Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಂಡನ್‌ನ ಟರ್ಕಿಶ್ ರಾಯಭಾರ ಕಚೇರಿ ಹೊರಗೆ ಕುರಾನ್ ಸುಟ್ಟ ವ್ಯಕ್ತಿ ಮೇಲೆ ಚಾಕುವಿನಿಂದ ಹಲ್ಲೆ

ಲಂಡನ್‌ನ ಟರ್ಕಿಶ್ ರಾಯಭಾರ ಕಚೇರಿ ಹೊರಗೆ ಕುರಾನ್ ಸುಟ್ಟ ವ್ಯಕ್ತಿ ಮೇಲೆ ಚಾಕುವಿನಿಂದ ಹಲ್ಲೆ

ಸುಷ್ಮಾ ಚಕ್ರೆ
|

Updated on: Feb 14, 2025 | 8:47 PM

ಆಘಾತಕಾರಿ ಘಟನೆಯಲ್ಲಿ, ಟರ್ಕಿಶ್ ರಾಯಭಾರ ಕಚೇರಿಯ ಹೊರಗೆ ಮುಸ್ಲಿಮರ ಪವಿತ್ರ ಗ್ರಂಥವಾದ ಕುರಾನ್‌ಗೆ ವ್ಯಕ್ತಿಯೊಬ್ಬ ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ನಂತರ ವ್ಯಕ್ತಿಯೊಬ್ಬ ಆತನ ಮೇಲೆ ಹಲ್ಲೆ ನಡೆಸಿದ್ದಾನೆ. ಗುರುವಾರ ಮಧ್ಯಾಹ್ನ ನೈಟ್ಸ್‌ಬ್ರಿಡ್ಜ್‌ನಲ್ಲಿರುವ ಟರ್ಕಿಶ್ ಕಾನ್ಸುಲೇಟ್ ಬಳಿ ಈ ಘಟನೆ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ದೃಶ್ಯಗಳಲ್ಲಿ, ಕುರಾನ್ ಪುಸ್ತಕಕ್ಕೆ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿ, ಅದು ಸುಟ್ಟುಹೋದಾಗ ಅದನ್ನು ಎತ್ತಿ ಹಿಡಿದಿರುವುದನ್ನು ತೋರಿಸಲಾಗಿದೆ.

ನವದೆಹಲಿ: ಲಂಡನ್‌ನಲ್ಲಿರುವ ಟರ್ಕಿಶ್ ರಾಯಭಾರ ಕಚೇರಿಯ ಹೊರಗೆ ವ್ಯಕ್ತಿಯೊಬ್ಬ ಕುರಾನ್ ಅನ್ನು ಸುಡಲು ಯತ್ನಿಸಿದ್ದಾನೆ. ಇದಾದ ನಂತರ ಆತನ ಮೇಲೆ ವ್ಯಕ್ತಿಯೊಬ್ಬ ಕೋಪದಿಂದ ಆತನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ನೈಟ್ಸ್‌ಬ್ರಿಡ್ಜ್‌ನಲ್ಲಿರುವ ಟರ್ಕಿಶ್ ಕಾನ್ಸುಲೇಟ್ ಬಳಿ ನಡೆದ ಈ ಘಟನೆಯನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಕುರಾನ್​ಗೆ ಬೆಂಕಿ ಹಚ್ಚಿದ್ದರಿಂದ ಚಾಕುವಿನ ಹಲ್ಲೆಗೆ ಒಳಗಾದ ವ್ಯಕ್ತಿಯನ್ನು ನಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವನ ಬೆರಳುಗಳ ಮೇಲೆ ಆಗಿರುವ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಪ್ರಾಣಕ್ಕೆ ಯಾವುದೇ ಅಪಾಯವಾಗಿಲ್ಲ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ