ಭಾರತದ ವಿದೇಶ ವಿನಿಮಯ ಮೀಸಲು ನಿಧಿ 591 ಬಿಲಿಯನ್ ಡಾಲರ್​ಗೆ ಏರಿಕೆ

|

Updated on: Nov 12, 2023 | 5:36 PM

India's Forex Reserves: ಭಾರತದ ವಿದೇಶ ವಿನಿಮಯ ಮೀಸಲು ನಿಧಿ ನವೆಂಬರ್ 3ರಂದು ಅಂತ್ಯಗೊಂಡ ವಾರದಲ್ಲಿ 4.672 ಬಿಲಿಯನ್ ಡಾಲರ್ (39,000 ಕೋಟಿ ರೂ) ​ನಷ್ಟು ಹೆಚ್ಚಾಗಿದೆ. ಇದರೊಂದಿಗೆ, ರಿಸರ್ವ್ ಬ್ಯಾಂಕ್ ಹೊಂದಿರುವ ಫಾರೆಕ್ಸ್ ರಿಸರ್ವ್ಸ್ ಮೊತ್ತ 590.783 ಬಿಲಿಯನ್ ಡಾಲರ್​ಗೆ (49.21 ಲಕ್ಷ ಕೋಟಿ ರೂ) ಹೆಚ್ಚಾಗಿದೆ. ಫಾರೆಕ್ಸ್ ರಿಸರ್ವ್ಸ್​ನ ಪ್ರಮುಖ ಭಾಗವಾದ ಫಾರೀನ್ ಕರೆನ್ಸಿ ಆಸ್ತಿಗಳೇ 4.392 ಬಿಲಿಯನ್ ಡಾಲರ್​ನಷ್ಟು ಏರಿಕೆ ಆಗಿದೆ.

ಭಾರತದ ವಿದೇಶ ವಿನಿಮಯ ಮೀಸಲು ನಿಧಿ 591 ಬಿಲಿಯನ್ ಡಾಲರ್​ಗೆ ಏರಿಕೆ
ವಿದೇಶ ವಿನಿಮಯ ಮೀಸಲು ನಿಧಿ
Follow us on

ನವದೆಹಲಿ, ನವೆಂಬರ್ 12: ಭಾರತದ ವಿದೇಶ ವಿನಿಮಯ ಮೀಸಲು ನಿಧಿ ನವೆಂಬರ್ 3ರಂದು ಅಂತ್ಯಗೊಂಡ ವಾರದಲ್ಲಿ 4.672 ಬಿಲಿಯನ್ ಡಾಲರ್ (39,000 ಕೋಟಿ ರೂ) ​ನಷ್ಟು ಹೆಚ್ಚಾಗಿದೆ. ಇದರೊಂದಿಗೆ, ರಿಸರ್ವ್ ಬ್ಯಾಂಕ್ ಹೊಂದಿರುವ ಫಾರೆಕ್ಸ್ ರಿಸರ್ವ್ಸ್ (forex reserves) ಮೊತ್ತ 590.783 ಬಿಲಿಯನ್ ಡಾಲರ್​ಗೆ (49.21 ಲಕ್ಷ ಕೋಟಿ ರೂ) ಹೆಚ್ಚಾಗಿದೆ. ಆರ್​ಬಿಐ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಆ ವಾರದಂದು ಫಾರೆಕ್ಸ್ ರಿಸರ್ವ್ಸ್​ನ ಎಲ್ಲಾ ಭಾಗಗಳ ಆಸ್ತಿ ಹೆಚ್ಚಾಗಿದೆ.

ಫಾರೆಕ್ಸ್ ರಿಸರ್ವ್ಸ್​ನ ಪ್ರಮುಖ ಭಾಗವಾದ ಫಾರೀನ್ ಕರೆನ್ಸಿ ಆಸ್ತಿಗಳೇ 4.392 ಬಿಲಿಯನ್ ಡಾಲರ್​ನಷ್ಟು ಏರಿಕೆ ಆಗಿದೆ. ಇನ್ನು, ಚಿನ್ನದ ಸಂಗ್ರಹ 200 ಮಿಲಿಯನ್ ಡಾಲರ್​ನಷ್ಟು ಹೆಚ್ಚಾಗಿದೆ. ಇನ್ನು, ಎಸ್​ಡಿಆರ್, ಅಥವಾ ಸ್ಪೆಷಲ್ ಡ್ರಾಯಿಂಗ್ ರೈಟ್ಸ್ 64 ಮಿಲಿಯನ್ ಡಾಲರ್​ನಷ್ಟು ಹೆಚ್ಚಾಗಿ 17.975 ಬಿಲಿಯನ್ ಡಾಲರ್ ತಲುಪಿದೆ. ಹಾಗೆಯೇ, ಐಎಂಎಫ್ ಜೊತೆಗಿನ ಮೀಸಲು ಪಾಲು 16 ಮಿಲಿಯನ್ ಏರಿಕೆಯಾಗಿ 4.789 ಬಿಲಿಯನ್ ಡಾಲರ್ ಆಗಿರುವುದು ಗೊತ್ತಾಗಿದೆ.

ಇದನ್ನೂ ಓದಿ: ಚೀನಾ ತರಹ ಬೇಡ; ನಿಯಂತ್ರಣ ಬಿಟ್ಟರೆ ಹಣ ಹರಿದುಬರುತ್ತೆ: ಭಾರತಕ್ಕೆ ಖ್ಯಾತ ಹೂಡಿಕೆದಾರ ಮಾರ್ಕ್ ಮೋಬಿಯಸ್ ಸಲಹೆ

ಹಿಂದಿನ ವಾರದಲ್ಲಿ, ಅಂದರೆ ಅಕ್ಟೋಬರ್ 27ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ 2.6 ಬಿಲಿಯನ್ ಡಾಲರ್​ನಷ್ಟು ಏರಿಕೆ ಆಗಿತ್ತು. ಸತತ ಎರಡು ಬಾರಿ ಮೀಸಲು ನಿಧಿ ಹೆಚ್ಚಳ ಕಂಡಿದೆ.

2021ರ ಅಕ್ಟೋಬರ್ ತಿಂಗಳಲ್ಲಿ ಭಾರತದ ಫಾರೆಕ್ಸ್ ಸಂಪತ್ತು 645 ಬಿಲಿಯನ್ ಡಾಲರ್ ತಲುಪಿತ್ತು. ಇದೂವರೆಗಿನ ಗರಿಷ್ಠ ಮೊತ್ತ ಅದು. ಅಲ್ಲಿಂದೀಚೆ ರೂಪಾಯಿ ಮೌಲ್ಯ ಕುಸಿತ ತಡೆಯಲು ಆರ್​ಬಿಐ ಫಾರೆಕ್ಸ್ ಸಂಪತ್ತಿನ ಭಾಗವನ್ನು ಮಾರುತ್ತಾ ಬಂದಿತ್ತು. ಆದರೆ, ಈಗಿರುವ ಫಾರೆಕ್ಸ್ ರಿಸರ್ವ್ಸ್ ಭಾರತದ ಹಣಕಾಸು ವ್ಯವಹಾರಕ್ಕೆ ಭಂಗವಾಗದಷ್ಟು ಇದೆ.

ಇದನ್ನೂ ಓದಿ: ಬೈಜೂಸ್​ನ ಒಂದು ಭಾಗದ ಸಾಲ ತೀರಿಸಿದ ಮಣಿಪಾಲ್ ಸಂಸ್ಥೆಯ ರಂಜನ್ ಪೈ; ಅದಕ್ಕೆ ಬದಲಾಗಿ ಆಕಾಶ್ ಬೋರ್ಡ್​ನಲ್ಲಿ ಸದಸ್ಯತ್ವ

ವಿಶ್ವದಲ್ಲಿ ಅತಿಹೆಚ್ಚು ವಿದೇಶ ವಿನಿಮಯ ಮೀಸಲು ನಿಧಿ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಚೀನಾ, ಜಪಾನ್, ಸ್ವಿಟ್ಜರ್​ಲ್ಯಾಂಡ್ ಟಾಪ್ 3 ಸ್ಥಾನದಲ್ಲಿವೆ. ಈ ಮೂರೂ ದೇಶಗಳ ಫಾರೆಕ್ಸ್ ರಿಸರ್ವ್ಸ್ ಕಡಿಮೆಗೊಂಡಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ