Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಂಬಿದ ಕೊಡ ತುಳಕಿತಲೇ ಪರಾಕ್: ಮೈಲಾರಲಿಂಗೇಶ್ವರನ ಕಾರ್ಣಿಕದ ಅರ್ಥವೇನು?

ತುಂಬಿದ ಕೊಡ ತುಳಕಿತಲೇ ಪರಾಕ್: ಮೈಲಾರಲಿಂಗೇಶ್ವರನ ಕಾರ್ಣಿಕದ ಅರ್ಥವೇನು?

ರಮೇಶ್ ಬಿ. ಜವಳಗೇರಾ
|

Updated on:Feb 14, 2025 | 7:43 PM

ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಮೈಲಾರದ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ರಾಮಪ್ಪ ಅವರು ಈ ವರ್ಷದ ದೈವವಾಣಿ ನುಡಿದಿದ್ದಾರೆ. 9 ದಿನ ಉಪವಾಸ ವ್ರತ ಆಚರಿಸಿದ್ದ ರಾಮಪ್ಪ ಗೊರವಯ್ಯ ಅವರು ಇಂದು (ಫೆಬ್ರವರಿ 14) 12 ಅಡಿ ಎತ್ತರದ ಬಿಲ್ಲನೇರಿ ತುಂಬಿದ ಕೊಡ ತುಳಕಿತಲೇ ಪರಾಕ್ ಅಂತ ಭವಿಷ್ಯವಾಣಿ ನುಡಿದು ಜನರ ಮಧ್ಯ ಜಿಗಿದಿದ್ದಾರೆ. ಹಾಗಾದ್ರೆ, ಈ ಕಾರ್ಣಿಕದ ಅರ್ಥವೇನು ಎನ್ನುವುದನ್ನು ವೆಂಕಪ್ಪಯ್ಯ ಒಡೆಯರ್ ವಿಶ್ಲೇಷಣೆ ಮಾಡಿದ್ದಾರೆ.

ವಿಜಯನಗರ, (ಫೆಬ್ರವರಿ 14):  ‘ತುಂಬಿದಕೊಡ ತುಳುಕೀತಲೇ ಪರಾಕ್’ ಇದು ನಾಡಿನ ಸುಪ್ರಸಿದ್ಧ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಪ್ರಸಕ್ತ ವರ್ಷದ ದೈವವಾಣಿ ಕಾರ್ಣಿಕರ ನುಡಿ. ಮೈಲಾರ ಸುಕ್ಷೇತ್ರದ ಡೆಂಕನಮರಡಿಯಲ್ಲಿ ರಾಜ್ಯ-ಹೊರ ರಾಜ್ಯದ ಹಲವೆಡೆಯಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಭವಿಷ್ಯವಾಣಿ ಅನುರಣಿಸಿತು. ಕಳೆದ 11 ದಿನಗಳ ಉಪವಾಸ ವ್ರತ ಆಚರಿಸಿದ ಗೊರವಪ್ಪ ರಾಮಪ್ಪ ಅವರನ್ನು ಡೆಂಕನಮರಡಿಯ ಸಿಂಹಾಸನ ಕಟ್ಟೆಯಿಂದ ಕಾರ್ಣಿಕದ ಸ್ಥಳಕ್ಕೆ ಮೆರವಣಿಗೆ ಮೂಲಕ ಕರೆತರಲಾಯಿತು. ದೇಗುಲದ ವಂಶಪಾರಂಪರ್ಯ ಧರ್ಮಕರ್ತ ಗುರುವೆಂಕಪ್ಪಯ್ಯ ಒಡೆಯರ್, ಅಶ್ವಾರೂಢರಾಗಿ ಡೆಂಕನಮರಡಿಗೆ ಬರುತ್ತಿದ್ದಂತೆಯೇ ‘ಏಳು ಕೋಟಿ ಏಳು ಕೋಟಿಗೋ … ಛಾಂಗ್‌ಬಲೋ…’ ಎಂಬ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರಿಂದ ಭಂಡಾರದ ಆಶೀರ್ವಾದ ಪಡೆದ ಗೊರವಪ್ಪ ರಾಮಪ್ಪ, ಸಂಪ್ರದಾಯ ಮತ್ತು ಪರಂಪರೆಯ ಸಂಕೇತವಾಗಿರುವ 15 ಅಡಿ ಎತ್ತರದ ಬಿಲ್ಲನ್ನು ಏರಿ, ಕೆಲ ಕ್ಷ ಣ ಆಕಾಶದತ್ತ ಶೂನ್ಯವನ್ನು ದಿಟ್ಟಿಸಿ ‘ಸದ್ದಲೇ…’ ಎಂದಾಗ ಇಡೀ ಭಕ್ತ ಸಮೂಹದಲ್ಲಿ ನಿಶಬ್ದ ವಾತಾವರಣ ಮೂಡಿತು. ಈ ಸಂದರ್ಭದಲ್ಲಿ ‘ತುಂಬಿದಕೊಡ ತುಳುಕೀತಲೇ ಪರಾಕ್’ ಎಂಬ ದೈವವಾಣಿ (ಕಾರ್ಣಿಕ) ನುಡಿದ ಗೊರವಪ್ಪನವರು ಕೆಳಕ್ಕೆ ಬಿದ್ದರು.

ಇನ್ಜು ದೈವವಾಣಿಯ ಬಗ್ಗೆ ವೆಂಕಪ್ಪಯ್ಯ ಒಡೆಯರ್ ವಿಶ್ಲೇಷಣೆ ಮಾಡಿದ್ದು, ಪ್ರಸಕ್ತ ವರ್ಷ ರಾಜ್ಯ ಮತ್ತು ದೇಶದಲ್ಲಿ ಉತ್ತಮ ಮಳೆಯಾಗಲಿದೆ. ಸಮೃದ್ಧವಾಗಿ ಬೆಳೆಗಳು ಬರಲಿ ಎಂದು ವಿಶ್ನೇಷಿಸಿದ್ದಾರೆ.

ಮೈಲಾರಲಿಂಗೇಶ್ವರ ಕಾರ್ಣಿಕವನ್ನು ವರ್ಷದ ಭವಿಷ್ಯವಾಣಿ ಎಂತಲೇ ನಂಬಿಕೊಂಡು ಬರಲಾಗಿದೆ. ಹಲವಾರು ವರ್ಷಗಳಿಂದ ಮೈಲಾರಲಿಂಗೇಶ್ವರ ಕಾರ್ಣಿಕಕ್ಕೆ ಎಲ್ಲಿಲ್ಲದ‌ ಮಹತ್ವವಿದೆ. ವಿಶೇಷವಾಗಿ ರೈತಾಪಿ ವರ್ಗದ ಜನರು ಮೈಲಾರಲಿಂಗೇಶ್ವರ ಕಾರ್ಣಿಕವಾಣಿಯ ಆಧಾರದ ಮೇಲೆಯೇ ವರ್ಷದ ಮಳೆ ಬೆಳೆ ನಿರ್ಧರಿಸುತ್ತಾರೆ. ಹೀಗಾಗಿ ಈ ವರ್ಷದ ಭವಿಷ್ಯವಾಣಿ ಮಹತ್ವ ಪಡೆದುಕೊಂಡಿದೆ.

Published on: Feb 14, 2025 07:23 PM