ವಿರೋಧ
ಬಿಎಸ್ಎನ್ಎಲ್ ಕತೆ ಮುಗಿಯಿತು ಎಂದೇ ಹೇಳಲಾಗಿತ್ತು. ಈ ಕಂಪನಿಯು ನಿರಂತರವಾಗಿ ನಷ್ಟದಿಂದ ಬಳಲುತ್ತಿತ್ತು. ಅದೂ ಸಹ, 1-2 ವರ್ಷಗಳ ಕಾಲ ಅಲ್ಲ, ಬಿಎಸ್ಎನ್ಎಲ್ 2007ರಿಂದ ನಷ್ಟದಲ್ಲಿ ಓಡುತ್ತಿದೆ. ಇದನ್ನು ಖಾಸಗೀಕರಣಗೊಳಿಸಲಾಗುತ್ತದೆ ಎಂಬ ಊಹಾಪೋಹಗಳೂ ಇದ್ದವು.
BSNL registers a quarterly profit of close to Rs 262 crores for the FIRST TIME in 17 years. pic.twitter.com/szN8NqmBpE
— DoT India (@DoT_India) February 14, 2025
ಆದರೆ ಪ್ರಸಕ್ತ ಹಣಕಾಸು ವರ್ಷದ ಡಿಸೆಂಬರ್ ತ್ರೈಮಾಸಿಕಕ್ಕೆ ಕಂಪನಿಯು ಬಿಡುಗಡೆ ಮಾಡಿದ ಅಂಕಿಅಂಶಗಳು ಎಲ್ಲರನ್ನು ಆಶ್ಚರ್ಯಗೊಳಿಸಿವೆ. ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಸುಮಾರು 17 ವರ್ಷಗಳ ನಂತರ ಲಾಭ ದಾಖಲಿಸಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಈ ಕಂಪನಿಯು 262 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ