ಬೈಜೂಸ್​ನ ಒಂದು ಭಾಗದ ಸಾಲ ತೀರಿಸಿದ ಮಣಿಪಾಲ್ ಸಂಸ್ಥೆಯ ರಂಜನ್ ಪೈ; ಅದಕ್ಕೆ ಬದಲಾಗಿ ಆಕಾಶ್ ಬೋರ್ಡ್​ನಲ್ಲಿ ಸದಸ್ಯತ್ವ

Ranjan Pai Help to Byju's: ಹಣಕಾಸು ಸಂಕಷ್ಟಕ್ಕೆ ಸಿಲುಕಿರುವ ಬೈಜುಸ್​ಗೆ ಶಿಕ್ಷಣೋದ್ಯಮಿ ರಂಜನ್ ಪೈಕಿ ಸಹಾಯಹಸ್ತ ಚಾಚಿದ್ದಾರೆ. ಬೈಜುಸ್ ಮಾಡಿರುವ ಹಲವು ಸಾಲಗಳಲ್ಲಿ ಒಂದು ಭಾಗವನ್ನು ರಂಜನ್ ಪೈ ಅವರು ತೀರಿಸಿದ್ದಾರೆ. ಡೇವಿಡ್ಸನ್ ಕೆಂಪ್ನರ್ ಸಂಸ್ಥೆಯ 800 ಕೋಟಿ ರೂ ಮೊತ್ತದ ಸಾಲವನ್ನು ಬೈಜುಸ್ ಬಾಕಿ ಉಳಿಸಿಕೊಂಡಿತ್ತು. ಈ ಹಣಕ್ಕೆ 600 ಕೋಟಿ ರೂನಷ್ಟು ಬಡ್ಡಿ ಸೇರಿ ಒಟ್ಟು ಸಾಲದ ಮೊತ್ತ 1,400 ಕೋಟಿ ರೂ ಆಗಿತ್ತು.

ಬೈಜೂಸ್​ನ ಒಂದು ಭಾಗದ ಸಾಲ ತೀರಿಸಿದ ಮಣಿಪಾಲ್ ಸಂಸ್ಥೆಯ ರಂಜನ್ ಪೈ; ಅದಕ್ಕೆ ಬದಲಾಗಿ ಆಕಾಶ್ ಬೋರ್ಡ್​ನಲ್ಲಿ ಸದಸ್ಯತ್ವ
ಬೈಜುಸ್
Follow us
|

Updated on:Nov 12, 2023 | 4:45 PM

ಬೆಂಗಳೂರು, ನವೆಂಬರ್ 12: ಹಣಕಾಸು ಸಂಕಷ್ಟಕ್ಕೆ ಸಿಲುಕಿರುವ ಬೈಜುಸ್​ಗೆ ಶಿಕ್ಷಣೋದ್ಯಮಿ ರಂಜನ್ ಪೈ (Ranjan Pai) ಸಹಾಯಹಸ್ತ ಚಾಚಿದ್ದಾರೆ. ಬೈಜುಸ್ ಮಾಡಿರುವ ಹಲವು ಸಾಲಗಳಲ್ಲಿ (Debts of Byju’s) ಒಂದು ಭಾಗವನ್ನು ರಂಜನ್ ಪೈ ಅವರು ತೀರಿಸಿದ್ದಾರೆ. ಅಮೆರಿಕದ ಡೇವಿಡ್ಸನ್ ಕೆಂಪ್ನರ್ (Davidson Kempner) ಎಂಬ ಅಸೆಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ಸಾಲವನ್ನು ರಂಜನ್ ಪೈ 1,400 ಕೋಟಿ ರೂ ಒಪ್ಪಂದದಲ್ಲಿ ಖರೀದಿಸಿರುವುದು ತಿಳಿದುಬಂದಿದೆ. ಇಂಡಿಯನ್ ಎಕ್ಸ್​ಪ್ರೆಸ್ ಪತ್ರಿಕೆಯಲ್ಲಿ ಬಂದಿರುವ ವರದಿ ಪ್ರಕಾರ, ಮಣಿಪಾಲ್ ಶಿಕ್ಷಣ ಮತ್ತು ಮೆಡಿಕಲ್ ಗ್ರೂಪ್​ನ ಛೇರ್ಮನ್ ರಂಜನ್ ಪೈ ಅವರು ಬೈಜೂಸ್​ಗೆ ಸೇರಿದ ಆಕಾಶ್ ಎಜುಕೇಶನ್ ಸರ್ವಿಸಸ್​ನ ಬೋರ್ಡ್​ನಲ್ಲಿ ಸ್ಥಾನ ಪಡೆಯಲಿದ್ದಾರೆ.

ಡೇವಿಡ್ಸನ್ ಕೆಂಪ್ನರ್ ಸಂಸ್ಥೆಯ 800 ಕೋಟಿ ರೂ ಮೊತ್ತದ ಸಾಲವನ್ನು ಬೈಜುಸ್ ಬಾಕಿ ಉಳಿಸಿಕೊಂಡಿತ್ತು. ಈ ಹಣಕ್ಕೆ 600 ಕೋಟಿ ರೂನಷ್ಟು ಬಡ್ಡಿ ಸೇರಿ ಒಟ್ಟು ಸಾಲದ ಮೊತ್ತ 1,400 ಕೋಟಿ ರೂ ಆಗಿತ್ತು. ಇದಕ್ಕೆ ಬದಲಾಗಿ ಆಕಾಶ್ ಸಂಸ್ಥೆಯಲ್ಲಿ ಡೇವಿಡ್ ಕೆಂಪ್ನರ್ ಶೇ. 15ರಿಂದ 20ರಷ್ಟು ಷೇರುಪಾಲು ಹೊಂದಿದೆ. ಈಗ ರಂಜನ್ ಪೈ ಅವರು 1,400 ಕೋಟಿ ರೂ ಕೊಟ್ಟು ಸಾಲ ತೀರಿಸಿರುವುದರಿಂದ ಆಕಾಶ್​ನಲ್ಲಿ ಕೆಂಪ್ನರ್ ಹೊಂದಿರುವ ಷೇರುಪಾಲು ಪೈ ಅವರಿಗೆ ರವಾನೆಯಾಗಲಿದೆ.

ಇದನ್ನೂ ಓದಿ: ಚೀನಾ ತರಹ ಬೇಡ; ನಿಯಂತ್ರಣ ಬಿಟ್ಟರೆ ಹಣ ಹರಿದುಬರುತ್ತೆ: ಭಾರತಕ್ಕೆ ಖ್ಯಾತ ಹೂಡಿಕೆದಾರ ಮಾರ್ಕ್ ಮೋಬಿಯಸ್ ಸಲಹೆ

ಆಕಾಶ್ ಎಜುಕೇಶನ್ ಸರ್ವಿಸ್ ಸಂಸ್ಥೆ ಬೈಜುಸ್​ನ ಅತಿದೊಡ್ಡ ಆಸ್ತಿಯಾಗಿದೆ. ಡೇವಿಡ್ಸನ್ ಕೆಂಪ್ನರ್ ಸಂಸ್ಥೆ ಆಕಾಶ್​ನಲ್ಲಿ ಎರಡು ಸದಸ್ಯರನ್ನು ಹೊಂದಿದೆ. ರಂಜನ್ ಪೈಗೆ ಷೇರು ವರ್ಗಾವಣೆ ಆದ ಬಳಿಕ ಆಕಾಶ್ ಬೋರ್ಡ್​ನಿಂದ ಆ ಇಬ್ಬರು ಸದಸ್ಯರು ನಿರ್ಗಮಿಸಲಿದ್ದಾರೆ. ಮಣಿಪಾಲ್ ಶಿಕ್ಷಣ ಸಂಸ್ಥೆಯ ಮುಖಸ್ಥರಾದ ರಂಜನ್ ಪೈ ಅವರು ಬೋರ್ಡ್ ಸದಸ್ಯತ್ವ ಪಡೆಯುವುದಲ್ಲದೇ ಇನ್ನೂ ಇಬ್ಬರು ಸದಸ್ಯರನ್ನು ನಾಮನಿರ್ದೇಶಿಸುವ ಹಕ್ಕು ಹೊಂದಿದ್ದಾರೆ.

ಆಕಾಶ್​ನೊಂದಿಗೆ ರಂಜನ್ ಪೈ ಅವರ ಸಂಬಂಧ ಇಷ್ಟಕ್ಕೇ ಸೀಮಿತವಾಗಿರುವುದಿಲ್ಲ. ಮತ್ತೊಂದು ಹೂಡಿಕೆ ಸಂಸ್ಥೆ ಬ್ಲ್ಯಾಕ್​ಸ್ಟೋನ್ ಆಕಾಶ್ ಸಂಸ್ಥೆಯಲ್ಲಿ ಹೊಂದಿರುವ ಷೇರುಪಾಲನ್ನು ಅವರು ಖರೀದಿಸಲಿದ್ದಾರೆ. ಅಲ್ಲದೇ ಆಕಾಶ್ ಸಂಸ್ಥಾಪಕರುಗಳಾದ ಚೌಧರಿ ಕುಟುಂಬ ಹೊಂದಿರುವ ಒಂದಷ್ಟು ಷೇರುಪಾಲನ್ನೂ ಪೈ ಪಡೆಯಲಿದ್ದಾರೆ. ಇವೆಲ್ಲವೂ ನೆರವೇರಿದಲ್ಲಿ ಆಕಾಶ್ ಎಜುಕೇಶನ್ ಸರ್ವಿಸಸ್ ಸಂಸ್ಥೆಯಲ್ಲಿ ರಂಜನ್ ಪೈ ಹೊಂದಿರುವ ಷೇರುಪಾಲು ಶೇ. 30ರಷ್ಟಾಗುತ್ತದೆ.

ಇದನ್ನೂ ಓದಿ: ಒಂದು ವರ್ಷದಲ್ಲಿ ಲಾಭ ತಂದಿರುವುದು ಯಾವುದು? ಷೇರುಪೇಟೆಗಿಂತ ಚಿನ್ನ ಹೆಚ್ಚು ಲಾಭ ತರುತ್ತದಾ?

ಮೂಲಗಳ ಪ್ರಕಾರ ಪ್ರೊಮೋಟರ್ಸ್​ಗಳಾದ ಚೌಧುರಿ ಕುಟುಂಬ ಶೇ. 18ರಿಂದ 20ರಷ್ಟು ಷೇರು ಹೊಂದಿದೆ. ಇದರಲ್ಲಿ ಕಾಲು ಭಾಗದಷ್ಟು, ಅಂದರೆ ಶೇ. 5ರಷ್ಟು ಷೇರುಗಳನ್ನು ಪೈ ಅವರು 10 ಬಿಲಿಯನ್ ಡಾಲರ್ ಮೊತ್ತಕ್ಕೆ (83,000 ಕೋಟಿ ರೂ) ಖರೀದಿಸಬಹುದು ಎನ್ನಲಾಗಿದೆ. ಇವೆಲ್ಲವೂ ಆದ ಬಳಿಕ ಆಕಾಶ್ ಚೌಧರಿ ಅವರು ಸಂಸ್ಥೆಯ ಸಿಇಒ ಆಗಿ ಮರಳಿ ಬರಲಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:44 pm, Sun, 12 November 23

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ