
ನವದೆಹಲಿ, ಫೆಬ್ರುವರಿ 16: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ ಸತತ ಮೂರನೇ ವಾರ ಏರಿಕೆ ಆಗಿದೆ. ಫೆಬ್ರುವರಿ 7ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ 7.6 ಬಿಲಿಯನ್ ಡಾಲರ್ನಷ್ಟು ಏರಿಕೆ ಆಗಿದೆ. ಆರ್ಬಿಐ ಶುಕ್ರವಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಭಾರತದ ಫಾರೆಕ್ಸ್ ರಿಸರ್ವ್ಸ್ ಮೊತ್ತ 638.2 ಬಿಲಿಯನ್ ಡಾಲರ್ನಷ್ಟಿದೆ.
ಫೆ. 2ರಿಂದ 7ರವರೆಗಿನ ವಾರದಲ್ಲಿ ಏರಿಕೆಯಾದ 7.6 ಬಿಲಿಯನ್ನ ಫಾರೆಕ್ಸ್ ರಿಸರ್ವ್ಸ್ನಲ್ಲಿ ಗೋಲ್ಡ್ ರಿಸರ್ವ್ಸ್ 1.2 ಬಿಲಿಯನ್ ಡಾಲರ್ನಷ್ಟು ಹೆಚ್ಚಳವಾಗಿದೆ. ವಿದೇಶೀ ಕರೆನ್ಸಿ ಆಸ್ತಿಯಲ್ಲಿ 6.4 ಬಿಲಿಯನ್ ಡಾಲರ್ ಹೆಚ್ಚಳವಾಗಿದೆ. ಆದರೆ, ಫಾರೆಕ್ಸ್ನ ಇತರ ಸಣ್ಣ ಭಾಗಗಳಾದ ಎಸ್ಡಿಆರ್ ಅಥವಾ ಸ್ಪೆಷಲ್ ಡ್ರಾಯಿಂಗ್ ರೈಟ್ಸ್ ಮತ್ತು ಐಎಂಎಫ್ನಲ್ಲಿನ ಆಸ್ತಿಗಳಲ್ಲಿ ಇಳಿಕೆ ಆಗಿದೆ. ಎಸ್ಡಿಆರ್ 11 ಮಿಲಿಯನ್ ಮತ್ತು ಐಎಂಎಫ್ನೊಂದಿಗಿನ ನಿಧಿ 71 ಮಿಲಿಯನ್ ಡಾಲರ್ನಷ್ಟು ಕಡಿಮೆ ಆಗಿದೆ. ಆದರೆ, ವಿದೇಶೀ ಕರೆನ್ಸಿ ಆಸ್ತಿ ಗಣನೀಯವಾಗಿ ಏರಿಕೆ ಆಗಿದ್ದು ಒಟ್ಟಾರೆ ಫಾರೆಕ್ಸ್ ನಿಧಿ ಏರಿಕೆಗೆ ಸಹಾಯಕವಾಗಿದೆ.
ಇದನ್ನೂ ಓದಿ: HSBC Mutual Fund: ಎಚ್ಎಸ್ಬಿಸಿ ಫೈನಾನ್ಷಿಯಲ್ ಸರ್ವಿಸಸ್ ಫಂಡ್ ಎನ್ಎಫ್ಒ ಆಫರ್ ಫೆಬ್ರುವರಿ 20ಕ್ಕೆ ಮುಕ್ತಾಯ
ಒಟ್ಟು ಫಾರೆಕ್ಸ್ ರಿಸರ್ವ್ಸ್: 638 ಬಿಲಿಯನ್ ಡಾಲರ್
ಸೆಪ್ಟೆಂಬರ್ ತಿಂಗಳಲ್ಲಿ ಭಾರತದ ಫಾರೆಕ್ಸ್ 704 ಬಿಲಿಯನ್ ಡಾಲರ್ ಮಟ್ಟ ಮುಟ್ಟಿತ್ತು. ಅದು ಸಾರ್ವಕಾಲಿಕ ಗರಿಷ್ಠ ಮಟ್ಟ ಎನಿಸಿದೆ. ಅದಾದ ಬಳಿಕ ನಿಧಿಯಲ್ಲಿ ಸತತ ಇಳಿಕೆ ಆಗುತ್ತಾ ಬಂದಿದೆ. ಆದರೆ, ಕಳೆದ ಮೂರು ವಾರಗಳಿಂದ ಸತತ ಏರಿಕೆ ಆಗಿದೆ. ಹಿಂದಿನ ವಾರ, ಅಂದರೆ ಜನವರಿ 31ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ಮೀಸಲು ನಿಧಿ 1.05 ಬಿಲಿಯನ್ ಡಾಲರ್ನಷ್ಟು ಹೆಚ್ಚಳವಾಗಿತ್ತು.
ಇದನ್ನೂ ಓದಿ: BSNL: 17 ವರ್ಷಗಳ ಬಳಿಕ ನಷ್ಟದಿಂದ ಮೇಲೆದ್ದ ಬಿಎಸ್ಎನ್ಎಲ್; ಈ ಬಾರಿ 262 ಕೋಟಿ ರೂ. ಲಾಭ
ವಿದೇಶ ವಿನಿಮಯ ಮೀಸಲು ನಿಧಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಐದನೇ ಸ್ಥಾನದಲ್ಲಿರುವ ರಷ್ಯಾ ಮತ್ತು ಭಾರತದ ಮಧ್ಯೆ ನಿಧಿಯಲ್ಲಿ ಹೆಚ್ಚಿನ ಅಂತರ ಇಲ್ಲ. ಚೀನಾ 3.5 ಟ್ರಿಲಿಯನ್ ಡಾಲರ್ನೊಂದಿಗೆ ಅಗ್ರಸ್ಥಾನದಲ್ಲಿದೆ. ಜಪಾನ್ ಬಳಿ 1.2 ಟ್ರಿಲಿಯನ್ ಡಾಲರ್ ಫಾರೆಕ್ಸ್ ಸಂಪತ್ತಿದೆ. ಮೂರನೇ ಸ್ಥಾನದಲ್ಲಿ ಸ್ವಿಟ್ಜರ್ಲ್ಯಾಂಡ್ ದೇಶ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ